ಅಮೆರಿಕದಲ್ಲಿ ಐಡ್ರಾಪ್ಸ್ ಬಳಸಿ ವ್ಯಕ್ತಿ ಸಾವು? – ಉತ್ಪನ್ನ ಸ್ಥಗಿತಗೊಳಿಸಿದ ಚೆನ್ನೈ ಮೂಲದ ಕಂಪನಿ

ಅಮೆರಿಕದಲ್ಲಿ ಐಡ್ರಾಪ್ಸ್ ಬಳಸಿ ವ್ಯಕ್ತಿ ಸಾವು? – ಉತ್ಪನ್ನ ಸ್ಥಗಿತಗೊಳಿಸಿದ ಚೆನ್ನೈ ಮೂಲದ ಕಂಪನಿ

ನವದೆಹಲಿ: ಚೆನ್ನೈ ಮೂಲದ ಐ ಡ್ರಾಪ್ಸ್ ನಿಂದಾಗಿ ಅಮೆರಿಕದಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಅಲ್ಲದೇ ಈ ಐ ಡ್ರಾಪ್ಸ್ ಬಳಸಿ ಐವರು ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಅಮೆರಿಕದ ಆರೋಗ್ಯ ರಕ್ಷಣಾ ಸಂಸ್ಥೆ ಆರೋಪಿಸಿದೆ. ಇದರ ಬೆನ್ನಲ್ಲೇ ಐ ಡ್ರಾಪ್ಸ್  ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ: ಎಂಕ್ಯೂ – 9 ಡ್ರೋನ್ ಖರೀದಿಗೆ ಭಾರತ ಮತ್ತು ಅಮೆರಿಕ ನಡುವೆ ಒಪ್ಪಂದ

ಈ ಐ ಡ್ರಾಪ್ಸ್  ಬ್ಯಾಕ್ಟೀರಿಯಾದಿಂದ ಕಲುಷಿತವಾಗಿರಬಹುದು. ಇದರಿಂದಾಗಿ ಶಾಶ್ವತವಾಗಿ ಕುರುಡುತನ ಆವರಿಸುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಚೆನ್ನೈ ಮೂಲದ ಕಂಪನಿ ಗ್ಲೋಬಲ್‌ ಫಾರ್ಮಾ ಹೆಲ್ತ್‌ಕೇರ್‌ ತಾನು ತಯಾರಿಸಿದ್ದ “ಎಝಿಕೇರ್‌’  ಐ ಡ್ರಾಪ್ಸ್‌ಗಳನ್ನು ಅಮೆರಿಕದಿಂದ ಪೂರ್ಣ ಪ್ರಮಾಣದಲ್ಲಿ ವಾಪಸ್‌ ತರಿಸಿಕೊಂಡಿದೆ. ಈ ಔಷಧಗಳನ್ನು ಅಮೆರಿಕದ ಸಿಡಿಸಿ (ರೋಗನಿಯತ್ರಣ ಮತ್ತು ತಡೆ ಸಂಸ್ಥೆ) ಪರೀಕ್ಷೆಗೊಳಪಡಿಸುತ್ತಿದೆ. ಮತ್ತೊಂದು ಕಡೆ ಆ ದೇಶದ ಆಹಾರ ಮತ್ತು ಔಷಧ ನಿರ್ವಹಣೆ ಸಂಸ್ಥೆ (ಎಫ್ಡಿಎ), ಗ್ಲೋಬಲ್‌ ಫಾರ್ಮಾದ ಔಷಧ ಬಳಸದಂತೆ ಆದೇಶ ನೀಡಿದೆ. ಈ ಡ್ರಾಪ್ಸ್‌ಗಳು ಬ್ಯಾಕ್ಟೀರಿಯದಿಂದ ಹಾಳಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಪ್ರಸ್ತುತ ಅಮೆರಿಕದ 12 ರಾಜ್ಯಗಳಲ್ಲಿ 55 ಮಂದಿಗೆ ಸೂಡಮೊನಾಸ್‌ ಅರಿಗೊನಾಸ ಬ್ಯಾಕ್ಟೀರಿಯದಿಂದ ಸೋಂಕು ಉಂಟಾಗಿದೆ. ಈ ಬ್ಯಾಕ್ಟೀರಿಯ ರಕ್ತ, ಶ್ವಾಸಕೋಶದಲ್ಲಿ ಸೋಂಕು ಉಂಟು ಮಾಡುತ್ತದೆ. ಗಾಯಕ್ಕೂ ಕಾರಣವಾಗುತ್ತದೆ. ಇದಕ್ಕೆ ಚಿಕಿತ್ಸೆ ನೀಡಲೂ ಆಗುತ್ತಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.

suddiyaana