ಬಾಂಗ್ಲಾದಲ್ಲಿ ಏಷ್ಯಾಕಪ್ ಆಡುತ್ತಾ ಭಾರತ? – ವಿಶ್ವಕಪ್ ಬಹಿಷ್ಕಾರಕ್ಕೆ ಸೇಡು ಕಾದಿದ್ಯಾ?
BCCI ಮುಂದೆ ಬೆಕ್ಕಿನಂತಾದ BCB!

ಭಾರತ ಮತ್ತು ಬಾಂಗ್ಲಾ ಕ್ರಿಕೆಟ್ ನಡುವೆ ಈಗ ಎಲ್ಲವೂ ಸರಿ ಇಲ್ಲ.. ಐಪಿಎಲ್ನಿಂದ ಬಾಂಗ್ಲಾ ಪ್ಲೇಯರ್ನ ಕೈಬಿಟ್ಟದ್ದು ಆ ನಂತ್ರ ಟಿ-20 ವಿಶ್ವಕಪ್ನಲ್ಲಿ ಭಾರತಕ್ಕೆ ಬರಲ್ಲ ಅಂತಾ ಬಾಂಗ್ಲಾ ಟೂರ್ನಿಯನ್ನೇ ಬಾಯ್ಕಾಟ್ ಮಾಡಿದ್ದು. ಬಟ್ ಈಗ ಇರೋ ಪ್ರಶ್ನೆ ಅಂದ್ರೆ 2027ರ ಏಷ್ಯಾಕಪ್ ಆಡೋಕೆ ಭಾರತದ ಆಟಗಾರರು ಬಾಂಗ್ಲಾಗೆ ಹೋಗ್ತಾರಾ ಅನ್ನೋದು. ಯಾಕಂದ್ರೆ ಏಷ್ಯಾಕಪ್ ಟೂರ್ನಿ ಬಾಂಗ್ಲಾದಲ್ಲಿ ನಡೆಯಲಿದೆ.
ಇದನ್ನೂ ಓದಿ : ರಾತ್ರಿ ಹೊತ್ತು ಉಸಿರಾಡಲು ಕಷ್ಟ ಆಗ್ತಿದ್ಯಾ? – ಎಚ್ಚರ.. ಇದು ಸ್ಲೀಪ್ ಅಪ್ನಿಯಾದ ಲಕ್ಷಣ!
ಏಷ್ಯನ್ ರಾಷ್ಟ್ರಗಳ ಪ್ರತಿಷ್ಠೆಯಾಗಿರೋ ಏಷ್ಯಾಕಪ್ನಲ್ಲಿ ಭಾರತವೇ ಬಾಸ್. 2027ಕ್ಕೆ ನಡೆಯಲಿರೋ ಏಷ್ಯಾಕಪ್ ಟೂರ್ನಿಗೆ ಡೇಟ್ ಫಿಕ್ಸ್ ಆಗಿದೆ. ಜೂನ್ 18 ರಿಂದ ಪಂದ್ಯಾವಳಿ ಸ್ಟಾರ್ಟ್ ಆಗಲಿದ್ದು ಜುಲೈ 4ಕ್ಕೆ ಫೈನಲ್ ಫೈಟ್ ಇದೆ. ಈ ಟೂರ್ನಿಯ ಆತಿಥ್ಯವನ್ನು ಬಾಂಗ್ಲಾದೇಶ ತಗೊಂಡಿದೆ. ಈ ಏಷ್ಯಾಕಪ್ನ ಉದ್ದೇಶವೇ ಅಪ್ಕಮಿಂಗ್ ವಿಶ್ವಕಪ್ಗಳ ಪ್ರಿಪರೇಷನ್ಸ್ ಥರ ಏಷ್ಯನ್ ನೇಷನ್ಸ್ ಅದೇ ಮಾದರಿಯಲ್ಲಿ ಆಡೋದು. ಅಂದ್ರೆ ವಿಶ್ವಕಪ್ ಮಾದರಿಗಳಿಗೆ ಅನುಗುಣವಾಗಿ ಏಷ್ಯಾ ಕಪ್ ಮಾದರಿಯನ್ನೂ ಚೇಂಜ್ ಮಾಡ್ತಾರೆ ಇರ್ತಾರೆ.
2027ರ ಕೊನೆಯಲ್ಲಿ ಐಸಿಸಿ ಮೆನ್ಸ್ ಏಕದಿನ ವಿಶ್ವಕಪ್ ಇದೆ. ಹೀಗಾಗಿ ಅದಕ್ಕೂ ಮುನ್ನ 50 ಓವರ್ಗಳ ಮಾದರಿಯಲ್ಲಿ ಏಷ್ಯಾಕಪ್ ಟೂರ್ನಿ ನಡೆಯುತ್ತೆ. ಅದಕ್ಕಾಗಿ ಬಾಂಗ್ಲಾದೇಶದ ಮಿರ್ಪುರ್, ಚತ್ತೋಗ್ರಾಂ, ಸೈಲ್ಹೆಟ್ ಸ್ಟೇಡಿಯಂಗಳನ್ನ ಫೈನಲ್ ಮಾಡಿದ್ದು ಈ ಮೂರು ಮೈದಾನದಲ್ಲಿ ಟೂರ್ನಿಯ ಪಂದ್ಯಗಳನ್ನ ಆಡಿಸಲಾಗುತ್ತೆ. ಏಷ್ಯಾದ ಟಾಪ್-5 ಸದಸ್ಯ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ್, ಶ್ರೀಲಂಕಾ, ಬಾಂಗ್ಲಾದೇಶ್, ಅಫ್ಘಾನಿಸ್ತಾನ್ ಆಡೋದು ಕನ್ಫರ್ಮ್ ಆಗಿದೆ. ಇನ್ನೊಂದು ತಂಡ ಅರ್ಹತಾ ಸುತ್ತಿನಲ್ಲಿ ಗೆದ್ದು ಚಾನ್ಸ್ ಪಡೆಯುತ್ತೆ. ಟೋಟಲ್ ಆಗಿ 6 ಟೀಮ್ಸ್ ನಡುವೆ ಟ್ರೋಫಿಗಾಗಿ ಫೈಟ್ ನಡೆಯಲಿದೆ. ಇಂಟ್ರೆಸ್ಟಿಂಗ್ ಅಂದ್ರೆ 11 ವರ್ಷಗಳ ನಂತರ ಬಾಂಗ್ಲಾದಲ್ಲಿ ಈ ಟೂರ್ನಿ ಶೆಡ್ಯೂಲ್ ಆಗಿರುವಂಥದ್ದು. ಬಾಂಗ್ಲಾದೇಶ ಕೊನೆಯದಾಗಿ 2016 ರಲ್ಲಿ ಏಷ್ಯಾ ಕಪ್ (ಟಿ20 ಮಾದರಿ) ಆಯೋಜಿಸಿತ್ತು. ಈಗ 11 ವರ್ಷಗಳ ಬಳಿಕ ಮತ್ತೆ ಹೊಸ್ಟಿಂಗ್ ಅವಕಾಶ ಸಿಕ್ಕಿದೆ. ಆದ್ರೆ ಇರೋ ಪ್ರಶ್ನೆ ಅಂದ್ರೆ ಭಾರತ ಏಷ್ಯಾಕಪ್ ಟೂರ್ನಿಗಾಗಿ ಬಾಂಗ್ಲಾದೇಶಕ್ಕೆ ತೆರಳುತ್ತಾ ಅನ್ನೋದು.
ಭಾರತಕ್ಕೆ ಬಾರದ ಬಾಂಗ್ಲಾ.. ಬಾಂಗ್ಲಾಗೆ ಹೋಗುತ್ತಾ ಭಾರತ?
2025ರ ಎಂಡ್ವರೆಗೂ ಭಾರತ-ಬಾಂಗ್ಲಾ ನಡುವೆ ಎಲ್ಲವೂ ಚೆನ್ನಾಗಿತ್ತು. ಆದ್ರೆ ಯಾವಾಗ ಬಾಂಗ್ಲಾದೇಶದಲ್ಲಿ ಮೂಲಭೂತವಾದಿಗಳು ಹಿಂದೂಗಳ ಮೇಲೆ ಹಿಂಸಾಚಾರಕ್ಕೆ ನಡೆಸಿದ್ರೂ ಭಾರತದಲ್ಲೂ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಐಪಿಎಲ್ನಲ್ಲಿ ಬಾಂಗ್ಲಾ ಪ್ಲೇಯರ್ಸ್ ಆಡೋದು ಬೇಡ ಅಂತಾ ಕ್ಯಾಂಪೇನ್ ಸ್ಟಾರ್ಟ್ ಆಗಿತ್ತು. ಇದ್ರಿಂದಾಗಿ ಕೆಕೆಆರ್ ತಂಡದಿಂದ ಮುಸ್ತಫಿಜುರ್ ರೆಹಮಾನ್ರನ್ನ ಕೈಬಿಡಲಾಗಿತ್ತು. ಬಿಸಿಸಿಐನ ಈ ನಡೆಯಿಂದ ಸಿಟ್ಟಾಗಿದ್ದ ಬಾಂಗ್ಲಾದೇಶ 2026ರ ಟಿ-20 ವಿಶ್ವಕಪ್ನಿಂದ ಹೊರಗುಳಿದಿತ್ತು. ಯಾಕಂದ್ರೆ ಭಾರತ ಹಾಗೇ ಲಂಕಾ ಆತಿಥ್ಯದಲ್ಲಿ ನಡೆದ ಈ ಟೂರ್ನಿಯಲ್ಲಿ ಪಾಕಿಸ್ತಾನದ ಪಂದ್ಯಗಳೆಲ್ಲಾ ಲಂಕಾದಲ್ಲಿ ನಡೆದಿದ್ರೆ ಉಳಿದ ಪಂದ್ಯಗಳಿಗೆ ಭಾರತ ಆತಿಥ್ಯ ವಹಿಸಿತ್ತು. ಶೆಡ್ಯೂಲ್ ಪ್ರಕಾರ ಬಾಂಗ್ಲಾ ಕೂಡ ಭಾರತಕ್ಕೆ ಬಂದು ಪಂದ್ಯಗಳನ್ನ ಆಡ್ಬೇಕಿತ್ತು. ಆದ್ರೆ ಮುಸ್ತಫಿಜುರ್ ರೆಹಮಾನ್ರನ್ನ ಐಪಿಎಲ್ನಿಂದ ಕೈಬಿಟ್ಟಿದ್ದಕ್ಕೆ ಬಾಂಗ್ಲಾ ಕೂಡ ನಮಗೆ ಭದ್ರತೆ ಸಮಸ್ಯೆ ಕಾಡುತ್ತೆ. ನಾವು ಭಾರತಕ್ಕೆ ಬಂದು ವಿಶ್ವಕಪ್ ಆಡಲ್ಲ ಅಂತಾ ಹಿಂದೆ ಸರಿದಿದ್ರು. ಆದ್ರೀಗ ಅದೇ ಬಾಂಗ್ಲಾದಲ್ಲಿ ಏಷ್ಯಾಕಪ್ ನಡೆಯುತ್ತಿದ್ದು ಭಾರತ ಬಾಂಗ್ಲಾದೇಶಕ್ಕೆ ಹೋಗಿ ಟೂರ್ನಿ ಆಡುತ್ತಾ ಅನ್ನೋ ಪ್ರಶ್ನೆಗಳು ಮೂಡಿವೆ. ಇದ್ರ ನಡುವೆ ಬಾಂಗ್ಲಾ ಕೂಡ ಭಾರತದ ಆತಿಥ್ಯಕ್ಕೆ ಉತ್ಸುಕವಾಗಿದೆ.
ಭಾರತಕ್ಕೆ ವಿಶೇಷ ಭದ್ರತೆ ನೀಡುತ್ತೇವೆಂದ ಬಾಂಗ್ಲಾದೇಶ!
ಕಳೆದ ವಿಶ್ವಕಪ್ನಲ್ಲಿ ಭಾರತಕ್ಕೆ ಚಾಲೆಂಜ್ ಹಾಕೋ ರೀತಿಯಲ್ಲಿ ಬಾಂಗ್ಲಾದೇಶ ರಿಯಾಕ್ಟ್ ಮಾಡಿತ್ತು. ಆದ್ರೀಗ ಭಾರತದ ಜೊತೆ ಮತ್ತೆ ಫ್ರೆಂಡ್ಶಿಪ್ಗಾಗಿ ಕಾಯ್ತಾ ಇದೆ. ಅದಕ್ಕೆ ಕಾರಣವೂ ಇದೆ. ವಿಶ್ವಕಪ್ ಟೈಮಲ್ಲಿ ಬಾಂಗ್ಲಾದಲ್ಲಿ ಎಲೆಕ್ಟೆಡ್ ಗೌರ್ಮೆಂಟ್ ಇರ್ಲಿಲ್ಲ. ತಾತ್ಕಾಲಿಕ ಆಡಳಿತ ಅಷ್ಟೇ ಇತ್ತು. ಌಂಡ್ ಅವ್ರೆಲ್ಲಾ ಅಲ್ಲಿನ ಫಂಡಮೆಂಟಲಿಸ್ಟ್ಗಳ ಪರ ಇದ್ದವ್ರು. ಹೀಗಾಗಿ ಭಾರತವನ್ನ ವಿರೋಧ ಮಾಡಿದ್ರು. ಆದ್ರೀಗ ಬಾಂಗ್ಲಾದಲ್ಲಿ ಚುನಾಯಿತ ಸರ್ಕಾರ ಇದೆ. ಭಾರತದ ಜೊತೆಗಿನ ಸಂಬಂಧವನ್ನ ಸುಧಾರಣೆ ಮಾಡಿಕೊಳ್ಳೋಕೆ ನೋಡ್ತಿದ್ದಾರೆ. ಅದು ಕ್ರಿಕೆಟ್ ಆದ್ರೂ ಅಷ್ಟೇ ರಾಜಕೀಯದಲ್ಲಾದ್ರೂ ಅಷ್ಟೇ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಂತೂ ನಾವು ಬಿಸಿಸಿಐ ಜೊತೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತೇವೆ ಅಂತಾ ಓಪನ್ನಾಗೇ ಸ್ಟೇಟ್ಮೆಂಟ್ಸ್ ಕೊಟ್ಟಿದ್ರು. ಌಂಡ್ ದ್ವಿಪಕ್ಷೀಯ ಸರಣಿಗಳ ಆಯೋಜನೆಗೂ ಮನವಿ ಮಾಡಿದ್ರು. ಹಾಗ್ ನೋಡಿದ್ರೆ ಭಾರತದ ಜೊತೆ ಕ್ರಿಕೆಟ್ ಆಡೋದು ಬಾಂಗ್ಲಾದೇಶಕ್ಕೇ ಲಾಭ. ಅತೀಹೆಚ್ಚು ಕ್ರಿಕೆಟ್ ಫ್ಯಾನ್ಸ್ ಇರೋ ಟೀಂ ಇಂಡಿಯಾ ವಿರುದ್ಧ ಪಂದ್ಯಗಳನ್ನ ಆಡಿದ್ರೆ ಗೆದ್ರೂ ಸೋತ್ರೂ ಫೈನಾನ್ಶಿಯಲಿ ಲಾಭ ಮಾಡಿಕೊಳ್ತಾರೆ. ಗ್ಲೋಬಲ್ ಮಟ್ಟದಲ್ಲಿ ನೇಮ್, ಫೇಮ್ ಸಿಗುತ್ತೆ. ಹೀಗಾಗಿ ಭಾರತವನ್ನ ಎದುರು ಹಾಕಿಕೊಳ್ಳೋಕೆ ನೋಡೋಲ್ಲ. ಈಗಿರೋ ಅಲ್ಲಿನ ಗೌರ್ಮೆಂಟ್ ಕೂಡ ಇದೇ ಪ್ಲ್ಯಾನ್ನಲ್ಲಿದೆ. ಹೀಗಾಗೇ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಭದ್ರತಾ ಸಮಿತಿಯ ಅಧ್ಯಕ್ಷ ಸಯೀದ್ ಇಬ್ರಾಹಿಂ ಅಹ್ಮದ್ 2027ರ ಏಷ್ಯಾಕಪ್ನಲ್ಲಿ ಭಾರತ ತಂಡದ ಆಟಗಾರರು ಬಾಂಗ್ಲಾದೇಶಕ್ಕೆ ಬಂದು ಪಂದ್ಯಗಳನ್ನ ಆಡಬಹುದು ಎಂದಿದ್ದಾರೆ. ಹಾಗೇ ವಿಶೇಷ ಭದ್ರತಾ ವ್ಯವಸ್ಥೆಗಳನ್ನ ಕಲ್ಪಿಸೋದಾಗಿಯೂ ಹೇಳಿದ್ದಾರೆ. ಸೋ ಅಲ್ಲಿಗೆ ಬಾಂಗ್ಲಾ ಕ್ರಿಕೆಟ್ ಮಂಡಳಿ ಏನೋ ನಮ್ಮ ರಾಷ್ಟ್ರಕ್ಕೆ ಬನ್ನಿ ಅಂತಾ ಭಾರತಕ್ಕೆ ರೆಡ್ ಕಾರ್ಪೆಟ್ ಹಾಕ್ತಿದೆ. ಆದ್ರೆ ಆಟಗಾರರ ಸುರಕ್ಷತೆ ಹಾಗೇ ಕೇಂದ್ರ ಸರ್ಕಾರದ ನಿರ್ಧಾರದ ಬಳಿಕ ಮುಂದಿನ ಹೆಜ್ಜೆ ಇಡಲಿದೆ.

ನೋಡಿರಿ

