ಧಿಮಾಕು ಬಿಡ್ತಾರಾ ಗೌತಮ್ ಗಂಭೀರ್? – FAVORISM ಬಿಟ್ರಷ್ಟೇ ಭವಿಷ್ಯ!
ಅನುಭವಿಗಳ ಬೆಲೆ ಈಗ ಗೊತ್ತಾಯ್ತಾ?

ಧಿಮಾಕು ಬಿಡ್ತಾರಾ ಗೌತಮ್ ಗಂಭೀರ್? – FAVORISM ಬಿಟ್ರಷ್ಟೇ ಭವಿಷ್ಯ!ಅನುಭವಿಗಳ ಬೆಲೆ ಈಗ ಗೊತ್ತಾಯ್ತಾ?

ಇಂಗ್ಲೆಂಡ್ ವಿರುದ್ಧ ಸರಣಿ ಸೋತಿರೋ ಭಾರತಕ್ಕೆ ಈಗ ಕ್ಲೀನ್ ಸ್ವೀಪ್ ಆಗೋದನ್ನ ತಪ್ಪಿಸಿಕೊಳ್ಬೇಕು ಅಷ್ಟೇ. ನಾಳೆ ಸರಣಿಯ ಕೊನೇ ಪಂದ್ಯವನ್ನಾದ್ರೂ ಗೆದ್ದು ಸಮಾಧಾನ ಮಾಡ್ಕೊಳ್ಬೇಕು. ಆದ್ರೆ ಟೀಂ ಪ್ಲೇಯರ್ಸ್, ಪರ್ಫಾಮೆನ್ಸ್ ನೋಡ್ತಿದ್ರೆ ವೈಟ್ ವಾಶ್ ಗ್ಯಾರಂಟಿ ಅನ್ನಿಸ್ತಿದೆ. ಐಸಿಸಿ ಟಿ-20 ವಿಶ್ವಕಪ್​ನಲ್ಲಿ ಸತತ ಎರಡು ಸಲ ಚಾಂಪಿಯನ್ ಆಗಿರೋ ತಂಡ ಹೀಗೆ ದಿಢೀರ್​ ಅಂತಾ ಡೌನ್ ಫಾಲ್ ಯಾಕ್ ಆಗ್ತಿದೆ ಅನ್ನಿಸ್ಬೋದು. ಅದಕ್ಕೆ ಒನ್ ಆಫ್ ದಿ ಮೇನ್ ರೀಸನ್ ಗೌತಮ್ ಗಂಭೀರ್. ಕೋಚ್ ಸ್ಥಾನದಲ್ಲಿದ್ದು ಅವ್ರು ಮಾಡ್ತಿರೋ ಬ್ಲಂಡರ್​ಗಳಿಗೆ ಆಟಗಾರರು ಅವಮಾನ ಅನುಭವಿಸ್ತಿದ್ದಾರೆ.

ಇದನ್ನೂ ಓದಿ : ಟೀಂ ಇಂಡಿಯಾಗೆ ಸೋಲಲ್ಲ SHAME – ಫೈಟ್ ಕೊಡೋದನ್ನೂ ಮರೆತ ಭಾರತ!

ಐರಿಷ್ ವಿರುದ್ಧ ಕ್ಲೀನ್ ಸ್ವೀಪ್.. ಇಂಗ್ಲೆಂಡ್ ವಿರುದ್ಧವೂ ಸೋಲು.. ಬಹುಶಃ ಈಗ ಜಿಂಬಾಬ್ವೆ ಟೀಮ್​ಗೂ ಕೂಡ ನಾವು ಭಾರತವನ್ನ ಈಸಿಯಾಗಿ ಸೋಲಿಸಬಹುದು ಅನ್ನಿಸುತ್ತಿರಹುದು. ಇದೇ ತಿಂಗಳ ಕೊನೆಯಲ್ಲಿ ಭಾರತ ಮತ್ತು ಜಿಂಬಾಬ್ವೆ ನಡುವೆ ಮೂರು ಪಂದ್ಯಗಳ ಟಿ-20ಐ ಸರಣಿ ಇದೆ. ಭಾರತದ ಪ್ರಸೆಂಟ್ ಸಿಚುಯೇಷನ್ ನೋಡ್ತಿದ್ರೆ ಅಲ್ಲಿಯೂ ಪಲ್ಟಿ ಹೊಡೀತಾರಾ ಅನ್ನಿಸ್ತಿದೆ. ಅಷ್ಟಕ್ಕೂ ಭಾರತ ಯಾವತ್ತೂ ಕೂಡ ಇಷ್ಟು ಹೀನಾಯವಾಗಿ ಸೋತಿದ್ದೇ ಇಲ್ಲ. ಸೋತ್ರೂ ಫೈಟ್ ಕೊಟ್ಟಿಯೇ ಸೋತಿದ್ದಾರೆ. ಆದ್ರೆ ಕಳೆದ ಆರು ಪಂದ್ಯಗಳಲ್ಲೂ ಕಂಪ್ಲೀಟ್ ಸರೆಂಡರ್ ಆಗಿರುವಂಥದ್ದು. ಆಟಗಾರರ ಕಳಪೆ ಪ್ರದರ್ಶನಕ್ಕೆ ಕಾರಣ ಗೌತಮ್ ಗಂಭೀರ್ ಅವ್ರ ಸ್ಟ್ರಾಟರ್ಜಿಗಳು.

ಗಂಭೀರ್ ಗೆ ಆಟ.. ತಂಡಕ್ಕೆ ಸಂಕಟ!

ವಿಶ್ವಕಪ್ ಗೆಲ್ಲಿಸಿಕೊಟ್ಟ ಆಟಗಾರನನ್ನೇ ತಂಡದಿಂದ ಕೈಬಿಟ್ಟ ಗಂಭೀರ್

ಪ್ಲೇಯಿಂಗ್ 11ನಲ್ಲಿ ಆಡುವವರಿಗೆ ಅಭದ್ರತೆಯ ಭಯದಿಂದ ಪ್ರೆಶರ್

ನಂಬರ್ 3ನಲ್ಲಿ ಚೆನ್ನಾಗಿ ಆಡಿದ್ರಷ್ಟೇ ಸೇಫ್ ಅನ್ನೋ ಭಯದಲ್ಲಿ ಕಿಶನ್

ತಂಡದಲ್ಲಿ ಕ್ಯಾಪ್ಟನ್ ಶ್ರೇಯಸ್ ಒಬ್ಬರನ್ನ ಬಿಟ್ರೆ ಉಳಿದವ್ರಿಗೆಲ್ಲಾ ಟೆನ್ಷನ್

ಬುಮ್ರಾ, ಪಾಂಡ್ಯ ಇಲ್ಲ.. ಇಂಗ್ಲೆಂಡ್ ನಲ್ಲಿ ಆಡ್ತಿರೋರೆಲ್ಲಾ ಹೊಸಬರು

ಐರ್ಲೆಂಡ್, ಜಿಂಬಾಬ್ವೆ ರೆಸ್ಟ್ ಕೊಟ್ರೂ ಇಂಗ್ಲೆಂಡ್ ಸರಣಿಗೆ ಯಾಕೆ ರೆಸ್ಟ್?

ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಇಲ್ಲದ ಸುಂದರ್ ಯಾಕೆ ಬೇಕು?

ಇಂಜುರಿ ಬಳಿಕ ಒಂದೇ ಒಂದು ಪಂದ್ಯ ಆಡಿಸದೇ ರಾಣಾ ಆಯ್ಕೆ

ಬ್ಯಾಟಿಂಗ್ ಆರ್ಡರ್ ನಲ್ಲೂ ಕೂಡ ಪದೇ ಪದೆ ಬದಲಾವಣೆ ಬೇಕಾ?

ಹೀಗೆ ಗೌತಮ್ ಗಂಭೀರ್ ತಲೆಬುಡ ಇಲ್ಲದೇ ಪ್ಲ್ಯಾನ್ ಮಾಡಿ ಅದನ್ನ ಎಕ್ಸಿಕ್ಯೂಷನ್ ಮಾಡ್ತಿದ್ದಾರೆ. ಸ್ಟಾರ್ ಕಲ್ಚರ್ ಬಿಡ್ತೀನಿ.. ಯಂಗ್​ಸ್ಟರ್ಸ್ ಟೀಂ ಕಟ್ತೀನಿ ಅಂತಾ ಈಗ ಮೂರೂ ಮಾದರಿ ಕ್ರಿಕೆಟ್​ನ ಹಳ್ಳ ಹಿಡಿಸ್ತಿದ್ದಾರೆ. ಬಟ್ ಇಲ್ಲಿ ಗಂಭೀರ್ ದೌಲತ್ತಿಗೆ ಶ್ರೇಯಸ್ ಅಯ್ಯರ್ ಭವಿಷ್ಯ ಸ್ಪಾಯಿಲ್ ಆಗಬಾರದು ಅಷ್ಟೇ. ಯಾಕಂದ್ರೆ ನಿನ್ನೆ ಮ್ಯಾಚಲ್ಲೂ ಸಾಲು ಸಾಲು ವಿಕೆಟ್ಸ್ ಬೀಳ್ತಿದ್ರೂ ಜವಾಬ್ದಾರಿಯಿಂದ ಬ್ಯಾಟಿಂಗ್ ಮಾಡಿದ್ರು. ಟೀಂ ಸೋತಿದ್ದು ಅವ್ರ ಕಾರಣದಿಂದ ಅಲ್ಲ. ಹೌದು ಕ್ಯಾಪ್ಟನ್ಸಿ ಮ್ಯಾಟ್ರ್ ಆಗುತ್ತೆ. ಹಾಗಂತ ಎಲ್ಲರ ಸಪೋರ್ಟ್ ಸಿಕ್ರಷ್ಟೇ ಗೆಲ್ಲೋಕೆ ಆಗೋದು. ಹೀಗಾಗಿ ಬ್ಯಾಡ್ ಕ್ಯಾಪ್ಟನ್ ಅನ್ನೋ ಟ್ಯಾಗ್​ಲೈನ್​ನ ಶ್ರೇಯಸ್​ಗೆ ಕಟ್ಟೋಕೆ ಸಾಧ್ಯನೇ ಇಲ್ಲ. ಹಾಗೇನಾದ್ರೂ ಟ್ರೈ ಮಾಡ್ತಿದ್ದಾರೆ ಅಂದ್ರೆ ಅದು ಕ್ರಿಕೆಟ್​ಗೇ ಮಾಡಿದಂಥ ದ್ರೋಹ ಆಗುತ್ತೆ ಅಷ್ಟೇ. ಒಟ್ನಲ್ಲಿ ಟಿ-20ಐ ಫಾರ್ಮೆಟ್​ನಲ್ಲೂ ಭಾರತ ಜಾರೋಕೆ ಶುರು ಮಾಡಿದೆ. ಅದು ಪಾತಾಳಕ್ಕೆ ಜಾರೋ ಮುನ್ನ ಎಚ್ಚೆತ್ತುಕೊಳ್ಳಬೇಕು. ಗೌತಮ್ ಗಂಭೀರ್ ತಮ್ಮ ಹಠ, ದೌಲತ್ತೆನ್ನಾ ಪಕ್ಕಕ್ಕಿಟ್ಟು ತಂಡದ ಗೆಲುವಿಗಷ್ಟೇ ಪ್ಲ್ಯಾನ್ ಮಾಡಿದ್ರೆ ಸಾಕು. ಅದೆಲ್ಲಕ್ಕಿಂತ ಮುಖ್ಯವಾಗಿ ಇಂಥದ್ದೇ ಟೀಮ್​ನಲ್ಲಿ ಇರ್ಬೇಕು ಅನ್ನೋ ಫೇವರಿಸಂ ಬಿಡ್ಬೇಕು. ಅಲ್ಲಿಯವರೆಗೂ ಈ ಡೌನ್ ಫಾಲ್ ತಪ್ಪಿದ್ದಲ್ಲ.

Shantha Kumari

Leave a Reply

Your email address will not be published. Required fields are marked *