ಚೇತನ್ ಬಂಧಿಸಬೇಡಿ ನನ್ನ ಕೈಗೆ ಒಪ್ಪಿಸಿ – ಮಗಳನ್ನು ಕೊಂ*ದ ಹಾಗೆ ಕೊ*ಲ್ಲುತ್ತೇನೆ ಎಂದ ಲಾವಣ್ಯ ತಾಯಿ

ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದ ಭೀಕರ ಕೃತ್ಯಕ್ಕೆ ಕರಾವಳಿ ಬೆಚ್ಚಿಬಿದ್ದಿದೆ. ಬಿ.ಸಿ ರೋಡ್ ಬಸ್ಸ್ಟ್ಯಾಂಡ್ ಬಳಿ ಲಾವಣ್ಯ ಎಂಬ ಯುವತಿಯ ಭೀಕರ ಹ*ತ್ಯೆಗೆ ಜನತೆ ನಡುಗಿಹೋಗಿದ್ದಾರೆ. ಇದರ ಮಧ್ಯೆ ಲಾವಣ್ಯ ಹೆತ್ತವರು ಚೇತನ್ ನಮಗೆ ಬೇಕು ಎಂದು ಹಠ ಹಿಡಿದಿದ್ದಾರೆ.
ಬಂಟ್ವಾಳದಲ್ಲಿ ನಡೆದ ಕೃತ್ಯ ಪೊಲೀಸ್ ಇಲಾಖೆಗೆ ಸವಾಲಾಗಿರಬಹುದು. ಆದರೆ, ಮನುಷ್ಯತ್ವವೇ ಇಲ್ಲದಂತೆ ವರ್ತಿಸಿದ ಚೇತನ್ ಎಂಬ ಯುವಕನ ಹುಚ್ಚಾಟಕ್ಕೆ ಇಡೀ ಕರಾವಳಿಯೇ ಬೆಚ್ಚಿಬಿದ್ದಿದೆ. ಲಾವಣ್ಯ ಎಂಬ ಯುವತಿಯನ್ನು ಬಿ.ಸಿ ರೋಡ್ ಬಸ್ಸ್ಟ್ಯಾಂಡ್ನಲ್ಲಿ ಚೇತನ್ ಎಂಬ ಯುವಕ ಕೊ*ಚ್ಚಿಕೊಂ*ದಿದ್ದಾನೆ. ಈ ಭೀಕರ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಇದನ್ನು ಹೆತ್ತವರು ನೋಡಿದರೆ ಹೇಗಿರಲ್ಲ ಹೇಳಿ. ಅಮಾಯಕ ಮಗಳು ಹಾಡಹಗಲೇ ಕಟುಕನ ಕೈಯಲ್ಲಿ ಬ*ಲಿಯಾಗಿ ಹೋಗಿದ್ದನ್ನು ಹೆತ್ತಕರುಳು ಸಹಿಸಲು ಸಾಧ್ಯವೇ. ಒಂದೆಡೆ ಮಗಳು ಭೀಕರವಾಗಿ ಕೊಲೆಯಾಗಿ ಹೋಗಿರುವ ನೋವು. ಮತ್ತೊಂದೆಡೆ ಸಂಬಂಧಿಯೇ ಮಗಳನ್ನು ಕೊಚ್ಚಿ ಕೊಚ್ಚಿ ಕೊಂದಿರುವ ನೋವು. ಹೆತ್ತ ತಾಯಿಯ ಸಂಕಟ ಹೇಳತೀರದಾಗಿದೆ. ಜೊತೆಗೆ ತಾಯಿಯ ಕಿಚ್ಚಿಗೆ ಚೇತನ್ ಎಂಬ ಕ್ರೂರಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.
ವಿಪರ್ಯಾಸವೆಂದರೆ, ಚೇತನ್ ಲಾವಣ್ಯಳನ್ನು ಕೊಲೆ ಮಾಡುವ ಮೊದಲು ಬಸ್ಲ್ಲಿ ಈಕೆಯ ಪಕ್ಕ ಬಂದು ಕುಳಿತಿದ್ದಾನೆ. ಆಗ ಲಾವಣ್ಯ ತನ್ನ ಬಾವನಿಗೆ ಪೋನ್ ಕರೆ ಮಾಡಿ ತನ್ನ ಬಳಿ ಚೇತನ್ ಕೂತಿದ್ದಾನೆ. ನನಗೆ ಭಯವಾಗುತ್ತಿದೆ ಎಂದು ಹೇಳಿದ್ದಾಳಂತೆ. ಆದರೆ, ಕ್ರೂರಿ ಚೇತನ್ ಲಾವಣ್ಯಳನ್ನ ಬಸ್ಸಿನಿಂದ ಕೆಳಗಿಳಿಸಿ ಕೊಚ್ಚಿ ಕೊಚ್ಚಿ ಕೊಂದಿದ್ದಾನೆ.
ಇನ್ನು ಕ್ರೂರಿ ಚೇತನ್ ಪೊಲೀಸರ ವಶದಲ್ಲಿದ್ದಾನೆ. ಬಂಟ್ವಾಳ ಪೊಲೀಸರು ಚೇತನ್ನನ್ನು ಬಂಧಿಸಿದ್ದಾರೆ. ಲಾವಣ್ಯ ಕುಟುಂಬಸ್ಥರು ಮಾತ್ರ ಚೇತನ್ ಎಂಬ ಪಾಪಿಯನ್ನು ನಮ್ಮ ಕೈಗೆ ಕೊಟ್ಟುಬಿಡಿ ಎಂದು ಪೊಲೀಸರ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಲಾವಣ್ಯ ತಂದೆ ಬಾಲಕೃಷ್ಣ ಗೌಡ ಅವರು ಚೇತನ್ ಬಗ್ಗೆ ಮಾತಾಡಿದ್ದು, ‘ನಮಗೆ ಚೇತನ್ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಅವನು ನಮ್ಮ ಮನೆಗೆ ಬಂದಿಲ್ಲ. ಅವನು ನಮ್ಮ ದೂರದ ಸಂಬಂಧಿ ಮಾತ್ರ. ಲಾವಣ್ಯ ಅವನೊಂದಿಗೆ ಮಾತನಾಡುತ್ತಿದ್ದಳೋ ಇಲ್ಲವೋ ಎಂಬುದು ನಮಗೆ ತಿಳಿದಿರಲಿಲ್ಲ. ಅವಳು ಯಾವುದೇ ವಿಷಯವನ್ನು ನಮ್ಮಲ್ಲಿ ಹೇಳಿಲ್ಲ’ ಎಂದು ತಿಳಿಸಿದ್ದಾರೆ. ಅಲ್ಲದೇ ಚೇತನ್ನನನ್ನು ಬಂಧಿಸಬೇಡಿ, ಬಂಧಿಸುವ ಬದಲು ನಡುರೋಡಲ್ಲಿ ಎನ್ಕೌಂಟರ್ ಮಾಡಿ ಎಂದು ಆಗ್ರಹಿಸಿದ್ದಾರೆ.
ಇತ್ತ ಲಾವಣ್ಯ ತಾಯಿ, ಆರೋಪಿ ಚೇತನ್ ನನ್ನು ನನ್ನ ಬಳಿ ಕರೆತನ್ನಿ ಎಂದು ಪೊಲೀಸರ ಬಳಿ ಒತ್ತಾಯ ಮಾಡಿದ್ದಾರೆ. ಆತನನ್ನು ಊರಿನ ಜನರೆಲ್ಲಾ ಸೇರಿ ಇಲ್ಲಿಗೆ ಕರೆತನ್ನಿ. ಆತನನ್ನು ಇಲ್ಲೇ ನಾನು ಮುಗಿಸುತ್ತೇನೆ. ನನ್ನ ಮಗಳು ಅಮಾಯಕಳು. ಆಕೆ ಯಾವತ್ತೂ ಆತನ ಬಗ್ಗೆ ನನ್ನಲ್ಲಿ ಹೇಳಿಲ್ಲ. ಆಕೆ ಯಾರ ಜೊತೆಗೂ ಮಾತನಾಡುವ ಮಗುವಲ್ಲ. ಕೆಲಸಕ್ಕೆ ಹೋಗುತ್ತೇನೆ ಎಂದಾಗ ಬೇಡ ಎಂದಿದ್ದೆ. ಮನೆಯಲ್ಲೇ ಇರುವುದಿಲ್ಲ ಕೆಲಸಕ್ಕೆ ಹೋಗುತ್ತೇನೆ ಎಂದು ಹಠ ಹಿಡಿದಿದ್ದಳು. ಅದಕ್ಕಾಗಿ ಅವಳನ್ನು ಕೆಲಸಕ್ಕೆ ಕಳುಹಿಸಿದೆ. ಅವಳು ಕೆಲಸ ಮಾಡಿ ನಮಗೆ ಜೀವನ ಸಾಗಿಸುವ ಅನಿವಾರ್ಯತೆ ಇರಲಿಲ್ಲ. ಕಲಿತ ಮಗಳು ಎನ್ನುವ ಕಾರಣಕ್ಕೆ ಕೆಲಸಕ್ಕೆ ಕಳುಹಿಸಿದೆ. ಎಲ್ಲಾ ವಿಚಾರವನ್ನು ನಮ್ಮ ಬಳಿ ಹೇಳುತ್ತಿದ್ದ ಮಗು ಅವಳು, ಯಾವುದೇ ಕಾರಣಕ್ಕೂ ಅವನನ್ನು ಸುಮ್ಮನೆ ಬಿಡಬಾರದು ಎಂದು ಕಣ್ಣೀರಾಕಿದ್ದಾರೆ.
ಕಕ್ಕೆಪದವಿನ ಕೊಡಂಗೆಯ ಉಳಿ ಲಾವಣ್ಯನ ಊರು ಇದೀಗ ಮೌನವಾಗಿದೆ. ಮಂಗಳೂರಿನ ದೇರಳಕಟ್ಟೆ ಖಾಸಗಿ ಆಸ್ಪತ್ರೆ ಯಲ್ಲಿ ಲಾವಣ್ಯಳ ಪೋಸ್ಟ್ ಮಾರ್ಟಂ ನಡೆದಿದೆ. ಮನೆ ಬಳಿಯೇ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ಲಾವಣ್ಯ ಮತ್ತು ಚೇತನ್ ನಡುವೆ ನಾಲ್ಕು ವರ್ಷಗಳ ಹಿಂದೆಯೇ ಬ್ರೇಕಪ್ ಆಗಿತ್ತು ಎನ್ನಲಾಗಿದೆ. ಆದರೂ ಚೇತನ್ ಲಾವಣ್ಯಳನ್ನು ಬಿಡದೆ ತೊಂದರೆ ನೀಡುತ್ತಿದ್ದ ಎಂಬ ಆರೋಪವಿದೆ.

ನೋಡಿರಿ

