ಚಾಮುಂಡೇಶ್ವರಿಗೆ ಹರಕೆ ತೀರಿಸಿದ ಸಿಎಂ ಪತ್ನಿ – ಆಷಾಢ ಮಾಸದ ಮೊದಲ ಶುಕ್ರವಾರ ಸೀರೆ ಅರ್ಪಿಸಿದ ಉಷಾ ಶಿವಕುಮಾರ್

ಚಾಮುಂಡೇಶ್ವರಿಗೆ ಹರಕೆ ತೀರಿಸಿದ ಸಿಎಂ ಪತ್ನಿ –  ಆಷಾಢ ಮಾಸದ ಮೊದಲ ಶುಕ್ರವಾರ ಸೀರೆ ಅರ್ಪಿಸಿದ ಉಷಾ ಶಿವಕುಮಾರ್

ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಆಷಾಢ ಶುಕ್ರವಾರದ ಸಂಭ್ರಮ. ಆಷಾಢದ ಮೊದಲ ಶುಕ್ರವಾರ ನಾಡಿನ ಅಧಿದೇವತೆಗೆ ಸಿಎಂ ಪತ್ನಿ ಉಷಾ ಶಿವಕುಮಾರ್ ಹರಕೆ ಸಮರ್ಪಿಸಿದರು.

ಇದನ್ನೂ ಓದಿ:ಇಂದು ಮೊದಲ ಆಷಾಢ ಶುಕ್ರವಾರ – ಚಾಮುಂಡಿ ಬೆಟ್ಟದಲ್ಲಿ ನಾಡದೇವತೆಗೆ ವಿಶೇಷ ಪೂಜೆ

ಸಿಎಂ ಡಿ.ಕೆ. ಶಿವಕುಮಾರ್ ಪತ್ನಿ ಉಷಾ ಶಿವಕುಮಾರ್ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಸೀರೆ ಹರಕೆ ಸಮರ್ಪಿಸಿದರು.  ಪತಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾದರೆ ನಾಡದೇವತೆ ಚಾಮುಂಡೇಶ್ವರಿಗೆ ಉಡಿಸಲು ಸೀರೆ ನೀಡುವುದಾಗಿ ಉಷಾ ಶಿವಕುಮಾರ್ ಈ ಹಿಂದೆ ಹರಕೆ ಹೊತ್ತಿದ್ದರು. ಅದರಂತೆ, ಆಷಾಢ ಮಾಸದ ಮೊದಲ ಶುಕ್ರವಾರದ ಅತ್ಯಂತ ಪವಿತ್ರ ದಿನದಂದು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದು, ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಾವು ಕಾಣಿಕೆಯಾಗಿ ತಂದಿದ್ದ ರೇಷ್ಮೆ ಸೀರೆಯನ್ನು ತಾಯಿಯ ಮೂಲ ವಿಗ್ರಹಕ್ಕೆ ಸಮರ್ಪಿಸುವ ಮೂಲಕ ಹರಕೆ ಪೂರೈಸಿದರು. ಸಿಎಂ ಪತ್ನಿ ಭಕ್ತಿಯಿಂದ ಅರ್ಪಿಸಿದ ಈ ಸೀರೆಯನ್ನು ಚಾಮುಂಡಿಬೆಟ್ಟದ ಆಡಳಿತ ಮಂಡಳಿ ಹಾಗೂ ಪ್ರಧಾನ ಅರ್ಚಕರು ದೇವಿಗೆ ಉಡಿಸಿ, ವಿಶೇಷ ಅಲಂಕಾರದೊಂದಿಗೆ ಮಹಾಮಂಗಳಾರತಿ ನೆರವೇರಿಸಿದ್ದಾರೆ. ಮೈಸೂರು ಚಾಮುಂಡೇಶ್ವರಿ ದೇವಿಗೆ ಉಡಿಸಲು ನೀಡುವ ಸೀರೆ ಹರಕೆಯನ್ನು ಭಕ್ತರು ವಿಶೇಷವಾಗಿ ಮದುವೆ, ನಾಮಕರಣ, ಉದ್ಯೋಗ ಅಥವಾ ಇತರೆ ಇಷ್ಟಾರ್ಥಗಳು ನೆರವೇರಿದಾಗ ಮಾಡಿಕೊಳ್ಳುತ್ತಾರೆ. ಈ ಹರಕೆಯನ್ನು ತಲುಪಿಸಲು ದೇವಾಲಯದಲ್ಲಿ ಅಧಿಕೃತ ಸೀರೆ ಹರಕೆ ಸೇವೆ ಲಭ್ಯವಿದೆ. ಹರಕೆಯಾಗಿ ಅರ್ಪಿಸಲು ಭಕ್ತರು ತಾವೇ ಸ್ವತಃ ಹೊಸ ರೇಷ್ಮೆ ಸೀರೆಯನ್ನು ತಂದು ದೇವಸ್ಥಾನದ ಕಚೇರಿಗೆ ನೀಡಬೇಕು.

ಮೊದಲ ಆಷಾಢ ಶುಕ್ರವಾರಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ವಿವಿಐಪಿ ಸಾಲಿನಲ್ಲಿ ನಿಂತು ದೇವಾಲಯಕ್ಕೆ ಆಗಮಿಸಿದ ವಿಜಯಲಕ್ಷ್ಮಿ ಅವರು ಪತಿ ದರ್ಶನ್ ಮತ್ತು ಪುತ್ರ ವಿನೀಶ್ ಹೆಸರಿನಲ್ಲಿ ವಿಶೇಷ ಪೂಜೆ ಮತ್ತು ಅರ್ಚನೆಗಳನ್ನು ಮಾಡಿಸಿದರು.

Sulekha

Leave a Reply

Your email address will not be published. Required fields are marked *