ಫಟಾ ಫಟ್ ಅಂತ ಮಾಡಿ ಆರೋಗ್ಯಕರ ಹಾಗೂ ರುಚಿಕರ ರಾಗಿ ಖರ್ಜೂರ ಲಾಡು – ಮಾಡುವ ವಿಧಾನ ಒಮ್ಮೆ ನೋಡಿ

ಫಟಾ ಫಟ್ ಅಂತ ಮಾಡಿ ಆರೋಗ್ಯಕರ ಹಾಗೂ ರುಚಿಕರ ರಾಗಿ ಖರ್ಜೂರ ಲಾಡು – ಮಾಡುವ ವಿಧಾನ ಒಮ್ಮೆ ನೋಡಿ

ರಾಗಿ ತಿಂದ್ರೆ ದೇಹಕ್ಕೆ ಶಕ್ತಿ. ರಾಗಿಯಲ್ಲಿ ವಿವಿಧ ರೀತಿಯ ಆಹಾರವನ್ನ ತಯಾರಿಸಿ ತಿನ್ನಬಹುದು.  ರುಚಿಕರ ಮತ್ತು ಪೌಷ್ಟಿಕ ಆಹಾರ ಅಂದ್ರೆ ಅದು ರಾಗಿ. ಈ ರಾಗಿಯಿಂದ  ರಾಗಿ ಖರ್ಜೂರ ಲಾಡುಗಳನ್ನು ಸುಲಭವಾಗಿ ತಯಾರಿಸಬಹುದು. ಇದು ನಿಮಗೆ ರುಚಿ ಜೊತೆ ಆರೋಗ್ಯಕ್ಕೂ ಒಳ್ಳೆಯದ್ದು. ಹಾಗಿದ್ರೆ ಇದ್ದನ್ನ ತಯಾರಿಸುವುದು ಹೇಗೆ ಅನ್ನೋದ್ದನ್ನ ನೋಡೋಣ.

ರಾಗಿ ಖರ್ಜೂರದ ಲಾಡುಗೆ ಬೇಕಾಗುವ ಪದಾರ್ಥಗಳು

ಖರ್ಜೂರ

ರಾಗಿ ಹಿಟ್ಟು

ಬಿಳಿ ಎಳ್ಳು

ಬಾದಾಮಿ

ತುಪ್ಪ

ಏಲಕ್ಕಿ ಪುಡಿ

ರಾಗಿ ಖರ್ಜೂರದ ಲಾಡು ತಯಾರಿಸುವ ವಿಧಾನ

ಮೊದಲಿಗೆ, ಒಂದು ಬಾಣಲೆಯನ್ನು ಸಣ್ಣ ಉರಿಯಲ್ಲಿ ಬಿಸಿ ಮಾಡಿ. ಬಾದಾಮಿ ಮತ್ತು ಬಿಳಿ ಎಳ್ಳನ್ನು ಎಣ್ಣೆ ಸೇರಿಸದೆ, ಗರಿಗರಿಯಾಗುವವರೆಗೆ ಹುರಿಯಿರಿ

ಹುರಿದ ಪದಾರ್ಥಗಳು ತಣ್ಣಗಾದ ಮೇಲೆ, ಅವುಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ.
ಅದೇ ಬಾಣಲೆಗೆ ಎರಡು ದೊಡ್ಡ ಚಮಚ ತುಪ್ಪ ಸೇರಿಸಿ, ರಾಗಿ ಹಿಟ್ಟನ್ನು ಹಾಕಿ. ಹಿಟ್ಟಿನ ಹಸಿ ವಾಸನೆ ಸಂಪೂರ್ಣವಾಗಿ ಮಾಯವಾಗಿ, ಸುಗಂಧ ಬೀರುವವರೆಗೆ ನಿಧಾನವಾಗಿ ಹುರಿಯಿರಿ. ಹಿಟ್ಟು ಸೀದು ಹೋಗದಂತೆ ನೋಡಿಕೊಳ್ಳುವುದು ಮುಖ್ಯ. ಸರಿಯಾಗಿ ಹುರಿದ ರಾಗಿ ಹಿಟ್ಟನ್ನು ಪ್ರತ್ಯೇಕ ಪಾತ್ರೆಗೆ ವರ್ಗಾಯಿಸಿಡಿ

ಮುಂದಿನ ಹಂತದಲ್ಲಿ, ಬೀಜ ತೆಗೆದ ಖರ್ಜೂರವನ್ನು ಮಿಕ್ಸರ್ ಜಾರ್‌ಗೆ ಹಾಕಿ ಒಮ್ಮೆ ತಿರುಗಿಸಿ, ಮೆತ್ತಗಾಗುವಂತೆ ಮಾಡಿಕೊಳ್ಳಿ.

ನಂತರ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ, ಈ ಖರ್ಜೂರದ ಮಿಶ್ರಣವನ್ನು ಸುಮಾರು ಎರಡು ನಿಮಿಷಗಳ ಕಾಲ ಬಿಸಿ ಮಾಡಿ. ಹೀಗೆ ಮಾಡುವುದರಿಂದ ಖರ್ಜೂರವು ಇತರ ಪದಾರ್ಥಗಳೊಂದಿಗೆ ಸುಲಭವಾಗಿ ಬೆರೆಯಲು ಅನುಕೂಲವಾಗುತ್ತದೆ.

ಬಿಸಿಯಾದ ಖರ್ಜೂರದ ಮಿಶ್ರಣಕ್ಕೆ ಈಗಾಗಲೇ ಹುರಿದಿರಿಸಿದ ರಾಗಿ ಹಿಟ್ಟು, ಬಾದಾಮಿ ಮತ್ತು ಎಳ್ಳಿನ ಪುಡಿ, ಹಾಗೂ ರುಚಿಗೆ ತಕ್ಕಷ್ಟು ಏಲಕ್ಕಿ ಪುಡಿಯನ್ನು ಸೇರಿಸಿ.

Kishor KV