ಗಿಲ್ ಔಟ್.. ಕಿಶನ್ ಓಪನರ್ – ಅಸಲಿ ಖದರ್ ತೋರಿಸ್ತಾರಾ RO-KO?
2ನೇ ಪಂದ್ಯಕ್ಕೆ ಪ್ಲೇಯಿಂಗ್ 11 ಟ್ವಿಸ್ಟ್!

ಇಂಗ್ಲೆಂಡ್ ವಿರುದ್ಧ ಮೊದಲನೇ ಏಕದಿನ ಪಂದ್ಯ ಗೆದ್ದಿರೋ ಭಾರತ ಇವತ್ತು ಎರಡನೇ ಬ್ಯಾಟಲ್ಗೆ ಸಿದ್ಧವಾಗಿದೆ. ಇವತ್ತು ಕೂಡ ಗೆದ್ರೆ ಇನ್ನೂ ಒಂದು ಮ್ಯಾಚ್ ಬಾಕಿ ಇದ್ದಂತೆಯೇ ಭಾರತ ಸರಣಿಯನ್ನ ಗೆಲ್ಲುತ್ತೆ. ಟಿ-20ಐ ಸರಣಿ ಕ್ಲೀನ್ ಸ್ವೀಪ್ಗೆ ರಿವೇಂಜ್ ತಗೊಂಡಂಗೂ ಆಗುತ್ತೆ. ಆದ್ರೆ ಆಂಗ್ಲರು ಅಷ್ಟು ಈಸಿಯಾಗಿ ಸೋಲೋಕೂ ರೆಡಿ ಇಲ್ಲ. ಮೊದಲ ಪಂದ್ಯ ಸೋತ್ರೆ ಏನಂತೆ ಎರಡನೇ ಮ್ಯಾಚಲ್ಲಿ ಕಂ ಬ್ಯಾಕ್ ಮಾಡ್ತೀವಿ ಅಂತಾ ಕಾಯ್ತಿದ್ದಾರೆ.
ಇದನ್ನೂ ಓದಿ : ಇಂಗ್ಲೆಂಡ್ ವಿರುದ್ಧ ಮೆಸ್ಸಿ ಪಡೆಗೆ ರೋಚಕ ಗೆಲುವು – 2026 ವಿಶ್ವಕಪ್ ಫೈನಲ್ ತಲುಪಿದ ಅರ್ಜೆಂಟೀನಾ
ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ಇಂಡಿಯನ್ ಟೈಮಿಂಗ್ಸ್ ಪ್ರಕಾರ ಇವತ್ತು 5.30ಕ್ಕೆ ಸ್ಟಾರ್ಟ್ ಆಗುತ್ತೆ. ಕಾರ್ಡಿಫ್ನ ಸೋಫಿಯಾ ಗಾರ್ಡನ್ಸ್ನಲ್ಲಿ ನಡೆಯಲಿರೋ ಈ ಪಂದ್ಯದಲ್ಲಿ ಭಾರತ ಗೆದ್ರೆ ಭಾರತ ಸರಣಿ ವಿನ್ನರ್.. ಹಾಗೇನಾದ್ರೂ ಇಂಗ್ಲೆಂಡ್ ಗೆದ್ರೆ ಸರಣಿ ಸಮಬಲ ಆಗಿ ಸಂಡೆ ನಡೆಯಲಿರೋ ಕೊನೇ ಮ್ಯಾಚಲ್ಲಿ ಗೆದ್ದವ್ರು ಸರಣಿಯನ್ನೂ ಗೆಲ್ತಾರೆ. ಹೀಗಾಗಿ ಇವತ್ತಿನ ಪಂದ್ಯದಲ್ಲಿ ಎರಡೂ ತಂಡಗಳು ಪ್ರೆಶರ್ನಲ್ಲೇ ಅಖಾಡಕ್ಕೆ ಇಳಿತಾರೆ. ಲಾಸ್ಟ್ ಮ್ಯಾಚ್ ಪ್ರೆಶರ್ ತಗ್ಗಿಸಬೇಕು ಅಂದ್ರೆ ಭಾರತ ಗೆಲ್ಲಲೇಬೇಕು. ಬಟ್ ಪಂದ್ಯಕ್ಕೂ ಮುನ್ನ ಇಂಜುರಿ ಭೂತ ಕಾಡ್ತಿದೆ.
ಮೊದಲ ಏಕದಿನ ಪಂದ್ಯದಲ್ಲಿ ಗಿಲ್ ಮತ್ತು ಗುರ್ನೂರ್ ಗೆ ಇಂಜುರಿ!
ಏಕದಿನ ಸರಣಿಯ ಮೊದಲ ಮ್ಯಾಚಲ್ಲಿ ಭಾರತದ ಕ್ಯಾಪ್ಟನ್ ಶುಭ್ಮನ್ ಗಿಲ್ ಸ್ನಾಯು ಸೆಳೆತಕ್ಕೆ ಒಳಗಾಗಿ 80 ರನ್ ಗಳಿಸಿದ್ದಾಗಲೇ ರಿಟೈರ್ಡ್ ಹರ್ಟ್ ಆದ್ರು. ಹಾಗೇ ವೇಗದ ಬೌಲರ್ ಗುರ್ನೂರ್ ಬ್ರಾರ್ ಕೂಡ ಪಂದ್ಯದ ಮಧ್ಯದಲ್ಲಿ ಗಾಯಗೊಂಡಿದ್ದರು. ಬೌಲಿಂಗ್ ರನ್-ಅಪ್ ತೆಗೆದುಕೊಳ್ಳುತ್ತಿದ್ದಾಗ ಇದ್ದಕ್ಕಿದ್ದಂತೆ ನಿಲ್ಲಿಸಿ ಮೈದಾನದಿಂದ ಹೊರ ನಡೆದಿದ್ರು. ಹೀಗಾಗಿ ಈ ಇಬ್ರೂ ಕೂಡ ಇಂದಿನ ಮ್ಯಾಚಲ್ಲಿ ಆಡ್ತಾರಾ ಇಲ್ವಾ ಅನ್ನೋ ಬಗ್ಗೆ ಡೌಟ್ಸ್ ಇದೆ.ಯಾಕಂದ್ರೆ ಇಬ್ರಿಬ್ಬರ ಫಿಟ್ನೆಸ್ ಬಗ್ಗೆ ಬಿಸಿಸಿಐನಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಹಾಗೇ ಎರಡೂ ಪಂದ್ಯಗಳ ನಡುವೆ ಕೇವಲ ಒಂದು ದಿನ ಮಾತ್ರ ಗ್ಯಾಪ್ ಇರೋದ್ರಿಂದ ರಿಕವರ್ ಆಗೋಕೂ ಟೈಂ ಸಿಕ್ಕಿಲ್ಲ. ಅದೂ ಅಲ್ದೇ ಮೊದಲ ಮ್ಯಾಚಲ್ಲಿ ಭಾರತದ ಗೆಲುವಿನಲ್ಲಿ ಇವ್ರಿಬ್ಬರ ಕೊಡುಗೆ ತುಂಬಾನೇ ದೊಡ್ಡದು. ಗುರ್ನೂರ್ ಬ್ರಾರ್ ಬೌಲಿಂಗ್ನಲ್ಲಿ ಒಂದೇ ಓವರ್ನಲ್ಲಿ 2 ವಿಕೆಟ್ಸ್ ತೆಗೆದ್ರು ಬ್ರೇಕ್ ಥ್ರ್ಯೂ ತಂದುಕೊಟ್ಟಿದ್ರು. ಇನ್ನು ಗಿಲ್ ಒಂದ್ಕಡೆ ವಿಕೆಟ್ಸ್ ಬೀಳ್ತಿದ್ರೂ ಕ್ರೀಸ್ ಕಚ್ಚಿ ನಿಂತು 80 ರನ್ಗಳ ಇನ್ನಿಂಗ್ಸ್ ಆಡಿದ್ರು. ಹೀಗಾಗಿ ಇಂದಿನ ಪಂದ್ಯದಲ್ಲಿ ಇವ್ರಿಬ್ರು ಆಡೋದು ತುಂಬಾನೇ ಮುಖ್ಯ. ಒಂದು ವೇಳೆ ಗಿಲ್ ಆಡಿಲ್ಲ ಅಂದ್ರೆ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ ಆಗಿ ತಂಡವನ್ನ ಲೀಡ್ ಮಾಡ್ತಾರೆ.
ಪ್ಲೇಯಿಂಗ್ 11ಗೂ ಇಂಜುರಿ ಕಾಟ!
ಶುಭಮನ್ ಗಿಲ್ / ಇಶಾನ್ ಕಿಶನ್
ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ
ಶ್ರೇಯಸ್ ಅಯ್ಯರ್
ಕೆಎಲ್ ರಾಹುಲ್
ವಾಷಿಂಗ್ಟನ್ ಸುಂದರ್
ಅಕ್ಷರ್ ಪಟೇಲ್
ಶಿವಂ ದುಬೆ
ಜಸ್ಪ್ರೀತ್ ಬುಮ್ರಾ
ಪ್ರಸಿದ್ಧ್ ಕೃಷ್ಣ
ಗುರ್ನೂರ್ ಬ್ರಾರ್ / ಅರ್ಷದೀಪ್ ಸಿಂಗ್
ಲಾಸ್ಟ್ ಮೂಮೆಂಟ್ವರೆಗೂ ಗಿಲ್ ಮತ್ತು ಗುರ್ನೂರು ಫಿಟ್ನೆಸ್ ಹಾಗೇ ರಿಕವರ್ ನೋಡ್ಕೊಂಡು ಪ್ಲೇಯಿಂಗ್ 11 ಫೈನಲ್ ಮಾಡಲಾಗುತ್ತೆ. ಉಳಿದಂತೆ ಯಾವ ಆಟಗಾರರ ಬದಲಾವಣೆಯೂ ಇರಲ್ಲ. ಕಳೆದ ಪಂದ್ಯದಲ್ಲಿ ಗೆದ್ದಿರೋದ್ರಿಂದ ವಿನ್ನಿಂಗ್ ಕಾಂಬಿನೇಷನ್ನಲ್ಲಿ ಬದಲಾವಣೆ ಮಾಡಲ್ಲ. ಹಾಗೇ ಈ ಪಂದ್ಯದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೇಲೆಯೂ ಎಲ್ಲರ ಕಣ್ಣಿದೆ. 2027 ರ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಇವ್ರಿಬ್ರನ್ನ ಅಬ್ಸರ್ವ್ ಮಾಡ್ತಾ ಇರ್ತಾರೆ. ಅದ್ರಲ್ಲೂ ರೋಹಿತ್ ಮೇಲೆ ಎಲ್ಲರ ಕಣ್ಣಿದೆ. ಮೊದಲ ಮ್ಯಾಚಲ್ಲಿ ರೋಹಿತ್ 11 ರನ್ ಗಳಿಸಿ ಔಟ್ ಆಗಿದ್ರು. ವಿರಾಟ್ ಕೊಹ್ಲಿ 5 ರನ್ಗಳಿಗೆ ಪೆವಿಲಿಯನ್ ಸೇರಿದ್ರು. ಟೀಂ ಇಂಡಿಯಾದ ಈ ಇಬ್ಬರು ಲೆಜೆಂಡರ್ಸ್ ಇಂದಿನ ಪಂದ್ಯದಲ್ಲಿ ಬಿಗ್ ಇನ್ನಿಂಗ್ಸ್ ಮೂಲಕ ಉತ್ತರ ಕೊಡ್ಬೇಕಿದೆ.

ನೋಡಿರಿ

