ಬಡವಾಯ್ತು ಭಾರತದ ಬ್ಯಾಟಿಂಗ್ – ವಿದೇಶಿ ಪಿಚ್ ಗಳಲ್ಲಿ ಖದರ್ ಕಳ್ಕೊಂಡ್ರಾ?
SUNDAY ಸರಣಿ ಗೆಲ್ಲೋಕೆ ಸವಾಲೇನು?

ಓಪನರ್ಸ್ ಕೈಕೊಟ್ರೆ ಮಿಡಲ್ ಆರ್ಡರ್.. ಮಿಡಲ್ ಆರ್ಡರ್ ಕೈಕೊಟ್ರೆ ಲೋವರ್ ಆರ್ಡರ್.. ಹೀಗೆ ನಂಬರ್ 8, 9ವರೆಗೂ ಭಾರತದ ಬ್ಯಾಟಿಂಗ್ ಸಿಕ್ಕಾಪಟ್ಟೆ ಸ್ಟ್ರಾಂಗ್ ಕಾಣ್ತಿತ್ತು. ಎದುರಾಳಿ ಬೌಲರ್ಗಳಿಗೆ ನಡುಕ ಹುಟ್ಟಿಸ್ತಿದ್ರು. ಆದ್ರೆ ಐರ್ಲೆಂಡ್ ಮತ್ತು ಇಂಗ್ಲೆಂಡ್ ಸರಣಿಯಲ್ಲಿ ಇವ್ರ ಪ್ರದರ್ಶನ ನೋಡಿದ್ರೆ ಇವ್ರೇನಾ ಟೀಂ ಇಂಡಿಯಾ ಪ್ಲೇಯರ್ಸ್ ಅಂತಾ ಡೌಟ್ ಬರೋ ಥರ ಫ್ಲ್ಯಾಪ್ ಆಗಿದ್ದಾರೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ-20ಐ ಸರಣಿಗಳಲ್ಲಿ ಕ್ಲೀನ್ ಸ್ವೀಪ್ ಆಗಿದ್ದ ಭಾರತ ಈಗ ಏಕದಿನ ಸರಣಿಯಲ್ಲೂ ತಲೆಬಿಸಿ ತಂದಿಟ್ಟಿದ್ದಾರೆ. ಭಾನುವಾರ ನಡೆಯಲಿರೋ ಕೊನೇ ಪಂದ್ಯವನ್ನ ಗೆದ್ರಷ್ಟೇ ಸರಣಿಯೂ ಕೈವಶವಾಗೋದು. ಹಾಗಂತ ಈ ಪಂದ್ಯ ಗೆಲ್ಲೋದು ಈಸಿನೂ ಇಲ್ಲ.
ಇದನ್ನೂ ಓದಿ : ಭಾರತ ಸೋತ್ರೂ ಗೆದ್ದ ಬುಮ್ರಾ – ಬ್ಯಾಟಿಂಗ್ ವೀಕ್ ನೆಸ್ ಮತ್ತೆ ರಿವೀಲ್
ಮೂರು ಪಂದ್ಯಗಳ ಏಕದಿನ ಸರಣಿ ಈಗ ಸಮಬಲದಲ್ಲಿದೆ. ಮೊದಲ ಪಂದ್ಯವನ್ನ ಭಾರತ ಗೆದ್ರೆ ಎರಡನೇ ಪಂದ್ಯವನ್ನ ಇಂಗ್ಲೆಂಡ್ ಗೆದ್ದಿದೆ. ಕೊನೆಯ ಪಂದ್ಯವೇ ಈಗ ಸಿರೀಸ್ ಡಿಸೈಡರ್ ಆಗಲಿದೆ. 2027ರ ಏಕದಿನ ವಿಶ್ವಕಪ್, ಟೀಂ ಫಾರ್ಮೆಷನ್ ಹೀಗೆ ಸಾಕಷ್ಟು ವಿಚಾರಗಳಿಂದ ಈ ಸರಣಿ ಭಾರತಕ್ಕೆ ಪ್ರತಿಷ್ಠೆಯ ಪ್ರಶ್ನೆಯೂ ಆಗಿದೆ. ಅದೂ ಅಲ್ದೇ ಪಂದ್ಯ ನಡೀತಾ ಇರೋದು ಕ್ರಿಕೆಟ್ ಕಾಶಿ ಅಥವಾ ಕ್ರಿಕೆಟ್ನ ತವರು ಮೈದಾನ ಅಂತಾನೇ ಕರೆಸಿಕೊಳ್ಳೋ ಲಾರ್ಡ್ಸ್ ಮೈದಾನದಲ್ಲಿ. ಎರಡೂ ತಂಡಗಳು ಡು ಆರ್ ಡೈ ಪ್ರೆಶರ್ನಲ್ಲೇ ಅಖಾಡಕ್ಕಿಳಿಯಲಿದೆ. ಭಾರತ ಈ ಪಂದ್ಯ ಗೆದ್ದು ಟಿ-20ಐ ಸರಣಿ ಸೋಲಿನ ಸೇಡು ತೀರಿಸಿಕೊಳ್ಳೋಕೆ ಎದುರು ನೋಡ್ತಿದೆ.
ಭಾರತಕ್ಕಿರೋ ಸವಾಲುಗಳು!
ಭಾರತದ ಬ್ಯಾಟಿಂಗ್ ಆರ್ಡರ್ ನಲ್ಲಿ ಕನ್ಸಿಸ್ಟೆನ್ಸಿಯಾಗಿ ರನ್ಸ್ ಬರ್ತಿಲ್ಲ
ಆಲ್ ರೌಂಡರ್ ಗಳು ಜವಾಬ್ದಾರಿಯುತ ಬ್ಯಾಟಿಂಗ್, ಬೌಲಿಂಗ್ ಇಲ್ಲ
ಭಾರತದ ಪಿಚ್ ಗಳಲ್ಲಿ ಅಬ್ಬರಿಸೋ ಭಾರತೀಯರಿಗೆ ಇಂಗ್ಲೆಂಡ್ ಸವಾಲು
ಸ್ಪಿನ್ನರ್ಸ್ ಎದುರಲ್ಲೂ ಭಾರತದ ಬ್ಯಾಟರ್ ಗಳ ಕಡೆಯಿಂದ ರನ್ಸ್ ಬರ್ತಿಲ್ಲ
ಲಾರ್ಡ್ಸ್ ಪಿಚ್ ನಲ್ಲೂ ಭಾರತದ ಬ್ಯಾಟಿಂಗ್, ಬೌಲಿಂಗ್ ಪ್ರದರ್ಶನ ಕಷ್ಟ
ಒಂದ್ಕಡೆ ಹೋಂ ಪಿಚ್ ಅಡ್ವಾಂಡೇಜ್ ಪಡೆದು ಇಂಗ್ಲೆಂಡ್ ಆಟಗಾರರು ಅಬ್ಬರಿಸ್ತಾ ಇದ್ರೆ ಭಾರತದ ಬ್ಯಾಟಿಂಗ್ ಮಂಕಾಗಿದೆ. ಅಟ್ಲೀಸ್ಟ್ ಮೂರನೇ ಪಂದ್ಯದಲ್ಲಾದ್ರೂ ಔನ್ಸ್ ಬ್ಯಾಕ್ ಮಾಡಿ ಗೆಲ್ಲಲೇಬೇಕಿದೆ. ಆಲ್ರೆಡಿ ಟಿ-20ಐನಲ್ಲಿ ಕ್ಲೀನ್ ಸ್ವೀಪ್ ಆಗಿರೋದ್ರಿಂದ ಈಗ ಏಕದಿನ ಸರಣಿಯನ್ನೂ ಸೋತ್ರೆ ಭಾರತಕ್ಕೆ ಅತಿದೊಡ್ಡ ಮುಖಭಂಗವಾಗಲಿದೆ. ಇನ್ನು ಭಾರತ ಮತ್ತು ಇಂಗ್ಲೆಂಡ್ ನಡುವೆ ಇದುವರೆಗೆ ಒಟ್ಟು 111 ಏಕದಿನ ಪಂದ್ಯಗಳು ನಡೆದಿವೆ. ಇದ್ರಲ್ಲಿ ಭಾರತ 62 ಪಂದ್ಯಗಳನ್ನ ಗೆದ್ರೆ ಇಂಗ್ಲೆಂಡ್ 44 ಮ್ಯಾಚ್ ವಿನ್ ಆಗಿದೆ. 2 ಪಂದ್ಯಗಳು ರದ್ದಾಗಿವೆ. ಲಾರ್ಡ್ಸ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ 7 ಬಾರಿ ಏಕದಿನ ಪಂದ್ಯಗಳಲ್ಲಿ ಎದುರಾಗಿವೆ. ಇಂಗ್ಲೆಂಡ್ 4 ಪಂದ್ಯಗಳನ್ನು ಗೆದ್ದಿದ್ದರೆ, ಭಾರತ 3 ಪಂದ್ಯಗಳಲ್ಲಿ ಜಯಗಳಿಸಿದೆ. 2021ರಿಂದ ಈಚೆಗೆ ನಡೆದಿರುವ ಕಳೆದ ಮೂರು ಸರಣಿಗಳಲ್ಲೂ ಭಾರತ ಇಂಗ್ಲೆಂಡ್ ವಿರುದ್ಧ ಗೆದ್ದು ಬೀಗಿದೆ. ಅದ್ರಲ್ಲೂ 2025ರಲ್ಲಿ ನಡೆದಿದ್ದ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ಮೂರೂ ಪಂದ್ಯಗಳನ್ನ ಗೆದ್ದು ಕ್ಲೀನ್ ಸ್ವೀಪ್ ಮಾಡಿತ್ತು. ಆದ್ರೀಗ ಇಂಗ್ಲೆಂಡ್ ಪಿಚ್ನಲ್ಲಿ ಭಾರತ ಸ್ಟ್ರಗಲ್ ಮಾಡ್ತಿದೆ. ಭಾರತದಲ್ಲಿ ಅಬ್ಬರಿಸೋ ಬ್ಯಾಟರ್ಸ್ ವಿದೇಶಗಳಲ್ಲಿ ಮಂಕಾಗ್ತಿದ್ದಾರಾ ಅನ್ನೋ ಚರ್ಚೆಯೂ ಶುರುವಾಗಿದೆ.

ನೋಡಿರಿ

