ಸ್ವಿಜರ್ಲೆಂಡ್ ಮಣಿಸಿ ಫಿಫಾ ಸೆಮಿಫೈನಲ್‌ಗೆ ಎಂಟ್ರಿಕೊಟ್ಟ ಅರ್ಜೆಂಟೀನಾ

ಸ್ವಿಜರ್ಲೆಂಡ್ ಮಣಿಸಿ ಫಿಫಾ ಸೆಮಿಫೈನಲ್‌ಗೆ ಎಂಟ್ರಿಕೊಟ್ಟ ಅರ್ಜೆಂಟೀನಾ

ಹಾಲಿ ಚಾಂಪಿಯನ್‌ ಅರ್ಜೆಂಟೀನಾ ಈ ಬಾರಿ ಫಿಫಾ ವಿಶ್ವಕಪ್‌ ಸೆಮಿಫೈನಲ್‌ಗೆ ಎಂಟ್ರಿಕೊಟ್ಟಿದೆ.  ಸ್ವಿಜರ್‌ಲೆಂಡ್‌ ವಿರುದ್ಧ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಲಿಯೋನಲ್‌ ಮೆಸ್ಸಿ ಪಡೆ 3-1 ಗೋಲಿನ ಅಂತರದಲ್ಲಿ ಜಯಭೇರಿ ಬಾರಿಸಿದೆ.

ಸ್ವಿಜರ್‌ಲೆಂಡ್‌ ವಿರುದ್ಧ ಪಂದ್ಯದಲ್ಲಿ ಅರ್ಜೆಂಟೀನಾದ ಗೆಲುವು ಸುಲಭವಾಗಬಹುದು ಎಂದು ಹಲವರು ಅಂದಾಜಿಸಿದ್ದರು. ಆದರೆ ತಂಡಕ್ಕೆ ಸತತ 2ನೇ ಪಂದ್ಯದಲ್ಲೂ ಕಠಿಣ ಸವಾಲು ಎದುರಾಯಿತು. ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಈಜಿಪ್ಟ್‌ ವಿರುದ್ಧ 14 ನಿಮಿಷಗಳಲ್ಲಿ 3 ಗೋಲು ಹೊಡೆದು ಗೆದ್ದಿದ್ದ ಪಡೆ, ಸ್ವಿಜರ್‌ಲೆಂಡ್‌ ವಿರುದ್ಧ ಗೆಲ್ಲಲು ಹೆಚ್ಚು ಟೈಂ ಬೇಕಾಯ್ತು.

ಇದನ್ನೂ ಓದಿ: RCB ವೆಂಕಿ ಹೊಸ ಇನ್ನಿಂಗ್ಸ್‌.. ಕ್ರಿಕೆಟರ್‌ ಈಗ ಡಾ. ವೆಂಕಟೇಶ್‌ ಅಯ್ಯರ್‌! – ರಿಯಲ್ ನಲ್ಲೂ ವೆಂಕಿ ALL ROUNDER!   

10ನೇ ನಿಮಿಷದಲ್ಲೇ ಅಲೆಕ್ಸಿಸ್‌ ಮ್ಯಾಕ್ ಅಲಿಸ್ಟರ್‌ ಹೊಡೆದ ಗೋಲು ಅರ್ಜೆಂಟೀನಾಗೆ ಮುನ್ನಡೆ ಒದಗಿಸಿತು. ಆದರೆ 67ನೇ ನಿಮಿಷದಲ್ಲಿ ಡ್ಯಾನ್‌ ಎನ್‌ಡೊಯೆ ಗೋಲು ಬಾರಿಸಿ ಸ್ವಿಜರ್‌ಲೆಂಡ್‌ ಸಮಬಲಕ್ಕೆ ಕಾರಣರಾದರು. ಬಳಿಕ ನಿಗದಿತ ಅವಧಿ ಕೊನೆಗೊಳ್ಳುವವರೆಗೂ ಉಭಯ ತಂಡಗಳು ಗೋಲು ದಾಖಲಿಸಲಿಲ್ಲ. ಹೀಗಾಗಿ ಹೆಚ್ಚುವರಿ 30 ನಿಮಿಷ ನೀಡಲಾಯಿತು. 112ನೇ ನಿಮಿಷದಲ್ಲಿ ಜೂಲಿಯನ್‌ ಆಲ್ವರೆಜ್‌ ಗೋಲು ದಾಖಲಿಸಿ ತಂಡದ ಗೆಲುವಿನ ಆಸೆಯನ್ನು ಚಿಗುರಿಸಿದರು. 120 ನಿಮಿಷದ ಆಟ ಮುಕ್ತಾಯಗೊಂಡು, ಇಂಜುರಿ ಸಮಯ ನೀಡಿದಾಗ ಅರ್ಜೆಂಟೀನಾ ಮತ್ತೊಂದು ಗೋಲು ಹೊಡೆಯಿತು. 121ನೇ ನಿಮಿಷದಲ್ಲಿ ಲಾಟರೊ ಮಾರ್ಟಿನೆಜ್‌ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿ ತಂಡವನ್ನು ಸೆಮಿಫೈನಲ್‌ಗೇರಿಸಿದರು.

ಮೆಸ್ಸಿ ಹಾಗೂ ಎಂಬಾಪೆ ಈ ಬಾರಿ ತಲಾ 10+ ಗೋಲು ಕೊಡುಗೆ(ಗೋಲು ಮತ್ತು ಅಸಿಸ್ಟ್ ಸೇರಿ) ನೀಡಿದ್ದಾರೆ. ಇವರಿಬ್ಬರು ಕಳೆದ ವಿಶ್ವಕಪ್‌ನಲ್ಲೂ ಈ ಸಾಧನೆ ಮಾಡಿದ್ದಾರೆ. ಕಳೆದ 60 ವರ್ಷಗಳಲ್ಲೇ ಬೇರೆ ಬೇರೆ ವಿಶ್ವಕಪ್‌ ಆವೃತ್ತಿಗಳಲ್ಲಿ ತಲಾ 10+ ಗೋಲ್‌ ಕೊಡುಗೆ ನೀಡಿದ್ದು ಇವರಿಬ್ಬರು ಮಾತ್ರ.

Kishor KV

Leave a Reply

Your email address will not be published. Required fields are marked *