ಭಾನುವಾರ HITಮ್ಯಾನ್ ಯುಗಾಂತ್ಯ? – ಕ್ರಿಕೆಟ್ ಕಾಶಿಯಲ್ಲಿ ನಿವೃತ್ತಿ ಘೋಷಣೆ
KING ಎದುರಲ್ಲಿ ಕಣ್ಣೀರಿಟ್ರಾ ರೋಹಿತ್?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿ ಈಗ ಸಮಬಲದಲ್ಲಿದೆ. ಭಾನುವಾರ ಕೊನೇ ಪಂದ್ಯ ನಡೆಯಲಿದ್ದು ಈ ಮ್ಯಾಚ್ ಗೆದ್ದವ್ರು ಸರಣಿಯನ್ನೂ ಗೆದ್ಕೊಳ್ತಾರೆ. ಆದ್ರಿಲ್ಲಿ ಟೀಂ ಇಂಡಿಯಾ ಅಭಿಮಾನಿಗಳಿಗೆ ಪಂದ್ಯದ ಸೋಲು ಗೆಲುವಿಗಿಂತ ಜಾಸ್ತಿ ರೋಹಿತ್ ಶರ್ಮಾ ವಿಚಾರದಲ್ಲೇ ಟೆನ್ಷನ್ ಆಗ್ತಿದೆ. ಯಾಕಂದ್ರೆ ಇಂಗ್ಲೆಂಡ್ ವಿರುದ್ಧದ ಕೊನೇ ಮ್ಯಾಚಲ್ಲಿ ರೋಹಿತ್ ಶರ್ಮಾ ಏಕದಿನ ಮಾದರಿಗೂ ನಿವೃತ್ತಿ ಘೋಷಣೆ ಮಾಡ್ತಾರೆ ಅನ್ನೋ ಸುದ್ದಿ ಹಲ್ಚಲ್ ಎಬ್ಬಿಸಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ರೋಹಿತ್, ಕೊಹ್ಲಿ ಹಾಗೇ ಬುಮ್ರಾ ಫೋಟೋ ವೈರಲ್ ಆಗಿದೆ.
ಇದನ್ನೂ ಓದಿ : ಭಾರತ ಸೋತ್ರೂ ಗೆದ್ದ ಬುಮ್ರಾ – ಬ್ಯಾಟಿಂಗ್ ವೀಕ್ ನೆಸ್ ಮತ್ತೆ ರಿವೀಲ್
ಏಕದಿನ ವಿಶ್ವಕಪ್ ಗೆಲ್ಲಲೇಬೇಕು ಅನ್ನೋದು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪರಮಗುರಿ. ಇದೇ ಕಾರಣಕ್ಕೆ ಟಿ-20ಐ ಮತ್ತು ಟೆಸ್ಟ್ ಫಾರ್ಮೆಟ್ಗೆ ಗುಡ್ ಬೈ ಹೇಳಿದ್ರೂ ಏಕದಿನ ಮಾದರಿಯಲ್ಲಿ ಮಾತ್ರ ಆಡ್ತಿದ್ದಾರೆ. ಆದ್ರೀಗ ರೋಹಿತ್ ಶರ್ಮಾರ ಅಂತಾರಾಷ್ಟ್ರೀಯ ಕೆರಿಯರ್ ಎಂಡ್ ಮೂಮೆಂಟ್ನಲ್ಲಿ ಇದ್ದಂತೆ ಕಾಣ್ತಿದೆ. ಭಾರತ-ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯವೇ ಹಿಟ್ಮ್ಯಾನ್ ಪಾಲಿಗೆ ಕೊನೇ ಪಂದ್ಯ ಅನ್ನೋ ವರದಿಯಗಳು ಹೊರ ಬಿದ್ದಿವೆ. ಭಾನುವಾರ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯವೇ ರೋಹಿತ್ ಶರ್ಮಾ ಪಾಲಿಗೆ ಕಟ್ಟ ಕಡೆಯ ಅಂತರಾಷ್ಟ್ರೀಯ ಪಂದ್ಯವಾಗುತ್ತಾ ಅನ್ನೋ ಆತಂಕ ಅಭಿಮಾನಿಗಳನ್ನ ಕಾಡ್ತಿದೆ.
ಬಿಸಿಸಿಐ ನಿರ್ಧಾರಕ್ಕೆ ನಿವೃತ್ತಿ ಘೋಷಿಸ್ತಾರಾ ರೋಹಿತ್ ಶರ್ಮಾ?
ಌಕ್ಚುಲಿ ಇಲ್ಲಿ ರೋಹಿತ್ ಶರ್ಮಾರನ್ನ ನಿವೃತ್ತಿ ಘೋಷಣೆ ಮಾಡುವಂತೆ ಡೈರೆಕ್ಟ್ ಆಗಿ ಯಾರೂ ಹೇಳಿಲ್ಲ. ಆದ್ರೆ ಬಿಸಿಸಿಐನ ನಿರ್ಧಾರ ರೋಹಿತ್ರನ್ನ ನಿವೃತ್ತಿಗೆ ಪ್ರವೋಕ್ ಮಾಡಿದಂತಿದೆ. ಅಂದ್ರೆ ಇಂಗ್ಲೆಂಡ್ ವಿರುದ್ಧದ ಸರಣಿ ಬಳಿಕ ಮುಂದಿನ ಏಕದಿನ ಪಂದ್ಯಗಳಿಗೆ ರೋಹಿತ್ ಶರ್ಮಾರನ್ನ ಸೆಲೆಕ್ಟ್ ಮಾಡಲ್ಲ ಅಂತಾ ಬಿಸಿಸಿಐ ಸ್ಪಷ್ಟವಾಗಿ ತಿಳಿಸಿದೆ ಎನ್ನಲಾಗಿದೆ. ಅಲ್ಲಿಗೆ ರೋಹಿತ್ಗೆ ಅವಕಾಶಗಳು ಸಿಗಲ್ಲ. ಅವಕಾಶಗಳು ಸಿಗಲ್ಲ ಅಂದ್ರೆ ನೀವು ಏಕದಿನ ಮಾದರಿಯಿಂದಲೂ ಎದ್ದು ಹೊರ ನಡೆಯಿರಿ ಅನ್ನೋ ಅರ್ಥ. ಹೀಗಾಗಿ ಇಂಗ್ಲೆಂಡ್ ವಿರುದ್ಧ ಕೊನೇ ಮ್ಯಾಚ್ ಆದ್ಮೇಲೆ ರೋಹಿತ್ರೇ ನಿವೃತ್ತಿ ನಿರ್ಧಾರ ಅನೌನ್ಸ್ ಮಾಡ್ತಾರೆ ಅನ್ನೋ ಟಾಕ್ ಇದೆ.
ವಿರಾಟ್ ಕೊಹ್ಲಿ ಮತ್ತು ಬುಮ್ರಾ ಬಳಿ ಸತ್ಯ ಹೇಳಿದ್ರಾ ರೋಹಿತ್?
ಇನ್ನು ಈ ಫೋಟೋ ಅಂತೂ ಇಡೀ ಬೆಳವಣಿಗೆಗೆ ಸಾಕ್ಷಿಯಂತಿದೆ. ಎರಡನೇ ಏಕದಿನ ಪಂದ್ಯದ ವೇಳೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಮೂವರು ಕುಳಿತಿದ್ದು ಈ ವೇಳೆ ರೋಹಿತ್ ತಮ್ಮ ನಿವೃತ್ತಿ ನಿರ್ಧಾರ ತಿಳಿಸಿದ್ದಾರೆ ಎನ್ನಲಾಗಿದೆ. ಕೊಹ್ಲಿ ಮತ್ತು ಬೂಮ್ರಾ ತುಂಬಾ ಬೇಸರದಲ್ಲಿದ್ದು ರೋಹಿತ್ ಕೂಡ ಭಾವುಕರಾಗಿದ್ರು ಅನ್ನೋ ಸುದ್ದಿ ಹೊರಬಿದ್ದಿದೆ. ಭಾರತಕ್ಕೆ ಎರಡು ಐಸಿಸಿ ಟ್ರೋಫಿಗಳನ್ನ ಗೆಲ್ಲಿಸಿಕೊಟ್ಟ ನಾಯಕ ರೋಹಿತ್ ಶರ್ಮಾ. 2023ರ ಏಕದಿನ ವಿಶ್ವಕಪ್ ಕೂಡ ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಅನ್ನೋ ಹಾಗೇ ಫೈನಲ್ನಲ್ಲಿ ಜಾರಿ ಹೋಗಿತ್ತು. ಬಹುಶಃ ಆವತ್ತು ಭಾರತ ಫೈನಲ್ ಗೆದ್ದಿದ್ರೆ ಇವತ್ತು ರೋಹಿತ್ ಮತ್ತು ಕೊಹ್ಲಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡ್ತಾನೇ ಇರ್ಲಿಲ್ಲ. ಆದ್ರೆ ಏಕದಿನ ವಿಶ್ವಕಪ್ ಗೆದ್ದು ಕ್ರಿಕೆಟ್ ಸಂತೃಪ್ತಿಯೊಂದಿಗೆ ಹೊರನಡೆಯಬೇಕು ಅನ್ನೋ ಪರಮಗುರಿಯೊಂದಿಗೆ ಆಡ್ತಿದ್ದಾರೆ. 2011ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ರೋಹಿತ್ ಇರಲಿಲ್ಲ. ಈಗ 2027ರ ವಿಶ್ವಕಪ್ ಕನಸು ಕೂಡ ಭಗ್ನವಾಗುತ್ತಾ ಅನ್ನೋ ಚರ್ಚೆ ನಡೆಯುತ್ತಿದೆ.
ರೋಹಿತ್ ನಿವೃತ್ತಿ ಬೇಡ!
2027ರ ಏಕದಿನ ವಿಶ್ವಕಪ್ ಗಾಗಿ 10 ಕೆಜಿ ತೂಕ ಇಳಿಸಿಕೊಂಡಿದ್ದ ರೋಹಿತ್
ನಾಯಕನಾಗಿಯೂ ಸಾಕಷ್ಟು ಅನುಭವ ಹೊಂದಿರುವ ರೋಹಿತ್ ಶರ್ಮಾ
ಟೀಂ ಇಂಡಿಯಾಗಾಗಿ ಏಕದಿನ ವಿಶ್ವಕಪ್ ಗೆಲ್ಲಲೇಬೇಕು ಎಂದು ಶಪಥ
ಭಾರತ ತಂಡಕ್ಕಾಗಿ ಸಾಕಷ್ಟು ಕೊಡುಗೆ ನೀಡಿರುವ ಹಿಟ್ ಮ್ಯಾನ್
ಈ ಎಲ್ಲಾ ಕಾರಣಗಳಿಗಾಗಿ ರೋಹಿತ್ ಶರ್ಮಾಗೆ ಮುಂದಿನ ವಿಶ್ವಕಪ್ವರೆಗೆ ಅವಕಾಶ ಕೊಡಲಿ ಅನ್ನೋದು ಕೆಲವರ ವಾದ. ಆದ್ರೆ ರೋಹಿತ್ರನ್ನ ಕೈಬಿಡೋಕೆ ಬಿಸಿಸಿಐ ಬಳಿಕ ಬೇರೆಯದ್ದೇ ಕಾರಣಗಳಿವೆ.
ರೋಹಿತ್ ಏಕೆ ಬೇಡ?
ವಿಶ್ವಕಪ್ ವೇಳೆಗೆ 40 ವರ್ಷ ವಯಸ್ಸು.. ಇದೇ ಬಿಸಿಸಿಐಗೆ ದೊಡ್ಡ ನೆಪ
ಫಾರ್ಮ್ ನಲ್ಲಿ ಕುಸಿತ.. ಐಪಿಎಲ್ ಮತ್ತು ಏಕದಿನ ಸರಣಿಯಲ್ಲೂ ರನ್ಸ್ ಇಲ್ಲ
ಯಂಗ್ ಕ್ರಿಕೆಟರ್ ಗಳಿಗೆ ಅವಕಾಶ ನೀಡಬೇಕು ಎನ್ನುತ್ತಿರೋ ಬಿಸಿಸಿಐ
2026 ರಲ್ಲಿ ರೋಹಿತ್ ಆಡಿರುವ ಎಂಟು ಇನ್ನಿಂಗ್ಸ್‌ಗಳಲ್ಲಿ ಕೇವಲ 241 ರನ್
ಬ್ಯಾಟಿಂಗ್ ಸರಾಸರಿ 30.12 ಆಗಿದ್ದು ಕೇವಲ ಒಂದು ಅರ್ಧಶತಕ ಮಾತ್ರ
ಇಲ್ಲಿ ರೋಹಿತ್ ಶರ್ಮಾ ಏಕದಿನ ಮಾದರಿಯಲ್ಲಿ ಕಂಟಿನ್ಯೂ ಆಗ್ಬೇಕು ಅನ್ನೋದಕ್ಕೂ ಕಾರಣಗಳಿವೆ. ಬೇಡ ಅನ್ನೋರ ಬಳಿಯೂ ನೆಪಗಳಿವೆ. ಆದ್ರೆ ಭಾರತ ತಂಡಕ್ಕಾಗಿ ರೋಹಿತ್ ಶರ್ಮಾ ನೀಡಿದ ಕೊಡುಗೆಗಳನ್ನ ಯಾರಿಂದಲೂ ಮರೆಮಾಚೋಕೆ ಸಾಧ್ಯವಿಲ್ಲ.

ನೋಡಿರಿ

