ಜಗತ್ತಿಗೆ ಹೆದರಿಸುವ ಶನಿದೇವ ಯಾರಿಗೆಲ್ಲಾ ಹೆದರುತ್ತಾನೆ ಗೊತ್ತಾ?

ಜಗತ್ತಿಗೆ ಹೆದರಿಸುವ ಶನಿದೇವ ಯಾರಿಗೆಲ್ಲಾ ಹೆದರುತ್ತಾನೆ ಗೊತ್ತಾ?

ಸೂರ್ಯ ಪುತ್ರನಾದ ಶನಿದೇವನಿ ಎಲ್ಲರೂ ಕೂಡ ಭಯ ಪಡುತ್ತಾರೆ. ಶನಿ ವಕ್ರದೃಷ್ಠಿ ಬಿದ್ದರೇ ಜೀವನವೇ ಬೀದಿಗೆ ಬರುತ್ತೆ ಅನ್ನೋ ನಂಬಿಕೆಯಿದೆ. ಎಲ್ಲರಿಗೂ ಭಯ ಹುಟ್ಟಿಸುವ ಶನಿದೇವ ಕೂಡ ಭಯ ಪಡ್ತಾನೆ. ಹಾಗಾದ್ರೆ ಶನಿದೇವ ಯಾರಿಗೆಲ್ಲಾ ಹೆದರುತ್ತಾನೆ ಅನ್ನೋದ್ದನ್ನ ನೋಡೋಣ.

ಹನುಮಂತ

ಶನಿದೇವನು ಹನುಮಂತನನ್ನು ನೋಡಿದರೆ ಹೆದರುತ್ತಾನೆಂಬ ನಂಬಿಕೆಯಿದೆ. ಶನಿಗೂ ಹಾಗೂ ಹನುಮಂತನಿಗೂ ಒಮ್ಮೆ ಜಗಳವಾದಾಗ ಹನುಂತನಿಂದ ಶನಿಯು ವಿಪರೀತ ಮೈಕೈ ನೋವನ್ನು ಅನುಭವಿಸಿದ್ದನಂತೆ. ಆದ್ದರಿಂದ ಶನಿ ದೋಷವಿರುವವರು ತಮ್ಮ ದೋಷವನ್ನು ನಿವಾರಿಸಿಕೊಳ್ಳಲು ಹನುಮಂತನನ್ನು ಹೆಚ್ಚಾಗಿ ಪ್ರಾರ್ಥಿಸಬೇಕು. ಆಗಾಗ ಹನುಮಂತನ ದೇವಾಲಯಕ್ಕೆ ಹೋಗಿ ಹನುಮಂತನ ಆಶೀರ್ವಾದವನ್ನು ಪಡೆದುಕೊಳ್ಳಬೇಕು.

ಕೃಷ್ಣ

ಕೃಷ್ಣನು ಜ್ಞಾನಿ. ಎಲ್ಲವನ್ನು ಅರಿತವನು ಶ್ರೀ ಕೃಷ್ಣ. ತನ್ನ ಲೀಲೆಯ ಮೂಲಕ ಜಗತ್ತಿಗೆ ಒಳ್ಳೆಯದನ್ನೇ ಕರುಣಿಸುವ ಗುಣ ಉಳ್ಳವನೀತ. ಶನಿಯು ಒಮ್ಮೆ ಕೃಷ್ಣನನ್ನು ನೋಡಬೇಕೆಂದು ಕೋಕಿಲ ಧಾಮದಲ್ಲಿ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ. ಈತನ ಕಠಿಣ ತಪಸ್ಸಿಗೆ ಒಲಿದ ಕೃಷ್ಣನು ಕೋಗಿಲೆಯ ರೂಪವನ್ನು ಧರಿಸಿ ಶನಿಯ ಮುಂದೆ ಪ್ರತ್ಯಕ್ಷನಾಗುತ್ತಾನೆ. ಕೃಷ್ಣನನ್ನು ನೋಡಿ ಸಂತಸಗೊಂಡ ಶನಿಯು ತಾನು ಇನ್ನುಮುಂದೆ ಕೃಷ್ಣನ ಯಾವುದೇ ಭಕ್ತರಿಗೂ ಕೂಡ ತೊಂದರೆಯನ್ನು ಕೊಡಲಾರೆ ಎಂದು ಹೇಳುತ್ತಾನೆ.

ಅರಳಿ ಮರ

ಪೌರಾಣಿಕ ನಂಬಿಕೆಗಳ ಪ್ರಕಾರ ಶನಿಯು ಅರಳಿ ಮರಕ್ಕೆ ಹೆದರುತ್ತಾನಂತೆ. ಆದ್ದರಿಂದ ಶನಿವಾರದಂದು ಅರಳಿಮರದ ಕೆಳಗೆ ಸಾಸಿವೆ ಎಣ್ನೆಯ ದೀಪವನ್ನು ಹಚ್ಚುವುದರಿಂದ ಶನಿಯು ಪ್ರಸನ್ನನಾಗುತ್ತಾನಂತೆ. ಪೀಪ್ಲಾದ್‌ ಮುನಿ ಯನ್ನು ಅಥವಾ ಅರಳಿ ಮರವನ್ನು ಪೂಜಿಸುವ ವ್ಯಕ್ತಿಗಳಿಗೆ ಹೆಚ್ಚು ಋಣಾತ್ಮಕ ಪಪ್ರಭಾವವನ್ನು ಬೀರಲಾರನೆಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

ಶಿವ

ಒಮ್ಮೆ ಶಿವನ ಮತ್ತು ಶನಿಯ ನಡುವೆ ಜಗಳವಾದಾಗ ಶಿವನಿಂದ ಶನಿಯು ಹಾನಿಗೊಳಗಾಗುತ್ತಾನೆ. ಆಗ ಶಿವನು ಸೂರ್ಯದೇವನ ಕೋರಿಕೆಯ ಮೇರೆಗೆ ಆತನನ್ನು ಸರಿ ಪಡಿಸುತ್ತಾನೆ . ಅಂದಿನಿಂದ ಶಿವನನ್ನು ಶನಿಯು ಪೂಜನೀಯ ಭಾವನೆಯಿಂದ ಕಾಣುತ್ತಾನೆ ಹಾಗೂ ಶಿವನನ್ನು ನೋಡಿದರೆ ಭಯಪಡುತ್ತಾನೆ.

 

Kishor KV

Leave a Reply

Your email address will not be published. Required fields are marked *