ದಾಖಲೆಯ ಗೋಲು ಬಾರಿಸಿದ ಎಂಬಾಪ್ಪೆ – ಫಿಫಾ ವಿಶ್ವಕಪ್‌ನ ಸೆಮಿಫೈನಲ್‌ಗೆ ಎಂಟ್ರಿಕೊಟ್ಟ ಫ್ರಾನ್ಸ್

ಫಿಫಾ ವಿಶ್ವಕಪ್ ರೋಚಕ ಕಟ್ಟ ತಲುಪಿದ್ದು, ಪ್ರೀ ಕ್ವಾಟರ್ ಫೈನಲ್ ಕಾದಾಟ ಜೋರಾಗಿ ನಡೆಯುತ್ತಿದೆ. ಸ್ಟಾರ್ ಸ್ಟೈಕರ್ ಕೈಲಿಯನ್ ಎಂಬಾಪ್ಪೆ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಫ್ರಾನ್ಸ್ ತಂಡ ಫಿಫಾ ವಿಶ್ವಕಪ್‌ನ ಸೆಮಿಫೈನಲ್‌ಗೆ ಭರ್ಜರಿಯಾಗಿ ಲಗ್ಗೆ ಇಟ್ಟಿದೆ. ಕ್ವಾರ್ಟ‌್ರಫೈನಲ್ ಪಂದ್ಯದಲ್ಲಿ ಮೊರೊಕ್ಕೋ ವಿರುದ್ಧ 2-0 ಗೋಲುಗಳ ಅಂತರದಿಂದ ಜಯ ಸಾಧಿಸಿದ ಫ್ರಾನ್ಸ್, ಸತತ ಮೂರನೇ ಬಾರಿಗೆ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿತು.
ಇದನ್ನೂ ಓದಿ: ಬಾಂಗ್ಲಾದಲ್ಲಿ ಏಷ್ಯಾಕಪ್ ಆಡುತ್ತಾ ಭಾರತ? – ವಿಶ್ವಕಪ್ ಬಹಿಷ್ಕಾರಕ್ಕೆ ಸೇಡು ಕಾದಿದ್ಯಾ?
ಫಸ್ಟ್ ಆಫ್‌ನಲ್ಲಿ ಪೆನಾಲ್ಟಿ ಅವಕಾಶವನ್ನು ಕೈಚೆಲ್ಲಿದ್ದ , ದ್ವಿತೀಯಾರ್ಧದಲ್ಲಿ ತನ್ನ ತಪ್ಪನ್ನು ಸರಿಪಡಿಸಿದರು. 60ನೇ ನಿಮಿಷದಲ್ಲಿ ಗೋಲು ದಾಖಲಿಸಿ, ಬಳಿಕ ಮತ್ತೊಂದು ಗೋಲಿಗೆ ಅಸಿಸ್ಟ್ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಓಸ್ಮಾನ್ ಡೆಂಬೆಲೆ 66ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ ಫ್ರಾನ್ಸ್‌ನ ಮುನ್ನಡೆಯನ್ನು ಭದ್ರಪಡಿಸಿದರು.
ಈ ವಿಶ್ವಕಪ್‌ನಲ್ಲಿ ಎಂಬಾಪ್ಪೆ ದಾಖಲಿಸಿದ ಎಂಟನೇ ಗೋಲು ಇದಾಗಿದ್ದು, ವಿಶ್ವಕಪ್‌ನಲ್ಲಿ ಒಟ್ಟು 20ನೇ ಗೋಲು ದಾಖಲಿಸಿದ ಸಾಧನೆಗೂ ಅವರು ಪಾತ್ರರಾದರು. ಕೇವಲ 20 ವಿಶ್ವಕಪ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿರುವ ಎಂಬಾಪ್ಪೆ, ಅರ್ಜೆಂಟೀನಾ ನಾಯಕ ಲಿಯೊನೆಲ್ ಮೆಸ್ಸಿ ಅವರ ವಿಶ್ವಕಪ್ ಗೋಲುಗಳ ದಾಖಲೆಗೆ ಕೇವಲ ಒಂದು ಗೋಲಿನ ಅಂತರದಲ್ಲಿದ್ದಾರೆ. ಡೆಂಬೆಲೆ ಈ ಟೂರ್ನಿಯಲ್ಲಿ ತಮ್ಮ ಐದನೇ ಗೋಲು ದಾಖಲಿಸಿದರು.

ನೋಡಿರಿ

