ಲಾರ್ಡ್ಸ್‌ ಅಂಗಳದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯ ಗೆದ್ದ ಭಾರತ ಮಹಿಳಾ ತಂಡ

ಲಾರ್ಡ್ಸ್‌ ಅಂಗಳದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ  ಏಕೈಕ  ಟೆಸ್ಟ್ ಪಂದ್ಯ ಗೆದ್ದ ಭಾರತ ಮಹಿಳಾ ತಂಡ

ಪ್ರತಿಷ್ಠಿತ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಇಂಗ್ಲೆಂಡ್‌ ವಿರುದ್ಧ ರೋಚಕ ಜಯ ಸಾಧಿಸಿದೆ. ಯಸ್ತಿಕಾ ಭಾಟಿಯಾ ಅವರ ಚೊಚ್ಚಲ ಶತಕದ ನೆರವಿನಿಂದ ಭಾರತ   457 ರನ್‌ಗಳ ಬೃಹತ್ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು  270 ರನ್‌ಗಳಿಂದ ಹೀನಾಯವಾಗಿ ಸೋಲ್ತು. ಈ ಮೂಲಕ ಲಾರ್ಡ್ಸ್‌ ಅಂಗಳದಲ್ಲಿ ಟೀಂ ಇಂಡಿಯಾ ದಾಖಲೆ ಬರೆಯಿತು.

ಇದನ್ನೂ ಓದಿ: ರೋಹಿತ್ ಓಪನರ್.. KL ಕೀಪರ್ – ಬೌಲಿಂಗ್ ಯುನಿಟ್ ಗೆ ಬುಮ್ರಾ ಬ್ರಹ್ಮಾಸ್ತ್ರ

ಪ್ರತಿಷ್ಠಿತ ಲಾರ್ಡ್ಸ್‌ ಕ್ರೀಡಾಂಗಣದ ಐತಿಹಾಸಿಕ ಟೆಸ್ಟ್‌ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಗೆದ್ದಿದೆ.  ಈ ಕ್ರೀಡಾಂಗಣದಲ್ಲಿ ನಡೆದ ಮೊದಲ ಮಹಿಳಾ ಟೆಸ್ಟ್‌ ಎನಿಸಿಕೊಂಡಿರುವ ಈ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಇಂಗ್ಲೆಂಡ್‌ ಗೆಲುವಿಗೆ 457 ರನ್‌ ಗುರಿ ನೀಡಿತ್ತು. ಗುರಿ ಬೆನ್ನತ್ತಲು ಇಳಿದ ಇಂಗ್ಲೆಂಡ್‌ ಬ್ಯಾಟಿಂಗ್‌ ವೈಫಲ್ಯಕ್ಕೆ ತುತ್ತಾಯ್ತು.  ಈ ಮೂಲಕ ಪ್ರತಿಷ್ಠಿತ ಲಾರ್ಡ್ಸ್‌ ಕ್ರೀಡಾಂಗಣದ ಐತಿಹಾಸಿಕ ಟೆಸ್ಟ್‌ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಗೆದ್ದಿದೆ.

15 ರನ್‌ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿ 2ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 154 ರನ್‌ ಗಳಿಸಿದ್ದ ಭಾರತ ತಂಡ 3ನೇ ದಿನವೂ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿತು. ಯಸ್ತಿಕಾ ಭಾಟಿಯಾ ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಅವರು 158 ಎಸೆತಗಳಲ್ಲಿ 113 ರನ್‌ ಗಳಿಸಿದರು. ಸ್ಮೃತಿ ಮಂಧನಾ(70) ಹಿಂದಿನ ದಿನದ ಮೊತ್ತಕ್ಕೆ ಕೇವಲ 1 ರನ್‌ ಸೇರಿಸಿ ಔಟಾದರು. ಜೆಮಿಮಾ ರೋಡ್ರಿಗ್ಸ್‌(3), ನಾಯಕಿ ಹರ್ಮನ್‌ಪ್ರೀತ್‌ ಕೌರ್‌(16), ದೀಪ್ತಿ ಶರ್ಮಾ(10) ಮಿಂಚಲಿಲ್ಲ. ಕೊನೆಯಲ್ಲಿ ಸ್ಫೋಟಕ ಆಟವಾಡಿದ ರಿಚಾ ಘೋಷ್‌ 52 ಎಸೆತಗಳಲ್ಲಿ ಔಟಾಗದೆ 50 ರನ್‌ ಸಿಡಿಸಿದರು. ತಂಡದ 7 ವಿಕೆಟ್‌ ನಷ್ಟದಲ್ಲಿ 341 ರನ್‌ ಗಳಿಸಿ ಡಿಕ್ಲೇರ್‌ ಘೋಷಿಸಿತು.

ಮಹಿಳಾ ಟೆಸ್ಟ್‌ ಪಂದ್ಯ 4 ದಿನ ಮಾತ್ರ ಇರುವುದರಿಂದ ಇವತ್ತು ಕೊನೆ ದಿನ. ಹೀಗಾಗಿ ಭಾರತ ಸೋಮವಾರ 2ನೇ ಅವಧಿಯಲ್ಲೇ ಡಿಕ್ಲೇರ್‌ ಘೋಷಿಸಿತು. 457 ರನ್‌ಗಳ ಬೃಹತ್‌ ಗುರಿ ಬೆನ್ನತ್ತಲು ಆರಂಭಿಸಿದ ಇಂಗ್ಲೆಂಡ್‌ 100 ರನ್‌ ಗಳಿಸುವ ಮೊದಲೇ ಪ್ರಮುಖ ಐವರ ವಿಕೆಟ್‌ ಕಳೆದುಕೊಳ್ತು.  ಅಂತಿಮವಾಗಿ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 186 ರನ್‌ಗಳಿಗೆ ಆಲ್‌ಔಟ್ ಆಯ್ತು. ಈ ಮೂಲಕ ಭಾರತ 270ರನ್‌ಗಳಿಂದ ಏಕೈಕ ಟೆಸ್ಟ್ ಪಂದ್ಯವನ್ನ ಗೆಲ್ತು.

Kishor KV

Leave a Reply

Your email address will not be published. Required fields are marked *