ಆಸೀಸ್‌ನಲ್ಲಿ ನಡೆಯುತ್ತಾ IPL – ಮೋದಿ ಮಾಡಿಕೊಂಡ್ರಾ ಮಹತ್ವದ ಒಪ್ಪಂದ?

ಆಸೀಸ್‌ನಲ್ಲಿ ನಡೆಯುತ್ತಾ IPL – ಮೋದಿ ಮಾಡಿಕೊಂಡ್ರಾ ಮಹತ್ವದ ಒಪ್ಪಂದ?

ಬಿಗ್‌ಬ್ಯಾಷ್ ಲೀಗ್ ಭಾರತದಲ್ಲಿ ನಡೆಯುತ್ತಿದ್ದು, ಐಪಿಎಲ್ ಆಸ್ಟ್ರೇಲಿಯಾದಲ್ಲಿ ನಡೆಯುವ ಸಾಧ್ಯತೆ ಇದೆ.  ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳ ಕ್ರೀಡಾ ಇತಿಹಾಸದಲ್ಲಿ ಅತ್ಯಂತ ಮಹತ್ವದ ಹಾಗೂ ರೋಮಾಂಚನಕಾರಿ ಜಂಟಿ ಒಪ್ಪಂದವೊಂದು ಪ್ರಕಟವಾಗಿದೆ. ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ಟಿ20 ಟೂರ್ನಿಯಾದ ‘ಬಿಗ್ ಬ್ಯಾಷ್ ಲೀಗ್’ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದ ಮಣ್ಣಿನಲ್ಲಿ ಪಂದ್ಯವಾಡಲು ಸಜ್ಜಾಗಿದೆ. ಇದಕ್ಕೆ ಪ್ರತಿಯಾಗಿ ಭಾರತದ ಪ್ರತಿಷ್ಠಿತ ಟೂರ್ನಿ ‘ಇಂಡಿಯನ್ ಪ್ರೀಮಿಯರ್ ಲೀಗ್‘ (IPL) ಪಂದ್ಯಗಳನ್ನು ಆಸ್ಟ್ರೇಲಿಯಾದಲ್ಲಿ ಆಯೋಜಿಸಲು ಅಲ್ಲಿನ ಕ್ರಿಕೆಟ್ ಮಂಡಳಿ ಮುಕ್ತ ಆಹ್ವಾನ ನೀಡಿದೆ ಎಂದು ಆಸ್ಟ್ರೇಲಿಯಾದ ಖ್ಯಾತ ಪತ್ರಿಕೆ ದಿ ಏಜ್ ವರದಿ ಮಾಡಿದೆ.

ಇದನ್ನೂ ಓದಿ: ಸೋತರೂ ಶ್ರೇಯಸ್ HAPPY – ಕೇರಳ ಲೀಗ್‌ನಿಂದಲೂ ಸಂಜು OUT

ಬಿಬಿಎಲ್ ಪಂದ್ಯವನ್ನು ಭಾರತದಲ್ಲಿ ನಡೆಸುತ್ತಿರುವ ಹಿನ್ನಲೆ,  ಕ್ರಿಕೆಟ್ ಆಸ್ಟ್ರೇಲಿಯಾ ಸಂಸ್ಥೆಯು “ಭಾರತದ ಐಪಿಎಲ್ ಪಂದ್ಯವೊಂದನ್ನು ನಮ್ಮ ದೇಶದಲ್ಲಿ ನಡೆಸಿ” ಎಂದು ಬಿಸಿಸಿಐ  ಮುಂದೆ ಮುಕ್ತ ಪ್ರಸ್ತಾಪ ಇಟ್ಟಿದೆ. ಮೂಲಗಳ ಪ್ರಕಾರ, ಆಸ್ಟ್ರೇಲಿಯಾದ ಪ್ರಸಿದ್ಧ ಅಡಿಲೇಡ್ ಓವಲ್ ಮೈದಾನದಲ್ಲಿ ಐಪಿಎಲ್ ಪಂದ್ಯ ನಡೆಸಲು ಮಾತುಕತೆಗಳು ನಡೆಯುತ್ತಿವೆ.

ಮೆಲ್ಬೋರ್ನ್ ಕ್ರಿಕೆಟ್ ಮಂಡಳಿಯಲ್ಲಿ (MCG) ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಈ ಐತಿಹಾಸಿಕ ಒಪ್ಪಂದವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಈ ಒಪ್ಪಂದದ ಪ್ರಕಾರ, ಬಿಗ್ ಬ್ಯಾಷ್ ಲೀಗ್​ನ ಉದ್ಘಾಟನಾ ಪಂದ್ಯ ಭಾರತದ ಚೆನ್ನೈನಲ್ಲಿ ನಡೆಯುವುದು ಖಚಿತವಾಗಿದೆ.

ಬಿಬಿಎಲ್ ಪಂದ್ಯವನ್ನು ಭಾರತದಲ್ಲಿ ನಡೆಸುತ್ತಿರುವ ಹಿನ್ನಲೆ,  ಕ್ರಿಕೆಟ್ ಆಸ್ಟ್ರೇಲಿಯಾ ಸಂಸ್ಥೆಯು “ಭಾರತದ ಐಪಿಎಲ್ ಪಂದ್ಯವೊಂದನ್ನು ನಮ್ಮ ದೇಶದಲ್ಲಿ ನಡೆಸಿ” ಎಂದು ಬಿಸಿಸಿಐ  ಮುಂದೆ ಮುಕ್ತ ಪ್ರಸ್ತಾಪ ಇಟ್ಟಿದೆ. ಮೂಲಗಳ ಪ್ರಕಾರ, ಆಸ್ಟ್ರೇಲಿಯಾದ ಪ್ರಸಿದ್ಧ ಅಡಿಲೇಡ್ ಓವಲ್ ಮೈದಾನದಲ್ಲಿ ಐಪಿಎಲ್ ಪಂದ್ಯ ನಡೆಸಲು ಮಾತುಕತೆಗಳು ನಡೆಯುತ್ತಿವೆ.

Kishor KV

Leave a Reply

Your email address will not be published. Required fields are marked *