ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಹುದ್ದೆಗೆ ಬ್ರೆಂಡನ್ ಮೆಕಲಮ್ ರಾಜೀನಾಮೆ – ENG ಕೋಚ್ ಆಗ್ತಾರಾ ರಾಹುಲ್ ದ್ರಾವಿಡ್?

ನ್ಯೂಜಿಲೆಂಡ್ನ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕಲಮ್ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 2012 ರಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಹುದ್ದೆಗೇರಿದ್ದ ಮೆಕಲಮ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದರು. ಟೆಸ್ಟ್ ಕ್ರಿಕೆಟ್ಗೂ ಹೊಡಿಬಡಿ ಆಟವನ್ನು ಪರಿಚಯಿಸಿದ್ದ ಮೆಕಲಮ್ ತಮ್ಮ ಹದಿನಾಲ್ಕು ವರ್ಷದ ಪಯಣಕ್ಕೆ ಮೆಕಲಮ್ ಅಂತ್ಯ ಹಾಡಿದ್ದಾರೆ.
ಕೋಚ್ ಆಗಿ ಹೆಚ್ಚು ಅನುಭವವಿಲ್ಲದಿದ್ದರೂ ಮೆಕಲಮ್‌ಗೆ 2012 ರಲ್ಲಿ ಕ್ರಿಸ್ ಸಿಲ್ವರ್‌ವುಡ್ ಅವರಿಂದ ತೆರವಾದ ಹುದ್ದೆಯನ್ನು ಮೆಕಲಮ್ ವಹಿಸಿಕೊಂಡರು. ಮೆಕಲಮ್ ಅವರ ಆಕ್ರಮಣಕಾರಿ ವಿಧಾನ ಇಂಗ್ಲೆಂಡ್ ತಂಡದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿತು. ಹೀಗಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡದ ಆಟದ ಶೈಲಿಯನ್ನು ಪರಿವರ್ತಿಸಿದ ಕೀರ್ತಿ ಮೆಕಲಮ್‌ಗೆ ಸಲ್ಲುತ್ತದೆ.
ಇದನ್ನೂ ಓದಿ: T-20I ಸೋಲಿಗೆ ODIನಲ್ಲಿ ಸೇಡು – ಆಂಗ್ಲರಿಗೆ ಈಗ RO-KOದ್ದೇ ಟೆನ್ಷನ್
ಆದರೆ ಆರಂಭದಲ್ಲಿ ಮೆಕಲಮ್ ಅವರ ಈ ಆಕ್ರಮಣಕಾರಿ ತಂತ್ರದಿಂದಲೇ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿಗಳನ್ನು ಗೆದ್ದುಕೊಂಡಿತು. ಆದರೆ ಆ ನಂತರ ಎದುರಾಳಿ ತಂಡಗಳು ಇಂಗ್ಲೆಂಡ್ ಆಟಗಾರರ ಸ್ಥಿರ ಆಟದ ಶೈಲಿಯನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದಾಗ, ಫಲಿತಾಂಶಗಳು ಬದಲಾಗಲು ಪ್ರಾರಂಭಿಸಿದವು. ಇದರ ಪರಿಣಾಮವಾಗಿ ಇಂಗ್ಲೆಂಡ್, ಭಾರತ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋತಿತು.
ಇಂಗ್ಲೆಂಡ್ ಕೋಚ್ ಆಗ್ತಾರಾ ಮೆಕಲಮ್
ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಮ್ ಅವರನ್ನು ಟೆಸ್ಟ್ ಕೋಚಿಂಗ್ ಹುದ್ದೆಯಿಂದ ವಜಾಗೊಳಿಸಿದ ಬೆನ್ನಲ್ಲೇ ಆ ಸ್ಥಾನಕ್ಕೆ ಯಾರು ಬರ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಮೆಕಲಮ್ ನಿರ್ಗಮನದಿಂದ ತೆರವಾಗಿರುವ ಈ ಪ್ರತಿಷ್ಠಿತ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಅವರ ಹೆಸರು ಮುಂಚೂಣಿಗೆ ಬಂದಿದೆ. ಆ್ಯಶಸ್ ಸರಣಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಶೀಘ್ರದಲ್ಲೇ ಹೊಸ ಕೋಚ್ ಹೆಸರನ್ನು ಅಂತಿಮಗೊಳಿಸಲಿದೆ.

ನೋಡಿರಿ

