ಮಗನನ್ನು ಎನ್‌ಕೌಂಟರ್ ಮಾಡ್ಬೇಡಿ, ಶಿಕ್ಷೆ ಕೊಡಿ – ಚೇತನ್ ಹೆತ್ತವರ ನೋವು ಯಾರಿಗೂ ಬೇಡ..!

ಮಗನ ಕಿರಾತಕ ಕೃತ್ಯಕ್ಕೆ ಹೆತ್ತವರು ನೋವು ಅನುಭವಿಸುತ್ತಿದ್ದಾರೆ. ಪಾಪ ಹುಡುಗಿ ಲಾವಣ್ಯಳನ್ನು ಕಟುಕನಂತೆ ಕೊ*ಚ್ಚಿ ಕೊಂ*ದ ಚೇತನ್ ವಿರುದ್ಧ ಆಕ್ರೋಶ ಹೆಚ್ಚಾಗಿದೆ. ಇದರ ಮಧ್ಯೆ ಚೇತನ್ ಹೆತ್ತವರು ಮಗನನ್ನು ಎನ್‌ಕೌಂಟರ್ ಮಾಡಬೇಡಿ. ಶಿಕ್ಷೆ ಕೊಡಿ ಎಂದು ಕಣ್ಣೀರು ಹಾಕುತ್ತಿದ್ದಾರೆ.
ಇದನ್ನೂ ಓದಿ:ಚೇತನ್ ಬಂಧಿಸಬೇಡಿ ನನ್ನ ಕೈಗೆ ಒಪ್ಪಿಸಿ – ಮಗಳನ್ನು ಕೊಂ*ದ ಹಾಗೆ ಕೊ*ಲ್ಲುತ್ತೇನೆ ಎಂದ ಲಾವಣ್ಯ ತಾಯಿ
ದಕ್ಷಿಣ ಕನ್ನಡ ಜಿಲ್ಲೆಯನ್ನು ಬೆಚ್ಚಿಬೀಳಿಸಿದ ಲಾವಣ್ಯ ಕೊಲೆ ಪ್ರಕರಣದಲ್ಲಿ ಆರೋಪಿ ಚೇತನ್ ವಿರುದ್ಧ ಆಕ್ರೋಶದ ಕಟ್ಟೆಯೊಡೆದಿದೆ. ಚೇತನ್ ನನ್ನ ಎನ್‌ಕೌಂಟರ್ ಮಾಡಬೇಕು. ನಡುರಸ್ತೆಯಲ್ಲೇ ಕೊಚ್ಚಿ ಕೊಲ್ಲಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಆದರೆ, ಚೇತನ್ ಹೆತ್ತವರ ಕಣ್ಣೀರು ಕರುಳುಹಿಂಡುವಂತಿದೆ. ಬಂಟ್ವಾಳದ ಬಿಸಿರೋಡ್‌ನಲ್ಲಿ ಲಾವಣ್ಯಳನ್ನು ಹತ್ಯೆ ಮಾಡಿದ ಬಳಿಕ ಕ್ರೂರಿ ಚೇತನ್ ಮೊದಲು ಕಾಲ್ ಮಾಡಿದ್ದು ತಂದೆಗೆ. ಚೇತನ್ ಅವರ ತಂದೆ ಪುರುಷೋತ್ತಮ ಗೌಡ ತನ್ನ ಮಗನ ಪ್ರೀತಿ ಮತ್ತು ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ನಮ್ಮ ಮಗ ಈ ರೀತಿ ಮಾಡುತ್ತಾನೆ ಎಂದು ಎಂದು ಗೊತ್ತಿರಲಿಲ್ಲ. ಅವನು ಮನೆಯಲ್ಲಿ ಲವ್ ಇದೆ ಎಂದು ಹೇಳುತ್ತಿದ್ದ. ಬ್ರೇಕಪ್ ಆದ ನಂತರ ಖಿನ್ನತೆಗೆ ಒಳಗಾಗಿದ್ದ. ಮನೆಯಲ್ಲಿ ಕೂಗಾಡುತ್ತಿದ್ದ ಎಂದು ತಂದೆ ತಿಳಿಸಿದ್ದಾರೆ. ಮನೆಯಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದ ಎಂದು ತಂದೆ ಹೇಳಿದ್ದಾರೆ. ಹುಟ್ಟಿಸುವ ಅಧಿಕಾರ ನಮಗೆ ಇದೆ. ಆದರೆ ಯಾರಿಗೂ ಸಾಯಿಸುವ ಹಕ್ಕು ಇಲ್ಲ. ಎಲ್ಲರೂ ಎನ್‌ಕೌಂಟರ್ ಮಾಡಿ ಎಂದು ಹೇಳುತ್ತಿದ್ದಾರೆ. ನಾವು ಹೇಗೆ ಹೇಳುವುದು? ಶಿಕ್ಷೆ ಕೊಟ್ಟು ಅವನನ್ನು ಬಿಡಿ. ನಮ್ಮ ಕರುಳಿನಲ್ಲಿ ಹುಟ್ಟಿದ ಮಗನಿಗೆ ಸಾಯಿಸಿ ಎಂದು ಹೇಗೆ ಹೇಳುವುದು?’ ಎಂದು ಕಣ್ಣೀರು ಹಾಕಿದ್ದಾರೆ. ಕೃಷಿ ಮತ್ತು ಹಾಲು ಮಾರಾಟ ಮಾಡುತ್ತಾ ಕಷ್ಟಪಟ್ಟು ಮಗನಿಗೆ ಶಿಕ್ಷಣ ಕೊಟ್ಟಿದ್ದಾಗಿ ಅವರು ಹೇಳಿದ್ದಾರೆ. ‘ಅವನ ಸ್ವಭಾವ ಒಳ್ಳೆಯದಿತ್ತು. ಏಕೆ ಈ ರೀತಿ ಮಾಡಿದ ಎಂದು ಗೊತ್ತಾಗುತ್ತಿಲ್ಲ’ ಎಂದು ಕಣ್ಣೀರಾಕಿದ್ದಾರೆ. ಚೇತನ್, ಲಾವಣ್ಯಳನ್ನು ಕೊ*ಲೆ ಮಾಡಿದ ಬಳಿಕ ತಂದೆಗೆ ಫೋನ್ ಮಾಡಿ ‘ನಾನು ಕೊಂದಿದ್ದೇನೆ, ವಿಷ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾನಂತೆ. ಹೀಗಂತಾ ತಂದೆಯೇ ತಿಳಿಸಿದ್ದಾರೆ. ಇದನ್ನು ಕೇಳಿದ ಚೇತನ್ ಅವರ ತಾಯಿ, ಮಗ ಆವತ್ತೇ ಸಾಯಬೇಕಿತ್ತು ಎಂದು ಹೇಳಿದ್ದಾರೆ.
ಚೇತನ್ ತಾಯಿ ಮಾತನಾಡಿ, ‘ಚೇತನ್ ಅವತ್ತೇ ಹೋಗಬೇಕಿತ್ತು. ನನಗೆ ನೆಮ್ಮದಿ ಇರುತ್ತಿತ್ತು.ನಮ್ಮನ್ನು ಪ್ರೀತಿಯಿಂದ ನೋಡುತ್ತಿದ್ದ. ಈಗ ನಮಗೂ ಸಾಯಬೇಕು ಅನ್ನಿಸುತ್ತಿದೆ. ಎಲ್ಲಾ ಮುಗಿದ ಮೇಲೆ ನಮಗೆ ಏನು ಬೇಕು?’ ಎಂದು ಕಣ್ಣೀರು ಹಾಕಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ಚೇತನ್ ಅವರ ಮನೆ ಇದೆ. ಕೃಷಿ ಕುಟುಂಬದಿಂದ ಬಂದ ಚೇತನ್ ತನ್ನ ಕ್ರೂರ ಕೃತ್ಯದಿಂದ ಹೆತ್ತವರಿಗೆ ನೋವು ಕೊಟ್ಟಿದ್ದಾನೆ. ತಮ್ಮ ಮಗನಿಗೆ ಕಾನೂನು ಪ್ರಕಾರ ಶಿಕ್ಷೆ ಆಗಬೇಕು ಎಂದು ಪೋಷಕರು ಹೇಳಿದ್ದಾರೆ. ತುಂಬಾ ಕಷ್ಟಪಟ್ಟು ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಈ ಗತಿ ಬರಬಾರದಿತ್ತು ಎಂದು ಸ್ಥಳೀಯರು ಕೂಡಾ ಹೇಳುತ್ತಿದ್ದಾರೆ. ಮಗ ಮಾಡಿದ ತಪ್ಪಿಗೆ ಹೆತ್ತವರು ಶಿಕ್ಷೆ ಅನುಭವಿಸುತ್ತಿದ್ದಾರೆ.

ನೋಡಿರಿ

