RO-KO ಫೈಯರ್.. ಬುಮ್ರಾ ಪವರ್ – ENGನಲ್ಲಿ ತ್ರಿಮೂರ್ತಿಗಳದ್ದೇ ಕಾರುಬಾರು
ಆಂಗ್ಲರ ಸೊಕ್ಕಿಳಿಸ್ತಾರಾ ಸೂಪರ್ ಸ್ಟಾರ್ಸ್?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇವತ್ತಿಂದ ಸ್ಟಾರ್ಟ್ ಆಗ್ತಿದೆ. ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭ ಆಗಲಿದೆ. ಈ ಸರಣಿ ನಿಮ್ಗೆಲ್ಲಾ ಗೊತ್ತಿರೋ ಹಾಗೇ ತುಂಬಾನೇ ಸ್ಪೆಷಲ್. ಌಂಡ್ ಈ ತ್ರಿಮೂರ್ತಿಗಳ ಕಾಂಬಿನೇಷನ್ ನೋಡೋದೇ ಕಣ್ಣಿಗೆ ಹಬ್ಬ. ಬ್ಯಾಟಿಂಗ್ನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಡಾಮಿನೇಷನ್ ನೋಡಿದ್ರೆ ಬೌಲಿಂಗ್ನಲ್ಲಿ ಜಸ್ಪ್ರೀತ್ ಬುಮ್ರಾ ಅಟ್ಯಾಕ್ ನೋಡೋದೇ ಕಣ್ಣಿಗೆ ಹಬ್ಬ. ಹಾಗೇ ಈ ಮೂವರು ಇಂಗ್ಲೆಂಡ್‌ನಲ್ಲಿ ಬೆಸ್ಟ್ ರೆಕಾರ್ಡ್ಸ್ ಕೂಡ ಹೊಂದಿದ್ದಾರೆ.
ಇದನ್ನೂ ಓದಿ : T-20I ಸೋಲಿಗೆ ODIನಲ್ಲಿ ಸೇಡು – ಆಂಗ್ಲರಿಗೆ ಈಗ RO-KOದ್ದೇ ಟೆನ್ಷನ್
ಶುಭ್ಮನ್ ಗಿಲ್ ಕ್ಯಾಪ್ಟನ್ಸಿಯಲ್ಲಿ ಭಾರತ ಏಕದಿನ ಸರಣಿಗೆ ಸಜ್ಜಾಗಿದ್ರೆ ಅತ್ತ ಟಿ-20ಐ ಸರಣಿಯಲ್ಲಿ ಭಾರತವನ್ನ ಕ್ಲೀನ್ ಸ್ವೀಪ್ ಮಾಡಿರೋ ಹ್ಯಾರಿ ಬ್ರೂಕ್ ಏಕದಿನ ತಂಡವನ್ನೂ ಮುನ್ನಡೆಸಲಿದ್ದಾರೆ. ಎರಡೂ ತಂಡಗಳು ಸೂಪರ್ ಸಾಲಿಡ್ ಆಗಿ ಕಾಣ್ತಿದ್ದು ಮೊದಲ ಪಂದ್ಯದಲ್ಲಿ ಗೆದ್ದು ಲೀಡ್ ಪಡೆಯೋ ಟಾರ್ಗೆಟ್ನಲ್ಲಿರ್ತಾರೆ. ಌಂಡ್ ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ಈ ಮೂವರ ಮೇಲೆ ತುಂಬಾನೇ ನಿರೀಕ್ಷೆ ಇಟ್ಕೊಂಡಿದೆ. ಹಾಗೇ ಆಂಗ್ಲರಿಗೂ ಈ ಮೂವರ ವಿರುದ್ಧ ಮೇಲುಗೈ ಸಾಧಿಸೋಕೆ ಗ್ರೌಂಡ್ವರ್ಕ್ ಕೂಡ ಮಾಡಿದ್ದಾರೆ. ಅದ್ರಲ್ಲಿ ನಂಬರ್ 1 ಹಿಟ್ ಮ್ಯಾನ್ ರೋಹಿತ್ ಶರ್ಮಾ.
ಇಂಗ್ಲೆಂಡ್ ನಲ್ಲಿ ಅತ್ಯದ್ಭುತ ರೆಕಾರ್ಡ್ಸ್ ಹೊಂದಿದ್ದಾರೆ ರೋಹಿತ್ ಶರ್ಮಾ!
ಇನ್ನು ಈ ಸರಣಿಯಲ್ಲಿ ಹೈ ಎಕ್ಸ್ಪೆಕ್ಟೇಷನ್ಸ್ ಇರೋದು ಹಿಟ್ಮ್ಯಾನ್ ರೋಹಿತ್ ಶರ್ಮಾ ಮೇಲೆ. ಅದ್ರಲ್ಲೂ ಇಂಗ್ಲೆಂಡ್‌ನಲ್ಲಿ ಸರಣಿ ನಡೀತಾ ಇರೋದ್ರಿಂದ ರೋಹಿತ್ ಮತ್ತೊಮ್ಮೆ ಭರ್ಜರಿ ಪರ್ಫಾಮೆನ್ಸ್ ನೀಡ್ತಾರೆ ಅನ್ನೋ ನಿರೀಕ್ಷೆ ಮೂಡಿಸಿದ್ದಾರೆ. ಯಾಕಂದ್ರೆ ಆಂಗ್ಲರ ನಾಡಿನ ಪಿಚ್‌ಗಳು ರೋಹಿತ್ಗೆ ಆಲ್ವೇಸ್ ಫೇವರೆಟ್. 2019ರ ಏಕದಿನ ವಿಶ್ವಕಪ್ನಲ್ಲಿ ಇದೇ ಇಂಗ್ಲೆಂಡ್ನಲ್ಲೇ 5 ಶತಕ ಬಾರಿಸಿದ್ರು. ಒಂದು ಐಸಿಸಿ ಟೂರ್ನಮೆಂಟ್ನಲ್ಲಿ 5 ಶತಕ ಬಾರಿಸಿದ ವಿಶ್ವದ ಏಕೈಕ ಮತ್ತು ಮೊದಲ ಆಟಗಾರ. 81ರ ಆವರೇಜ್ನಲ್ಲಿ 648 ರನ್ಗಳನ್ನ ಕಲೆ ಹಾಕಿದ್ರು. ಇಂಗ್ಲೆಂಡ್‌ನಲ್ಲಿ 27 ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ 1,428 ರನ್‌ಗಳನ್ನು ಗಳಿಸಿದ್ದಾರೆ. ಏಕದಿನ ಮಾದರಿಯಲ್ಲಿ ಒಟ್ಟಾರೆ 33 ಶತಕಗಳ ಪೈಕಿ 7 ಶತಕಗಳು ಇಂಗ್ಲೀಷ್ ನೆಲದಲ್ಲಿ ಬಂದಿವೆ. ಹಾಗೇ ಇಂಗ್ಲೆಂಡ್‌ನಲ್ಲಿ ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿದೇಶಿ ಆಟಗಾರರ ಪೈಕಿ ರೋಹಿತ್ ನಂಬರ್ 1 ಸ್ಥಾನದಲ್ಲಿದ್ದಾರೆ. ಹೀಗಾಗಿ ರೋಹಿತ್ ಈ ಸರಣಿಯಲ್ಲೂ ಚೆನ್ನಾಗಿ ಆಡ್ತಾರೆ ಅನ್ನೋ ನಿರೀಕ್ಷೆ ಮೂಡಿಸಿದ್ದಾರೆ. ಅಟ್ ದಿ ಸೇಮ್ ಟೈಂ ಕಿಂಗ್ ಕೊಹ್ಲಿ ಕೂಡ ಇಂಗ್ಲೆಂಡ್‌ನಲ್ಲಿ ಬ್ಯಾಟಿಂಗ್ ಮಾಡೋದನ್ನ ಎಂಜಾಯ್ ಮಾಡ್ತಾರೆ.
ಆಂಗ್ಲರ ನಾಡಿನಲ್ಲಿ ಕಿಂಗ್ ಕೊಹ್ಲಿ ಭರ್ಜರಿ ಬ್ಯಾಟಿಂಗ್!
ಆಂಗ್ಲರ ನಾಡಿನಲ್ಲಿ ಅದ್ಭುತ ಬ್ಯಾಟಿಂಗ್ ರೆಕಾರ್ಡ್ ಹೊಂದಿರುವ ವಿರಾಟ್ ಕೊಹ್ಲಿ 33 ಇನಿಂಗ್ಸ್‌ಗಳಿಂದ 51ರ ಸರಾಸರಿಯಲ್ಲಿ 1,349 ರನ್ ಕಲೆಹಾಕಿದ್ದಾರೆ. ಇದರಲ್ಲಿ 122 ಅತ್ಯುತ್ತಮ ಸ್ಕೋರ್ ಆಗಿದೆ. ಹಾಗೇ ಇಂಗ್ಲೆಂಡ್‌ನಲ್ಲಿ ಅತೀ ಹೆಚ್ಚು ರನ್ಸ್ ಗಳಿಸಿದ ವಿದೇಶಿ ಆಟಗಾರರ ಪೈಕಿ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಪಿಚ್‌ಗಳು ವೇಗದ ಬೌಲಿಂಗ್‌ಗೆ ಹೆಚ್ಚು ನೆರವು ನೀಡುತ್ತವೆ. ಇಂತಹ ಸವಾಲಿನ ಪಿಚ್ಗಳಲ್ಲಿ 51ಕ್ಕೂ ಅಧಿಕ ಸರಾಸರಿಯಲ್ಲಿ ರನ್ ಗಳಿಸಿರುವುದು ಅವರ ಶ್ರೇಷ್ಠತೆಗೆ ಸಾಕ್ಷಿಯಾಗಿದೆ.
19 ರನ್ ನೀಡಿ 6 ವಿಕೆಟ್ ಬೇಟೆಯಾಡಿದ್ರು ಬುಮ್ರಾ!
ಇನ್ನು ರೋಹಿತ್ ಹಾಗೇ ಕೊಹ್ಲಿಯಂತೆಯೇ ಜಸ್ಪ್ರೀತ್ ಬುಮ್ರಾ ಕೂಡ ಇಂಗ್ಲೆಂಡ್‌ನಲ್ಲಿ ಮೇಲುಗೈ ಸಾಧಿಸಿದ್ದಾರೆ. ಆಂಗ್ಲರ ನೆಲದಲ್ಲಿ 6 ಏಕದಿನ ಪಂದ್ಯಗಳನ್ನ ಆಡಿರೋ ಬುಮ್ರಾ 13 ವಿಕೆಟ್ಸ್ ಬೇಟೆಯಾಡಿದ್ದಾರೆ. ಎಕಾನಮಿ ಜಸ್ಟ್ 3.92 ಇದ್ರೆ 12.15ರ ಆವರೇಜ್ನಲ್ಲಿ ವಿಕೆಟ್ ತೆಗೆದಿದ್ದಾರೆ. ಈ ಪೈಕಿ ಇವ್ರ ಬೆಸ್ಟ್ ಫಿಗರ್ಸ್ ಅಂದ್ರೆ 2022ರಲ್ಲಿ ಓವಲ್ನಲ್ಲಿ ನಡೆದ ಮ್ಯಾಚಲ್ಲಿ ಕೇವಲ 19 ರನ್ ನೀಡಿ 6 ವಿಕೆಟ್ ಬೇಟೆಯಾಡಿದ್ರು. ಇದು ಭಾರತೀಯ ಬೌಲರ್ ಒಬ್ರು ವಿದೇಶದಲ್ಲಿ ಮಾಡಿದ ಅತ್ಯುತ್ತಮ ಪ್ರದರ್ಶನವಾಗಿದೆ. ಹೀಗಾಗಿ ರೋಹಿತ್ ಕೊಹ್ಲಿ ಮತ್ತು ಬುಮ್ರಾ ಪ್ರದರ್ಶನದ ಮೇಲೆ ಟೀಂ ಇಂಡಿಯಾ ಗೆಲುವಿನ ಲೆಕ್ಕಾಚಾರವೂ ನಡೀತಿದೆ.

ನೋಡಿರಿ

