ರೋಹಿತ್ ಓಪನರ್.. KL ಕೀಪರ್ – ಬೌಲಿಂಗ್ ಯುನಿಟ್ ಗೆ ಬುಮ್ರಾ ಬ್ರಹ್ಮಾಸ್ತ್ರ
ENG ಬೇಟೆಗೆ ಹೀಗಿದೆ ಪ್ಲೇಯಿಂಗ್ 11

ರೋಹಿತ್ ಓಪನರ್.. KL ಕೀಪರ್ – ಬೌಲಿಂಗ್ ಯುನಿಟ್ ಗೆ ಬುಮ್ರಾ ಬ್ರಹ್ಮಾಸ್ತ್ರENG ಬೇಟೆಗೆ ಹೀಗಿದೆ ಪ್ಲೇಯಿಂಗ್ 11

ಟೀಂ ಇಂಡಿಯಾ ಫ್ಯಾನ್ಸ್​ಗೆ ಅಸಲಿ ಕ್ರಿಕೆಟ್ ಕ್ರೇಜ್ ಈಗ ಸಿಗುತ್ತೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ನಾಳೆಯಿಂದ ಆರಂಭವಾಗಲಿದ್ದು ಹಿಟ್​ಮ್ಯಾನ್ ರೋಹಿತ್ ಶರ್ಮಾ ಹಾಗೇ ಕಿಂಗ್ ವಿರಾಟ್ ಕೊಹ್ಲಿ ಮೈದಾನಕ್ಕೆ ವಾಪಸ್ ಬರ್ತಿದ್ದಾರೆ. ಐಪಿಎಲ್ ಆದ್ಮೇಲೆ ವಿರಾಟ್​ಗೆ ಇದು ಮೊದಲ ಪಂದ್ಯ. ಇಂಜುರಿ ಕಾರಣಕ್ಕೆ ಲಾಸ್ಟ್ ಮಂತ್ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯನ್ನ ಮಿಸ್ ಮಾಡಿಕೊಂಡಿದ್ರು. ಸೋ ಕೊಹ್ಲಿ ಖದರ್ ನೋಡೋಕೆ ಫ್ಯಾನ್ಸ್ ಕೂಡ ಕಾಯ್ತಾ ಇರ್ತಾರೆ. ಌಂಡ್ ಇಂಗ್ಲೆಂಡ್ ವಿರುದ್ಧದ ಸರಣಿ ಭಾರತಕ್ಕೆ ಪ್ರತಿಷ್ಠೆಯೂ ಆಗಲಿದೆ.

ಇದನ್ನೂ ಓದಿ  : ಗಂಭೀರ್, ಶ್ರೇಯಸ್‌ಗೆ BCCI ಕ್ಲಾಸ್ – ಆಸ್ಟ್ರೇಲಿಯಾದಲ್ಲಿ ನಡೆಯಲಿದೆ IPL?

ಟೀಂ ಇಂಡಿಯಾದಲ್ಲಿ ಟಿ-20ಐ ಹಾಗೇ ಟೆಸ್ಟ್ ಮ್ಯಾಚ್​ಗಳಿಗಿಂತ ಏಕದಿನ ಪಂದ್ಯಗಳಂದ್ರೆ ತುಂಬಾನೇ ಸ್ಪೆಷಲ್. ಯಾಕಂದ್ರೆ ರೋಕೋ ಜೋಡಿಯ ಮೋಡಿ ನೋಡೋಕೆ ಕಾಯ್ತಾ ಇರ್ತಾರೆ. ಅವ್ರಿಬ್ಬರು ಮೈದಾನದಲ್ಲಿ ಆಡ್ತಿದ್ದಾರೆ ಅನ್ನೋದ್ರ ಮಜನಾ ಬೇರೆ. ಇನ್ನೇನು ನಿವೃತ್ತಿ ಹೊಸ್ತಿಲಲ್ಲಿಯೋ ಈ ಲೆಜೆಂಡರ್​ಗಳ ಪ್ರತೀ ಪಂದ್ಯಗಳ ಪ್ರತೀ ಮೂಮೆಂಟ್​ನೂ ಎಂಜಾಯ್ ಮಾಡ್ಬೇಕಿದೆ. ನಾಳೆಯಿಂದ ಕ್ರಿಕೆಟ್ ಜನಕರ ನಾಡಿನಲ್ಲಿ ಹೊಸ ಸಮರ ಆರಂಭವಾಗಲಿದೆ.

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಸಮರ ನಾಳೆಯಿಂದ ಆರಂಭ!

ಇಂಗ್ಲೆಂಡ್ ವಿರುದ್ಧ ಟಿ-20ಐ ಸರಣಿ ಸೋತಿರೋ ಭಾರತ ನಾಳೆಯಿಂದ ಏಕದಿನ ಸರಣಿ ಆಡಲಿದೆ. ಟಿ-20ಐ ಸರಣಿ ಸೋಲಿಗೆ ಪ್ರತೀಕಾರಕ್ಕಾಗಿ ಭಾರತ ಕಾಯ್ತಾ ಇದ್ರೆ ಅತ್ತ ಆಂಗ್ಲರು ಓಡಿಐ ಸರಣಿಯನ್ನೂ ಗೆಲ್ಲೋ ಕಾನ್ಫಿಡೆನ್ಸ್​ನಲ್ಲಿದ್ದಾರೆ. ಈ ಸರಣಿಗಾಗಿ ಟೀಂ ಇಂಡಿಯಾ ಸ್ಕ್ವಾಡ್​ನಲ್ಲಿ ಸಾಕಷ್ಟು ಚೇಂಜಸ್ ಕೂಡ ಇರಲಿದೆ.  ಌಂಡ್ ಈ ಸರಣಿ ರೋಕೋ ಪಾಲಿಗೂ ತುಂಬಾನೇ ಮುಖ್ಯವಾಗಲಿದೆ. ಌಂಡ್ ಸರಣಿ ಆರಂಭಕ್ಕೂ ಮುನ್ನ ತಂಡದಲ್ಲಿ ಸಾಕಷ್ಟು ಬದಲಾವಣೆಗಳೂ ಆಗಿವೆ. ಏಕದಿನ ಸರಣಿಗೆ ಆಯ್ಕೆಯಾಗಿದ್ದ ಹರ್ಷಿತ್ ರಾಣಾ ಇಂಜುರಿಯಿಂದಾಗಿ ಸರಣಿಯಿಂದ ರೂಲ್ಡ್ ಔಟ್ ಆಗಿದ್ದಾರೆ. ಹೀಗಾಗಿ ಪ್ರಿನ್ಸ್ ಯಾದವ್​ ಸೆಲೆಕ್ಟ್ ಆಗಿದ್ದಾರೆ. ಪ್ರಿನ್ಸ್ ಯಾದವ್ ಅಫ್ಘಾನಿಸ್ತಾನ ವಿರುದ್ಧದ ಕೊನೆಯ ಏಕದಿನ ಸರಣಿಯ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು. ಇದಕ್ಕೂ ಮುನ್ನ ನಿತೀಶ್ ಕುಮಾರ್ ರೆಡ್ಡಿ ಕೂಡ ಇಂಜುರಿಗೆ ಒಳಗಾಗಿದ್ರಿಂದ ಶಿವಂ ದುಬೆಗೆ ರಿಪ್ಲೇಸ್ ಪ್ಲೇಯರ್ ಆಗಿ ಅವಕಾಶ ಸಿಕ್ಕಿದೆ. ಹೀಗಾಗಿ ನಾಳಿನ ಪಂದ್ಯಕ್ಕೆ ಪ್ಲೇಯಿಂಗ್ 11 ಹೇಗಿರುತ್ತೆ ಅನ್ನೋ ಕ್ಯೂರಿಯಾಸಿಟಿಯೂ ಇದೆ.

ಭಾರತದ ಸಂಭಾವ್ಯ ಪ್ಲೇಯಿಂಗ್ 11

ರೋಹಿತ್ ಶರ್ಮಾ

ಶುಭಮನ್ ಗಿಲ್

ವಿರಾಟ್ ಕೊಹ್ಲಿ

ಶ್ರೇಯಸ್ ಅಯ್ಯರ್

ಕೆಎಲ್ ರಾಹುಲ್

ಅಕ್ಷರ್ ಪಟೇಲ್

ಶಿವಂ ದುಬೆ

ಕುಲ್ದೀಪ್ ಯಾದವ್

ಜಸ್ಪ್ರೀತ್ ಬುಮ್ರಾ

ಅರ್ಶದೀಪ್ ಸಿಂಗ್

ಪ್ರಸಿದ್ಧ್ ಕೃಷ್ಣ / ಗುರ್ನೂರ್ ಬ್ರಾರ್

ಹೀಗೆ ಬಲಿಷ್ಠ ತಂಡವನ್ನೇ ಅಖಾಡಕ್ಕಿಳಿಸೋಕೆ ಟೀಂ ಇಂಡಿಯಾ ರೆಡಿಯಾಗಿದೆ. ಟಿ-20ಐಗೆ ಕಂಪೇರ್ ಮಾಡಿದ್ರೆ ಏಕದಿನ ಸರಣಿಯ ಬ್ಯಾಟಿಂಗ್ ಲೈನಪ್ ಚೆನ್ನಾಗಿದೆ. ಌಂಡ್ ಬೌಲಿಂಗ್ ಯುನಿಟ್ ಕೂಡ ಸ್ಟ್ರಾಂಗ್ ಎನ್ನಿಸಿದೆ. ಜಸ್ಪ್ರೀತ್ ಬುಮ್ರಾ ಆಡ್ತಿರೋದೇ ದೊಡ್ಡ ಸ್ಟ್ರೆಂತ್. ಹಾಗೇ ಕುಲ್ದೀಪ್ ಯಾದವ್ ಸಾಕಷ್ಟು ಎಕ್ಸ್​ಪೀರಿಯನ್ಸ್ ಇರೋ ಪ್ಲೇಯರ್. ಅರ್ಶದೀಪ್ ಸಿಂಗ್ ಕ್ವಾಲಿಟಿ ಬೌಲರ್. ಸದ್ಯಕ್ಕೆ ತಂಡ ಏನೋ ಬಲಿಷ್ಠವಾಗೇ ಕಾಣ್ತಿದೆ. ಅತ್ತ ಆಂಗ್ಲರ ಟೀಂ ಕೂಡ ಟಫ್ ಫೈಡ್ ಕೊಡೋಕೆ ಕಾಯ್ತಿದ್ದಾರೆ. ಟಿ-20ಐನಲ್ಲಿ ಕ್ಲೀನ್ ಸ್ವೀಪ್ ಮಾಡಿರೋದ್ರಿಂದ ಏಕದಿನ ಮಾದರಿಯಲ್ಲೂ ಡಾಮಿನೇಟ್ ಮೈಂಡ್​ಸೆಟ್​ನಲ್ಲೇ ಇರ್ತಾರೆ. ಆದ್ರೆ ಏಕದಿನ ಸರಣಿಯಲ್ಲಿ ಗೆಲ್ಲೋದು ಅಷ್ಟು ಈಸಿ ಇಲ್ಲ ಅನ್ನೋದು ಅವ್ರಿಗೂ ಕೂಡ ಗೊತ್ತಿರೋ ವಿಚಾರವೇ.

Shantha Kumari

Leave a Reply

Your email address will not be published. Required fields are marked *