ನಿಮ್ಮ ಮನೆಗೆ ಹಾವು ಬರ್ತಿದ್ಯಾ – ಪದೇಪದೆ ಹಾವು ಬಂದ್ರೆ ಏನರ್ಥ ಗೊತ್ತಾ?

ನಿಮ್ಮ ಮನೆಗೆ ಹಾವು ಬರ್ತಿದ್ಯಾ – ಪದೇಪದೆ ಹಾವು ಬಂದ್ರೆ ಏನರ್ಥ ಗೊತ್ತಾ?

ಹಿಂದೂ ಧರ್ಮದಲ್ಲಿ ಸಾಕಷ್ಟು ನಂಬಿಕೆಗಳಿವೆ. ಚಿಕ್ಕಪುಟ್ಟ ವಿಷ್ಯಕ್ಕೂ ದೇವರನ್ನ ನಂಬುತ್ತಾರೆ. ಸಾಕಷ್ಟು ಜನರಲ್ಲಿ ಮನೆಗೆ ಹಾವು ಬಂದ್ರೆ ಸಾಕಷ್ಟು ಅರ್ಥ ಕಲ್ಪಿಸಿಕೊಳ್ಳುತ್ತಾರೆ. ಯಾಕಂದ್ರೆ ಹಿಂದೂ ಧರ್ಮದಲ್ಲಿ ಹಾವಿಗೆ ದೇವರ ಸ್ಥಾನವನ್ನ ನೀಡಲಾಗಿದೆ.ಹಾವಿನ ರೂಪದಲ್ಲಿ ದೇವರು ಪೂರ್ವಜರು ಬಂದು ಆಶೀರ್ವಾದ ನೀಡುತ್ತಿದ್ದಾರೆ ಎಂಬ ನಂಬಿಕೆ ಭಾರತೀಯ ಸಂಸ್ಕೃತಿಯಲ್ಲಿದೆ. ಹಾಗಿದ್ರೆ ಯಾವ ಬಣ್ಣದ ಹಾಲು ಬಂದ್ರೆ ಏನರ್ಥ ಅನ್ನೋದ್ದನ್ನ ನಾವು ತಿಳಿಯೋಣ.

 ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ತುಂಬು ಗರ್ಭಿಣಿ ಅನುಮಾನಾಸ್ಪದ ಸಾವು – ಗಂಡನೇ ಕೊ*ದ್ನಾ?

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ದ್ವಾರದಲ್ಲಿ ಅಥವಾ ಮನೆಯ ಒಳಗಿನ ಲಿವಿಂಗ್ ರೂಮ್‌ಗಳಲ್ಲಿ ಹಾವುಗಳು ಪದೇ ಪದೇ ಬಂದ್ರೆ ಅದ್ದನ್ನ ವಾಸ್ತು ದೋಷ ಎನ್ನುತ್ತಾರೆ. ಈ  ದೋಷಗಳು ಮನೆಯಲ್ಲಿ ಕೆಟ್ಟದ್ದು ನಡೆಯುವುದ್ದಕ್ಕೆ ಕಾರಣವಾಗುತ್ತೆ.  ಇದರ ನೇರ ಪರಿಣಾಮ ಕುಟುಂಬದ ಸದಸ್ಯರ ಆರೋಗ್ಯದ ಮೇಲಾಗುತ್ತದೆ ಎಂದು ಹೇಳಲಾಗುತ್ತದೆ. ಈ ರೀತಿ ಆದಾಗ ಕುಟುಂಬಸ್ಥರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವುದು ಅತ್ಯಗತ್ಯ.

 

ಇನ್ನೂ ಹಾವುಗಳು ಬಣ್ಣದ ಮೇಲೆ ಅದ್ದಕ್ಕೆ ಅರ್ಥ ಕೊಡಲಾಗುತ್ತೆ.

ಬಿಳಿ ಹಾವು: ಅತ್ಯಂತ ಅಪರೂಪದ ಬಿಳಿ ಹಾವು ಮನೆಯ ಬಳಿ ಕಂಡರೆ ಅದು ಧನಲಾಭ ಮತ್ತು ಅದೃಷ್ಟದ ಸಂಕೇತವಾಗಿದೆ.

ಕಪ್ಪು ಹಾವು: ಕಪ್ಪು ಹಾವು ಪದೇ ಪದೇ ಕಾಣಿಸಿಕೊಂಡರೆ ಜಾತಕದಲ್ಲಿ ರಾಹು ದೋಷ ಅಥವಾ ಕಾಳಸರ್ಪ ದೋಷವಿರುವ ಸಾಧ್ಯತೆಯನ್ನು ಇದು ತೋರ್ಪಡಿಸುತ್ತದೆ.

ಹಳದಿ ಹಾವು: ಹಳದಿ ಬಣ್ಣದ ಹಾವುಗಳು ನಿಮ್ಮ ಜೀವನದಲ್ಲಿ ಆಗಲಿರುವ ಆಧ್ಯಾತ್ಮಿಕ ಪ್ರಗತಿ ಮತ್ತು ಜ್ಞಾನದ ವೃದ್ಧಿಯನ್ನು ಸೂಚಿಸುತ್ತವೆ.

Kishor KV

Leave a Reply

Your email address will not be published. Required fields are marked *