ಟೀಂ ಇಂಡಿಯಾಗೆ ಸೋಲಲ್ಲ SHAME – ಫೈಟ್ ಕೊಡೋದನ್ನೂ ಮರೆತ ಭಾರತ!
IPLನಲ್ಲಷ್ಟೇ ಇವರ HEROISM 

ಟೀಂ ಇಂಡಿಯಾಗೆ ಸೋಲಲ್ಲ SHAME – ಫೈಟ್ ಕೊಡೋದನ್ನೂ ಮರೆತ ಭಾರತ!IPLನಲ್ಲಷ್ಟೇ ಇವರ HEROISM 

ಸೇಮ್ ಪಿಚ್.. ಸೇಮ್ ಓವರ್ಸ್.. ಸೇಮ್ ರೂಲ್ಸ್.. ಆದ್ರೆ ಇಂಗ್ಲೆಂಡ್ ಪ್ಲೇಯರ್ಸ್ ಬ್ಲಾಕ್ ಬಸ್ಟರ್ ಹಿಟ್ ಮೂವಿ ಥರ ಮೈದಾನದಲ್ಲಿ ಅಬಾರಿಸ್ತಾನೆ ಇದ್ದಾರೆ. ಇತ್ತ ಟೀಂ ಇಂಡಿಯಾ ಮಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಹಾಗಾಗಿದ್ದಾರೆ. ಐರಿಷ್ ವಿರುದ್ಧ ಸೋತು ಸುಣ್ಣವಾಗಿದ್ದ ಭಾರತ ಆಂಗ್ಲನಾಡಿನಲ್ಲೂ ಮಣ್ಣು ಮುಕ್ಕಿದೆ. ದಶಕದವರೆಗೆ ಗೆಲುವು ಅನ್ನೋದನ್ನೇ ಕಾಣದ ಬ್ರಿಟಿಷರು ಈಗ ಭಾರತ ಲೆಕ್ಕಕ್ಕೇ ಇಲ್ಲ ಅನ್ನೋ ಥರ ಸರಣಿ ಗೆದ್ದು ಕೇಕೆ ಹಾಕಿದ್ದಾರೆ.

ಇದನ್ನೂ ಓದಿ : ಸಂಜುಗೆ ಮಾತ್ರ ಫಾರ್ಮ್… ತಿಲಕ್‌ಗೆ ಇಲ್ವಾ ? – ಅಭಿಷೇಕ್ OVER TAKE ಮಾಡಿದ ಕಿಶನ್

ಐದು ಪಂದ್ಯಗಳ t20i ಸರಣಿಯನ್ನ ಇಂಗ್ಲೆಂಡ್ ಗೆದ್ದು ಬೀಗಿದೆ. ಫಸ್ಟ್ ಮ್ಯಾಚ್ ಮಳೆಗೆ ವಾಶ್ ಔಟ್ ಆಗಿ ಐದನೇ ಪಂದ್ಯ ಇನ್ನೂ ಬಾಕಿ ಇದೆ ಅನ್ನುವಾಗ್ಲೇ ಮಿಡ್ಲಲ್ಲೇ ಅದೂ ಕೂಡ ಹ್ಯಾಟ್ರಿಕ್ ಗೆಲುವಿನ ಮೂಲಕ. ಮೂರೂ ಮ್ಯಾಚ್ ಗಳು ಕೂಡ ಆಂಗ್ಲರಿಗೆ ಒನ್ ಸೈಡ್ ವಿಕ್ಟರಿಗಳೇ ಆಗಿವೆ. ಈಗ ನಾಲ್ಕನೇ ಪಂದ್ಯದ ಸೋಲಿನ ಬಳಿಕ ಭಾರತ ಅಕ್ಷರಶ ಅವಮಾನ ಅನುಭವಿಸಿದೆ.

14 ವರ್ಷಗಳ ಬಲಿಕ ಸರಣಿ ಗೆದ್ದ ಇಂಗ್ಲೆಂಡ್!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ-20ಐ ಸರಣಿ ಅಂತಾ ಬಂದ್ರೆ ಅಲ್ಲಿ ಭಾರತವೇ ಬಾಸ್. ಯಾಕಂದ್ರೆ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಟಿ20 ಸರಣಿ 2012 ರ ಡಿಸೆಂಬರ್​ನಿಂದ ಪ್ರಾರಂಭವಾಯಿತು. ಉಭಯ ತಂಡಗಳ ನಡುವೆ ನಡೆದ ಮೊದಲ ಸರಣಿಯು 1-1 ರ ಡ್ರಾದಲ್ಲಿ ಕೊನೆಗೊಂಡಿತು. ಅದರ ನಂತರ, ಎರಡೂ ತಂಡಗಳ ನಡುವೆ ನಡೆದ ಪ್ರತಿಯೊಂದು ಟಿ20 ಸರಣಿಯನ್ನು ಭಾರತವೇ ಗೆದ್ದುಕೊಂಡಿದೆ. 2012 ಮತ್ತು 2026 ರ ನಡುವೆ ಅಂದ್ರೆ 14 ವರ್ಷಗಳ ಕಾಲ ಎರಡೂ ದೇಶಗಳ ನಡುವೆ ಒಟ್ಟು ಆರು ಟಿ20 ಸರಣಿಗಳು ನಡೆದಿವೆ. ಇದರಲ್ಲಿ ಟೀಂ ಇಂಡಿಯಾ ಐದು ಸರಣಿಗಳನ್ನು ಗೆದ್ದುಕೊಂಡರೆ, ಒಂದು ಸರಣಿ ಡ್ರಾದಲ್ಲಿ ಕೊನೆಗೊಂಡಿತು. ಅಲ್ಲಿಂದ ಇಲ್ಲೀವರೆಗೆ ಇಂಗ್ಲೆಂಡ್​ಗೆ ಭಾರತದ ಎದುರು ಗೆಲ್ಲೋಕೆ ಆಗಿರಲೇ ಇಲ್ಲ. ಆದ್ರೀಗ  ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಭಾರತದ ಅಜೇಯ ವಿಜಯಯಾತ್ರೆಗೆ ಇಂಗ್ಲೆಂಡ್ ಬ್ರೇಕ್ ಹಾಕಿ ಗೆದ್ದು ಬೀಗಿದೆ.

ಭಾರತ ಎಡವಿದ್ದೆಲ್ಲಿ?

ಪ್ಲೇಯಿಂಗ್ 11 ಬದಲಾವಣೆಯಲ್ಲೇ ಎಡವಿದ ಟೀಂ ಇಂಡಿಯಾ

ಫಸ್ಟ್ ಬ್ಯಾಟಿಂಗ್ ಗೆ ಬಂದ್ರೂ ಮತ್ತೆ ಕೈ ಕೊಟ್ಟ ಬ್ಯಾಟರ್ಸ್

ಭಾರತದ ಪರ ಶ್ರೇಯಸ್ ಅಯ್ಯರ್ ಮಾತ್ರವೇ ಏಕಾಂಗಿ ಹೋರಾಟ

ಬೌಲಿಂಗ್ ನಲ್ಲೂ ಸಿಕ್ಕಾಪಟ್ಟೆ ದುಬಾರಿಯಾದ ಪ್ಲೇಯರ್ಸ್

ಆಲ್ ರೌಂಡ್ ಪ್ರದರ್ಶನದ ಮೂಲಕ ಗೆದ್ದ ಇಂಗ್ಲೆಂಡ್ ಪ್ಲೇಯರ್ಸ್

ಅಷ್ಟಕ್ಕೂ ಇಲ್ಲಿ ಭಾರತ ಇಂಗ್ಲೆಂಡ್​ನಲ್ಲಿ ಸತತ ಮೂರು ಪಂದ್ಯಗಳನ್ನ ಸೋಲ್ತು ಅನ್ನೋದಕ್ಕಿಂತ ಸ್ವಲ್ಪನಾದ್ರೈ ಫೈಟ್ ಕೊಡದೇ ಸೋತ್ರಲ್ಲ ಅನ್ನೋದೇ ದೊಡ್ಡ ಶೇಮ್ ಅನ್ನಿಸ್ತಿದೆ. ಟಿ-20 ವಿಶ್ವಕಪ್​ನಲ್ಲಿ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ಸ್ ಈಗ ಸತತ ಎರಡು ಸರಣಿಯನ್ನ ಸೋತು ಸುಣ್ಣವಾಗಿದ್ದಾರೆ. 2019ರ ಬಳಿಕ ಟಿ-20ಐನಲ್ಲಿ ಭಾರತದ ಹ್ಯಾಟ್ರಿಕ್ ಸೋಲು ಫಾರ್ ದಿ ಫಸ್ಟ್ ಇದು. ಈ ಸೋಲಿನ ಬಳಿಕ ಭಾರತದ ಆಟಗಾರರ ಹೀರೋಯಿಸಂ ಐಪಿಎಲ್​ನಲ್ಲಷ್ಟೇ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗ್ತಿದೆ.

Shantha Kumari

Leave a Reply

Your email address will not be published. Required fields are marked *