ಸೋತರೂ ಶ್ರೇಯಸ್ HAPPY – ಕೇರಳ ಲೀಗ್‌ನಿಂದಲೂ ಸಂಜು OUT
ಸಾಯಿ ಕಿಶೋರ್ಗೆ ENG ಬುಲಾವ್

ಸೋತರೂ ಶ್ರೇಯಸ್ HAPPY – ಕೇರಳ ಲೀಗ್‌ನಿಂದಲೂ ಸಂಜು OUTಸಾಯಿ ಕಿಶೋರ್ಗೆ ENG ಬುಲಾವ್

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು

ಬ್ರಿಸ್ಟಲ್‌ನಲ್ಲಿ ನಡೆದ 4ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ 9 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತು. ಭಾರತ ಸರಣಿಯಲ್ಲಿ ಉಳಿಯಲು ಗೆಲ್ಲಲೇಬೇಕಿತ್ತು, ಆದರೆ ಕಳಪೆ ಬ್ಯಾಟಿಂಗ್‌ನಿಂದ ಹೀನಾಯವಾಗಿ ಸೋತಿದೆ.  ಶ್ರೇಯಸ್ ಅಯ್ಯರ್ ಅರ್ಧಶತಕ ಗಳಿಸಿದ್ದರೂ, ಟೀಂ ಇಂಡಿಯಾ158 ರನ್ ಗಳಿಸಿತ್ತು. ಇಂಗ್ಲೆಂಡ್ ಕೇವಲ ಒಂದು ವಿಕೆಟ್ ಕಳೆದುಕೊಂಡು 14ನೇ ಓವರ್‌ನಲ್ಲಿ ಗುರಿ ತಲುಪಿ, ಐದು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿತು.

ಇದನ್ನೂ ಓದಿ: ಟೀಂ ಇಂಡಿಯಾಗೆ ಸೋಲಲ್ಲ SHAME – ಫೈಟ್ ಕೊಡೋದನ್ನೂ ಮರೆತ ಭಾರತ!

ಟೀಂ ಇಂಡಿಯಾ ಸೋಲಿಗೆ ನಾಯಕ ಶ್ರೇಯಸ್ ಅಯ್ಯರ್ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದು, ತಮ್ಮ ತಂಡವು ಮತ್ತೊಮ್ಮೆ ಎಲ್ಲಾ ವಿಭಾಗಗಳಲ್ಲಿಯೂ ಸಂಪೂರ್ಣ ವಿಫಲವಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ನನ್ನ ಪ್ರದರ್ಶನದಿಂದ ಖಂಡಿತ ಸಂತೋಷವಾಗಿದೆ, ಆದರೆ ನೋಡಿ, ಅದು ಗೆಲುವಿನ ಕಾರಣದಿಂದಲ್ಲದಿದ್ದರೆ, ಅದು ಬದಿಗೆ ಹೋಗುತ್ತದೆ. ಆ ಅಂಶದಲ್ಲಿ ತುಂಬಾ ನಿರಾಶೆಗೊಂಡಿದ್ದೇನೆ. ನಾನು ಆಡುವಾಗ  ನನ್ನ ತಂಡ ಗೆಲ್ಲುವಂತೆ ನೋಡಿಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ.

ಶ್ರೇಯಸ್ ಅಯ್ಯರ್ ಬಗ್ಗೆ ನೆಗೆಟಿವ್ ಕಾಮೆಂಟ್  ಮಾಡುವವರಿಗೆ ಶ್ರೇಷ್ಠ ಅಯ್ಯರ್ ಉತ್ತರ ನೀಡಿದ್ದಾರೆ.     ಶುಭಮನ್ ಗಿಲ್ ಇರಲಿ, ವಿರಾಟ್ ಕೊಹ್ಲಿ ಇರಲಿ ಅಥವಾ ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್ ಅವರೇ ಇರಲಿ… ಇವರೆಲ್ಲರೂ ಕ್ರಿಕೆಟ್ ಲೋಕದ ದಿಗ್ಗಜರು. ಇವರೂ ಕೂಡ ತಮ್ಮ ನಾಯಕತ್ವದಲ್ಲಿ ಸಾಕಷ್ಟು ಪಂದ್ಯಗಳನ್ನು ಸೋತಿದ್ದಾರೆ. ಹಾಗಿರುವಾಗ ನೀವು ಕೇವಲ ಶ್ರೇಯಸ್ ಅಯ್ಯರ್ ಅವರನ್ನೇ ಟಾರ್ಗೆಟ್ ಮಾಡುತ್ತಿದ್ದೀರಾ? ಶ್ರೇಯಸ್ ಒಬ್ಬ ಅದ್ಭುತ ಆಟಗಾರ ಎಂದು ಶ್ರೇಷ್ಠ ಅಯ್ಯರ್‌ ಹೇಳಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ನಾಲ್ಕನೇ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಮೂಲಕ ಭಾರತ ತಂಡದ ಸ್ಪಿನ್‌ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌  ತಮ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ನೂತನ ಮೈಲುಗಲ್ಲು ತಲುಪಿದ್ದಾರೆ. ಇವರು ತಮ್ಮ ಟಿ20ಐ ಕ್ರಿಕೆಟ್‌ ವೃತ್ತಿ ಜೀವನದ 100ನೇ ಪಂದ್ಯದ ಮೂಲಕ ಈ ಸಾಧನೆಗೆ ಭಾಜನರಾದ ಐದನೇ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಆ ಮೂಲಕ ರೋಹಿತ್‌ ಶರ್ಮಾ, ಹಾರ್ದಿಕ್‌ ಪಾಂಡ್ಯ, ವಿರಾಟ್‌ ಕೊಹ್ಲಿ ಹಾಗೂ ಸೂರ್ಯಕುಮಾರ್‌ ಯಾದವ್‌ ಒಳಗೊಂಡ ಎಲೈಟ್‌ ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ.

ಕೇರಳ ಕ್ರಿಕೆಟ್‌ ಲೀಗ್‌ನಿಂದ ಸಂಜು ಸ್ಯಾಮ್ಸನ್ ಹಿಂದೆ ಸರಿದಿದ್ದಾರೆ.  ಕೊಚ್ಚಿ ಬ್ಲೂ ಟೈಗರ್ಸ್  ತಂಡ ಸಂಜು ಅವರನ್ನು ಬಿಡುಗಡೆ ಮಾಡಿತ್ತು. ಅವರು ಹರಾಜಿನಲ್ಲಿ ಭಾಗವಹಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ  ತಿರುವನಂತಪುರಂನಲ್ಲಿ ನಡೆಯಲಿರುವ ಕೇರಳ ಕ್ರಿಕೆಟ್ ಲೀಗ್ ಆಕ್ಷನ್‌ನಲ್ಲಿ  ಸಂಜು ಸ್ಯಾಮ್ಸನ್ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿಲ್ಲ ಎಂದು ವರದಿಯಾಗಿದೆ

ಎಡಗೈ ಸ್ಪಿನ್ ಬೌಲರ್ ಸಾಯಿ ಕಿಶೋರ್ , ಇಂಗ್ಲೆಂಡ್‌ನಲ್ಲಿ ನಡೆಯುವ ಕೌಂಟಿ ಚಾಂಪಿಯನ್‌ಶಿಪ್‌ ನಲ್ಲಿ ಆಡಲು ನಿರ್ಧರಿಸಿದ್ದಾರೆ. ಕಳೆದ ಕೌಂಟಿ ಸೀಸನ್‌ನಲ್ಲಿ ಸರ್ರೆ ಪರ ಆಡಿದ್ದ ಸಾಯಿ ಕಿಶೋರ್, ಈ ಬಾರಿ ಗ್ಲೌಸೆಸ್ಟರ್‌ಶೈರ್  ಪರ ಆಡಲು ನಿರ್ಧರಿಸಿದ್ದಾರೆ. ಇದರಲ್ಲಿ ಸಾಯಿ ಕಿಶೋರ್ ಟೂರ್ನಿಯ ಉಳಿದ 6 ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ.

ಬಲ ಮೊಣಕಾಲಿನ ಗಾಯದಿಂದಾಗಿ ಭಾರತದ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಅವರು ಮೇಜರ್ ಲೀಗ್ ಕ್ರಿಕೆಟ್   2026 ರ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಈ ಸೀಸನ್‌ನಲ್ಲಿ ಅಶ್ವಿನ್ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ಪರ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಆಡಿದ್ದರು, ಜೂನ್ 20 ರಂದು ಡಲ್ಲಾಸ್‌ನಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ವಿರುದ್ಧ ಆಡಿ ಎರಡು ಓವರ್ ಬೌಲಿಂಗ್ ಮಾಡಿ 24 ರನ್ ಬಿಟ್ಟುಕೊಟ್ಟಿದ್ರು.

ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ 2026-27ರ ಸೀಸನ್‌ ಭಾರತದಲ್ಲಿ ಪ್ರಾರಂಭಿಸಲಿದ್ದು, ಉದ್ಘಾಟನಾ ಪಂದ್ಯವು ಡಿಸೆಂಬರ್‌ನಲ್ಲಿ ಚೆನ್ನೈನಲ್ಲಿ ನಡೆಯಲಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆ್ಯಂಟನಿ ಅಲ್ಬನೀಸ್   ಪ್ರಕಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮೂರು ದಿನಗಳ ಆಸ್ಟ್ರೇಲಿಯಾ ಪ್ರವಾಸದ ಕೊನೆಯ ದಿನದಂದು ಅಲ್ಬನೀಸ್ ಈ ಘೋಷಣೆ ಮಾಡಿದ್ದಾರೆ.

ಇಂಗ್ಲೆಂಡ್‌ನ ದಂತಕಥೆ ಆಲ್‌ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ಅವರ ಪುತ್ರ ರಾಕಿ ಫ್ಲಿಂಟಾಫ್ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಇಂಗ್ಲೆಂಡ್ ಕ್ರಿಕೆಟ್‌ನಲ್ಲಿ ಸುದ್ದಿಯಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಯೂತ್ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ನ ಅಂಡರ್-19 ತಂಡದಲ್ಲಿ ರಾಕಿ ಆಯ್ಕೆಯಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಒಡಿಐ ಸರಣಿಯಲ್ಲಿ ರಾಕಿ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು. ಇವರು 29, 79 ಮತ್ತು 55 ರನ್ ಗಳಿಸಿದ್ದಾರೆ.

Kishor KV

Leave a Reply

Your email address will not be published. Required fields are marked *