2ನೇ ಏಕದಿನ ಪಂದ್ಯದಲ್ಲಿ ಗೆದ್ದ ರೂಟ್ ಪಡೆ – ಕೊಹ್ಲಿ ಶ್ರೇಯಸ್ ಅರ್ಧ ಶಕತ ವ್ಯರ್ಥ

ಇಂಗ್ಲೆಂಡ್ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ 4 ವಿಕೆಟ್ಗಳಿಂದ ಟೀಮ್ ಇಂಡಿಯಾವನ್ನು ಮಣಿಸಿ ಸರಣಿಯಲ್ಲಿ ಸಮಬಲ ಸಾಧಿಸಿದೆ. 234 ರನ್ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡದ ಆರಂಭ ಕಳಪೆಯಾಗಿತ್ತು ಬೆನ್ ಡಕೆಟ್ (0), ಜಾಕೊಬ್ ಬೆಥೆಲ್ (4) ರನ್ ಕಲೆ ಹಾಕುವಲ್ಲಿ ವಿಫಲರಾದರು. ಮೂರನೇ ವಿಕೆಟ್ಗೆ ಜೋ ರೂಟ್ ಹಾಗೂ ನಾಯಕ ಹ್ಯಾರಿ ಬ್ರುಕ್ ಜೋಡಿ 45 ರನ್ ಸೇರಿಸಿತು. ಈ ಹಂತದಲ್ಲಿ ಬ್ರೂಕ್ 16 ರನ್ ಬಾರಿಸಿ ಔಟ್ ಆದರು.
ಸ್ಯಾಮ್ ಕರನ್ 26, ಜೋಸ್ ಬಟ್ಲರ್ 17 ರನ್ ಬಾರಿಸಿ ಔಟ್ ಆದರು. 6ನೇ ವಿಕೆಟ್ಗೆ ವಿಲ್ ಜಾಕ್ಸ್ ಹಾಗೂ ಜೋ ರೂಟ್ ಜೋಡಿ 72 ರನ್ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ಹಂತದಲ್ಲಿ 2 ಬೌಂಡರಿ ನೆರವಿನಿಂದ 30 ರನ್ ಬಾರಿಸಿದ್ದ ಜಾಕ್ಸ್ ಔಟ್ ಆದರು. ಭರವಸೆಯ ಆಟಗಾರ ಜೋ ರೂಟ್, 133 ಎಸೆತಗಳಲ್ಲಿ 9 ಬೌಂಡರಿ ನೆರವಿನಿಂದ ಅಜೇಯ 99 ರನ್ ಬಾರಿಸಿ ಜಯದಲ್ಲಿ ಮಿಂಚಿದರು. ಅಂತಿಮವಾಗಿ ಇಂಗ್ಲೆಂಡ್ 44.1 ಓವರ್ಗಳಲ್ಲಿ 6 ವಿಕೆಟ್ಗೆ 235 ರನ್ ಸೇರಿಸಿ ಜಯ ಸಾಧಿಸಿತು.
ಇದನ್ನೂ ಓದಿ: ನಂ.5ರಲ್ಲಿ ಪಾಸ್.. ನಂ.6ನಲ್ಲಿ ಫೇಲ್ – KLಗೆ ಯಾಕಿಷ್ಟು ಪರೀಕ್ಷೆ?
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ರೋಹಿತ್ ಶರ್ಮಾ ಮತ್ತು ನಾಯಕ ಶುಭಮನ್ ಗಿಲ್ ಮೊದಲ ವಿಕೆಟ್ಗೆ 44 ರನ್ಗಳ ಜೊತೆಯಾಟ ನೀಡಿದರು. ಶುಭ್ಮನ್ ಗಿಲ್ 31 ರನ್ಗಳಿಗೆ ಔಟಾದರೆ, ರೋಹಿತ್ ಶರ್ಮಾ ಕೂಡ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಲಿಲ್ಲ. ರೋಹಿತ್ ಶರ್ಮಾ 47 ಎಸೆತಗಳಲ್ಲಿ 26 ರನ್ಗಳಿಗೆ ಔಟಾದರು. ಎರಡನೇ ವಿಕೆಟ್ಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ 60 ರನ್ಗಳ ಜೊತೆಯಾಟವಾಡಿದರು. ಕೆಎಲ್ ರಾಹುಲ್ ಬದಲಿಗೆ ಬಂದ ಇಶಾನ್ ಕಿಶನ್ ಅವರ ಇನ್ನಿಂಗ್ಸ್ ಕೇವಲ 1 ರನ್ಗೆ ಕೊನೆಗೊಂಡಿತು. ಅದಾದ ನಂತರ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ತಂಡದ ಇನ್ನಿಂಗ್ಸ್ ಕಟ್ಟಿದರು. ಇವರಿಬ್ಬರು ನಾಲ್ಕನೇ ವಿಕೆಟ್ಗೆ 67 ರನ್ಗಳ ಜೊತೆಯಾಟವನ್ನು ಹಂಚಿಕೊಂಡರು. ಆದರೆ ವಿರಾಟ್ ಕೊಹ್ಲಿ ಔಟಾಗುವುದರ ಜೊತೆಗೆ ತಂಡದ ಬ್ಯಾಟಿಂಗ್ ಕುಸಿಯಲು ಪ್ರಾರಂಭಿಸಿತು.
ಅದರಲ್ಲೂ ಕಳೆದ ಪಂದ್ಯದಲ್ಲಿ ಮಿಂಚಿದ್ದ ಆಲ್ರೌಂಡರ್ ಈ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದರು. ಕಳೆದ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ ವಾಷಿಂಗ್ಟನ್ ಸುಂದರ್ ಈ ಪಂದ್ಯದಲ್ಲಿ 5 ಎಸೆತಗಳಲ್ಲಿ 2 ರನ್ಗಳಿಸಿ ಔಟಾದರೆ, ಅಕ್ಷರ್ ಪಟೇಲ್ ಅವರ ಇನ್ನಿಂಗ್ಸ್ ಕೂಡ 1 ರನ್ಗೆ ಅಂತ್ಯವಾಯಿತು. ಆ ಬಳಿಕ ಬಂದ ಶಿವಂ ದುಬೆಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಗುರ್ನೂರ್ ಬ್ರಾರ್ 7 ರನ್ ಗಳಿಸಿ ಟೆಂಟ್ಗೆ ಮರಳಿದರೆ, ಪ್ರಸಿದ್ಧ್ ಕೃಷ್ಣಗೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಆದರೆ ಜಸ್ಪ್ರೀತ್ ಬುಮ್ರಾ 13 ಎಸೆತಗಳಲ್ಲಿ ಅಜೇಯ 20 ರನ್ ಗಳಿಸುವ ಮೂಲಕ ತಂಡದ ಸ್ಕೋರ್ ಹೆಚ್ಚಿಸಿದರು.

ನೋಡಿರಿ

