ಸೋಮವಾರ ಶಿವ ಮಾತ್ರವಲ್ಲ, ಶಿವನ ಜೊತೆ ಈ ದೇವರಗಳನ್ನು ಪೂಜೆಸಿ

ಸೋಮವಾರ ಶಿವ ಮಾತ್ರವಲ್ಲ, ಶಿವನ ಜೊತೆ ಈ ದೇವರಗಳನ್ನು ಪೂಜೆಸಿ

ಸೋಮವಾರ ಅಂದ್ರೆ ಅದು ಶಿವನ ದಿನ. ಶಿವನಿಗೆ  ವಿಶೇಷವಾಗಿ ಪೂಜೆ ಸಲ್ಲಿಸಲಾಗುತ್ತೆ. ಆದ್ರೆ ಸೋಮವಾರದಂದು ಶಿವನನ್ನಷ್ಟೇ ಅಲ್ಲ, ಶಿವನೊಂದಿಗೆ ಸಂಬಂಧ ಹೊಂದಿರುವ ಕೆಲವು ದೇವತೆಗಳನ್ನೂ ಪೂಜಿಸುವುದು ವಿಶೇಷ ಫಲ ನೀಡುತ್ತದೆ. ಹಾಗಾದ್ರೆ ಸೋಮವಾರ ಶಿವನೊಂದಿಗೆ ಯಾವ ದೇವರುಗಳನ್ನು ಪೂಜಿಸಬೇಕು ಅನ್ನೋದ್ದನ್ನ ನೋಡೋಣ.

ಚಂದ್ರದೇವ

ಚಂದ್ರದೇವನು ಶಿವನ ಜಟೆಯಲ್ಲಿ ಸ್ಥಾನ ಪಡೆದವನು. ಚಂದ್ರನು ಮನಸ್ಸಿನ ಸಂಕೇತವಾಗಿರುವುದರಿಂದ ಸೋಮವಾರದಂದು ಶಿವನೊಂದಿಗೆ ಚಂದ್ರದೇವನ ಪೂಜೆಯೂ ಮಹತ್ವದ್ದಾಗಿದೆ. ಇದರಿಂದ ಮನಸ್ಸಿಗೆ ಶಾಂತಿ, ತಾಳ್ಮೆ ಹಾಗೂ ಜಾತಕದಲ್ಲಿನ ಚಂದ್ರನ ಬಲ ಹೆಚ್ಚುತ್ತದೆ ಎಂದು ನಂಬಲಾಗುತ್ತದೆ.

ನಂದಿ

ನಂದಿ ಶಿವನ ವಾಹನವಾಗಿದ್ದು, ಅವನಿಗೆ ಅತ್ಯಂತ ಪ್ರಿಯನು. ದೇವಸ್ಥಾನದಲ್ಲಿ ಶಿವನ ದರ್ಶನದ ನಂತರ ನಂದಿಯನ್ನು ಪೂಜಿಸಿ, ಅವನ ಕಿವಿಯಲ್ಲಿ ತಮ್ಮ ಮನದಾಸೆಗಳನ್ನು ಹೇಳಿದರೆ, ನಂದಿ ಅವನ್ನು ಶಿವನಿಗೆ ತಲುಪಿಸುತ್ತಾನೆ ಎಂಬ ನಂಬಿಕೆ ಇದೆ.

ಪಾರ್ವತಿ ದೇವಿ

ಪಾರ್ವತಿ ದೇವಿ ಶಿವನ ಅರ್ಧಾಂಗಿನಿ. ಶಿವನೊಂದಿಗೆ ಪಾರ್ವತಿ ದೇವಿಯನ್ನೂ ಪೂಜಿಸುವುದರಿಂದ ದಾಂಪತ್ಯ ಜೀವನ ಸುಖಕರವಾಗುತ್ತದೆ. ವಿವಾಹಿತ ಮಹಿಳೆಯರು ಶಿವ–ಪಾರ್ವತಿಯನ್ನು ಆರಾಧಿಸಿದರೆ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ. ಅವಿವಾಹಿತ ಯುವತಿಯರು ಪೂಜಿಸಿದರೆ ಉತ್ತಮ ಜೀವನ ಸಂಗಾತಿ ದೊರೆಯುತ್ತಾನೆ ಎಂಬ ನಂಬಿಕೆ ಇದೆ.

ಗಂಗಾ ಮಾತೆ

ಗಂಗಾ ಮಾತೆ ಶಿವನ ಜಟೆಯಲ್ಲಿ ನೆಲೆಸಿರುವವಳು. ಗಂಗೆಯ ಉಗ್ರ ಪ್ರವಾಹವನ್ನು ಶಿವನು ತನ್ನ ಜಟೆಯಲ್ಲಿ ಹಿಡಿದು ಭೂಮಿಯನ್ನು ರಕ್ಷಿಸಿದ ಕಥೆ ಪ್ರಸಿದ್ಧವಾಗಿದೆ. ಆದ್ದರಿಂದ ಸೋಮವಾರದಂದು ಶಿವಲಿಂಗಕ್ಕೆ

ಬಿಲ್ವಪತ್ರೆ

ಬಿಲ್ವಪತ್ರೆ ಶಿವನಿಗೆ ಅತ್ಯಂತ ಪ್ರಿಯವಾದ ಅರ್ಪಣೆ. ಬಿಲ್ವಪತ್ರೆಯಿಲ್ಲದೆ ಶಿವಪೂಜೆ ಅಪೂರ್ಣವೆಂದು ಹೇಳಲಾಗುತ್ತದೆ. ಸೋಮವಾರದಂದು ಶಿವಲಿಂಗಕ್ಕೆ ಅಭಿಷೇಕ ಮಾಡಿ ಮೂರು ದಳವುಳ್ಳ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಶಿವನ ಕೃಪೆ ಸುಲಭವಾಗಿ ದೊರೆಯುತ್ತದೆ.

 

Kishor KV

Leave a Reply

Your email address will not be published. Required fields are marked *