ನಂ.5ರಲ್ಲಿ ಪಾಸ್.. ನಂ.6ನಲ್ಲಿ ಫೇಲ್ – KLಗೆ ಯಾಕಿಷ್ಟು ಪರೀಕ್ಷೆ?
ಗಂಭೀರ್ ತಲೆಯಲ್ಲೇನಿದೆ?

ನಂ.5ರಲ್ಲಿ ಪಾಸ್.. ನಂ.6ನಲ್ಲಿ ಫೇಲ್ – KLಗೆ ಯಾಕಿಷ್ಟು ಪರೀಕ್ಷೆ?ಗಂಭೀರ್ ತಲೆಯಲ್ಲೇನಿದೆ?

ಟೀಂ ಇಂಡಿಯಾಗೆ ಈಗ ಬಿಗ್ ಟಾಸ್ಕ್ ಅಂತಾ ಇರೋದೇ 2027ರ ಏಕದಿನ ವಿಶ್ವಕಪ್ ಟ್ರೋಫಿ. 2023ರಲ್ಲಿ ಜಸ್ಟ್ ಮಿಸ್ ಆಗಿರೋ ಕಪ್​ನ ಮುಂದಿನ ವರ್ಷ ಗೆಲ್ಲಲೇಬೇಕು ಅಂತಾ ಪಣ ತೊಟ್ಟಿದ್ದಾರೆ. ಅದಕ್ಕಾಗಿ ಟೀಂ ಫಾರ್ಮೆಷನ್ ಕೂಡ ನಡೀತಿದೆ. ಆದ್ರೆ ಗೌತಮ್ ಗಂಭೀರ್ ಮಾಡ್ತಿರೋ ಕೆಲ ಪ್ರಯೋಗಗಳೂ ಇನ್ನೂ ನಿಂತಿಲ್ಲ. ಅದ್ರಲ್ಲೂ ನಮ್ಮ ಕನ್ನಡಿಗ ಕೆಎಲ್ ರಾಹುಲ್ ಗಂಭೀರ್​ಗೆ ಒಂಥರಾ ಎಕ್ಸ್​ಪೆರಿಮೆಂಟ್ ಪ್ಲೇಯರ್ ಆಗ್ಬಿಟ್ಟಿದ್ದಾರೆ. ಅವ್ರ ಕೆರಿಯರ್​ಗೇ ಎಫೆಕ್ಟ್ ಆಗ್ತಿದೆ.

ಇದನ್ನೂ ಓದಿ : IND Vs PAK ಪಂದ್ಯಗಳು ಡಬಲ್ – ಇಂಡೋ-ಪಾಕ್ ನಡುವೆ ಟೆಸ್ಟ್ ಮ್ಯಾಚ್?

ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ್ಮೇಲೆ ಸಾಕಷ್ಟು ಬದಲಾವಣೆಗಳನ್ನ ಮಾಡಿದ್ದಾರೆ. ಌಂಡ್ ಎಲ್ಲವೂ ಕೂಡ ಅವ್ರು ಹೇಳಿದಂತೆಯೇ ನಡೀತಾ ಇರೋದು. ಆದ್ರೆ ಅವ್ರ ನಿರ್ಧಾರಗಳಿಂದ ಕೆಲ ಆಟಗಾರರ ಭವಿಷ್ಯಕ್ಕೇ ಮಾರಕವಾಗ್ತಿದೆ. ಈ ವಿಚಾರದಲ್ಲಿ ನಮ್ಮ ಕನ್ನಡಿಗ ಕೆಎಲ್ ರಾಹುಲ್ ಕೂಡ ಇದ್ದಾರೆ.

ಕೆಎಲ್ ರಾಹುಲ್ ಗೂ ಮೊದಲು ಆಲ್ ರೌಂಡರ್ ಗೆ ಯಾಕೆ ಬ್ಯಾಟಿಂಗ್?

ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಕೆಎಲ್ ರಾಹುಲ್ ಪ್ರಸ್ತುತ ಟೀಂ ಇಂಡಿಯಾದಲ್ಲಿ ಟೆಸ್ಟ್ ಮ್ಯಾಚ್ ಹಾಗೇ ಏಕದಿನ ಮಾದರಿಯಲ್ಲಿ ಮಾತ್ರ ಆಡ್ತಿದ್ದಾರೆ. ಟಿ-20ಐ ತಂಡದಲ್ಲಿ ಅವ್ರಿಗೆ ಅವಕಾಶಗಳು ಸಿಗ್ತಿಲ್ಲ. ಟೆಸ್ಟ್ ಫಾರ್ಮೆಟ್​ನಲ್ಲಿ ಓಪನರ್ ಆಗಿ ಇನ್ನಿಂಗ್ಸ್ ಆರಂಭ ಮಾಡ್ತಿದ್ರೆ ಏಕದಿನದಲ್ಲಿ ಮಿಡಲ್ ಆರ್ಡರ್​ನಲ್ಲಿ ಅವ್ರ ಸ್ಲಾಟ್ ಬಗ್ಗೆ ಯಾವುದೇ ಕ್ಲಾರಿಟಿ ಇಲ್ಲ. ಌಕ್ಚುಲಿ ಅವ್ರನ್ನ ಪಿಕ್ ಮಾಡಿರೋದು ನಂಬರ್ 5ನಲ್ಲಿ ಬ್ಯಾಟಿಂಗ್ ಗೋಸ್ಕರ. ಆದ್ರೆ ಗೌತಮ್ ಗಂಭೀರ್ ಮತ್ತು ಅವ್ರ ಟೀಂ ಆಲ್ ರೌಂಡರ್ ಆದ್ಮೇಲೆ ಕೆಎಲ್ ರಾಹುಲ್ ಗೆ ಬ್ಯಾಟಿಂಗ್ ಮಾಡೋಕೆ ಅವಕಾಶ ಕೊಡ್ತಿದ್ದಾರೆ. ಮೊನ್ನೆ ಮ್ಯಾಚಲ್ಲಿ ಅಂದ್ರೆ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಂಬರ್ 6ನಲ್ಲಿ ಬ್ಯಾಟಿಂಗ್ ಗೆ ಬಂದ್ರು. ಆದ್ರೆ 1 ರನ್​ಗೆ ವಿಕೆಟ್ ಒಪ್ಪಿಸಿದ್ರು. ಯಾಕಂದ್ರೆ ನಂಬರ್ 5ನಲ್ಲಿ ರಾಹುಲ್ ಗೆ ಸಿಕ್ಕ ಸಕ್ಸಸ್ ನಂಬರ್ 6ನಲ್ಲಿ ಸಿಗ್ತಿಲ್ಲ. ಹೀಗಿದ್ರೂ 2027ರ ಏಕದಿನ ವಿಶ್ವಕಪ್​ವರೆಗೂ ರಾಹುಲ್​ಗೆ ಇದೇ ಸ್ಥಿತಿ. ಯಾಕಂದ್ರೆ ರಾಹುಲ್ 6 ನೇ ಸ್ಥಾನದಲ್ಲಿರುತ್ತಾರೆ ಮತ್ತು ಲೆಫ್ಟ್ ಹ್ಯಾಂಡ್ ಆಲ್ ರೌಂಡರ್ 5 ನೇ ಸ್ಥಾನದಲ್ಲಿರುತ್ತಾರೆ. ಗೌತಮ್ ಗಂಭೀರ್ ಜವಾಬ್ದಾರಿ ವಹಿಸಿಕೊಂಡಾಗಿನಿಂದ, ರಾಹುಲ್ ಒಂದು ಸ್ಥಾನ ಕೆಳಗೆ ಇಳಿದಿದ್ದಾರೆ. ಇದು ಅವ್ರ ಪ್ರದರ್ಶನದ ಮೇಲೆ ಎಫೆಕ್ಟ್ ಆಗುವಂತೆ ಮಾಡ್ತಿದೆ.

ರಾಹುಲ್ ಹಾವು ಏಣಿ ಆಟ!

ಕೆಎಲ್ ರಾಹುಲ್ 2025 ರಿಂದ 12 ಬಾರಿ 6 ನೇ ಸ್ಥಾನದಲ್ಲಿ ಬ್ಯಾಟಿಂಗ್

36.37 ಸರಾಸರಿ ಮತ್ತು 99.31 ಸ್ಟ್ರೈಕ್ ರೇಟ್‌ನಲ್ಲಿ 291 ರನ್ ಗಳಿಕೆ

ನಂಬರ್ 5ನಲ್ಲಿ 2025 ರಿಂದ ರಾಹುಲ್ ಐದು ಬಾರಿ ಬ್ಯಾಟಿಂಗ್

129ರ ಸರಾಸರಿ ಮತ್ತು 136.5 ಸ್ಟ್ರೈಕ್ ರೇಟ್‌ನಲ್ಲಿ 258 ರನ್ ಗಳಿಕೆ

2025 ರಿಂದ ಅಕ್ಸರ್ ಪಟೇಲ್ 39.14 ಸರಾಸರಿಯಲ್ಲಿ 274 ರನ್‌

87.82 ಸ್ಟ್ರೈಕ್ ರೇಟ್‌ನಲ್ಲಿ 5 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ

2025ರಿಂದ ಈಚೆಗೆ ವಾಷಿಂಗ್ಟನ್ ಸುಂದರ್ 2 ಬಾರಿ 5ನೇ ಸ್ಥಾನ

ಇಲ್ಲಿ ಏನಾಗ್ತಿದೆ ಅಂದ್ರೆ ಮಿಡಲ್ ಆರ್ಡರ್​ನಲ್ಲಿ ಬರೋ ಬ್ಯಾಟರ್​ಗಳಿಗೆ ತಮ್ಮ ಸ್ಲಾಟ್ ಪಂದ್ಯದಿಂದ ಪಂದ್ಯಕ್ಕೆ ಚೇಂಜ್ ಆಗುತ್ತೆ ಅನ್ನೋ ಮೈಂಡ್​ಸೆಟ್​ನಲ್ಲಿ ಇರ್ಬೇಕಾಗಿದೆ. ಇದ್ರಿಂದಾಗಿ ಅವ್ರ ರೋಲ್ ಬಗ್ಗೆ ಕ್ಲಾರಿಟಿನೂ ಇರಲ್ಲ. ಅದೆಲ್ಲಕ್ಕಿಂತ ಮುಖ್ಯವಾಗಿ ಕೆಎಲ್ ರಾಹುಲ್ ಪ್ಯೂರ್ ಬ್ಯಾಟರ್. ಟಾಪ್ ಆರ್ಡರ್ ಕೊಲ್ಯಾಪ್ಸ್ ಆದಾಗ ಅವ್ರ ಮೇಲೆ ಜವಾಬ್ದಾರಿ ಇರುತ್ತೆ. ಆದ್ರೆ ಅವ್ರಿಗೂ ಮೊದ್ಲೇ ಆಲ್ ರೌಂಡರ್ ಬಂದಾಗ ಕೊನೆಯಲ್ಲಿ ರಾಹುಲ್ ಮೇಲೆ ಪ್ರೆಶರ್ ಕ್ರಿಯೇಟ್ ಆಗುತ್ತೆ. ಌಂಡ್ ರಾಹುಲ್ ಫಿನಿಶರ್ ಕೂಡ ಅಲ್ಲ. ಹೀಗಾಗಿ ಗೌತಮ್ ಗಂಭೀರ್ ಇನ್ನಾದ್ರೂ ಚೆಲ್ಲಾಟ ಆಡೋದು ಬಿಟ್ಟು ರಾಹುಲ್​ಗೆ 5ನೇ ಸ್ಲಾಟ್​ನಲ್ಲಿ ಅವಕಾಶ ಕೊಡ್ಬೇಕು. ಬಹುಶಃ ಏನ್ ಮಾಡಿದ್ರೂ ರಾಹುಲ್ ಸುಮ್ಮನಿರ್ತಾರೆ ರಿವರ್ಸ್ ಮಾತಾಡಲ್ಲ ಅನ್ನೋ ಕಾರಣಕ್ಕೋ ಏನೋ ಗಂಭೀರ್ ಪದೇಪದೆ ಪ್ರಯೋಗ ಮಾಡ್ತಾನೇ ಇದ್ದಾರೆ. ಆದ್ರೆ ಇದು ರಾಹುಲ್ ಪ್ರದರ್ಶನದ ಮೇಲೆ ಎಫೆಕ್ಟ್ ಆಗುವಂತೆ ಮಾಡ್ತಿದೆ ಅಷ್ಟೇ.

Shantha Kumari

Leave a Reply

Your email address will not be published. Required fields are marked *