ಕೊಹ್ಲಿ Vs ಗಂಭೀರ್ ಮಾತಿಲ್ಲ ಕಥೆಯಿಲ್ಲ – IPL ಜಗಳಕ್ಕೆ ಟೀಂ ಇಂಡಿಯಾದಲ್ಲೂ ಜಿದ್ದು
GAME PLANನಲ್ಲೂ ದೂರ ದೂರ ಏಕೆ?

ಕಿಂಗ್ ವಿರಾಟ್ ಕೊಹ್ಲಿ ಮತ್ತು ಹೆಡ್ಕೋಚ್ ಗೌತಮ್ ಗಂಭೀರ್ ನಡುವೆ ಮೊದ್ಲಿಂದಲೂ ಕೋಲ್ಡ್ ವಾರ್ ಇದ್ದೇ ಇದೆ. ಐಪಿಎಲ್ನಲ್ಲಿ ಸ್ಟಾರ್ಟ್ ಆಗಿದ್ದ ಇವ್ರಿಬ್ಬರ ಜಿದ್ದಾಜಿದ್ದೆ ಟೀಂ ಇಂಡಿಯಾದಲ್ಲಿ ಕಡಿಮೆ ಆಗಿದೆ ಎನ್ನಲಾಗ್ತಿತ್ತು. ಆದ್ರೀಗ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಇಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿವೆ. ಒಬ್ರನ್ನೊಬ್ರು ಅವಾಯ್ಡ್ ಮಾಡ್ತಿದ್ದಾರೆ.
ಇದನ್ನೂ ಓದಿ : RO-KO ಫೈಯರ್.. ಬುಮ್ರಾ ಪವರ್ – ENGನಲ್ಲಿ ತ್ರಿಮೂರ್ತಿಗಳದ್ದೇ ಕಾರುಬಾರು
ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯವನ್ನ ಭಾರತ ಗೆದ್ದಿದೆ. ಆದ್ರೆ ಈ ಪಂದ್ಯಕ್ಕೂ ಮುನ್ನ ನಡೆದ ಪ್ರಾಕ್ಟೀಸ್ ಸೆಷನ್ನಲ್ಲಿನ ಕೆಲ ಡವಲಪ್ಮೆಂಟ್ಸ್ ಹಲವು ಚರ್ಚೆಗಳಿಗೆ ಕಾರಣ ಆಗಿದೆ. ಅದ್ರಲ್ಲೂ ಕೋಚ್ ಗಂಭೀರ್ ಮತ್ತು ಕೊಹ್ಲಿ ನಡುವಿನ ಮುಸುಕಿನ ಗುದ್ದಾಟ ಮತ್ತೊಮ್ಮೆ ಜಗಜ್ಜಾಹೀರಾಗಿದೆ.
ಪ್ರಾಕ್ಟೀಸ್ ಟೈಮಲ್ಲಿ ಗಂಭೀರ್ & ಕೊಹ್ಲಿ ಮಾತಿಲ್ಲ ಕಥೆಯಿಲ್ಲ!
ಮೊದಲ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಪ್ರಾಕ್ಟೀಸ್ ವೇಳೆ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಮಾತಿಲ್ಲ ಕಥೆಯಿಲ್ಲ ಎನ್ನುವಂತೆ ವರ್ತಿಸಿದ್ದಾರೆ. ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ಭಾರತದ ಅಭ್ಯಾಸ ಅವಧಿಯಲ್ಲಿ ತಂಡದ ಬೇರೆಲ್ಲ ಆಟಗಾರರು ಮತ್ತು ಟೀಂ ಸ್ಟಾಫ್ಸ್ ಜೊತೆ ಸಾಕಷ್ಟು ಟೈಂ ಸ್ಪೆಂಡ್ ಮಾಡಿದ್ರು. ಌಂಡ್ ಪಂದ್ಯದ ಬಗ್ಗೆಯೂ ತಮ್ಮ ಥಾಟ್ಸ್ ಶೇರ್ ಮಾಡಿದ್ರು. ಆದ್ರೆ ಎಲ್ಲಿಯೂ ಕೂಡ ವಿರಾಟ್ ಕೊಹ್ಲಿ ಜೊತೆ ಮಾತನಾಡಿಲ್ಲ. ಗಂಭೀರ್ ಅವರು ತಂಡದ ನಾಯಕ ಶುಭಮನ್ ಗಿಲ್ ಜೊತೆ ಮಾತುಕತೆ ನಡೆಸಿದರು. ಹಾಗೇ ರೋಹಿತ್ ಶರ್ಮಾ, ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಮತ್ತು ಇತರ ಸಹಾಯಕ ಸಿಬ್ಬಂದಿಯೊಂದಿಗೂ ಚರ್ಚೆ ನಡೆಸಿದ್ದಾರೆ. ಕೊಹ್ಲಿ ಜೊತೆ ಮಾತ್ರ ನೇರಾನೇರ ಮಾತನಾಡಿಲ್ಲ. ವಿರಾಟ್ ಕೊಹ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ವೇಳೆ ಗಂಭೀರ್ ಅವ್ರು ಸಿತಾಂಶು ಕೋಟಕ್ ಜೊತೆ ಸುಮಾರು ಹೊತ್ತು ಚರ್ಚಿಸಿದ್ದಾರೆ. ಇದಾದ ಸ್ವಲ್ಪ ಹೊತ್ತಿನ ಬಳಿಕ ಸಿತಾಂಶು ಅವ್ರು ವಿರಾಟ್ ಕೊಹ್ಲಿ ಜೊತೆ ಮಾತನಾಡ್ತಿರುವ ವಿಡಿಯೋ ವೈರಲ್ ಆಗಿದೆ. ಅಂದ್ರೆ ಟೀಂ, ಪರ್ಫಾಮೆನ್ಸ್ ಬಗ್ಗೆ ಇವ್ರಿಬ್ಬರು ನೇರಾನೇರ ಮಾತನಾಡದೆ ಸಿತಾಂಶು ಕೋಟಕ್ ಮೂಲಕ ತಮ್ಮ ಅಭಿಪ್ರಾಯಗಳನ್ನ ಕನ್ವೆ ಮಾಡ್ತಿರೋದು ಕ್ಲಿಯರ್ ಆಗಿ ಗೊತ್ತಾಗ್ತಿದೆ.
ಗಂಭೀರ್ ಮತ್ತು ಕೊಹ್ಲಿ ನಡುವಿನ ಗುದ್ದಾಟ ಇಂದು ನಿನ್ನೆಯದಲ್ಲ. ದಶಕದ ಹಿಂದಿನಿಂದಲೂ ಇದೆ. ಒಂದಲ್ಲ ಎರಡೆರಡು ಸಲ ಗ್ರೌಂಡ್ನಲ್ಲೇ ಕಿತ್ತಾಡಿಕೊಂಡಿದ್ದಾರೆ. ಮೊದ್ಲಿಗೆ 2023ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರುಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಮ್ಯಾಚ್ ಇತ್ತು. ಈ ಮ್ಯಾಚಲ್ಲಿ ವಿರಾಟ್ ಕೊಹ್ಲಿ ಔಟ್ ಆದಾಗ KKR ನಾಯಕರಾಗಿದ್ದ ಗೌತಮ್ ಗಂಭೀರ್ ತುಂಬಾನೇ ಅಗ್ರೆಸ್ಸಿವ್ ಆಗಿ ಸೆಲೆಬ್ರೇಟ್ ಮಾಡಿದ್ರು. ಇದ್ರಿಂದ ಸಿಟ್ಟಾದ ಕೊಹ್ಲಿ, ಗಂಭೀರ್ ಕಡೆಗೆ ಬಂದು ತೀವ್ರ ವಾಗ್ವಾದ ನಡೆಸಿದರು. ಈ ವೇಳೆ ಇತರೆ ಆಟಗಾರು ಮತ್ತು ಅಂಪೈರ್ಗಳು ಇಬ್ಬರನ್ನೂ ಸಮಾಧಾನಪಡಿಸಿದ್ರು. ಇದಾದ್ಮೇಲೆ 2023ರಲ್ಲೂ ಇಂಥದ್ದೇ ಕಿರಿಕ್ ಆಗಿತ್ತು. ಆಗ ಲಕ್ನೋ ತಂಡದ ಮೆಂಟರ್ ಆಗಿದ್ರು ಗೌತಮ್ ಗಂಭೀರ್. ಲಕ್ನೋ ಮತ್ತು ಬೆಂಗಳೂರು ನಡುವಿನ ಮ್ಯಾಚ್ ಟೈಮಲ್ಲಿ ಲಖನೌ ಆಟಗಾರ ನವೀನ್-ಉಲ್-ಹಕ್ ನಡುವೆ ಜಗಳ ಆಗಿತ್ತು. ಆದ್ರೆ ಪಂದ್ಯ ಮುಗಿದು ಪರಸ್ಪರ ಆಟಗಾರರು ಶೇಕ್ ಹ್ಯಾಂಡ್ ಮಾಡುವಾಗ ಮತ್ತೆ ಕೊಹ್ಲಿ ಮತ್ತು ನವೀನ್ ನಡುವೆ ಮಾತಿಗೆ ಮಾತು ಬೆಳೆಯಿತು. ಈ ವೇಳೆ ಲಖನೌ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್, ತಮ್ಮ ಆಟಗಾರನ ಪರವಾಗಿ ಬಂದು ಕೊಹ್ಲಿ ಎದುರು ನೇರವಾಗಿ ತೊಡೆ ತಟ್ಟಿ ನಿಂತರು. ಇಬ್ಬರ ನಡುವಿನ ಜಗಳ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿ ದೊಡ್ಡ ಗದ್ಧಲವೇ ಆಗಿತ್ತು. ಇದ್ರಿಂದಾಗಿ ಬಿಸಿಸಿಐ ಇಬ್ಬರಿಗೂ ಶೇ 100 ರಷ್ಟು ಪಂದ್ಯದ ಸಂಭಾವನೆಯನ್ನು ದಂಡವಾಗಿ ವಿಧಿಸಿತ್ತು. ಬಟ್ 2024ರ ಐಪಿಎಲ್ ಟೈಮಲ್ಲಿ ಕೆಕೆಆರ್ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಮೈದಾನದಲ್ಲಿ ವಿರಾಟ್ ಕೊಹ್ಲಿಗೆ ಶೇಕ್ ಹ್ಯಾಂಡ್ ನೀಡಿ ಅಪ್ಪಿಕೊಂಡಿದ್ರು. ಇದಾದ್ಮೇಲೆ ಇಬ್ಬರ ನಡುವೆ ಎಲ್ಲವೂ ಸರಿಯಾಗಿದೆ ಎನ್ನಲಾಗಿತ್ತು. ಅದಾದ್ಮೇಲೆ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ್ಮೇಲೆ ಹಳೆ ಮುನಿಸೆಲ್ಲಾ ಮರೆಯಾಗಿತ್ತು. ಹೀಗಿದ್ರೂ ಗಂಭೀರ್ ಅವ್ರ ಸ್ಟಾರ್ ಕಲ್ಚರ್ ಬಗೆಗಿನ ಹೇಳಿಕೆಗಳು, ಟೀಂ ಸೆಲೆಕ್ಷನ್ ಹೀಗೆ ಸಾಕಷ್ಟು ವಿಚಾರಗಳಲ್ಲಿ ಕೋಲ್ಡ್ ವಾರ್ ಇದ್ದೇ ಇತ್ತು. ಬಟ್ ಈಗ ಅದು ಮತ್ತೆ ಬ್ಲ್ಯಾಸ್ಟ್ ಆಗ್ತಿದೆ ಅಷ್ಟೇ.
ಒಟ್ನಲ್ಲಿ ಇಬ್ಬರು ಟೀಂ ಇಂಡಿಯಾಗಾಗಿ ಪ್ರೊಫೆಷನಲ್ ಆಗಿ ಕೆಲ್ಸ ಮಾಡ್ತಿದ್ದರಾದ್ರೂ ಹಳೇ ಕಿಡಿ ಆಗ್ಗಾಗ್ಗೆ ಸ್ಫೋಟವಾಗ್ತಾನೇ ಇದೆ. ಈಗ ಮತ್ತೊಮ್ಮೆ ಅಂಥದ್ದೇ ಬೆಳವಣಿಗೆಗಳು ಆಗ್ತಿವೆ. ಆದ್ರೆ ಹಳೆಯ ಮುನಿಸು, ಮನಸ್ತಾಪಗಳು ದೊಡ್ಡ ಡ್ಯಾಮೇಜ್ ಮಾಡದಿದ್ರೆ ಅಷ್ಟೇ ಸಾಕು.

ನೋಡಿರಿ

