ಮಳೆಗೆ ಶಾಲೆಗೆ ರಜೆ ಕೊಟ್ಟ ಜಿಲ್ಲಾಡಳಿತ – ಡಿಸಿ ಆದೇಶ ಉಲ್ಲಂಘಿಸಿ ತರಗತಿ ನಡೆಸಿದ 10 ಶಾಲೆಗಳು
ಮಂಗಳೂರಲ್ಲಿ ಡಿಸಿ ಆದೇಶಕ್ಕೆ ಬೆಲೆಯೇ ಇಲ್ವಾ?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿಸಿ ಆದೇಶಕ್ಕೆ ಕಿಮ್ಮತ್ತು ಇಲ್ವಾ?, ಶಾಲೆಗಳಿಗೆ ಮಳೆ ಕಾರಣಕ್ಕೆ ರಜೆ ನೀಡಿದರೆ, ಡಿಸಿ ಆದೇಶ ಪಾಲಿಸುವುದಿಲ್ವಾ?, ಹೀಗೊಂದು ವಿಚಾರ ಈಗ ಬೆಳಕಿಗೆ ಬಂದಿದೆ. ಮಂಗಳೂರಿನಲ್ಲಿ ಮಳೆ ಜೋರಾದ ಕಾರಣ ಮೂರು ದಿನ ಶಾಲೆ-ಕಾಲೇಜಿಗೆ ರಜೆ ನೀಡಲಾಗಿತ್ತು. ಆದರೆ ಹಲವು ಕಡೆ ಶಾಲೆಗಳು ಎಂದಿನಂತೆ ನಡೆದಿವೆ. ಇದೀಗ ಈ ಶಾಲೆಗಳ ವಿರುದ್ಧ ಕಠಿಣ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಇದನ್ನೂ ಓದಿ:ಸಿಲಿಕಾನ್ ಸಿಟಿಯಲ್ಲಿ ಚಿರತೆ ಓಡಾಟ – ಎದ್ನೋ ಬಿದ್ನೋ ಅಂತ ಓಡಿದ ಜನ
ಮಂಗಳೂರಿನಲ್ಲಿ ಮಳೆ ಕಾರಣದಿಂದ ಅಲ್ಲಲ್ಲಿ ಸಿಕ್ಕಾಪಟ್ಟೆ ರಗಳೆಯಾಗಿತ್ತು. ಕೆಲವೆಡೆ ಮಣ್ಣು ಕುಸಿದು ದುರಂತ ಕೂಡಾ ಸಂಭವಿಸಿತ್ತು. ಹೀಗಾಗಿ ಮಳೆ ಹೆಚ್ಚಾಗಿದ್ದರಿಂದ ಜಿಲ್ಲಾಡಳಿತ ಮುಂಜಾಗೃತ ಕ್ರಮವಾಗಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತ್ತು. ಆದ್ರೆ, ಕೆಲ ಖಾಸಗಿ ಶಾಲೆಗಳು ಡಿಸಿ ಆದೇಶ ಪಾಲಿಸಿರಲಿಲ್ಲ. ರಜೆ ನೀಡಿದರೂ ಕೂಡಾ ಶಾಲೆ ನಡೆಸಿರುವುದು ಜಿಲ್ಲಾಡಳಿತದ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನು ಮಳೆಯಿಂದಾಗಿ ರಜೆ ಘೋಷಣೆ ಮಾಡಿದರೂ ಶಾಲೆ ನಡೆಸಿರುವ ಬಗ್ಗೆ ಖುದ್ದು ವಿದ್ಯಾರ್ಥಿಗಳೇ ದೂರು ನೀಡಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಈ ಎಲ್ಲಾ ಶಾಲೆಗಳಿಗೆ ಜಿಲ್ಲಾಡಳಿತ ನೋಟಿಸ್ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಹತ್ತಕ್ಕೂ ಅಧಿಕ ಶಾಲಾ- ಕಾಲೇಜುಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಮಂಗಳೂರಿನ 10ಕ್ಕೂ ಹೆಚ್ಚು ಶಾಲೆಗಳಿಗೆ ನೋಟಿಸ್ ನೀಡಲಾಗಿದೆ. ಈ ಶಾಲೆಗಳ ಮೇಲೆ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಮುಂದಿನ ದಿನಗಳಲ್ಲಿ ರಜೆ ಘೋಷಣೆ ಮಾಡಿದ್ರೂ ತರಗತಿಗಳನ್ನ ನಡೆಸಿದ್ರೆ ಶಾಲಾ ಪರವಾನಗಿಯನ್ನು ರದ್ದು ಮಾಡುವ ಕುರಿತು ಸರ್ಕಾರಕ್ಕೆ ಪತ್ರ ಬರೆಯುವ ಚಿಂತನೆ ನಡೆಸಿದ್ದೇವೆ. ಅದರ ಜತೆಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿಯಮ, ಕಾನೂನುಗಳು ಬಹಳಷ್ಟು ಕಠಿಣವಾಗಿರುತ್ತದೆ ಎಂದು ಖಾಸಗಿ ಶಾಲೆಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ನೋಡಿರಿ

