ENG ಬೆವರಿಳಿಸಿದ ಬುಮ್ರಾ, ಬ್ರಾರ್ – ಇದು ಭಾರತದ ಅಸಲಿ ಬೌಲಿಂಗ್ ಕಿಚ್ಚು
T-20I ಸೊಕ್ಕು ODIನಲ್ಲಿ ಇಳಿಯುತ್ತಾ?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿ ಸ್ಟಾರ್ಟ್ ಆಗಿದೆ. ಆಫ್ಟರ್ ಎ ಲಾಂಗ್ ಟೈಂ ಜಸ್ಪ್ರೀತ್ ಬುಮ್ರಾ, ವಿರಾಟ್ ಕೊಹ್ಲಿ ಹಾಗೇ ರೋಹಿತ್ ಶರ್ಮಾ ಒಟ್ಟಿಗೆ ಮೈದಾನಕ್ಕಿಳಿದಿದ್ದಾರೆ. ಹೀಗಾಗಿ ಪಂದ್ಯದ ವೇಯ್ಟೇಜ್ ಕೂಡ ಆಟೋಮೆಟಿಕಲಿ ಜಾಸ್ತಿ ಆಗಿತ್ತು. ಎಡ್ಜ್ಬಾಸ್ಟನ್ನಲ್ಲಿ ಆರಂಭವಾದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಫಸ್ಟ್ ಬ್ಯಾಟಿಂಗ್ ಚೂಸ್ ಮಾಡಿಕೊಳ್ತಾರೆ. ಇಂಟ್ರೆಸ್ಟಿಂಗ್ ಅಂದ್ರೆ ಇದೇ ಇಂಗ್ಲೆಂಡ್ ಟೀಂ ಟಿ-20ಐ ಸರಣಿಯಲ್ಲಿ ಫಸ್ಟ್ ಬ್ಯಾಟಿಂಗ್ ಮಾಡ್ದಾಗ ಡಮಾಲ್ ಡಿಮೀಲ್ ಅಂತಾ ಅಬ್ಬರಿಸ್ತಿದ್ರು. ಆದ್ರೆ ಏಕದಿನ ಮ್ಯಾಚಲ್ಲಿ ಕಂಪ್ಲೀಟ್ ಡಿಫರೆಂಟ್ ಆಗಿತ್ತು. ಟಿ-20ಐ ಸಿರೀಸ್ ಸೋತಿದ್ದ ಟೀಮ್ ಇಂಡಿಯಾಗೆ ಏಕದಿನ ಸರಣಿಯನ್ನ ಗೆಲ್ಲಲೇಬೇಕಾದ ಪ್ರೆಶರ್ ಇದೆ. ಟೀಮ್ನಲ್ಲಿ ಸೀನಿಯರ್ಸ್ ಕೂಡ ಇರೋದ್ರಿಂದ ಎಕ್ಸ್ಪೆಕ್ಟೇಷನ್ಸ್ ಕೂಡ ಜಾಸ್ತಿನೇ ಇದೆ.
ಭಾರತದ ಪ್ಲೇಯಿಂಗ್ 11
ಟಾಪ್-5ನಲ್ಲಿ ಬ್ಯಾಟರ್ಸ್!
ಶುಭಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್
ಮೂವರು ಆಲ್ ರೌಂಡರ್ಸ್
ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಅಕ್ಷರ್ ಪಟೇಲ್
ಬೌಲಿಂಗ್
ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್
ಹೀಗೆ ಮೂವರು ಫಾಸ್ಟ್ ಬೌಲರ್ಸ್ ಮತ್ತು ಮೂವರು ಆಲ್ ರೌಂಡರ್ಸ್ ಜೊತೆ ಅಖಾಡಕ್ಕಿಳಿದಿದ್ದ ಭಾರತ ಫಸ್ಟ್ ಬೌಲಿಂಗ್ನಲ್ಲಿ ಕಂಪ್ಲೀಟ್ ಡಾಮಿನೇಟ್ ಮಾಡಿದೆ. ಟಿ20ಐ ಟೀಮ್ಗೂ ಒಡಿಐ ಟೀಮ್ಗೂ ತುಂಬಾನೇ ವ್ಯತ್ಯಾಸ ಕಾಣ್ತಿತ್ತು.
ಬುಮ್ರಾ & ಪ್ರಸಿದ್ಧ್ ಅಟ್ಯಾಕ್.. ಗುರ್ನೂರ್ ಬ್ರಾರ್ ಗುನ್ನಾ!
ಭಾರತದ ಬೌಲಿಂಗ್ ತುಂಬಾನೇ ಸ್ಟ್ರಾಂಗ್ ಆಗಿದೆ. ಜಸ್ಪ್ರೀತ್ ಬುಮ್ರಾ ಹಾಗೇ ಪ್ರಸಿದ್ಧ್ ಕೃಷ್ಣ ಇಬ್ರೂ ಕೂಡ ಅಕ್ಷರಶಃ ಆಂಗ್ಲರಿಗೆ ಪ್ರೆಶರ್ ಕ್ರಿಯೇಟ್ ಮಾಡಿದ್ರು. ಫಸ್ಟ್ ಬ್ಯಾಟಿಂಗ್ಗೆ ಬಂದ ಇಂಗ್ಲೆಂಡ್ಗೆ ಆರಂಭದಲ್ಲಿ ರನ್ಸ್ ಕೊಡ್ಲೇ ಇಲ್ಲ. ಬೆನ್ ಡಕೆಟ್ ಮತ್ತು ಜೇಕಬ್ ಬೆಥೆಲ್ ಓಪನರ್ಸ್ ಆಗಿ ಕಣಕ್ಕಿಳಿದಿದ್ರು. 7 ಓವರ್ಸ್ ಆದ್ರೂ 20 ರನ್ಸ್ ಅಷ್ಟೇ ಬಂದದ್ದು. ಬಟ್ 8ನೇ ಓವರ್ನಲ್ಲಿ ಗುರ್ನೂರ್ ಬ್ರಾರ್ ಒಂದೇ ಓವರ್ನಲ್ಲಿ 17 ರನ್ಸ್ ಕೊಡ್ತಾರೆ. ಆ ನಂತ್ರದಲ್ಲಿ ಆಂಗ್ಲರು ಬ್ಯಾಟ್ ಬಿಚ್ಚೋಕೆ ಸ್ಟಾರ್ಟ್ ಮಾಡ್ತಾರೆ. 10 ಓವರ್ಗಳಲ್ಲಿ 51 ರನ್ಸ್ ಕಲೆ ಹಾಕ್ತಾರೆ. ಬೆನ್ ಡಕೆಟ್ ಹಾಗೇ ಬೆಥೆಲ್ ಸ್ವಲ್ಪ ಡೇಂಜರಸ್ ಆಗ್ತಿದ್ದಾರೆ ಅಂದಾಗ ಗುರ್ನೂರ್ ಬ್ರಾರ್ ಒಂದೇ ಓವರ್ ನಲ್ಲಿ ಇಬ್ಬರಿಗೂ ಪೆವಿಲಿಯನ್ ದಾರಿ ತೋರಿಸ್ತಾರೆ. 12.2ನೇ ಓವರ್ನಲ್ಲಿ ಬೆಥೆಲ್ ಔಟ್ ಮಾಡಿದ್ರೆ ಅದೇ ಓವರ್ನ 4ನೇ ಬಾಲಲ್ಲಿ ಬೆನ್ ಡಕೆಟ್ ವಿಕೆಟ್ ತೆಗೆದು ಒಂದೇ ಓವರ್ನಲ್ಲಿ ಬ್ರೇಕ್ ಥ್ರೂ ತಂದುಕೊಡ್ತಾರೆ. ಌಂಡ್ ನೆಕ್ಸ್ಟ್ ಓವರ್ನಲ್ಲೇ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ತಂಡದ ಕ್ಯಾಪ್ಟನ್ ಹ್ಯಾರಿ ಬ್ರೂಕ್ರನ್ನ ಪೆವಿಲಿಯನ್ಗೆ ಕಳಿಸ್ತಾರೆ. ಟಿ-20ಐ ಫಾರ್ಮೆಟ್ನಲ್ಲಿ ಭಾರತಕ್ಕೆ ಕಂಟಕವಾಗಿದ್ದ ಬ್ರೂಕ್ ಏಕದಿನ ಮಾದರಿಯ ಮೊದಲ ಪಂದ್ಯದಲ್ಲಿ 1 ರನ್ಗೆ ವಿಕೆಟ್ ಒಪ್ಪಿಸಿದ್ರು. ಹೀಗೆ ಭಾರತ ಬೌಲಿಂಗ್ನಲ್ಲಿ ಕಂಪ್ಲೀಟ್ ಕಂಟ್ರೋಲ್ನಲ್ಲಿ ಕಾಣಿಸಿತು. ಇದಕ್ಕೆ ಕಾರಣ ತಂಡದಲ್ಲಿರೋ ಎಕ್ಸ್ಪೀರಿಯನ್ಸಡ್ ಪ್ಲೇಯರ್ಸ್.. ಯಾವ ಓವರ್ನಲ್ಲಿ ಯಾರ ಕೈಗೆ ಬಾಲ್ ಕೊಡ್ಬೇಕು ಅನ್ನೋದನ್ನ ಜಡ್ಜ್ ಮಾಡಿದ್ದು ಕೂಡ ಇಂಪ್ರೆಸ್ಸಿವ್ ಆಗಿತ್ತು. ವಾಷಿಂಗ್ಟನ್ ಸುಂದರ್ ಹಾಗೇ ಶಿವಂ ದುಬೆಗೆ ಒಂದೊಂದು ಓವರ್ ಕೊಟ್ಟು ಮತ್ತೆ ಬ್ರಾರ್ ಮತ್ತು ಬುಮ್ರಾಗೆ ಬಾಲ್ ಕೊಟ್ಟಿದ್ದು ಕೂಡ ಮ್ಯಾಚ್ ಟರ್ನಿಂಗ್ ಮೂಮೆಂಟ್ ಆಯ್ತು. ಇದೇ ಕಾರಣಕ್ಕೆ ಹೇಳೋದು ಎಕ್ಸ್ಪೀರಿಯನ್ಸ್ ಕೂಡ ಮ್ಯಾಟ್ರ್ ಆಗುತ್ತೆ ಅಂತಾ.

ನೋಡಿರಿ

