ಗಂಭೀರ್, ಶ್ರೇಯಸ್‌ಗೆ BCCI ಕ್ಲಾಸ್ – ಆಸ್ಟ್ರೇಲಿಯಾದಲ್ಲಿ ನಡೆಯಲಿದೆ IPL?

ಗಂಭೀರ್, ಶ್ರೇಯಸ್‌ಗೆ BCCI ಕ್ಲಾಸ್ – ಆಸ್ಟ್ರೇಲಿಯಾದಲ್ಲಿ ನಡೆಯಲಿದೆ IPL?

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು

ಕ್ರಿಕೆಟ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ಪಂದ್ಯವೊಂದಕ್ಕೆ ಭಾರತ ಆತಿಥ್ಯವಹಿಸಲಿದೆ. ಇದಕ್ಕೆ ಪ್ರತಿಯಾಗಿ ಭಾರತದ ಶ್ರೀಮಂತ ಟಿ20 ಲೀಗ್​ ‘ಇಂಡಿಯನ್ ಪ್ರೀಮಿಯರ್ ಲೀಗ್’ ಆಸ್ಟ್ರೇಲಿಯದಲ್ಲಿ ಆಯೋಜನೆಗೊಳ್ಳುವ ಸಾಧ್ಯತೆಗಳಿವೆ. ಭಾರತದ ಪ್ರತಿಷ್ಠಿತ ಟೂರ್ನಿ ‘ಇಂಡಿಯನ್ ಪ್ರೀಮಿಯರ್ ಲೀಗ್‘ಪಂದ್ಯಗಳನ್ನು ಆಸ್ಟ್ರೇಲಿಯಾದಲ್ಲಿ ಆಯೋಜಿಸಲು ಅಲ್ಲಿನ ಕ್ರಿಕೆಟ್ ಮಂಡಳಿ ಮುಕ್ತ ಆಹ್ವಾನ ನೀಡಿದೆ ಎಂದು ವರದಿಯಾಗಿದೆ.

ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಲಾರ್ಡ್ಸ್ ಮೈದಾನದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಟೆಸ್ಟ್, ಏಕದಿನ ಮತ್ತು ಟಿ20 – ಈ ಮೂರು ಮಾದರಿಗಳಲ್ಲಿ ಅರ್ಧಶತಕ ಗಳಿಸಿದ ಮೊದಲ ಭಾರತೀಯ, ಮೊದಲ ಮಹಿಳಾ ಕ್ರಿಕೆಟರ್ ಹಾಗೂ ವಿಶ್ವದ ನಾಲ್ಕನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಚಿನ್, ಕೊಹ್ಲಿಯಂತಹ ದಿಗ್ಗಜರೂ ಸಾಧಿಸದ ಈ ಮೈಲಿಗಲ್ಲನ್ನು ಕೌರ್ ತಲುಪಿ ಭಾರತೀಯ ಕ್ರಿಕೆಟ್‌ಗೆ ಹೆಮ್ಮೆ ತಂದಿದ್ದಾರೆ

ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಟಿ20 ಕಳಪೆ ಪ್ರದರ್ಶನ ನೀಡಿದ್ದು, ಆಡಿದ ಐದು ಪಂದ್ಯದಲ್ಲೂ ಭಾರತ ಸೋತಿದೆ. ಇದು ಬಿಸಿಸಿಐಗೆ ಆತಂಕ ಮೂಡಿಸಿದೆ. ಹೀಗಾಗಿ   ತಂಡದ ನ್ಯೂನತೆಗಳನ್ನು ಸರಿಪಡಿಸಲು ಮತ್ತು ಹಳೆಯ ಲಯಕ್ಕೆ ಮರಳಿಸಲು ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರೊಂದಿಗೆ ತುರ್ತು ಪರಿಶೀಲನಾ ಸಭೆ ನಡೆಸಲು ಬಿಸಿಸಿಐ ನಿರ್ಧರಿಸಿದೆ.

ಇದನ್ನೂ ಓದಿ: 2-1 ಗೋಲುಗಳ ಅಂತರದಿಂದ ರೋಚಕ ಜಯ – ಬೆಲ್ಜಿಯಂ ವಿರುದ್ಧ ಗೆದ್ದು ಸೆಮಿಗೆ ಎಂಟ್ರಿಕೊಟ್ಟ ಸ್ಪೇನ್‌

ಟೀಮ್ ಇಂಡಿಯಾ ಸತತ ಐದು ಪಂದ್ಯಗಳಲ್ಲಿ ಸೋಲನುಭವಿಸಿದ ಬೆನ್ನಲ್ಲೇ ಭಾರತ ತಂಡದ ಕೋಚಿಂಗ್ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಬಿಸಿಸಿಐ ಮುಂದಾಗಿದೆ ಎನ್ನಲಾಗ್ತಿದೆ.  ತಾಂತ್ರಿಕ ಮತ್ತು ತಂತ್ರಗಾರಿಕೆಯ ವಿಷಯಗಳಲ್ಲಿ ಕೋಚಿಂಗ್ ಸಿಬ್ಬಂದಿ ನಡುವೆ ಭಿನ್ನಾಭಿಪ್ರಾಯಗಳು ಮೂಡಿವೆ ಎಂದು ವರದಿಗಳು ತಿಳಿಸಿವೆ. ಇದೇ ಕಾರಣದಿಂದಾಗಿ ಕೋಚಿಂಗ್ ಸಿಬ್ಬಂದಿಯಲ್ಲಿ ಒಬ್ಬರನ್ನ ಬದಲಿಸಲು ಬಿಸಿಸಿಐ ನಿರ್ಧರಿಸಿದೆ ಎಂದು  ವರದಿಯಾಗಿದೆ.

ವೈಭವ್ ಹಾಗೂ ಮತ್ತೋರ್ವ ಆರಂಭಿಕ ಅಭಿಷೇಕ್ ಶರ್ಮಾಗೆ ಬಿಸಿಸಿಐ ಖಡಕ್ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.  ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿಯ ಸಿಕ್ಸರ್ ಬಾರಿಸುವ ಕೌಶಲ್ಯ ಅದ್ಭುತವಾಗಿದೆ, ಆದರೆ ನೀವು ಪರಿಸ್ಥಿತಿಗೆ ತಕ್ಕಂತೆ ಆಡಿ ಎನ್ನುವ ಖಡಕ್ ವಾರ್ನಿಂಗ್ ಬಿಸಿಸಿಐಗೆ ಈ ಇಬ್ಬರಿಗೂ ಸಿಕ್ಕಿದೆ ಎಂದು ವರದಿಯಾಗಿದೆ.

ನೇಪಾಳದೊಂದಿಗೆ ಕ್ರಿಕೆಟ್ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಬಿಸಿಸಿಐ ಮತ್ತೊಂದು ಮಹತ್ವದ ಹೆಜ್ಜೆ ಇಡಲು ಸಜ್ಜಾಗಿದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಭಾರತ ತಂಡವನ್ನು ಮುಂದಿನ ದಿನಗಳಲ್ಲಿ ಕ್ರಿಕೆಟ್ ಸರಣಿಗಾಗಿ ನೇಪಾಳಕ್ಕೆ ಕಳುಹಿಸಲಾಗುವುದು ಎಂದು ಘೋಷಿಸಿದ್ದಾರೆ. ಈ ಸರಣಿಗೆ ಯುವ ಸೆನ್ಷೇಷನಲ್​ ವೈಭವ್ ಸೂರ್ಯವಂಶಿ ಅವರನ್ನು ಕಳುಹಿಸಲು ಬಿಸಿಸಿಐ ಪರಿಗಣಿಸುತ್ತಿದೆ ಎಂದು ವರದಿಯಾಗಿದೆ. ಅಗತ್ಯವಿದ್ದರೆ ಭಾರತ-ಎ ತಂಡದ ನಾಯಕತ್ವವನ್ನು ವೈಭವ್ ಅವರಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಲಂಡನ್‌ನ ಕೆಫೆಯೊಂದರಲ್ಲಿ ಇಂಗ್ಲೆಂಡ್ ಕ್ರಿಕೆಟಿಗ ಜೋರ್ಡಾನ್ ಕಾಕ್ಸ್ ಜೊತೆಗಿನ ವಿರಾಟ್ ಕೊಹ್ಲಿಯ ಖಾಸಗಿ ಭೇಟಿಯ ಫೋಟೋ ವೈರಲ್ ಆಗಿದೆ. ಈ ಫೋಟೋ ಲೀಕ್ ಆಗಿರುವುದಕ್ಕೆ ಜೋರ್ಡಾನ್ ಕಾಕ್ಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ಕೆಫೆಯಲ್ಲಿ ಕುಳಿತಿದ್ದಾಗ ನೂರಾರು ಜನರು ನಮ್ಮನ್ನು ದಾಟಿ ಹೋದರು, ಯಾರೂ ನಮ್ಮನ್ನು ತಡೆಯಲಿಲ್ಲ. ಆದರೆ ಎರಡು ಗಂಟೆಗಳ ನಂತರ ಸ್ವತಃ ವಿರಾಟ್ ಅವರೇ ನನಗೆ ಮೆಸೇಜ್ ಮಾಡಿ, ಆ ಫೋಟೋಗಳನ್ನು ತೋರಿಸಿದಾಗ ನನಗೆ ಶಾಕ್ ಆಯ್ತು.  ಅವರ ಖಾಸಗಿ ಬದುಕಿಗೆ ಈ ರೀತಿ ಅಡ್ಡಿಪಡಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಕಾಕ್ಸ್ ಹೇಳಿದ್ದಾರೆ.

ಉಜ್ಬೇಕಿಸ್ತಾನ್ ಮತ್ತು ಅಫ್ಘಾನಿಸ್ತಾನ್ ತಂಡಗಳ ನಡುವಿನ ಪಂದ್ಯದಲ್ಲಿ ಭಾರೀ ರನ್‌ಗಳ ಮಳೆ ಸುರಿಯಿತು. ಅಫ್ಘಾನಿಸ್ತಾನದ ಸ್ಟಾರ್ ಆಲ್‌ರೌಂಡರ್ ಮೊಹಮ್ಮದ್ ನಬಿ ಅವರ ಮಗ ಕೇವಲ 28 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ.  ಹಸನ್ ಇಸಾಖಿಲ್  ಕೇವಲ 34 ಎಸೆತಗಳಲ್ಲಿ 16 ಸಿಕ್ಸರ್ ಹಾಗೂ 4 ಫೋರ್‌ನೊಂದಿಗೆ  120 ರನ್ ಗಳಿಸಿದ್ದಾರೆ.

Kishor KV

Leave a Reply

Your email address will not be published. Required fields are marked *