ಸಾಲ ತೀರಿಸುವಂತೆ ಗಂಡನ ಮನೆಯವರಿಂದ ಕಿರುಕುಳ – 3 ವರ್ಷದ ಮಗು ಜೊತೆ ಪ್ರಾಣ ಬಿಟ್ಟ ತಾಯಿ

ಸಾಲ ತೀರಿಸುವಂತೆ ಗಂಡನ ಮನೆಯವರಿಂದ ಕಿರುಕುಳ – 3 ವರ್ಷದ ಮಗು ಜೊತೆ ಪ್ರಾಣ ಬಿಟ್ಟ ತಾಯಿ

ಗಂಡನ ಮನೆಯವರ  ಕಾಟಕ್ಕೆ  ಬೇಸತ್ತು ತಾಯಿ, ತನ್ನ ಮೂರು ವರ್ಷದ ಮಗನೊಂದಿಗೆ ಪ್ರಾಣ ಬಿಟ್ಟ ಘಟನೆ ಬೆಳಗಾವಿಯಲ್ಲಿ ನಡೆದಿದೆ.  ಪೀರನವಾಡಿ ಪಾಟೀಲ್ ಗಲ್ಲಿ ನಿವಾಸಿಗಳಾದ ಪ್ರೇಮಾ ನಾಗೇಶ ತಳವಾರ (28) ಹಾಗೂ ಮೂರು ವರ್ಷದ ಮಗು ಭುವನ್ ಮೃತರು.

ಇದನ್ನೂ ಓದಿ: ಮನೆಯಲ್ಲಿ ಹೆಂಡ್ತಿ , ಹೊಲದಲ್ಲಿ ಗಂಡ ಆತ್ಮಹ*ತ್ಯೆ – ಸಾವಿನ ಮನೆ ಸೇರಿದ ನಾಲ್ಕು ತಿಂಗಳ ಹಿಂದೆ ಮದುವೆಯಾದ ನವಜೋಡಿ

ಗಂಡನ‌ ಮನೆಯವರು ಸಾಲ ಮಾಡಿದ್ರು. ಆ  ಸಾಲ ತುಂಬುವಂತೆ ಮಾನಸಿಕ ಕಿರುಕುಳ ನೀಡಿದ್ದರಿಂದ ಪ್ರೇಮಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅನ್ನೋ ಆರೋಪ ಕೇಳಿ ಬಂದಿದೆ.   ಅತ್ತೆ, ಗಂಡ, ಮೈದುನ, ನೆಗ್ಯಾನಿ ಸೇರಿ 6 ಜನರಿಂದ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತು ಮಗಳು ತನ್ನ ಮಗುವಿನೊಂದಿಗೆ ಆತ್ಮಹತ್ಯೆಯ ದಾರಿ ಹಿಡಿದಿದ್ದಾಳೆ ಅಂತಾ ಪ್ರೇಮಾ ತವರು ಮನೆಯವರು ಆರೋಪಿಸಿದ್ದಾರೆ.

ಅತ್ತೆ ಸುಶೀಲಾ ತಳವಾರ, ಗಂಡ ನಾಗೇಶ ತಳವಾರ, ಮೈದುನ ಪರಶುರಾಮ ತಳವಾರ, ನೆಗ್ಯಾನಿ ಸಂಗೀತಾ ತಳವಾರ, ಮರೇವ್ವಾ ತಳವಾರ, ಶಾರದಾ ಕಲಕಾಂವಕರ ಎಂಬವರ ವಿರುದ್ಧ ಪ್ರೇಮಾ ಕುಟುಂಬಸ್ಥರು ಬೆಳಗಾವಿ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸದ್ಯ ತಾಯಿ-ಮಗನ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಬಿಮ್ಸ್ (BIMS) ಆಸ್ಪತ್ರೆಗೆ ರವಾನಿಸಲಾಗಿದ್ದು, ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Kishor KV