ENGನಲ್ಲಿ ಕೊಹ್ಲಿ ಬಾಡಿಗಾರ್ಡ್ ದರ್ಪ- ಸ್ಮೃತಿಗೆ ಟೀಂ IND ಕ್ಯಾಪ್ಟನ್ ಪಟ್ಟ

ENGನಲ್ಲಿ ಕೊಹ್ಲಿ ಬಾಡಿಗಾರ್ಡ್ ದರ್ಪ- ಸ್ಮೃತಿಗೆ ಟೀಂ IND ಕ್ಯಾಪ್ಟನ್ ಪಟ್ಟ

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತಾರೆ ಸ್ಮೃತಿ ಮಂಧನಾ,  ಹರ್ಮನ್‌ಪ್ರೀತ್ ಕೌರ್ ಅವರಿಂದ ತಂಡದ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ಧ ಎಂದಿದ್ದಾರೆ. ಈ ಕುರಿತಾದ ಕೇಳಿದ ಪ್ರಶ್ನಗೆ ಉತ್ತರಿಸಿದ ಸ್ಮೃತಿ ಹೌದು ನಾನು ರೆಡಿ ಇದ್ದೇನೆ ಎಂದಿದ್ದಾರೆ.  ಹರ್ಮನ್‌ಪ್ರೀತ್ ಕೌರ್ ಭಾರತೀಯ ತಂಡದ ನಾಯಕಿಯಾಗಿ ಹತ್ತು ವರ್ಷಗಳು ಕಳೆದಿವೆ. ಇದೀಗ ಅವರ ಸುತ್ತ ನಿವೃತ್ತಿಯ ಮಾತುಗಳು ಕೇಳಿಬರುತ್ತಿದ್ದು, ಆ ಸ್ಥಾನಕ್ಕೆ  ಸ್ಮೃತಿ ಮಂಧನಾ ಹೆಸರು ಕೇಳಿ ಬರ್ತಿದೆ.

ವೈಭವ್ ವಿಷ್ಯದಲ್ಲಿ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ತಪ್ಪು ದಾರಿ ತುಳಿದಿದೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.  ವೈಭವ್ ಸೂರ್ಯವಂಶಿ ಅವರಂತಹ ಕಿರಿಯ ಆಟಗಾರನನ್ನು ಪರೀಕ್ಷಿಸಲು ಇಂಗ್ಲೆಂಡ್‌ನ ಬಲಿಷ್ಠ ವೇಗಿಗಳಿಗಿಂತ, ಐರ್ಲೆಂಡ್ ಸರಣಿ ಅತ್ಯಂತ ಸೂಕ್ತವಾಗಿತ್ತು ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್  ಸಂಪೂರ್ಣ ತಪ್ಪು ದಾರಿ ತುಳಿದಿದ್ದಾರೆ ಎಂದಿದ್ದಾರೆ.

ವೈಭವ್ ಸೂರ್ಯವಂಶಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಪಡೆದ ಸಂಭಾವನೆ ಬಗ್ಗೆ ರಿವೀಲ್ ಆಗಿದೆ.  ವೈಭವ್ ಸೂರ್ಯವಂಶಿ ಇಂಗ್ಲೆಂಡ್ ವಿರುದ್ಧ 6 ದಿನಗಳಲ್ಲಿ 3 ಪಂದ್ಯಗಳನ್ನು ಆಡಿದ್ದು, ಬಿಸಿಸಿಐ ವೈಭವ್‌ಗೆ ಈ 3 ಪಂದ್ಯಗಳಿಗೆ ಪಂದ್ಯ ಶುಲ್ಕವನ್ನು ಪಾವತಿಸಿದೆ. ಟಿ20 ಅಂತರರಾಷ್ಟ್ರೀಯ ಪಂದ್ಯಕ್ಕೆ ಬಿಸಿಸಿಐ ಪ್ರತಿ ಆಟಗಾರನಿಗೆ 3 ಲಕ್ಷ ರೂ. ಪಾವತಿಸುತ್ತದೆ, ಆದ್ದರಿಂದ ವೈಭವ್ 6 ದಿನಗಳಲ್ಲಿ 9 ಲಕ್ಷ ರೂ. ಪಡೆದಿದ್ದಾರೆ.

ಇದನ್ನೂ ಓದಿ: IND Vs PAK ಪಂದ್ಯಗಳು ಡಬಲ್ – ಇಂಡೋ-ಪಾಕ್ ನಡುವೆ ಟೆಸ್ಟ್ ಮ್ಯಾಚ್?

ವಿರಾಟ್ ಕೊಹ್ಲಿ ಬಾಡಿಗಾರ್ಡ್‌ ಇಂಗ್ಲೆಂಡ್‌ನಲ್ಲಿ ಪತ್ರಕರ್ತರ ಮೇಲೆ ದೌರ್ಜನ್ಯ ಎಸಗಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಭಾರತ ತಂಡ ಆಗಮಿಸಿದಾಗ ಮಾನ್ಯತೆ ಪಡೆದ ಪತ್ರಿಕಾ ಸದಸ್ಯರ ಮೇಲೆ ವಿರಾಟ್ ಕೊಹ್ಲಿ ಅವರ ಖಾಸಗಿ ಭದ್ರತಾ ಪ್ರತಿನಿಧಿ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಕೊಹ್ಲಿ ಬರುವುದನ್ನ ಚಿತ್ರಿಕರಿಸುತ್ತಿದ್ದ ವೇಳೆ ಬಾಡಿಗಾರ್ಡ್‌ ಅವಾಚ್ಯ ಶಬ್ಧಗಳಿಂದ ನಿಂದಿಸಿ ದೂರ ಹೋಗುವಂತೆ ಹೇಳಿದ್ದಾರಂತೆ

ಸತತ 3 ವರ್ಷದಿಂದ ಸಿಎಸ್‌ಕೆ ತಂಡವು ಪ್ಲೇಆಫ್‌ಗೂ ತಲುಪದ ಕಾರಣ ಹೊಸ ಕೋಚ್‌ಗಾಗಿ ಹುಡುಕಾಟ ನಡೆಸುತ್ತಿದೆ. ಈ ರೇಸ್‌ನಲ್ಲಿ ಆರ್‌ಸಿಬಿ ಮಾಜಿ ಆಟಗಾರ, ಕನ್ನಡಿಗ ರಾಹುಲ್ ದ್ರಾವಿಡ್ ಹೆಸರು ಕೇಳಿ ಬರ್ತಿದೆ. ದ್ರಾವಿಡ್ ಅವರೇ ಸಿಎಸ್‌ಕೆ ಮುಖ್ಯ ಕೋಚ್ ಆಗ್ತಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಈ ನಡುವೆ ಇಂಗ್ಲೆಂಡ್ ಕೋಚ್‌ ಹುದ್ದೆಗೂ ರಾಹುಲ್ ದ್ರಾವಿಡ್ ಹೆಸರು ಕೇಳಿ ಬರ್ತಿದೆ.

ಇಂಡಿಯನ್ ಪ್ರೀಮಿಯರ್ ಲೀಗ್  2026ನೇ ಆವೃತ್ತಿಯ ಪರಿಶೀಲನೆ ನಡೆಸಲು ಮುಂಬೈ ಇಂಡಿಯನ್ಸ್   ತಂಡದ ಆಡಳಿತ ಮಂಡಳಿ ಮುಂದಿನ ವಾರ ಸಭೆ ಸೇರಲಿದೆ. ಹಾರ್ದಿಕ್ ಪಾಂಡ್ಯ ಅವರನ್ನೊಳಗೊಂಡ ಟ್ರೇಡಿಂಗ್ ಮಾತುಕತೆಗಳಿಂದ ಹಿಡಿದು ತಂಡಕ್ಕೆ ಹೊಸ ನಾಯಕನನ್ನು ನೇಮಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ವರದಿಗಳು ತಿಳಿಸಿವೆ.

2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಿಂದ ಎರಡು ತಂಡಗಳನ್ನು ಕೈ ಬಿಡಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಗಂಭೀರ ಚಿಂತನೆ ನಡೆಸಿದೆ. ವಿಶ್ವಕಪ್‌ನಲ್ಲಿ ತಂಡಗಳ ಸಂಖ್ಯೆ ಹೆಚ್ಚಾದಾಗ ಬಲಿಷ್ಠ ತಂಡಗಳು ಹಾಗೂ ತೀರಾ ಕೆಳಹಂತದ ತಂಡಗಳ ನಡುವೆ ಪಂದ್ಯಗಳು ನಡೆದು, ಒನ್‌ಸೈಡ್‌ ಮ್ಯಾಚ್‌ ಆಗುವ ಸಾಧ್ಯತೆಯಿದೆ. ಇದು ಪ್ರಸಾರಕರಿಗೆ ಮತ್ತು ಜಾಹೀರಾತುದಾರರಿಗೆ ನಷ್ಟ ಉಂಟುಮಾಡಬಹುದು ಎಂಬ ಆತಂಕ ಐಸಿಸಿಗಿದೆ. ಇದೇ ಕಾರಣದಿಂದಾಗಿ ಎರಡು ತಂಡಗಳಿಗೆ ಕೋಕ್ ನೀಡಲು ಚಿಂತಿಸಲಾಗಿದೆ.

ಟೆಸ್ಟ್ ಕ್ರಿಕೆಟ್‌ನ ಆಸಕ್ತಿ ಉಳಿಸಲು ಐಸಿಸಿ ಆರಂಭಿಸಿದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಕೇವಲ ಫೈನಲ್ ಪಂದ್ಯದ ಬದಲು, ಟಾಪ್ 4 ತಂಡಗಳ ನಡುವೆ ಸೆಮಿಫೈನಲ್ ಪಂದ್ಯಗಳನ್ನೂ ನಡೆಸುವ ಬಗ್ಗೆ  ಎಡಿನ್‌ಬರ್ಗ್ ಐಸಿಸಿ ಸಮ್ಮೇಳನದಲ್ಲಿ ಚರ್ಚೆಯಾಗಿದೆ.  ಅಂಕಪಟ್ಟಿಯಗಳಲ್ಲಿನ ಟಾಪ್ 2 ಸ್ಥಾನಿಗಳು ಫೈನಲ್ ಆಡುವ ಬದಲಾಗಿ, ಟಾಪ್ 4 ಸ್ಥಾನಿಗಳು ಸೆಮಿಫೈನಲ್ ಆಡಿ, ಬಳಿಕ ಆ ಪಂದ್ಯಗಳ ವಿಜೇತರ ನಡುವೆ ಫೈನಲ್ ಪಂದ್ಯ ನಡೆಯಲಿದೆ.

ವೆಸ್ಟ್ ಇಂಡೀಸ್  ತಂಡ ಈಗ ಬಹಳ ವರ್ಷಗಳಿಂದ ಹಣಕಾಸಿನ ತೊಂದರೆಗಳನ್ನು ಎದುರಿಸುತ್ತಿದೆ. ಈಗ ಐಸಿಸಿ   ವೆಸ್ಟ್ ಇಂಡೀಸ್‌ ಸಹಾಯಕ್ಕೆ ಮುಂದೆ ಬಂದಿದೆ. ಐಸಿಸಿ ವೆಸ್ಟ್ ಇಂಡೀಸ್ ಕ್ರಿಕೆಟ್‌ಗೆ 12.82 ಬಿಲಿಯನ್ ಡಾಲರ್ ಸಾಲ  ಅನುಮೋದಿಸಿದೆ. ಎಡಿನ್‌ಬರ್ಗ್‌ ನಲ್ಲಿ ನಡೆದ ಐಸಿಸಿಯ ವಾರ್ಷಿಕ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಟಿ20 ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ನಿಕೋಲಸ್ ಪೂರನ್ ವಿಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಶತಕದೊಂದಿಗೆ ಎಂಎಲ್​ಸಿ ಲೀಗ್​ನಲ್ಲಿ ಅತೀ ವೇಗದ ಶತಕ ಬಾರಿಸಿದ ದಾಂಡಿಗ ಎನಿಸಿಕೊಂಡಿದ್ದಾರೆ.  13 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಕೇವಲ 33 ಎಸೆತಗಳಲ್ಲಿ ಶತಕಗಳಿಸಿದ್ದಾರೆ.

 

Kishor KV