ಸೋತರು ಇಂಗ್ಲೆಂಡ್ ನೆಲದಲ್ಲಿ ದಾಖಲೆ ಬರೆದ ಶ್ರೇಯಸ್ ಅಯ್ಯರ್

ಇಂಗ್ಲೆಂಡ್ ವಿರುದ್ಧ ಟಿ20ಐ ಸರಣಿ ಸೋತರು ನಾಯಕ ಶ್ರೇಯಸ್ ಅಯ್ಯರ್ ದಾಖಲೆಯೊಂದನ್ನು ಬರೆದಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆದ ಟಿ20ಐ ಸರಣಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್ ಈಗ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಟಿ20ಐ ತಂಡದ ನಾಯಕರಾಗಿರುವ ಮುಂಬೈನ ಬಲಗೈ ಬ್ಯಾಟ್ಸ್‌ಮನ್, ಗುರುವಾರ ಬ್ರಿಸ್ಟಲ್‌ನ ಕೌಂಟಿ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20ಐನಲ್ಲಿ 80 ರನ್ ಗಳಿಸಿದರು. ಈ ಮೂಲಕ ನಡೆಯುತ್ತಿರುವ ಐದು ಪಂದ್ಯಗಳ ಸರಣಿಯಲ್ಲಿ ಅವರ ರನ್‌ಗಳ ಸಂಖ್ಯೆಯನ್ನು 190 ಕ್ಕೆ ಹೆಚ್ಚಿಸಿದರು.
ಇದನ್ನೂ ಓದಿ: ಸಾಲು ಸಾಲು ಸೋಲುಗಳಿಂದ ಕಂಗೆಟ್ಟ ಶ್ರೇಯಸ್ ಪಡೆ – ಟೀಂ ಇಂಡಿಯಾ ವಿರುದ್ಧ ಟಿ20 ಸರಣಿ ಗೆದ್ದ ಇಂಗ್ಲೆಂಡ್
ಇಂಗ್ಲೆಂಡ್‌ನಲ್ಲಿ ನಡೆದ ಟಿ20ಐ ಸರಣಿಯಲ್ಲಿ ಭಾರತ ಪರ ಅತಿ ಹೆಚ್ಚು ರನ್ ಗಳಿಸಿದ ಹಿಂದಿನ ದಾಖಲೆ ಸೂರ್ಯಕುಮಾರ್ ಯಾದವ್ ಅವರ ಹೆಸರಲ್ಲಿತ್ತು. ಸೂರ್ಯಕುಮಾರ್ ಯಾದವ್ 2022 ರ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ತಂಡಕ್ಕಾಗಿ ಮೂರು ಪಂದ್ಯಗಳನ್ನು ಆಡಿದರು ಮತ್ತು ಇಂಗ್ಲೆಂಡ್‌ನಲ್ಲಿ 171 ರನ್ ಗಳಿಸಿದ್ದರು.
ಒಟ್ಟು 190 ರನ್‌ಗಳಿಸಿ ಶ್ರೇಯಸ್ ಅಯ್ಯರ್ ಈ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಶ್ರೇಯಸ್ ಅಯ್ಯರ್- 190*ರನ್‌ಗಳಿಸಿದ್ರೆ, ಸೂರ್ಯಕುಮಾರ್ ಯಾದವ್-171 ರನ್‌ಗಳಿಸಿದ್ದಾರೆ. ಯುವರಾಜ್ ಸಿಂಗ್-153 ರನ್‌ಗಳಿಸಿದ್ರೆ ಗೌತಮ್ ಗಂಭೀರ್-148 ರನ್ ಗಳಿಸಿದ್ದಾರೆ. ಇನ್ನೂ ರೋಹಿತ್ ಶರ್ಮಾ-137 ರನ್‌ಗಳಿಸಿದ್ದಾರೆ.

ನೋಡಿರಿ

