IND Vs BAN ಸರಣಿಗೆ ಗ್ರೀನ್ ಸಿಗ್ನಲ್ – ಅಫ್ಘಾನಿಸ್ತಾನಕ್ಕೆ ಕೈ ಕೊಡುತ್ತಾ BCCI?
ಬಾಂಗ್ಲಾಗೆ ಹೋಗ್ತಾರಾ IND ಪ್ಲೇಯರ್ಸ್?

IND Vs BAN ಸರಣಿಗೆ ಗ್ರೀನ್ ಸಿಗ್ನಲ್ – ಅಫ್ಘಾನಿಸ್ತಾನಕ್ಕೆ ಕೈ ಕೊಡುತ್ತಾ BCCI?ಬಾಂಗ್ಲಾಗೆ ಹೋಗ್ತಾರಾ IND ಪ್ಲೇಯರ್ಸ್?

ವೈಟ್ ಬಾಲ್ ಸಿರೀಸ್​ನಲ್ಲಿ ಟೀಂ ಇಂಡಿಯಾ ಬ್ಯಾಕ್ ಟು ಬ್ಯಾಕ್ ಶೆಡ್ಯೂಲ್ ಆಗಿದೆ. ಌಂಡ್ ವರ್ಷಪೂರ್ತಿ ಸರಣಿಗಳಲ್ಲಿ ಬ್ಯುಸಿ ಇರ್ತಾರೆ. ಈಗ ಬಾಂಗ್ಲಾದೇಶ ವಿರುದ್ಧದ ಟಿ-20ಐ ಸರಣಿಗೂ ಗ್ರೀನ್ ಸಿಗ್ನಲ್ ಸಿಕ್ತಿದೆ. ಌಂಡ್ ನಾಲ್ಕು ವರ್ಷಗಳ ಬಳಿಕ ಭಾರತದ ಆಟಗಾರರು ಬಾಂಗ್ಲಾಗೆ ಹಾರಲು ಸಜ್ಜಾಗಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಸರಣಿಗಾಗಿ ಮತ್ತೊಂದು ಸರಣಿಯನ್ನೂ ಪೋಸ್ಟ್​ಪೋನ್ ಮಾಡಲಾಗ್ತಿದೆ.

ಇದನ್ನೂ ಓದಿ : ಭಾರತಕ್ಕೆ ಶರಣಾದ ಬ್ರಿಟಿಷರು – RO-KO & KL ಬ್ಯಾಟ್ ಸೈಲೆಂಟ್

ಟೀಂ ಇಂಡಿಯಾ ಆಟಗಾರರು ಬಾಂಗ್ಲಾದೇಶದ ಪ್ರವಾಸ ಕೈಗೊಳ್ಳೋಕೆ ಅನುಮತಿ ಸಿಗ್ತಾ ಇದೆ. ಬಟ್ ಈಗ ಈ ಸರಣಿಗಾಗಿ ಪಂದ್ಯಗಳ ರೀ ಶೆಡ್ಯೂಲ್ ಪ್ಲ್ಯಾನ್ ನಡೆದಿದೆ. ಅಂದ್ರೆ ಅಫ್ಘಾನಿಸ್ತಾನ ವಿರುದ್ದದ ಮೂರು ಟಿ20ಐಗಳನ್ನು ಮುಂದೂಡಿಕೆ ಮಾಡ್ಬೋದು. ಪ್ರಸ್ತುತ ಸೆಪ್ಟೆಂಬರ್ 13 ರಿಂದ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸರಣಿ ಸ್ಟಾರ್ಟ್ ಆಗ್ಬೇಕಿದೆ. ಆದ್ರೀಗ ಶ್ರೀಲಂಕಾ ವಿರುದ್ಧ ಟೆಸ್ಟ್‌ ಮ್ಯಾಚ್ ಬಳಿಕ ಬಾಂಗ್ಲಾದೇಶದ ಟೂರ್​ಗಾಗಿ ಅಫ್ಘಾನಿಸ್ತಾನ ವಿರುದ್ಧದ ಸರಣಿಯನ್ನ ಸೆಪ್ಟೆಂಬರ್ 17 ಕ್ಕೆ ಮುಂದೂಡಲು ಚರ್ಚೆಗಳು ನಡೆಯುತ್ತಿವೆ. ಇತ್ತ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಸೆಪ್ಟೆಂಬರ್‌ನಲ್ಲಿ ಆರು ಪಂದ್ಯಗಳ ವೈಟ್ ಬಾಲ್ ಸರಣಿಯನ್ನು ನಡೆಸಲು ಫುಲ್ ಎಕ್ಸೈಟ್ ಆಗಿದೆ. ಅದ್ರಲ್ಲೂ ಈ ತಿಂಗಳ ಆರಂಭದಲ್ಲಿ, BCB ತನ್ನ ಟಿವಿ ಮತ್ತು ಡಿಜಿಟಲ್ ಮಾಧ್ಯಮ ಹಕ್ಕುಗಳನ್ನು ಮಾರಾಟಕ್ಕೂ ಇಟ್ಟಿತ್ತು.

ಬಾಂಗ್ಲಾದೇಶಿಯರಿಗೆ ಪ್ರವಾಸಿ ವೀಸಾ ಆರಂಭದ ಬೆನ್ನಲ್ಲೇ ಬೆಳವಣಿಗೆ!

ಅಷ್ಟಕ್ಕೂ ಬಾಂಗ್ಲಾ ಕ್ರಿಕೆಟ್ ಮಂಡಳಿ ಇಷ್ಟೊಂದು ಉತ್ಸುಕವಾಗಿರೋದಕ್ಕೆ ಕಾರಣವೂ ಇದೆ. 2024 ರಲ್ಲಿ ಬಾಂಗ್ಲಾದೇಶದಲ್ಲಿ ರಾಜಕೀಯ ಬಿಕ್ಕಟ್ಟಿನ ಬಳಿಕ ಭಾರತವು ಬಾಂಗ್ಲಾದೇಶಿ ನಾಗರಿಕರಿಗೆ ಪ್ರವಾಸಿ ವೀಸಾಗಳನ್ನು ನೀಡುವುದನ್ನ ಸಸ್ಪೆಂಡ್ ಮಾಡಿತ್ತು. ಆದ್ರೆ ಈಗ ಮತ್ತೆ ಪ್ರವಾಶಿ ವೀಸಾಗಳನ್ನ ನೀಡುವುದನ್ನು ಪುನರಾರಂಭಿಸಿದ ಒಂದು ವಾರದಲ್ಲೇ ಬಿಸಿಬಿ ಕಂಪ್ಲೀಟ್ ಅಲರ್ಟ್ ಆಗಿದೆ.  ಬಿಸಿಬಿಯ ಉನ್ನತ ಅಧಿಕಾರಿಗಳು ಈ ಬಗ್ಗೆ ಮಾತನಾಡಿದ್ದಾರೆ. ನಾವು ಪ್ರವಾಸದ ಬಗ್ಗೆ ಆಶಾವಾದಿಗಳಾಗಿದ್ದೇವೆ. ಬಿಸಿಸಿಐನಿಂದ ನಮಗೆ ಇನ್ನೂ ಹಸಿರು ನಿಶಾನೆ ಸಿಕ್ಕಿಲ್ಲ, ಆದರೆ ಅವರು ನಾವು ಬರಲ್ಲ ಅಂತಾ ಎಲ್ಲೂ ಹೇಳಿಲ್ಲ. ಹೀಗಾಗಿ ಶೀಘ್ರದಲ್ಲೇ ಬಿಸಿಸಿಐನಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗುವ ನಿರೀಕ್ಷೆಯಿದೆ ಎಂದಿದ್ದಾರೆ. ಬಾಂಗ್ಲಾದೇಶದ ನೂತನ ಅಧ್ಯಕ್ಷ ತಮೀಮ್ ಇಕ್ಬಾಲ್ ಅವರ ಆಪ್ತ ಮೂಲಗಳಿಂಧ ಮಾಹಿತಿ ಹೊರಬಿದ್ದಿದೆ. ಌಕ್ಚುಲಿ ಭಾರತ-ಬಾಂಗ್ಲಾ ನಡುವಿನ ಸರಣಿ ಕಳೆದ ವರ್ಷವೇ ನಡೀಬೇಕಿತ್ತು. ಆದರೆ ಎರಡೂ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಮುಂದೂಡಲಾಯಿತು. ಇದೀಗ ಪರಿಸ್ಥಿತಿ ತಿಳಿಯಾಗ್ತಿದ್ದು ಬಾಂಗ್ಲಾದೇಶ ಮತ್ತೆ ಭಾರತದ ಜೊತೆ ಉತ್ತಮ ಬಾಂಧವ್ಯ ಹೊಂದಲು ನೋಡ್ತಾ ಇದೆ. ಹೀಗಾಗಿ ವೈಟ್ ಬಾಲ್ ಸಿರೀಸ್ ಪರ್ಮಿಷನ್​ಗಾಗಿ ಕಾಯ್ತಾ ಇದೆ.

ಇನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅನೌನ್ಸ್ ಮಾಡಿರೋ ಪ್ರಕಾರ ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ಭಾರತ ತಂಡವು ಆಗಸ್ಟ್ 28 ರಂದು ಬಾಂಗ್ಲಾದೇಶಕ್ಕೆ ತೆರಳಲಿದ್ದು ಒಟ್ಟು 3 ಏಕದಿನ  ಹಾಗೂ 3 ಟಿ20 ಪಂದ್ಯಗಳನ್ನು ಆಡ್ಬೇಕಿದೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಸರಣಿಗೆ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ವಿಶ್ರಾಂತಿ ನೀಡಿ, ಮಾಜಿ ಕ್ರಿಕೆಟಿಗ ವಿ.ವಿ.ಎಸ್. ಲಕ್ಷ್ಮಣ್ ಅವರಿಗೆ ಮುಖ್ಯ ಕೋಚ್ ಜವಾಬ್ದಾರಿಯನ್ನು ಬಿಸಿಸಿಐ ನೀಡುವ ಸಾಧ್ಯತೆಯಿದೆ. ಇನ್ನು ಭಾರತ ಹಾಗೇ ಬಾಂಗ್ಲಾ ತಂಡಗಳು ಕೊನೇ ಬಾರಿಗೆ 2024ರಲ್ಲಿ ದ್ವಿಪಕ್ಷೀಯ ಸರಣಿಗಳನ್ನ ಆಡಿದ್ದು. 2024ರ ಕೊನೆಯಲ್ಲಿ ನಡೆದ ದ್ವಿಪಕ್ಷೀಯ ಸರಣಿಯಲ್ಲಿ ಭಾರತ ಪುರುಷರ ತಂಡವು ಬಾಂಗ್ಲಾದೇಶವನ್ನು ಟೆಸ್ಟ್ ಮತ್ತು ಟಿ20 ಸರಣಿಗಳಲ್ಲಿ ಸಂಪೂರ್ಣವಾಗಿ ಸೋಲಿಸಿ ಕ್ಲೀನ್ ಸ್ವೀಪ್ ಸಾಧಿಸಿತ್ತು. ಇನ್ನು ಒಟ್ಟಾರೆ ಭಾರತ-ಬಾಂಗ್ಲಾ ನಡುವೆ 18 ಟಿ-20ಐ ಪಂದ್ಯಗಳು ನಡೆದಿದ್ದು 17 ಪಂದ್ಯಗಳನ್ನ ಭಾರತ ಗೆದ್ರೆ 1 ಪಂದ್ಯದಲ್ಲಿ ಮಾತ್ರವೇ ಬಾಂಗ್ಲಾ ಗೆದ್ದಿದೆ. ಏಕದಿನ ಮಾದರಿಯಲ್ಲಿ ಒಟ್ಟಾರೆ 42 ಪಂದ್ಯಗಳು ನಡೆದಿದ್ದು 33 ಪಂದ್ಯಗಳನ್ನ ಭಾರತ ಗೆದ್ರೆ 8 ಪಂದ್ಯಗಳಲ್ಲಿ ಬಾಂಗ್ಲಾ ವಿನ್ ಆಗಿದೆ. ಒಂದು ಪಂದ್ಯ ರದ್ದಾಗಿದೆ. ಸೋ ಈ ಸ್ಟಾಟ್ಸ್ ನೋಡಿದ್ರೆ ಭಾರತ ಬಾಂಗ್ಲಾ ವಿರುದ್ಧ ಕಂಪ್ಲೀಟ್ ಡಾಮಿನೇಷನ್ ಮಾಡಿರೋದು ಗೊತ್ತಾಗುತ್ತೆ.

Shantha Kumari

Leave a Reply

Your email address will not be published. Required fields are marked *