ದ್ರೋಹಿ ಮುರಳಿಗೆ ಈಗ DK ನೆೆನಪಾಯ್ತಾ? – ಬೆನ್ನಿಗೆ ಇರಿದವನ ಎದುರೇ ಬೆಳೆದ DK

ದ್ರೋಹಿ ಮುರಳಿಗೆ ಈಗ DK ನೆೆನಪಾಯ್ತಾ? –  ಬೆನ್ನಿಗೆ ಇರಿದವನ ಎದುರೇ ಬೆಳೆದ DK

ದಿನೇಶ್ ಕಾರ್ತಿಕ್ ಅಲಿಯಾಸ್  ಡಿಕೆ. ಇವರ ಕಥೆ ಯಾವುದೇ ಸಿನಿಮಾಕ್ಕೂ ಕಡಿಮೆ ಇಲ್ಲ.. ಇವರು ಅನುಭವಿಸಿದ ಸೋಲನ್ನ ಯಾರೂ ಕೂಡ ಜೀವನದಲ್ಲಿ ಅನುಭವಿಸೋಕೆ ಸಾಧ್ಯವಿಲ್ಲ. ಆದ್ರೆ ಸೋತೆ ಅಂತ ಸಾಯದೇ.. ಸೋಲನ್ನ ಮೆಟ್ಟಿ ನಿಲ್ಲೋದು ಹೇಗೆ ಅನ್ನೋದ್ದನ್ನ ನಾವು ದಿನೇಶ್ ಕಾರ್ತಿಕ್‌ರನ್ನ ನೋಡಿ ಕಲಿಬೇಕು.. ಹೆಂಡತಿ ಗೆಳೆಯನ  ಜೊತೆ ಓಡಿ ಹೋದ ನೋವಿನಿಂದ ಹೊರ ಬಂದು ಒಂದು ದೊಡ್ಡ ಸಕ್ಸಸ್ ಕಂಡಿದ್ದು ನಿಜಕ್ಕೂ ಗ್ರೇಟ್.. ಈಗ ಹೆಂಡಿತಿಯನ್ನ ಓಡಿಸಿಕೊಂಡು ಹೋದವನೇ ಡಿಕೆ ಬಗ್ಗೆ ಮಾತನಾಡಿ ಕಣ್ಣೀರಿಟ್ಟಿದ್ದಾನೆ.

ದಿನೇಶ್ ಕಾರ್ತಿಕ್ …ಸ್ಟಾರ್ ಫಿನಿಶರ್ ಆಗಿ ಕ್ರಿಕೆಟ್ ಲೋಕದಲ್ಲಿ ಮಿಂಚಿ ನಿವೃತ್ತರಾಗಿರುವ ಕ್ರಿಕೆಟರ್. ಟೀಮ್ ಇಂಡಿಯಾ ಪರ, ಆರ್ ಸಿಬಿ ಪರ ಎಂದೂ ಮರೆಯಲಾಗದ ಕ್ರಿಕೆಟ್‌ ಆಡಿದ್ದಾರೆ DK. ಇವರು ಕ್ರಿಕೆಟ್ ಅಂಗಳದಲ್ಲಿ ಬೌನ್ಸರ್ ಗಳಿಗೆ ಲೀಲಾಜಾಲವಾಗಿ ಬೌಂಡರಿ ತೋರಿಸಿದಂತೆ ಸವಾಲುಗಳಿಗೆ ಸೆಡ್ಡು ಹೊಡೆದು..ಸೋತು, ಕುಡಿತದ ಚಟಕ್ಕೆ ಬಿದ್ದು, ಎದ್ದು ಬಂದು ಮತ್ತೆ ಕ್ರಿಕೆಟ್ ನಲ್ಲಿ ಮಿಂಚಿದವರು.

2004ರಲ್ಲಿ ದಿನೇಶ್ ಕಾರ್ತಿಕ್ ಯುವ ವಿಕೆಟ್ ಕೀಪರ್ ಆಗಿ ಟೀಮ್ ಇಂಡಿಯಾಕ್ಕೆ ಸೇರ್ತಾರೆ. ಆ ನಂತರ ಮೂರೇ ಮೂರು ವರ್ಷದಲ್ಲಿ ಬಾಲ್ಯದ ಗೆಳತಿ ನಿಕಿತಾ ವಂಜಾರ ಜೊತೆ ಮದುವೆ ಆಗ್ತಾರೆ. ಲೈಫ್ ಈಸ್ ಬ್ಯೂಟಿಫುಲ್ ಅಂತ ಕ್ರಿಕೆಟ್ ಮತ್ತು ಸಾಂಸಾರಿಕ ಲೈಫಲ್ಲೂ ದಿನೇಶ್ ಖುಷಿ ಖುಷಿಯಾಗಿರ್ತಾರೆ. ಆದ್ರೆ ಅದು ಗೆಳೆಯನೆಂಬ ದ್ರೋಹಿಯನ್ನು ತನ್ನ ಹೆಂಡ್ತಿಗೆ ಪರಿಚಯಿಸಿಕೊಡೋ ತನಕ ಮಾತ್ರವಾಗಿತ್ತು..

ಹೌದು ಸ್ನೇಹಿತರೇ.. ಬಾಲ್ಯದ ಗೆಳೆಯ ಮುರಳಿ ವಿಜಯ್‌ನನ್ನ ತನ್ನ ಹೆಂಡ್ತಿಗೆ ಪರಿಚಯ ಮಾಡಿಕೊಡ್ತಾರೆ ದಿನೇಶ್ ಕಾರ್ತಿಕ್‌.. ಜೀವಕ್ಕೆ ಜೀವ ಕೊಡ ಗೆಳೆಯ ಅಂತ ಡಿಕೆ ನಂಬಿದ್ರು. ಆದ್ರೆ ಮುರಳಿ ವಿಜಯ್,  ದಿನೇಶ್ ಕಾರ್ತಿಕ್‌ ಹೆಂಡಿತಿಯನ್ನೇ ಪ್ರೀತಿ ಬಲೆಗೆ ಬೀಳಿಸಿಕೊಳ್ತಾರೆ. ನೋಡ ನೋಡುತ್ತಿದ್ದಂತೆ ಮುರುಳಿ ಜೊತೆ ದಿನೇಶ್ ಕಾರ್ತಿಕ್ ಹೆಂಡಿ ಓಡಿ ಹೋಗ್ತಾಳೆ. ಹಂಡತಿ ಗೆಳೆಯನ ಜೊತೆ ಓಡಿ ಹೋಗಿದ್ದನ್ನ ಯಾರು ಸಹಿಸಿಕೊಳ್ತಾರೆ ಹೇಳಿ.. ಹಾಗೇ ದಿನೇಶ್ ಕಾರ್ತಿಕ್ ಕೂಡ ಫುಲ್ ಡಿಫೆರೇಷನ್‌ಗೆ ಹೋಗ್ತಾರೆ.. ಬ್ಯಾಟ್ ಬೀಸೋಕೂ ಕೂಡ ಸಾಧ್ಯವಾಗದಷ್ಟು ಕುಗ್ಗಿ ಹೋಗ್ತಾರೆ.. ಕುಡಿತದ ಚಟಕ್ಕೂ ಬೀಳ್ತಾರೆ.. ಸಮಾಜದ ಮುಂದೆ ಒಬ್ಬಂಟಿಯಾಗಿ ನಿಲ್ತಾರೆ.. ಡಿಕೆಯನ್ನ ನೋಡಿದವರು ಮುಗಿತು ಇವ್ನ ಕಥೆ ಅಂತಾನೇ ಅಂದ್ಕೊಂಡಿದ್ರು.. ಆದ್ರೆ ಡಿಕೆ  ಸುನಾಮಿಯಂತೆ ಎದ್ದು ಬಂದ್ರು..

ಬಾಲ್ಯದ ಗೆಳೆಯನ ಜೊತೆ ಹೆಂಡಿತಿ ಓಡಿ ಹೋದ ಘಟನೆಯಿಂದ ಡಿಕೆಗೆ ಜೀವನವೇ ಬೇಡ ಎನಿಸುವಂಥಾ ಆಘಾತವಾಗಿತ್ತು. ಆ ಕರಾಳ ನೆನಪುಗಳು ಅವರನ್ನು ಘಾಸಿಗೊಳಿಸುತ್ತಿದ್ದವು. ಇಂಚಿಂಚೂ ಸಾಯುತ್ತಿದ್ದ ಡಿಕೆಗೆ   ದೇವತೆಯ ರೂಪದಲ್ಲಿ ಸಿಕ್ಕದ್ದು ದೀಪಿಕಾ ಪಳ್ಳಿಕಲ್.. ಡಿಕೆಯ ಕಹಿ ನೆನೆಪನ್ನ ಬದಲಿಸಿ ಜೀವನ ಸಂಗಾತಿಯಾ ಬರ್ತಾರೆ. ದಿನೇಶ್ ಕಾರ್ತಿಕ್ ಮರಳಿ ಮನುಷ್ಯರಾದ್ರು. ಸಮಯ ಉರುಳುತ್ತಲೇ ಇತ್ತು. ಮೋಸ ಮಾಡಿದ ಗೆಳೆಯನನ್ನು ದಿನೇಶ್ ಕಾರ್ತಿಕ್ ಕ್ಷಮಿಸಿ ಬಿಟ್ಟ. ಮೋಸ ಮಾಡಿದವನು ದಿನೇಶ್ ಕಾರ್ತಿಕ್‌ನನ್ನ ನೆನೆದು ಕಣ್ಣೀರು ಹಾಕಿದ..

 ದಿನೇಶ್ ಕಾರ್ತಿರ್ ಸೆಕೆಂಡ್ ಇನ್ನಿಂಗ್ಸ್

ಡಿಕೆ ಎರಡನೇ ಇನ್ನಿಂಗ್ಸ್‌ನ ಅದ್ಭುತ ಕಥೆಯಾಗಿದೆ. ಸುದೀರ್ಘ ಕಾಲ ಭಾರತೀಯ ಕ್ರಿಕೆಟ್‌ನಲ್ಲಿ ಧೋನಿ ಯುಗದ ನೆರಳಿನಲ್ಲೇ ಉಳಿದಿದ್ದ ಕಾರ್ತಿಕ್, ಎಂದಿಗೂ ಹೋರಾಟ ಕೈಬಿಡಲಿಲ್ಲ. ಅವರ ವೃತ್ತಿಜೀವನಕ್ಕೆ  ದೊಡ್ಡ  ತಿರುವು ಕೊಟ್ಟಿದ್ದು.

2022ರ ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ತಂಡ ಸೇರಿದ ಕಾರ್ತಿಕ್, ತಮಗೆ ಸಿಕ್ಕ ಫಿನಿಷರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಕೊನೆಯ ಓವರ್‌ಗಳಲ್ಲಿ ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಚಚ್ಚುತ್ತಾ, ಅಸಾಧ್ಯವಾದ ಪಂದ್ಯಗಳನ್ನು ಗೆಲ್ಲಿಸಿಕೊಟ್ಟು ಆರ್‌ಸಿಬಿ ಅಭಿಮಾನಿಗಳ ಮನಗೆದ್ರು. ಇವರ ಈ ಅಮೋಘ ಆಟ 2022ರ ಟಿ20 ವಿಶ್ವಕಪ್ ಭಾರತ ತಂಡದಲ್ಲೂ ಅವರಿಗೆ ಸ್ಥಾನ ತಂದುಕೊಟ್ಟಿತು. 2024ರ ಐಪಿಎಲ್ ಸೀಸನ್ ಮುಕ್ತಾಯದ ಬಳಿಕ ಅವರು ಆಟಗಾರನಾಗಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಭಾವುಕ ವಿದಾಯ ಘೋಷಿಸಿದರು.

ಆದರೆ, ಆರ್‌ಸಿಬಿ ಮತ್ತು ಡಿಕೆ ನಡುವಿನ ನಂಟು ಅಲ್ಲಿಗೇ ಮುಗಿಯಲಿಲ್ಲ. ಕ್ರಿಕೆಟ್ ತಂತ್ರಗಳ ಮೇಲಿರುವ ಅವರ ಅಪಾರ ಜ್ಞಾನ ಮತ್ತು ಯುವ ಆಟಗಾರರನ್ನು ಮುನ್ನಡೆಸುವ ಕೌಶಲ್ಯವನ್ನು ಗುರುತಿಸಿದ ಆರ್‌ಸಿಬಿ ಮ್ಯಾನೇಜ್ಮೆಂಟ್, ಅವರನ್ನು ತಂಡದ ನೂತನ ಬ್ಯಾಟಿಂಗ್ ಕೋಚ್  ಹಾಗೂ ಮೆಂಟರ್ ಆಗಿ ನೇಮಿಸಿತು. ಡಿಕೆ ಬ್ಯಾಟಿಂಗ್ ಕೋಚ್ ಆದ ಮೇಲೆ ಆರ್‌ಸಿಬಿ ಎರಡು ಸಲ ಬ್ಯಾಕ್‌ ಟು ಬ್ಯಾಕ್ ಐಪಿಎಲ್ ಎತ್ತಿ ಹಿಡಿತು.

ಡಿಕೆಯನ್ನ ಹಾಡಿಹೊಗಳಿದ ಮುರಳಿ ವಿಜಯ್

ಡಿಕೆ ಮೊದಲ ಹೆಂಡಿತಿಯನ್ನ ಓಡಿಸಿಕೊಂಡ ಹೋದ ಮುರುಳಿ ವಿಜಯ್ ದಿನೇಶ್ ಕಾರ್ತಿಕ್‌ರನ್ನ ಹಾಡಿ ಹೊಗಳಿದ್ದಾರೆ.ತಮಿಳುನಾಡು ಕ್ರಿಕೆಟ್ ಸಂಸ್ಥೆಯ 94ನೇ ವಾರ್ಷಿಕ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಮುರಳಿ ವಿಜಯ್ ತನ್ನ ಕ್ರಿಕೆಟ್ ಪ್ರಯಾಣದ ಬಗ್ಗೆ ಮಾತನಾಡುತ್ತಾ ದಿನೇಶ್ ಕಾರ್ತಿಕ್’ನನ್ನು ನೆನಪಿಸಿಕೊಂಡು.ಡಿಕೆ ಬಗ್ಗೆ ಮಾತನಾಡುತ್ತಾ ಭಾವುಕನಾದ್ರು. ‘’ನಾನು ಈ ದಿನ ದಿನೇಶ್ ಕಾರ್ತಿಕ್ ಬಗ್ಗೆ ಮಾತನಾಡಲೇಬೇಕು. ಇದು ಸ್ವಲ್ಪ ವಿಲಕ್ಷಣ ಎನಿಸಬಹುದು. ಆದರೆ ಅವನನ್ನು ನಾನು ಬಾಲ್ಯದಿಂದಲೂ ಬಲ್ಲೆ. ತಮಿಳುನಾಡು ಕಂಡ ಶ್ರೇಷ್ಠ ಕೀಪರ್-ಬ್ಯಾಟರ್. ಅವನದ್ದು ಡೈನಾಮಿಕ್ ವ್ಯಕ್ತಿತ್ವ. ನನ್ನ ಆತ್ಮೀಯ ಸ್ನೇಹಿತನಾತ. ನಾನ್’ಸ್ಟ್ರೈಕ್’ನಲ್ಲಿ ನಿಂತು ಅವನ ಆಟವನ್ನು ಅಭಿಮಾನಿಯಾಗಿ ನೋಡಿದ್ದೆ. ಅದ್ಭುತ ಕ್ರಿಕೆಟಿಗ. ಅವನಿಗೇ ಅರಿವಿಲ್ಲದೆ ನನಗೆ ಸಾಕಷ್ಟು ಸಹಾಯ ಮಾಡಿದ್ದಾನೆ. ಅದಕ್ಕಾಗಿ ಅವನಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ’’ ಎನ್ನುತ್ತಾ ಕಣ್ಣೀರು ಹಾಕಿ ಬಿಟ್ಟ ಮುರಳಿ ವಿಜಯ್. ನೋಡಿ ಮೋಸ ಮಾಡಿದವನೇ ಇವತ್ತ ಡಿಕೆ ಬಗ್ಗೆ ಮಾತನಾಡಿದ್ದಾರೆ.. ಇಲ್ಲಿಗೆ ದಿನೇಶ್ ಕಾರ್ತಿಕ್ ಗೆದ್ದಾಯ್ತು..

ನಿಮ್ಗೆ ಗೊತ್ತಿರಲಿ ಇವರಿಬ್ಬರು  ಮಾತನಾಡುತ್ತಲೇ ಇರಲಿಲ್ಲ.. ಆ ಘಟನೆಯ ನಂತರ ಕನಿಷ್ಠ 10 ವರ್ಷಗಳ ಕಾಲ ಗೆಳೆಯನ ಜೊತೆ ದಿನೇಶ್ ಕಾರ್ತಿಕ್ ಮಾತು ಬಿಟ್ಟಿದ್ರು. ತಮಿಳುನಾಡು ಪರ ಒಂದೇ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಾಗಲೂ ಮಾತಿಲ್ಲ, ಕಥೆಯಿಲ್ಲ. ಕ್ರೀಸ್ ಹಂಚಿಕೊಂಡು ಬ್ಯಾಟಿಂಗ್ ಮಾಡುತ್ತಿದ್ದಾಗಲೂ ಮೌನ. ವಿಕೆಟ್ ಕೀಪಿಂಗ್ ವೇಳೆ ಪಕ್ಕದಲ್ಲೇ ಮೊದಲ ಸ್ಲಿಪ್’ನಲ್ಲಿ ಮುರಳಿ ವಿಜಯ್ ನಿಂತಾಗಲೂ ಮುಖ ನೋಡಿದವನಲ್ಲ ದಿನೇಶ್. ಸಮಯ-ಸಂದರ್ಭ ಇಬ್ಬರನ್ನೂ ಹತ್ತಿರ ತಂದರೂ ದಿನೇಶ್ ಕಾರ್ತಿಕ್ ದೂರವೇ ಇದ್ದ. ಯಾಕಂದ್ರೆ ಮುರುಳಿ ಮಾಡಿದ್ದು ಕ್ಷಮಿಸುವಂತಹ ದ್ರೋಹ ಅಲ್ಲವೇ ಅಲ್ಲ ಬಿಡಿ. ಆದ್ರೆ ಸಮಯ ಎಲ್ಲವನ್ನೂ ಬದಲು ಮಾಡ್ತು. ಮುರಳಿ ವಿಜಯ್ ಜೊತೆ ಮಾತು ಬಿಟ್ಟಿದ್ದ ದಿನೇಶ್ ಕಾರ್ತಿಕ್ ಮತ್ತೆ ಮಾತನಾಡಿದ್ದು ನಾಲ್ಕು ವರ್ಷಗಳ ಹಿಂದೆ. ತನ್ನ ಬದುಕಲ್ಲಿ ಬಿರುಗಾಳಿ ಎಬ್ಬಿಸಿದವನ ಬಗ್ಗೆ ಒಂದೂ ಕೆಟ್ಟ ಮಾತನ್ನೂ ಆಡದ ಗೆಳೆಯ ದಿನೇಶ್ ದಿ ಕಾರ್ತಿಕ್. ಅದು ಅವನ ಒಳ್ಳೆತನ. ಮುರಳಿ ವಿಜಯ್ ಕಣ್ಣೀರು ಹಾಕಲು ಬಹುಶಃ ಆ ಒಳ್ಳೆತನವೇ ಕಾರಣವಿರಬಹುದು. ಒಂದು ಸೋಲು ಮತ್ತೆ ಗೆಲ್ಲವಂತೆ ಮಾಡಿದೆ.. ಡಿಕೆ ಜೀವನ ಅದೆಷ್ಟೋ ಜನಕ್ಕೆ ಮಾದರಿ..

 

Kishor KV

Leave a Reply

Your email address will not be published. Required fields are marked *