ಚಿಕನ್ ಹಾಗೂ ಮೊಟ್ಟೆ ದರದಲ್ಲಿ ಭಾರೀ ಏರಿಕೆ – ಕೆಜಿಗೆ 350 ರೂ. ಗಡಿ ದಾಟಿದ ಕೋಳಿ ಮಾಂಸ

ಕಳೆದ ಒಂದು ವಾರದಿಂದ ಚಿಕನ್ ಹಾಗೂ ಮೊಟ್ಟೆ ದರದಲ್ಲಿ ಭಾರೀ ಏರಿಕೆ ಕಂಡುಬರುತ್ತಿದ್ದು, ಇತಿಹಾಸದಲ್ಲೇ ದಾಖಲೆ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. ಚಿಕನ್ ಮತ್ತು ಮೊಟ್ಟೆ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನರ ದೈನಂದಿನ ಖರ್ಚು ಹೆಚ್ಚಾಗಿದೆ. ಈಗಾಗಲೇ ಎಲ್ಲಾ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಕ್ಕೆ ಇದೀಗ ಮಾಂಸಹಾರದ ಬೆಲೆಯೂ ಏರಿಕೆಯಾಗಿದ್ದು, ಶಾಕ್ ಕೊಟ್ಟಿದೆ.
ಇದನ್ನೂ ಓದಿ: ಆಷಾಢ ಮಾಸದಲ್ಲಿ ನೀವು ಮಾಡಬೇಕಾದ ಕೆಲಸಗಳೇನು ಗೊತ್ತಾ?
ಸ್ಕಿನ್ಲೆಸ್ ಚಿಕನ್ – 350 ರಿಂದ 360 ರೂ. (KG)
ವಿಥ್ ಸ್ಕಿನ್ ಚಿಕನ್- 330 ರಿಂದ 340ರೂ. (KG)
ಹೋಲ್ಸೇಲ್ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಗೆ 8 ರೂ
ಗ್ರಾಹಕರಿಗೆ 1 ಮೊಟ್ಟೆಗೆ 8.30 ರೂ. ನಿಂದ 9 ರೂಪಾಯಿ
ಕೋಳಿಗಳ ಬೆಳವಣಿಗೆ ಸರಿಯಾಗಿ ಆಗದಿರುವುದು ಇದ್ದಕ್ಕೆ ಕಾರಣ. ಇದರಿಂದಾಗಿ ಪೂರೈಕೆ ಕಡಿಮೆಯಾಗಿದೆ. ಹೆಚ್ಚುವರಿಯಾಗಿ ಬೇರೆ ರಾಜ್ಯಗಳಿಗೆ ಚಿಕನ್ ಸಪ್ಲೈ ಹೆಚ್ಚಾಗಿರುವುದರಿಂದಲೂ ನಗರದಲ್ಲಿ ಲಭ್ಯತೆ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ದಿನದಿಂದ ದಿನಕ್ಕೆ ದರಗಳು ಏರಿಕೆಯಾಗುತ್ತಿವೆ. ಮೊಟ್ಟೆ ದರವೂ ತೀವ್ರವಾಗಿ ಏರಿದೆ. ಕಳೆದ ಮೂರು ದಿನಗಳ ಹಿಂದೆ ₹7-7.30 ಇದ್ದ ಮೊಟ್ಟೆ ಈಗ ₹8.30 ರಿಂದ ₹9 ತಲುಪಿದೆ. ಹೋಲ್ಸೇಲ್ನಲ್ಲಿ ₹8 ಇದೆ.
ಚಿಕನ್ ಮತ್ತು ಮೊಟ್ಟೆ ದೈನಂದಿನ ಆಹಾರದಲ್ಲಿ ಮುಖ್ಯ ಭಾಗವಾಗಿದೆ. ದರ ಏರಿಕೆಯಿಂದಾಗಿ ಸಾಮಾನ್ಯ ಕುಟುಂಬಗಳ ಖರ್ಚು ಹೆಚ್ಚಾಗಿದೆ. ‘ಹಿಂದೆ 300 ರೂಪಾಯಿಗೆ ಸಿಗುತ್ತಿದ್ದ ಚಿಕನ್ ಈಗ 360 ರೂಪಾಯಿ ಆಗಿದೆ. ಇದು ತುಂಬಾ ಹೆಚ್ಚು’ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ನೋಡಿರಿ

