ವಾರಣಾಸಿ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಪೋಸ್ಟರ್ ರಿಲೀಸ್ – ನಟಿಯ ಜನ್ಮದಿನಕ್ಕೆ ರಾಜಮೌಳಿ ಉಡುಗೊರೆ

ಜುಲೈ 18ರಂದು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಇದೀಗ ಪ್ರಿಯಾಂಕಾ ಹುಟ್ಟುಹಬ್ಬಕ್ಕೆ ನಿರ್ದೇಶಕ ರಾಜಮೌಳಿ ವಿಶೇಷ ಉಡುಗೊರೆ ನೀಡಿದ್ದಾರೆ.
ಇದನ್ನೂ ಓದಿ:ಬಿಗ್‌ಬಾಸ್ ಸೀಸನ್-13 ಸ್ಪರ್ಧಿಗಳು ಇವರೇ- ಸಂಭಾವ್ಯ ಸ್ಪರ್ಧಿಗಳು ಯಾರು ಗೊತ್ತಾ?
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹುಟ್ಟುಹಬ್ಬದ ಪ್ರಯುಕ್ತ ನಿರ್ದೇಶಕ ರಾಜಮೌಳಿಯವರು ವಿಶೇಷ ಗಿಫ್ಟ್ ನೀಡಿದ್ದಾರೆ. ಬಹುನಿರೀಕ್ಷಿತ ವಾರಣಾಸಿ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಪಾತ್ರದ ಲುಕ್ ಅನ್ನು ರಿಲೀಸ್ ಮಾಡಿದ್ದಾರೆ ರಾಜಮೌಳಿ. ಈ ಹಿಂದೆ ಪ್ರಿಯಾಂಕಾ ಚೋಪ್ರಾ ಹಳದಿ ಬಣ್ಣದ ಸೀರೆಯುಟ್ಟು ಸಖತ್ ಸ್ಟೈಲ್ ಆಗಿ ಗನ್ ಫೈರ್ ಮಾಡುತ್ತಿರುವ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಅವರ ಹುಟ್ಟುಹಬ್ಬದ ಪ್ರಯುಕ್ತ ಮತ್ತೊಂದು ಪೋಸ್ಟರ್ ರಿಲೀಸ್ ಆಗಿದೆ.
ವಾರಣಾಸಿ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಮಂದಾಕಿನಿ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರವನ್ನು ಬಲಶಾಲಿ, ದುರ್ಬಲ ಮತ್ತು ಮರೆಯಲಾಗದಂತಹ ಗುಣಗಳನ್ನು ಹೊಂದಿರುವ, ಪ್ರಪಂಚದಾದ್ಯಂತ ಸಂಚರಿಸುವ ಉಗ್ರ ಪಾತ್ರ ಎಂದು ರಾಜಮೌಳಿ ಬಣ್ಣಿಸಿದ್ದಾರೆ. ಈಗ ಬಿಡುಗಡೆ ಮಾಡಿರುವ ಪೋಸ್ಟರ್ನಲ್ಲಿ ಪ್ರಿಯಾಂಕಾ ಕಪ್ಪು ಬಣ್ಣದ ವಾರಿಯರ್ ರೀತಿಯ ಬಟ್ಟೆ ಧರಿಸಿದ್ದಾರೆ. ಆಕೆ ನಕ್ಕರೆ ಬೆಡಗು, ನಗದಿದ್ದರೆ ಬೆಂಕಿ ಎಂದು ಬರೆದುಕೊಂಡಿದ್ದಾರೆ ರಾಜಮೌಳಿ. ಪ್ರಿಯಾಂಕಾ ಚೋಪ್ರಾ ಅವರ ಎರಡು ಚಿತ್ರಗಳನ್ನು ರಾಜಮೌಳಿ ಹಂಚಿಕೊಂಡಿದ್ದಾರೆ. ಒಂದರಲ್ಲಿ ಪ್ರಿಯಾಂಕಾ ಉಗ್ರವಾಗಿ ಕಂಡರೆ ಮತ್ತೊಂದರಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ಒಟ್ಟಾರೆ ರಾಜಮೌಳಿ ಹಂಚಿಕೊಂಡಿರುವ ಚಿತ್ರಗಳನ್ನು ನೋಡಿದರೆ ಪ್ರಿಯಾಂಕಾರ ಪಾತ್ರಕ್ಕೆ ಎರಡು ಶೇಡ್ ಇರುವುದು ಖಾತ್ರಿ ಆಗುತ್ತಿದೆ. ಬಹುಷಃ ವಿಲನ್ ಗುಂಪಿನ ಸದಸ್ಯೆ ಆಗಿದ್ದ ಪ್ರಿಯಾಂಕಾ ಆ ಬಳಿಕ ಹೀರೋ ಕಡೆ ಪಕ್ಷ ಬದಲಿಸಬಹುದು ಎಂದು ಅಂದಾಜಿಸಲಾಗಿದೆ.

ನೋಡಿರಿ

