T-20I ತಂಡಕ್ಕೆ ಮೇಜರ್ ಸರ್ಜರಿ! – 2 ಸರಣಿ ಸೋಲಿಗೆ ಮೊದಲ ತಲೆದಂಡ?
ಗಂಭೀರ್ ಕುರ್ಚಿನೂ ಸೇಫ್ ಇಲ್ವಾ?

T-20I ತಂಡಕ್ಕೆ ಮೇಜರ್ ಸರ್ಜರಿ! – 2 ಸರಣಿ ಸೋಲಿಗೆ ಮೊದಲ ತಲೆದಂಡ?ಗಂಭೀರ್ ಕುರ್ಚಿನೂ ಸೇಫ್ ಇಲ್ವಾ?

ಭಾರತ ಟಿ-20ಐ ತಂಡದ ಸತತ ಸೋಲುಗಳ ಬಳಿಕ ಬಿಸಿಸಿಐ ಅಲರ್ಟ್ ಆಗಿದೆ. ಌಂಡ್ ತಂಡದಲ್ಲಿ ಮೇಜರ್ ಸರ್ಜರಿ ಮಾಡೋ ತಯಾರಿಯೂ ನಡೀತಿದೆ. ಶನಿವಾರ ಟಿ-20ಐ ಸರಣಿಯ ಕೊನೇ ಪಂದ್ಯ ನಡೆಯಲಿದ್ದು ಜುಲೈ 14ರಿಂದ ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗುತ್ತೆ. ಈ ಸರಣಿ ಮುಗಿದ್ಮೇಲೆ ಮೇಜರ್ ಡಿಸಿಷನ್ಸ್ ತೆಗೆದುಕೊಳ್ಳೋದು ಪಕ್ಕಾ ಆಗಿದೆ. ಹಾಗೇ ತಲೆದಂಡಕ್ಕೂ ಸಿದ್ಧತೆಗಳು ನಡೆದಿದೆ.

ಇದನ್ನೂ ಓದಿ : ಧಿಮಾಕು ಬಿಡ್ತಾರಾ ಗೌತಮ್ ಗಂಭೀರ್? – FAVORISM ಬಿಟ್ರಷ್ಟೇ ಭವಿಷ್ಯ!

ಕಳೆದ ಎರಡು ದಶಕಗಳಿಂದ ಕ್ರಿಕೆಟ್ ಅಂತಾ ಬಂದಾಗ ಭಾರತ ಡಾಮಿನೇಟಿಂಗ್ ಟೀಂ ಅನ್ನೋದು ಎಲ್ರಿಗೂ ಗೊತ್ತಿರೋದೇ. ಅದ್ರಲ್ಲೂ ಟಿ-20ಐ ಫಾರ್ಮೆಟ್​ನಲ್ಲಿ ಯಾರೂ ಟಚ್ ಮಾಡೋಕೂ ಆಗಲ್ಲ ಅನ್ನೋ ಥರ ಟ್ರೆಂಡ್ ಸೆಟ್ ಮಾಡಿದ್ರು. ಅದರೆ ಕಳೆದ ಎರಡೂವರೆ ವರ್ಷಗಳಿಂದ ಕಟ್ಟಿದ್ದ ಈ ಅಜೇಯ ಸಾಮ್ರಾಜ್ಯ ಕುಸಿಯೋಕೆ ಸ್ಟಾರ್ಟ್ ಆಗಿದೆ. ಐರ್ಲೆಂಡ್​ನಂಥ ಶಿಶು ಎದುರು, ಯಾವತ್ತೂ ಗೆಲ್ಲದ ಇಂಗ್ಲೆಂಡ್ ಎದುರು ಸೋತು ಸುಣ್ಣವಾಗಿದ್ದಾರೆ. ಭಾರತ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮತ್ತಷ್ಟು ಡ್ಯಾಮೇಜ್ ಆಗುತ್ತೆ. ಇದಕ್ಕೆಲ್ಲಾ ಸಲ್ಯೂಷನ್ ಹುಡುಕೋಕೆ ಬಿಸಿಸಿಐ ಮುಂದಾಗಿದೆ.

ಐರಿಷ್ ಮತ್ತು ಇಂಗ್ಲೆಂಡ್ ವಿರುದ್ಧದ ಸೋಲಿಗೆ ಪರಿಶೀಲನಾ ಸಭೆ!

ಶ್ರೇಯಸ್ ಕ್ಯಾಪ್ಟನ್ಸಿಯಲ್ಲಿ ಭಾರತ ತಂಡದ ಹೀನಾಯ ಪ್ರದರ್ಶನಕ್ಕೆ ಬಿಸಿಸಿಐ ತಲೆಬಿಸಿಯಾಗಿದೆ. ಈಗಲೇ ಇದಕ್ಕೆಲ್ಲಾ ಬ್ರೇಕ್ ಹಾಕದೇ ಇದ್ರೆ ಮುಂದಿನ ದಿನಗಳಲ್ಲಿ ಬಲಿಷ್ಠ ಭಾರತವೂ ವೀಕ್ ಆಗಿಬಿಡುತ್ತೆ. ಅದ್ರಲ್ಲೂ ಫೈನಾನ್ಶಿಯಲಿ ದೊಡ್ಡ ಹೊಡೆತ. ಹೀಗಾಗಿ ಬಿಸಿಸಿಐ ಮ್ಯಾನೇಜ್​ಮೆಂಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರೊಂದಿಗೆ ಪರಿಶೀಲನಾ ಸಭೆ ನಡೆಸಲು ಮುಂದಾಗಿದ್ದಾರೆ. ಏಕದಿನ ಸರಣಿಯೂ ಮುಗಿದ ಬಳಿಕ ಸಭೆಗೆ ನಿರ್ಧಾರ ಮಾಡಿರೋದಾಗಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ. ಸಭೆಯಲ್ಲಿ ಏನೆಲ್ಲಾ ಸಮಸ್ಯೆಗಳಿದೆ. ಎಲ್ಲಿ ಎಡವಟ್ಟಾಗ್ತಿದೆ.. ಏನೆಲ್ಲಾ ಚೇಂಜಸ್ ಆಗ್ಬೇಕು ಅನ್ನೋದನ್ನ ಕುರಿತು ಎಲ್ಲರ ಸಲಹೆಗಳನ್ನ ಪಡೆಯಲಿದ್ದಾರೆ. ಅದಕ್ಕೆ ಉತ್ತರಗಳನ್ನೂ ಅಲ್ಲಿಯೇ ಕಂಡುಕೊಳ್ಳಲಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಹಾಗೇ ಆಲ್​ರೌಂಡರ್ ಗಳ ನಡುವೆ ಆಯ್ಕೆಯಾಗಿರೋ ಆಟಗಾರರ ಪ್ರದರ್ಶನಗಳ ಬಗ್ಗೆಯೂ ಚರ್ಚೆ ನಡೆಯಲಿದ್ದು ಅವ್ರನ್ನ ಮುಂದಿನ ಪಂದ್ಯಗಳಿಗೆ ಕಂಟಿನ್ಯೂ ಮಾಡ್ಬೇಕಾ ಅಥವಾ ಬೇರೆ ಯಾರನ್ನ ಸೆಲೆಕ್ಟ್ ಮಾಡ್ಬೋದು ಅನ್ನೋದರ ಬಗ್ಗೆಯೂ ಸಜೇಷನ್ ಪಡೆಯಲಿದ್ದಾರೆ. ಜಿಂಬಾಬ್ವೆ ಸರಣಿಯ ನಂತರ ಒಂದಷ್ಟು ಬದಲಾವಣೆಗೊಂದಿಗೆ ಬಲಿಷ್ಠ ತಂಡವನ್ನ ಕಟ್ಟೋಕೆ ಪ್ಲ್ಯಾನ್ ರೆಡಿಯಾಗಿದೆ. ಇದ್ರ ಜೊತೆಗೆ ಕೋಚಿಂಗ್ ಸ್ಟಾಫ್​ಗಳ ತಲೆದಂಡಕ್ಕೂ ತಯಾರಿ ನಡೆದಿದೆ.

ಗಂಭೀರ್ ಅವ್ರ ಕೋಚಿಂಗ್ ಸ್ಟಾಫ್ ಪೈಕಿ ಒಬ್ಬರ ತಲೆದಂಡ!

ಐರ್ಲೆಂಡ್ ವಿರುದ್ಧದ ಸೋಲು, ಇಂಗ್ಲೆಂಡ್ ವಿರುದ್ಧದ ಸೋಲು ಭಾರತಕ್ಕೆ ಎಂದೂ ಮಾಸದ ಬರೆ ಎಳೆದಿದೆ. ದಶಕಗಳ ಕಾಲ ಕಟ್ಟಿದ್ದ ಅಜೇಯ ವಿಜಯಯಾತ್ರೆಯನ್ನೇ ಮುಗಿಸಿದೆ. ಹೀಗಾಗಿ ಕೋಚಿಂಗ್ ಸ್ಟಾಫ್ಸ್​​ ವಿಭಾಗದಲ್ಲಿ ಸರ್ಜರಿಗೆ ಸಿದ್ಧತೆಗಳು ನಡೆದಿದೆ. ಅಂದ್ರೆ ಭಾರತ ತಂಡದ ಕೋಚಿಂಗ್ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಬಿಸಿಸಿಐ ಮುಂದಾಗಿದೆ. ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರ ಸಪೋರ್ಟ್ ಸ್ಟಾಫ್ ಪೈಕಿ ಕನಿಷ್ಠ ಒಬ್ಬರು ತಂಡದಿಂದ ಹೊರಬೀಳಲಿದ್ದಾರೆ. ಜುಲೈ 19ಕ್ಕೆ ಏಕದಿನ ಸರಣಿ ಮುಗಿಯುತ್ತೆ. ಈ ಸರಣಿ ಮುಗಿದ ಬೆನ್ನಲ್ಲೇ ಬಿಸಿಸಿಐ ಪರಿಶೀಲನಾ ಸಭೆ ನಡೆಸಲಿದೆ. ಸಭೆಯ ಬಳಿಕ ಕೋಚಿಂಗ್ ಸಿಬ್ಬಂದಿಯನ್ನು ಕೈ ಬಿಡುವ ಬಗ್ಗೆ ನಿರ್ಧಾರ ಘೋಷಿಸಬಹುದು. ಅಲ್ದೇ ತಾಂತ್ರಿಕ ಮತ್ತು ತಂತ್ರಗಾರಿಕೆಯ ಬಗ್ಗೆ ಕೋಚಿಂಗ್ ಸಿಬ್ಬಂದಿ ನಡುವೆಯೇ ಭಿನ್ನಾಭಿಪ್ರಾಯಳಿವೆ. ಇದೇ ಕಾರಣಕ್ಕೆ ಬದಲಾವಣೆಗೆ ಮುಂದಾಗಿದ್ದಾರೆ. 2024ರಲ್ಲಿ ಗೌತಮ್ ಗಂಭೀರ್ ಜೊತೆಗೆ 2+1 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದ ಸಪೋರ್ಟ್ ಸ್ಟಾಫ್ ಪೈಕಿ ಪ್ರಮುಖ ಕೋಚ್ ಒಬ್ಬರು ಹೊರಬರೋದು ಪಕ್ಕಾ ಇದೆ.

ಭಾರತ ತಂಡದ ಕೋಚಿಂಗ್ ಸ್ಟಾಫ್!

ಟೀಮ್ ಇಂಡಿಯಾ ಕೋಚಿಂಗ್ ಸಿಬ್ಬಂದಿಗಳು:

ಗೌತಮ್ ಗಂಭೀರ್ – ಮುಖ್ಯ ಕೋಚ್

ರಿಯಾನ್ ಟೆನ್ ಡೊಶ್ಚಾಟೆ – ಸಹಾಯಕ ಕೋಚ್

ಮೋರ್ನೆ ಮೋರ್ಕೆಲ್ –  ವೇಗದ ಬೌಲಿಂಗ್ ಕೋಚ್

ಸಾಯಿರಾಜ್ ಬಹುತುಲೆ –  ಸ್ಪಿನ್ ಬೌಲಿಂಗ್ ಕೋಚ್

ಸಿತಾಂಶು ಕೋಟಕ್ – ಬ್ಯಾಟಿಂಗ್ ಕೋಚ್

ಟಿ. ದಿಲೀಪ್ – ಫೀಲ್ಡಿಂಗ್ ಕೋಚ್

ಇವ್ರ ಪೈಕಿ ಒಬ್ಬರನ್ನ ಬದಲಾವಣೆ ಮಾಡೋದು ಪಕ್ಕಾ ಆಗಿದೆ. ಸದ್ಯದ ಡವಲಪ್​ಮೆಂಟ್ಸ್ ಪ್ರಕಾರ ರಿಯಾನ್ ಅವ್ರ ಕೈಬಿಡೋ ಬಗ್ಗೆ ಸುದ್ದಿಯಾಗ್ತಿದೆ. ಯಾಕಂದ್ರೆ ಇತ್ತೀಚೆಗೆ ತಂಡದ ಪ್ರದರ್ಶನದ ಬಗ್ಗೆ ಇವ್ರು ಮಾತನಾಡಿದ್ರು. ಹೌದು ಐಪಿಎಲ್​ನಲ್ಲಿ ರನ್ ಗಳಿಸೋರು ವಿದೇಶಗಳಲ್ಲಿ ಪರದಾಡ್ತಿದ್ದಾರೆ ಅಂತಾ ಸ್ಟೇಟ್​ಮೆಂಟ್ ಕೊಟ್ಟಿದ್ರು. ಇದೇ ಹೇಳಿಕೆಯೇ ಅವ್ರಿಗೆ ಮುಳುವಾಗೋ ಸಾಧ್ಯತೆಗಳೂ ಇದೆ. ಇಲ್ಲಿ ಯಾರ ತಲೆದಂಡ ಆಗುತ್ತೆ ಯಾರು ಬರ್ತಾರೆ ಅನ್ನೋದಕ್ಕಿಂತ ಎಂಡ್ ಆಫ್ ದಿ ಡೇ ತಂಡ ಗೆಲ್ತಾ ಅನ್ನೋದಷ್ಟೇ ಮುಖ್ಯ ಆಗುತ್ತೆ. ಅಲ್ದೇ ಭಾರಯ ಟಿ-20ಐ ರ್ಯಾಂಕಿಂಗ್​ನಲ್ಲಿ ನಂಬರ್ 1 ಸ್ಥಾನದಲ್ಲೇ ಉಳಿಯಬೇಕು ಅಂದ್ರೆ ಮುಂದಿನ ಪ್ರತೀ ಪಂದ್ಯಗಳನ್ನೂ ಡು ಆರ್ ಡೈ ಅನ್ನೋ ತರನೇ ಆಡ್ಬೇಕಿದೆ. ಅದ್ರಲ್ಲೂ ಇಂಗ್ಲೆಂಡ್ ವಿರುದ್ಧದ ಐದನೇ ಮ್ಯಾಚ್ ಮಸ್ಟ್ & ಶುಡ್ ಗೆಲ್ಲಲೇಬೇಕು.

Shantha Kumari

Leave a Reply

Your email address will not be published. Required fields are marked *