ಬಿಗ್‌ಬಾಸ್ ಸೀಸನ್-13 ಸ್ಪರ್ಧಿಗಳು ಇವರೇ- ಸಂಭಾವ್ಯ ಸ್ಪರ್ಧಿಗಳು ಯಾರು ಗೊತ್ತಾ?

ಬಿಗ್ ಬಾಸ್ ಸೀಸನ್ 13 ಸದ್ಯದಲ್ಲೇ ಆರಂಭವಾಗಲಿದೆ. ಇದರ ಜೊತೆಗೆ ದೊಡ್ಮನೆಗೆ ಬರುವ ಸ್ಪರ್ಧಿಗಳು ಯಾರು ಅನ್ನೋ ವಿಚಾರ ವೈರಲ್ ಆಗ್ತಿದೆ. ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ವೈರಲ್ ಆಗಿದೆ.
ಇದನ್ನೂ ಓದಿ:ಹವಾ ಎಬ್ಬಿಸಿದ ಟಾಕ್ಸಿಕ್ ತಬಾಹಿ ಲಿರಿಕಲ್ ಸಾಂಗ್ – ಯಶ್ ಮಾದಕ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ
ಬಿಗ್ ಬಾಸ್ ಸೀಸನ್ 13ನಲ್ಲಿ ಯಾರೆಲ್ಲಾ ಸ್ಪರ್ಧಿಗಳು ಇದ್ದಾರೆ ಎಂಬ ವಿಚಾರ ರಿವೀಲ್ ಆಗಿದೆ. ಈ ಬಾರಿ ಬಿಗ್ ಬಾಸ್ ಮನೆಗೆ ಸಾಮಾನ್ಯರನ್ನು ಕೂಡಾ ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳ ಆಡಿಷನ್ ಕೂಡ ನಡೆದಿದೆ. ಇವರ ಜೊತೆ ಸೆಲೆಬ್ರಿಟಿಗಳು ಕೂಡಾ ಇರಲಿದ್ದಾರೆ. ಸಾಮಾನ್ಯವಾಗಿ ಪ್ರತಿ ಸೀಸನ್ ನಲ್ಲೂ ಮಜಾ ಭಾರತದ ಒಬ್ಬ ಕಲಾವಿದ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡ್ತಾರೆ. ಈ ಬಾರಿ ಮಜಾ ಭಾರತ ಖ್ಯಾತಿಯ ಶಿವು ಬಿಗ್ ಬಾಸ್ ಮನೆಗೆ ಪ್ರವೇಶ ಮಾಡುವ ಸಾಧ್ಯತೆ ಇದೆ. ಶಿವು ರಿಯಾಲಿಟಿ ಶೋ ಜೊತೆಗೆ ಸಿನಿಮಾದಲ್ಲೂ ನಟಿಸಿದ್ದಾರೆ. ಇನ್ನು ಬಿಗ್ ಬಾಸ್ ಮನೆಗೆ ಹಳ್ಳಿ ಪವರ್ ಖ್ಯಾತಿಯ ರಗಡ್ ರಶ್ಮಿ ಎಂಟ್ರಿ ಕೊಡುವ ಸಾಧ್ಯತೆಯಿದೆ. ಜೀ ಪವರ್ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ ಹಳ್ಳಿ ಪವರ್ ರಿಯಾಲಿಟಿ ಶೋದಲ್ಲಿ ಬೆಂಗಳೂರಿನ ರಗಡ್ ರಶ್ಮಿ ಟ್ರೋಫಿ ಗೆದ್ದಿದ್ದರು.
ಬಿಗ್‌ಬಾಸ್ ರಿಯಾಲಿಟಿ ಶೋಗೆ ಎಕ್ಸ್ ಕ್ಯೂಸ್ ಮಿ ಖ್ಯಾತಿಯ ನಟ ಸುನೀಲ್ ರಾವ್ ಬರಲಿದ್ದಾರೆ ಎಂದು ಸುದ್ದಿಯಾಗಿದೆ. ಬಾಲ ನಟನಾಗಿ ಚಿತ್ರ ರಂಗಕ್ಕೆ ಎಂಟ್ರಿ ನೀಡಿದ್ದ ಸುನೀಲ್ ರಾವ್, 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೀರಿಯಲ್ ಮೂಲಕವೂ ಗಮನ ಸೆಳೆದಿದ್ದಾರೆ. ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ರಮ್ಯಾ ಬಾಲಕೃಷ್ಣ ಅಲಿಯಾಸ್ ಕೋಳಿ ರಮ್ಯಾ ಹೆಸರೂ ಇದೆ. ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋನಿಂದ ಪ್ರಸಿದ್ಧಿಗೆ ಬಂದ ರಮ್ಯಾ, ಕನ್ನಡ, ತಮಿಳು, ತೆಲುಗು ಸೇರಿದಂತೆ ಅನೇಕ ಭಾಷೆಗಳಲ್ಲಿ ಸೀರಿಯಲ್ ಮಾಡಿದ್ದಾರೆ. ಕೋಳಿ ರಮ್ಯಾ, ನಾ ನಿನ್ನ ಬಿಡಲಾರೆ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಕಂಟೆಂಟ್ ಕ್ರಿಯೇಟರ್ಸ್ ಗೂ ಬಿಗ್ ಬಾಸ್ ಮನೆಯಲ್ಲಿ ಅವಕಾಶ ಸಿಗ್ತಿದೆ. ಈ ಬಾರಿ ಯೂಟ್ಯೂಬರ್ ಶಿವಪುತ್ರ ಬಿಗ್ ಬಾಸ್ ಮನೆಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ನಟ ಭರತ್ ಬೋಪಣ್ಣ ಕೂಡ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡುವ ಸಾಧ್ಯತೆಯಿದೆ. ‘ಡೆಮೊ ಪೀಸ್’ ಚಿತ್ರದ ಮೂಲಕ ಬಣ್ಣ ಹಚ್ಚಿದ ಇವರು ಜೀ ಕನ್ನಡದ ಸೂಪರ್ ಹಿಟ್ ‘ಬ್ರಹ್ಮಗಂಟು’ ಸೀರಿಯಲ್‌ನಲ್ಲಿ ನಾಯಕನಾಗಿ ನಟಿಸಿದ್ದರು.
ಇನ್ನು ನಟ ರಾಣವ್ ಗೌಡ ಕೂಡಾ ದೊಡ್ಮನೆಗೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಮೃತಧಾರೆ ಸೀರಿಯಲ್‌ನ ಖಳನಾಯಕ ಜೈದೇವ್ ಮೂಲಕ ಖ್ಯಾತಿ ಗಳಿಸಿರುವ ನಟ ರಾಣವ್ ಗೌಡ ಬಿಗ್‌ಬಾಸ್ ಸ್ಪರ್ಧಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ನೋಡಿರಿ

