T-20I ಸೋಲಿಗೆ ODIನಲ್ಲಿ ಸೇಡು – ಆಂಗ್ಲರಿಗೆ ಈಗ RO-KOದ್ದೇ ಟೆನ್ಷನ್
BCCIಗೆ ಮತ್ತೆ ತಲೆಬಿಸಿ ಕಾದಿದ್ಯಾ?

T-20I ಸೋಲಿಗೆ ODIನಲ್ಲಿ ಸೇಡು – ಆಂಗ್ಲರಿಗೆ ಈಗ RO-KOದ್ದೇ ಟೆನ್ಷನ್BCCIಗೆ ಮತ್ತೆ ತಲೆಬಿಸಿ ಕಾದಿದ್ಯಾ?

ಇಂಗ್ಲೆಂಡ್ t20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಆಗಿರೋ ಭಾರತಕ್ಕೆ ನಾಳೆಯಿಂದ ಏಕದಿನ ಸರಣಿ ಸ್ಟಾರ್ಟ್ ಆಗಲಿದೆ. ಅಟ್ ಲೀಸ್ಟ್ ಇಲ್ಲದ್ರೂ ಗೆದ್ದು ಮರ್ಯಾದೆ ಉಳಿಸಿಕೊಳ್ಬೇಕು. ಅಂಡ್ ಟೀಂ ಇಂಡಿಯದಲ್ಲಿ ರೋಹಿತ್ ಮತ್ತು ಕೊಹ್ಲಿ ಇದ್ದಾರೆ. ಸೋ ಈಗ ಅಸಲಿ ಫೈಟ್ ಇರುತ್ತೆ.

ಇದನ್ನೂ ಓದಿ : ರಜತ್ ಬೇಕಾಗಿಲ್ಲ.. ರಸಿಕ್ ನೂ ಆಡ್ಸಲ್ಲ – BCCIಗೆ RCB ಪ್ಲೇಯರ್ಸ್ ಬೇಕಾಗಿಲ್ವಾ?

ಸತತ 7 ಮ್ಯಾಚ್ ನಲ್ಲಿ ಟಾಸ್ ಗೆದ್ರೂ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಭಾರತ ಟಿ-20ಐ ತಂಡ ಒಂದೇ ಒಂದು ಮ್ಯಾಚ್ ಗೆಲ್ಲೋಕೆ ಆಗ್ಲಿಲ್ಲ. ಇಂಗ್ಲೆಂಡ್ ನಲ್ಲಂತೂ ನಾಲ್ಕೂ ಪಂದ್ಯಗಳಲ್ಲಂತೂ ಹೀನಾಯವಾಗಿ ಸೋತಿದ್ದಾರೆ. ಈಗ ಶುಭಮನ್ ಗಿಲ್ ನಾಯಕತ್ವದಲ್ಲಿ ನಾಳೆಯಿಂದ ಏಕದಿನ ಸರಣಿ ನಡೆಯಲಿದೆ. ಮೂರು ಪಂದ್ಯಗಳ ಸರಣಿಯು ಜುಲೈ 14ರಂದು ಆರಂಭವಾಗಲಿದೆ. ಮೊದಲ ಪಂದ್ಯ ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದ್ದು, ಎರಡನೇ ಏಕದಿನ ಪಂದ್ಯ ಜುಲೈ 16ರಂದು ಕಾರ್ಡಿಫ್‌ನ ಸೋಫಿಯಾ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಜುಲೈ 19ರಂದು ನಡೆಯಲಿರುವ ಲಾರ್ಡ್ಸ್ ಏಕದಿನ ಪಂದ್ಯದೊಂದಿಗೆ ಮುಕ್ತಾಯಗೊಳ್ಳಲಿದೆ. T-20i ಗೆ ಕಂಪೇರ್ ಮಾಡಿದ್ರೆ ಈ ಸೀರೀಸ್ ಸ್ವಲ್ಪ ಡಿಫ್ರೆಂಟ್ ಹಾಗೆ ಸ್ಪೆಷಲ್.

ಸೇಡಿನ ಸರಣಿ!

T20i ನಲ್ಲಿ ಕ್ಲೀನ್ ಸ್ವೀಪ್ ಆಗಿರೋದ್ರಿಂದ ಗೆದ್ದು ಸೇಡು

ರೋಹಿತ್, ಕೊಹ್ಲಿ, ರಾಹುಲ್ ರಂತ ಅನುಭವಿ ಆಟಗಾರರು

2027 ಏಕದಿನ ವಿಶ್ವಕಪ್ ಹಿನ್ನೆಲೆ ಒಂದೊಂದು ಗೆಲುವು ಮುಖ್ಯ

ತಂಡದ ಪ್ರದರ್ಶನದ ಬಗ್ಗೆ ಬಿಸಿಸಿಐ ಗೆ ಕ್ಲಾರಿಟಿ

ಇಂಗ್ಲೆಂಡ್ ವಿರುದ್ಧದ ಮುಂಬರುವ ODI ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮಹತ್ವದ ಬ್ಯಾಟಿಂಗ್ ಮೈಲಿಗಲ್ಲುಗಳನ್ನು ತಲುಪುವ ಸನಿಹದಲ್ಲಿದ್ದಾರೆ. ಗಾಯದಿಂದ ಚೇತರಿಸಿಕೊಂಡು ಮರಳಿರುವ ಕೊಹ್ಲಿ 15,000 ODI ರನ್‌ಗಳನ್ನು ಪೂರೈಸಲು 203 ರನ್ ಬೇಕಿದೆ. ರೋಹಿತ್ 12,000 ODI ರನ್‌ಗಳ ಗುರಿಯಲ್ಲಿದ್ದಾರೆ. ಈ ಸರಣಿಯು ಈ ಕ್ರಿಕೆಟ್ ದಿಗ್ಗಜರಿಂದ ಹೊಸ ದಾಖಲೆಗಳಿಗೆ ಸಾಕ್ಷಿಯಾಗಲಿದೆ. ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ ಆಡಿದ 463 ಏಕದಿನ ಪಂದ್ಯಗಳಲ್ಲಿ 18426 ರನ್ ಕಲೆಹಾಕಿದ್ದಾರೆ. ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದು, ಕುಮಾರ ಸಂಗಕ್ಕಾರ ಮೂರನೇ ಸ್ಥಾನದಲ್ಲಿದ್ದಾರೆ. ಪ್ರಸ್ತುತ 8ನೇ ಸ್ಥಾನದಲ್ಲಿರುವ ರೋಹಿತ್ 280 ರನ್ ಬಾರಿಸಿದರೆ, 7ನೇ ಸ್ಥಾನಕ್ಕೆ ಜಿಗಿಯಲಿದ್ದಾರೆ. ಹೀಗೆ ವೈಯಕ್ತಿಕ ದಾಖಲೆಗಳ ಜೊತೆಗೆ ಈ ಸರಣಿಯಲ್ಲಿ ರನ್ಸ್ ಗಳಿಸೋದು ಈ ಇಬ್ಬರು ಲೆಜೆಂಡರ್ಸ್ ಗೆ ತುಂಬಾನೇ ಮುಖ್ಯವಾಗಲಿದೆ.

Shantha Kumari

Leave a Reply

Your email address will not be published. Required fields are marked *