ಅಜ್ಜಿ, ಮಾನ, ಅಮ್ಮನನ್ನ ಕೊಂದು ತಾನು ಸೂ*ಸೈಡ್- ತ್ರಿಬಲ್ ಮ*ರ್ಡರ್‌ಗೆ ಬೆಚ್ಚಿ ಬಿದ್ದ ಬೆಂಗಳೂರು

ಅಜ್ಜಿ, ಮಾನ, ಅಮ್ಮನನ್ನ ಕೊಂದು ತಾನು ಸೂ*ಸೈಡ್- ತ್ರಿಬಲ್ ಮ*ರ್ಡರ್‌ಗೆ ಬೆಚ್ಚಿ ಬಿದ್ದ ಬೆಂಗಳೂರು

ರಾಜ್ಯದಲ್ಲಿ ದಿನ ನಿತ್ಯ ಕ್ರೈಂ ರೇಟ್ ಹೆಚ್ಚುತ್ತಿದ್ದು, ದಿನವು ಕೊಲೆಗಳು ನಡೆಯುತ್ತಿದೆ. ಈಗ  ಸಿಲಿಕಾನ್​ ಸಿಟಿಯಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಒಬ್ಬನೇ 3 ಜನರನ್ನ ಕೊಲೆ ಮಾಡಿ ನಂತ್ರ ತಾನು ಸತ್ತಿದ್ದಾನೆ. . ಅಮ್ಮ, ಅಜ್ಜಿ ಮಾವನನ್ನು ಕೊಂದು ವ್ಯಕ್ತಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ  ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಿಗೇಪಾಳ್ಯದಲ್ಲಿ ನಡೆದಿದೆ. ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: 2-1 ಗೋಲುಗಳ ಅಂತರದಿಂದ ರೋಚಕ ಜಯ – ಬೆಲ್ಜಿಯಂ ವಿರುದ್ಧ ಗೆದ್ದು ಸೆಮಿಗೆ ಎಂಟ್ರಿಕೊಟ್ಟ ಸ್ಪೇನ್‌

34 ವರ್ಷದ ಪ್ರಶಾಂತ್ ಎಬ್ಬ ವ್ಯಕ್ತಿ ತನ್ನ ತಾಯಿ, ಅಜ್ಜಿ ಮತ್ತು ಮಾವನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಅಲ್ಲದೇ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸ್ಥಳೀಯರು ಆತನನ್ನು ಹಿಡಿದು ಕೂಡಿ ಹಾಕಿದ್ದು, ನಂತರ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ. ತಾಯಿ ಮಂಗಳಮ್ಮ (55), ಅಜ್ಜಿ ನಂಜಮ್ಮ (65) ಮತ್ತು ಮಾವ ಸತೀಶ್ (50) ಕೊಲೆಯಾದವರು. ಮಂಗಳಮ್ಮ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ನಂಜಮ್ಮ ಪೌರಕಾರ್ಮಿಕರಾಗಿದ್ದರು. ಸತೀಶ್ ಪ್ಲಂಬರ್ ಕೆಲಸ ಮಾಡುತ್ತಿದ್ದರು. ಇದೀಗ ಕುಟುಂಬದ ನಾಲ್ವರು ಸಾವನಪ್ಪಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೊಟ್ಟಿಗೆಪಾಳ್ಯದ ಗಣೇಶ ದೇವಸ್ಥಾನದ ಬಳಿಯ ಮನೆಯಲ್ಲಿ ಈ ಘಟನೆ ನಡೆದಿದೆ. ಪ್ರಶಾಂತ್ ಮೊದಲು ಮನೆಯ ಮುಖ್ಯ ಬಾಗಿಲಲ್ಲೇ ತಾಯಿ ಮಂಗಳಮ್ಮ ಮತ್ತು ಅಜ್ಜಿ ನಂಜಮ್ಮ ಅವರನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ಮಾವ ಸತೀಶ್ ಅವರ ರೂಮ್‌ನಲ್ಲಿ ಅವರನ್ನು ಕೊಲೆಗೈದಿದ್ದಾನೆ ಎಂದು ತಿಳಿದುಬಂದಿದೆ. ಕೊಲೆಯ ನಂತರ ಪ್ರಶಾಂತ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಸ್ಥಳೀಯರು ಆತನನ್ನು ಹಿಡಿದು ಅವನ ರೂಮ್‌ನಲ್ಲಿ ಕೂಡಿ ಹಾಕಿದ್ದಾರೆ. ಬಳಿಕ ಪ್ರಶಾಂತ್ ತಾನೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಕೌಟುಂಬಿಕ ಕಹಲದಿಂದ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

Kishor KV

Leave a Reply

Your email address will not be published. Required fields are marked *