BALANCE ತಪ್ಪಿದ ಬ್ಯಾಟಿಂಗ್! – IPL ಆಟ ವಿದೇಶಗಳಲ್ಲಿ ನಡೆಯಲ್ವಾ?
T-20I ಸೋಲಿಗೆ ಇಲ್ಲಿದೆ 5 ಕಾರಣ

BALANCE ತಪ್ಪಿದ ಬ್ಯಾಟಿಂಗ್! – IPL ಆಟ ವಿದೇಶಗಳಲ್ಲಿ ನಡೆಯಲ್ವಾ?T-20I ಸೋಲಿಗೆ ಇಲ್ಲಿದೆ 5 ಕಾರಣ

ವಿಶ್ವಕಪ್​ನಲ್ಲಿ ಚಾಂಪಿಯನ್ ಆಗಿರೋ ಭಾರತ ತಂಡ ಈಗ ಸತತ 6 ಟಿ-20ಐ ಪಂದ್ಯಗಳನ್ನ ಆಡಿದ್ರೂ ಒಂದೇ ಒಂದು ಮ್ಯಾಚ್ ಗೆದ್ದಿಲ್ಲ ಅನ್ನೋದೇ ಪರಮಾಶ್ಚರ್ಯ. ಐರ್ಲೆಂಡ್, ಇಂಗ್ಲೆಂಡ್​ನಲ್ಲಿ ಅಟ್​ಲೀಸ್ಟ್ ಒಂದು ವಿಕ್ಟರಿನೂ ಸಾಧ್ಯನೇ ಆಗಿಲ್ಲ. ಸೂಪರ್ ಸ್ಟಾರ್​ಗಳೇ ತುಂಬಿರೋ ಭಾರತ ಹೀಗೆ ಅಟ್ಟರ್​ಫ್ಲ್ಯಾಪ್ ಆಗೋಕೆ ಒಂದಷ್ಟು ಕಾರಣಗಳೂ ಇದೆ.

ಇದನ್ನೂ ಓದಿ : ಆಸೀಸ್‌ನಲ್ಲಿ ನಡೆಯುತ್ತಾ IPL – ಮೋದಿ ಮಾಡಿಕೊಂಡ್ರಾ ಮಹತ್ವದ ಒಪ್ಪಂದ?

ಇಂಗ್ಲೆಂಡ್ ಟೂರ್​ನಲ್ಲಿರೋ ಭಾರತ ಆಲ್ರೆಡಿ ಸರಣಿ ಸೋತಿದ್ರೂ ಕೊನೇ ಪಂದ್ಯವನ್ನ ಇವತ್ತು ಆಡ್ಬೇಕಿದೆ. ಅಟ್​ಲೀಸ್ಟ್ ಗೆದ್ದು ನೆಕ್ಸ್​ಟ್ ಜಿಂಬಾಬ್ವೆ ಸಿರೀಸ್​ಗೆ ಒಂದು ಹೋಪ್ಸ್ ಜೊತೆ ಹೋಗೋಣ ಅನ್ಕೊಳ್ತಾರೆ. ಆದ್ರೆ ತವರಿನಲ್ಲಿ ಕ್ಲೀನ್ ಸ್ವೀಪ್ ಟಾರ್ಗೆಟ್ ಇಟ್ಕೊಂಡಿರೋ ಆಂಗ್ಲರು ಒಂದಾದ್ರೂ ಗೆಲ್ಲೋಕೆ ಬಿಡ್ತಾರಾ ಅನ್ನೋದೇ ಪ್ರಶ್ನೆ. ಮೊದ್ಲೆಲ್ಲಾ ಭಾರತ ತಂಡ ಎದುರಾಳಿ ಟೀಂ ಯಾವ್ದೇ ಆಗಿರ್ಲಿ ಪ್ಲೇಸ್ ಎಲ್ಲೇ ಇರ್ಲಿ ನುಗ್ಗಿ ಹೊಡೀತಿವಿ ಅನ್ನೋ ಕಲ್ಚರ್ ಇತ್ತು. ಬಟ್ ಈಗ ನಾವು ಸೋಲಲ್ಲ ಸರೆಂಡರ್ ಆಗ್ತೀವಿ ಅನ್ನೋ ಥರ ಆಗಿದ್ದಾರೆ. ಭಾರತದ ಈ ಫೇಲ್ಯೂರ್​ಗೆ ಮುಖ್ಯವಾಗಿ 5 ಕಾರಣಗಳಿವೆ.

ಭಾರತದ ಸೋಲಿಗೆ ಕಾರಣಗಳು!

  1. ಬ್ಯಾಲೆನ್ಸ್ ಇಲ್ಲದ ಬ್ಯಾಟಿಂಗ್ ಲೈನಪ್.. ಬೌಲಿಂಗ್ ಇನ್ನೂ ವೀಕ್!
  2. ವಿದೇಶಿ ಪಿಚ್ ಗಳಲ್ಲಿ ಭಾರತೀಯ ಆಟಗಾರರಿಗೆ ಅನುಭವ ಕೊರತೆ
  3. ಶಾರ್ಟ್ ಬಾಲ್ ಸ್ಟ್ರಾಟರ್ಜಿಯಿಂದಲೇ ವಿಕೆಟ್ ಪಡೆಯುತ್ತಿರುವ ಇಂಗ್ಲೆಂಡ್
  4. ಆಲ್ ರೌಂಡರ್ಸ್ ತಂಡದಲ್ಲಿ ಇದ್ರೂ ಸ್ಪೆಷಲಿಸ್ಟ್ ಪ್ಲೇಯರ್ ಕೊರತೆ
  5. ಐಪಿಎಲ್ ಸಕ್ಸಸ್ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸಪೋರ್ಟ್ ಮಾಡಲ್ಲ

ಹೀಗೆ ಭಾರತ ವಿದೇಶಗಳಲ್ಲಿ ಸೋಲೋಕೆ ಸಾಕಷ್ಟು ಕಾರಣಗಳಿವೆ. ಹಾಗಂತ ಮೊದ್ಲೆಲ್ಲಾ ಭಾರತ ಗೆಲ್ತಾ ಇರ್ಲಿಲ್ವಾ ಇವಾಗೇನು ಸ್ಪೆಷಾಲಿಟಿ ಅನ್ನಿಸ್ಬೋದು. ಆದ್ರೆ ಮೊದ್ಲೆಲ್ಲಾ ತಂಡದಲ್ಲಿ ಅನುಭವಿಗಳೂ ಇರ್ತಾ ಗೆದ್ರು. ಟೀಂ ಗೆಲ್ಲಿಸ್ತಿದ್ರು. ಬಟ್ ಈಗ ಹೊಸಬರ ತಂಡ ಕಟ್ಟುತ್ತೀವಿ ಅಂತಾ ಯಂಗ್​ಸ್ಟರ್​ಗಳನ್ನೇ ಕೂರಿಸಿಕೊಂಡು ಹೊಡೆತ ತಿಂತಿದ್ದಾರೆ ಅಷ್ಟೇ.

Shantha Kumari