ಭಾರತ ಸೋತ್ರೂ ಗೆದ್ದ ಬುಮ್ರಾ – ಬ್ಯಾಟಿಂಗ್ ವೀಕ್ ನೆಸ್ ಮತ್ತೆ ರಿವೀಲ್
1-1ರಲ್ಲಿರೋ ಸರಣಿ ಗೆಲ್ಲೋದ್ಯಾರು?

ಏಕದಿನ ಸರಣಿಯ ಮೊದಲ ಮ್ಯಾಚ್ ನಲ್ಲಿ ಟೀಂ ಇಂಡಿಯಾ ವಿನ್ ಆಗಿತ್ತು. ಈಗ ಇಂಗ್ಲೆಂಡ್ ವಿನ್ ಆಗಿದ್ದು ಸರಣಿ ಸಮಬಲ ಆಗಿದೆ. ಸೋ ಸಂಡೇ ಲಾಸ್ಟ್ ಮ್ಯಾಚ್ ನಲ್ಲಿ ಗೆದ್ದವ್ರು ಸರಣಿ ವಿನ್ ಆಗ್ತಾರೆ. ಟಿ 20ಐ ಸರಣಿಯಲ್ಲಿ ಹೇಗೆ ಭಾರತ ಬ್ಯಾಟಿಂಗ್ ನಲ್ಲಿ ಫ್ಲಾಪ್ ಆಗಿತ್ತೋ ಅದೇ ಥರ ನಿನ್ನೆ ಮ್ಯಾಚ್ ನಲ್ಲೂ ಫೇಲ್ಯೂರ್ ಆದರು. ಓಪನರ್ಸ್ ಕಡೆಯಿಂದ ರನ್ಸ್ ಇಲ್ಲ ಮಿಡ್ಲ್ ಆರ್ಡರ್ ನಲ್ಲೂ ರನ್ಸ್ ಬರ್ಲಿಲ್ಲ. ಕಾರ್ಡಿಫ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಚೂಸ್ ಮಾಡಿಕೊಳ್ತು. ಌಂಡ್ ಬೌಲಿಂಗ್ ನಲ್ಲಿ ಅದ್ಭುತವಾಗಿ ಪ್ರದರ್ಶನ ಕೂಡ ನೀಡಿದ್ರು. ಭಾರತ 233 ರನ್ ಗಳಿಸಿ ಆಲೌಟ್ ಆಗಿತ್ತು. ಇಂಗ್ಲೆಂಡ್ ತಂಡ ಈ ಟಾರ್ಗೆಟ್ ಬೆನ್ನಟ್ಟಿ ಪಂದ್ಯವನ್ನ ವಿನ್ ಆಯ್ತು. ಈ ಗೆಲುವಿನೊಂದಿಗೆ, ಮೂರು ಪಂದ್ಯಗಳ ಸರಣಿಯು ಈಗ 1-1 ಸಮಬಲದಲ್ಲಿದೆ.
ಇದನ್ನೂ ಓದಿ : ಗಿಲ್ ಔಟ್.. ಕಿಶನ್ ಓಪನರ್ – ಅಸಲಿ ಖದರ್ ತೋರಿಸ್ತಾರಾ RO-KO?
ಕೈಕೊಟ್ಟ ಬ್ಯಾಟರ್ಸ್!
ಫಸ್ಟ್ ಬ್ಯಾಟಿಂಗ್ ಗೆ ಬಂದ ಭಾರತದ ಪರ ರನ್ಸ್ ಬರಲಿಲ್ಲ
ವಿರಾಟ್ ಕೊಹ್ಲಿ, ಶ್ರೇಯಸ್ ಮಾತ್ರವೇ 50+ ರನ್ಸ್ ಕಲೆ ಹಾಕಿದ್ದು
300 ಬಾಲ್.. 233 ರನ್ಸ್ ಇಂಗ್ಲೆಂಡ್ ಗೆ ಬಿಗ್ ಸ್ಕೋರ್ ಆಗಿರಲಿಲ್ಲ
ಬೌಲಿಂಗ್ ನಲ್ಲಿ ಆರಂಭದಲ್ಲೇ 2 ವಿಕೆಟ್ಸ್ ಬಂದ್ರೂ ನಂತರ ಇಲ್ಲ
ಜೋ ರೂಟ್ ಏಕಾಂಗಿ ಹೋರಾಟಕ್ಕೆ ಗೆಲುವು ಸಾಧಿಸಿದ ಆಂಗ್ಲರು
ಹೀಗೆ ಆಂಗ್ಲರ ವಿರುದ್ಧ ಭಾರತ ಎಲ್ಲಿಯೂ ಕೂಡ ಫೈಟ್ ಕೊಡಲೇ ಇಲ್ಲ. ಹೀಗಾಗಿ ಎರಡನೇ ಪಂದ್ಯ ಆಂಗ್ಲರ ವಶವಾಯ್ತು. ಆದ್ರೆ ಈ ಪಂದ್ಯದಲ್ಲಿ ಭಾರತ ಸೋತ್ರೂ ಗೆದ್ದದ್ದು ಜಸ್ಪ್ರೀತ್ ಬುಮ್ರಾ. ತಮ್ಮ ಕರಾರುವಕ್ಕಾದ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದರೂ, ಇಂಗ್ಲೆಂಡ್ ವಿರುದ್ಧದ ODI ಪಂದ್ಯದಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್‌ನಿಂದ ಅಚ್ಚರಿ ಮೂಡಿಸಿದರು. 10ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಅಜೇಯ 20 ರನ್ ಗಳಿಸಿ, ಒಂದೇ ಓವರ್‌ನಲ್ಲಿ 18 ರನ್ ಸಿಡಿಸಿ ಗಮನ ಸೆಳೆದರು. ಹಾಗೇ ಇಡೀ ಪಂದ್ಯದಲ್ಲಿ ಎರಡೂ ಕಡೆಯ ಬ್ಯಾಟಿಂಗ್ಗೆ ಕಂಪೇರ್ ಮಾಡಿದ್ರೆ ಬುಮ್ರಾ ಸ್ಕ್ರೈಕ್ ರೇಟ್ ಎಲ್ರಿಗಿಂತ ಜಾಸ್ತಿನೇ ಇತ್ತು. ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡ್ರಲ್ಲೂ ಮಿಂಚಿನ ಬುಮ್ರಾಗೆ ಎಲ್ರೂ ಶಹಬ್ಬಾಸ್ ಅಂತಿದ್ದಾರೆ. ಈಗ ಸರಣಿ ಸಮಬಲ ಆಗಿದ್ದು ಭಾನುವಾರ ಕೊನೇ ಮ್ಯಾಚಲ್ಲಿ ಗೆದ್ದವ್ರು ಸರಣಿ ಗೆಲ್ತಾರೆ.

ನೋಡಿರಿ

