ಹಿಟ್ಟು ಕಲಸಿ ಲಟ್ಟಣಿಗೆ ಹಿಡಿದ ಬಿಲ್​ಗೇಟ್ಸ್ – ಕುಬೇರನ ರೊಟ್ಟಿ ತಯಾರಿಕೆಗೆ ನೆಟ್ಟಿಗರು ಶಾಕ್!

ಹಿಟ್ಟು ಕಲಸಿ ಲಟ್ಟಣಿಗೆ ಹಿಡಿದ ಬಿಲ್​ಗೇಟ್ಸ್ – ಕುಬೇರನ ರೊಟ್ಟಿ ತಯಾರಿಕೆಗೆ ನೆಟ್ಟಿಗರು ಶಾಕ್!

ಅಡುಗೆ ಅನ್ನೋದು ಒಂದು ಕಲೆ. ಶದ್ಧೆ, ಪ್ರೀತಿಯಿಂದ ಮಾಡಿದ್ರಷ್ಟೇ ಅದರ ರುಚಿ ಚೆನ್ನಾಗಿರೋದು ಅಂತಾರೆ. ಕೆಲವ್ರು ಇಷ್ಟಪಟ್ಟು ಅಡುಗೆ ಮಾಡಿದ್ರೆ ಇನ್ನೂ ಕೆಲವ್ರು ಅಯ್ಯೋ ಮಾಡ್ಬೇಕಲ್ಲ ಅನ್ಕೊಂಡು ಮಾಡ್ತಾರೆ. ಆದ್ರೆ ಇಲ್ಲಿ ಅಡುಗೆಗಿಂತ ಅಡುಗೆ ಮಾಡಿದವರೇ ಹೆಚ್ಚು ಸುದ್ದಿಯಾಗಿದ್ದಾರೆ.

ಇದನ್ನೂ ಓದಿ : ಪಾಟ್ನಾಗೆ ಹೊರಟವನು ಸೇರಿದ್ದು ಉದಯಪುರ – ವಿಮಾನ ಪ್ರಯಾಣದ ವೇಳೆ ಆಗಿದ್ದೇನು..?
ಬಿಲ್​ಗೇಟ್ಸ್. ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿ ಮತ್ತು ಟೆಕ್ ದೈತ್ಯ ಮೈಕ್ರೋಸಾಫ್ಟ್‌ನ ಸಹ-ಸಂಸ್ಥಾಪಕ. ಇದೇ ಬಿಲ್ ಗೇಟ್ಸ್ ಈಗ ಹಿಟ್ಟು ಕಲಸಿ ಲಟ್ಟಣಿಗೆ ಹಿಡಿದು ರೊಟ್ಟಿ ಲಟ್ಟಿಸಿದ್ದಾರೆ. ಭಾರತೀಯರ ಫೇವರೆಟ್ ರೊಟ್ಟಿಯನ್ನು ಹಾಗೋ ಹೀಗೋ ಮಾಡಿ ರುಚಿ ನೋಡಿದ್ದಾರೆ. ಸದ್ಯ ಬಿಲ್‌ಗೇಟ್ಸ್‌ ರೊಟ್ಟಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌ ಆಗಿದೆ. ವಿಶ್ವದ ಶ್ರೀಮಂತ ವ್ಯಕ್ತಿ, ಖ್ಯಾತ ಉದ್ಯಮಿ ಹೇಗೆ ರೊಟ್ಟಿ ಮಾಡಿದ್ದಾರೆ ಎಂದು ನೆಟ್ಟಿಗರು ಕುತೂಹಲದಿಂದ ವೈರಲ್‌ ವಿಡಿಯೋ ವೀಕ್ಷಿಸುತ್ತಿದ್ದಾರೆ.

ಪ್ರಸಿದ್ಧ ಬಾಣಸಿಗ ಈಟನ್ ಬರ್ನಾಥ್ ಬಿಲ್‌ಗೇಟ್ಸ್​ಗೆ ರೊಟ್ಟಿ ಮಾಡೋದನ್ನು ಹೇಳಿಕೊಟ್ಟಿದ್ದು, ವಿಡಿಯೋವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ನಾವಿಬ್ಬರೂ ಒಟ್ಟಿಗೆ ಭಾರತೀಯ ಜನಪ್ರಿಯ ತಿಂಡಿ ರೊಟ್ಟಿಯನ್ನು ತಯಾರಿಸಿದ್ದೇವೆ. ನಾನು ಇತ್ತೀಚೆಗೆ ಭಾರತದ ಬಿಹಾರಕ್ಕೆ ಹೋಗಿದ್ದೆ. ಅಲ್ಲಿ ಗೋಧಿ ಬೆಳೆಯುವ ರೈತರನ್ನು ಭೇಟಿ ಮಾಡಿದೆ. ಹಾಗೆ ಉತ್ತಮವಾಗಿ ರೊಟ್ಟಿ ಮಾಡುವ ಕ್ಯಾಂಟೀನ್‌ಗೆ ಭೇಟಿ ನೀಡಿದ್ದೆ” ಎಂದು ಪೋಸ್ಟ್‌ ಮಾಡುವ ಮೂಲಕ ಬರ್ನಾಥ್‌ ಈ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ಈಗಾಗ್ಲೇ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದು, ಲಕ್ಷಗಟ್ಟಲೆ ವೀಕ್ಷಣೆ ಪಡೆದಿದೆ.

ಬಿಲ್‌ಗೇಟ್ಸ್‌ ಮತ್ತು ಬಾಣಸಿಗ ಈಟನ್ ಬರ್ನಾಥ್ ಇಬ್ಬರೂ ಒಟ್ಟಿಗೆ ಮಾತನಾಡುತ್ತಾ ರೊಟ್ಟಿ ತಯಾರಿಸಲು ಪ್ರಾರಂಭಿಸುತ್ತಾರೆ. ಹಿಟ್ಟು, ನೀರು, ಉಪ್ಪು ಹಾಕಿ ಹಿಟ್ಟನ್ನು ರೊಟ್ಟಿ ಹದಕ್ಕೆ ಬಿಲ್‌ಗೇಟ್ಸ್‌ ಬೆರೆಸುತ್ತಿರುವುದನ್ನು ನೋಡಬಹುದು. ನಂತರ ಬರ್ನಾಥ್‌ ಲಟ್ಟಣಿಗೆ ಹಿಡಿದು ರೊಟ್ಟಿ ಮಾಡುವುದನ್ನು ತೋರಿಸಿಕೊಟ್ಟರು. ಆದ್ರೆ ಕಂಪ್ಯೂಟರ್‌, ವ್ಯವಹಾರ ಅಂತಾನೇ ಯಾವಾಗಲೂ ಬ್ಯುಸಿಯಾಗಿರೋ ಬಿಲ್‌ಗೇಟ್ಸ್‌ಗೆ ರೊಟ್ಟಿ ಮಾಡೋದು ಕಷ್ಟವಾಗಿತ್ತು. ಕೊನೆಗೆ ಅದು ಚಿತ್ರ ವಿಚಿತ್ರ ರೂಪ ಪಡೆದುಕೊಂಡಿದೆ. ನಂತರ ಬರ್ನಾಥ್‌ ರೊಟ್ಟಿ ಶೇಪ್ ಸರಿಪಡಿಸಿ  ತುಪ್ಪ ಸವರಿ ಅದನ್ನ ಬೇಯಿಸಿದ್ದಾರೆ. ಬಳಿಕ ಇಬ್ಬರೂ ಭಾರತೀಯ ರೊಟ್ಟಿಯನ್ನ ಟೇಸ್ಟ್ ಮಾಡಿದ್ದಾರೆ.

ಹೀಗೆ ಅಡುಗೆ ಮಾಡುತ್ತಾ ಪರಸ್ಪರ ಮಾತನಾಡುತ್ತಿರುವಾಗ ಬರ್ನಾಥ್ ಗೇಟ್ಸ್ ಅವರಿಗೆ ನೀವು ಕೊನೆಯ ಬಾರಿಗೆ ಅಡುಗೆ ಮಾಡಿದ್ದು ಯಾವಾಗ ಎಂದು ಕೇಳಿದರು. ಇದಕ್ಕೆ ಮಜವಾಗಿ ಉತ್ತರಿಸಿದ ಗೇಟ್ಸ್‌ ನಾನು ಅಡುಗೆ ಮಾಡದೇ ತುಂಬಾ ದಿನಗಳಾಯಿತು. ಸೂಪ್ ಅನ್ನು ಮಾತ್ರ ಬಿಸಿ ಮಾಡಿಕೊಳ್ಳುತ್ತೇನೆ ಎಂದರು.

ಇನ್ನೂ ಬಿಲ್‌ಗೇಟ್ಸ್‌ ಈ ಪ್ರಯತ್ನಕ್ಕೆ ಹಲವರು ಮೆಚ್ಚುಗೆ ಸೂಚಿಸಿದರೆ, ಇನ್ನೂ ಕೆಲ ಬಳಕೆದಾರರು ಬಿಲ್‌ಗೇಟ್ಸ್‌ ಹೀಗೆ ರೊಟ್ಟಿ ಮಾಡಬಾರದು ಎಂಬುದನ್ನು ತೋರಿಸಿದ್ದಾರೆ ಎಂದು ಕಾಲೆಳೆದಿದ್ದಾರೆ. ಇನ್ನೋರ್ವ ಬಳಕೆದಾರ ರೊಟ್ಟಿಯನ್ನು ದುಂಡಾಗಿ ಮಾಡೋದು ಹೇಗೆ ಅಂತಾ ಸಲಹೆ ನೀಡಿದ್ದಾರೆ.

suddiyaana