ಸಂಜುಗೆ ಮಾತ್ರ ಫಾರ್ಮ್… ತಿಲಕ್‌ಗೆ ಇಲ್ವಾ ? – ಅಭಿಷೇಕ್ OVER TAKE ಮಾಡಿದ ಕಿಶನ್

ಸಂಜುಗೆ ಮಾತ್ರ ಫಾರ್ಮ್… ತಿಲಕ್‌ಗೆ ಇಲ್ವಾ ? –  ಅಭಿಷೇಕ್ OVER TAKE ಮಾಡಿದ ಕಿಶನ್

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು 

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 2-0 ಹಿನ್ನಡೆ ಅನುಭವಿಸಿದ್ದು, ಇಂದು ನಡೆಯೋ 4ನೇ ಪಂದ್ಯದಲ್ಲಿ ಗೆಲುವಿಗಾಗಿ ಹೋರಾಟ ನಡೆಸಲಿದೆ. ಹೀನಾಯ ಪ್ರದರ್ಶನದಿಂದ ತಂಡಕ್ಕೆ ಸರಣಿ ಗೆಲ್ಲುವ ಅವಕಾಶವಿಲ್ಲ. ಆದರೆ ಸರಣಿಯಲ್ಲಿ 2-2 ರ ಸಮಬಲ ಸಾಧಿಸಲು ತಂಡಕ್ಕೆ ಗೆಲುವು ಅಗತ್ಯವಾಗಿದೆ. ಹೀಗಾಗಿ ತಂಡಕ್ಕೆ ಬಲಿಷ್ಠ ಪ್ಲೇಯಿಂಗ್ 11 ಅಗತ್ಯವಿದೆ. ಬ್ಯಾಟಿಂಗ್ ವೈಫಲ್ಯ, ಕಳಪೆ ಫಾರ್ಮ್‌ನಿಂದ ಆಟಗಾರರ ಬದಲಾವಣೆ ನಿರೀಕ್ಷಿಸಲಾಗಿದ್ದು, ಸಂಜು ಸ್ಯಾಮ್ಸನ್ ಕಣಕ್ಕಿಳಿಯುವ ಸಾಧ್ಯತೆ ಇದೆ.

ಕಳಪೆ ಫಾರ್ಮ್ ಕಾರಣ ನೀಡಿ ಸಂಜು ಸ್ಯಾಮ್ಸನ್‌ರನ್ನ ತಂಡದಿಂದ ಹೊರಗಿಟ್ಟಿದ್ದೀರಿ, ಆದರೆ ಇದೇ ವಿಷಯವನ್ನು ತಿಲಕ್ ವರ್ಮಾ ವಿಚಾರದಲ್ಲಿ ಮುಂದಿಡಲಾಗುತ್ತಿಲ್ಲ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಸಂಜು ಸ್ಯಾಮ್ಸನ್ ಫಾರ್ಮ್​ ಪ್ರಶ್ನಿಸಿದವರಿಗೆ, ತಿಲಕ್ ವರ್ಮಾ ಅವರ ಕಳಪೆ ಫಾರ್ಮ್ ಕಾಣಿಸುತ್ತಿಲ್ಲ. ನನ್ನ ಪ್ರಕಾರ, ಫಾರ್ಮ್‌ನಲ್ಲಿಲ್ಲದ ಆಟಗಾರನನ್ನು ಬೆಂಬಲಿಸುವ ಬದಲು, ಸಂಜು ಸ್ಯಾಮ್ಸನ್ ಅವರಿಗೆ ತಕ್ಷಣವೇ ಪ್ಲೇಯಿಂಗ್  11ನಲ್ಲಿ ಅವಕಾಶ ನೀಡಬೇಕು ಎಂದಿದ್ದಾರೆ .

ಇದನ್ನೂ ಓದಿ: ಟುಕ್ ಟುಕ್ ತಿಲಕ್ ವರ್ಮಾ ಬೇಡ – ಪವರ್ ಹಿಟ್ಟರ್ಸ್ ಪ್ರಾಬ್ಲಂ ಏನು?

ಭಾರತದ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ 125 ರನ್‌ಗಳ ಐತಿಹಾಸಿಕ ಜಯ ಸಾಧಿಸಿದ ಬಳಿಕ ಮಾತನಾಡಿದ ಜೋಫ್ರಾ ಆರ್ಚರ್,  ಐಪಿಎಲ್‌ನ ಬ್ಯಾಟಿಂಗ್ ಸ್ನೇಹಿ ಪಿಚ್ ಹಾಗೂ ಸಣ್ಣ ಬೌಂಡರಿಗಳ ಬಗ್ಗೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಹೋಲಿಸಿದರೆ ಇಂಗ್ಲೆಂಡ್‌ನ ಪರಿಸ್ಥಿತಿ ಬೌಲರ್‌ಗಳಿಗೆ ಪೂರಕವಾಗಿದ್ದು, ತಪ್ಪುಗಳನ್ನು ತಿದ್ದಿಕೊಳ್ಳಲು ಇಲ್ಲಿ ಹೆಚ್ಚಿನ ಅವಕಾಶವಿದೆ ಎಂದು ಹೇಳಿದ್ದಾರೆ.

ಟಿ20 ಕ್ರಿಕೆಟ್​ನ ಅಬ್ಬರ ಹಾಗೂ ಬದಲಾಗುತ್ತಿರುವ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಮಹತ್ವದ ಬದಲಾವಣೆ ತರಲು ಗಂಭೀರ ಚಿಂತನೆ ನಡೆಸುತ್ತಿದೆ. ಸದ್ಯ ಚಾಲ್ತಿಯಲ್ಲಿರುವ 50 ಓವರ್‌ಗಳ ಪಂದ್ಯವನ್ನು 40 ಓವರ್‌ಗಳಿಗೆ ಕಡಿತಗೊಳಿಸುವ ಪ್ರಸ್ತಾವನೆ ಇದೀಗ ಐಸಿಸಿ ಮುಂದಿದೆ. ಟಿ20 ಲೀಗ್‌ಗಳ ಭರಾಟೆಯ ಮಧ್ಯೆ ಏಕದಿನ ಕ್ರಿಕೆಟ್​ಗೆ ಪ್ರೇಕ್ಷಕರ ಕೊರತೆ ಉಂಟಾಗುತ್ತಿರುವುದನ್ನು ಮನಗಂಡಿರುವ ಮೆಕಿನ್ಸೆ ಸಂಸ್ಥೆಯು, ಏಕದಿನ ಕ್ರಿಕೆಟ್ ಅನ್ನು ಉಳಿಸಿಕೊಳ್ಳಬೇಕಿದ್ದರೆ ಈ ಬದಲಾವಣೆ ಅನಿರ್ವಾಯ ಎಂದಿದ್ದಾರೆ.

ಐಸಿಸಿ ಟಿ20 ಶ್ರೇಯಾಂಕದಲ್ಲಿ ಟೀಮ್ ಇಂಡಿಯಾದ ಯುವ ಸೆನ್ಸೇಷನ್ ಮತ್ತು ಎಡಗೈ ಓಪನರ್ ಇಶಾನ್ ಕಿಶನ್‌ ಯಶಸ್ವಿಯಾಗಿ ನಂಬರ್ ಒನ್ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಜೊತೆಗೆ ಸಹ ಎಡಗೈ ಬೌಲರ್ ಅಭಿಷೇಕ್ ಶರ್ಮಾ ಎರಡನೇ ಸ್ಥಾನದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ಆದ್ರೆ 2022ರಲ್ಲಿ ಟಾಪ್ 10ಕ್ಕೆ ಎಂಟ್ರಿಕೊಟ್ಟಿದ್ದ ಸೂರ್ಯಕುಮಾರ್ ಯಾದವ್ 4 ವರ್ಷಗಳ ಬಳಿಕ ಐದು ಸ್ಥಾನಗಳು ಕುಸಿತ ಕಂಡು 13ನೇ ಸ್ಥಾನಕ್ಕೆ ತಲುಪಿದ್ದಾರೆ.

ಗಂಗೂಲಿಗೆ ಅಂತರರಾಷ್ಟ್ರೀಯ ಕ್ರಿಕೆಟ್​ನಿಂದಲೂ ಸ್ಮರಣೀಯ ಕಾಣಿಕೆಯೊಂದು ಸಿಕ್ಕಿದೆ. ಸೌರವ್‌ ಹುಟುಹಬ್ಬದ ಸಂತಸದಲ್ಲಿರುವ ಗಂಗೂಲಿ ಐಸಿಸಿ ಹಾಲ್ ಆಫ್ ಫೇಮ್​ ಗೌರವಕ್ಕೆ ಭಾಜನರಾಗಿದ್ದಾರೆ.  ಈ ವಿಚಾರವನ್ನು ಸ್ವತಃ ಗಂಗೂಲಿ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.   ‘ನನ್ನನ್ನು ಹಾಲ್ ಆಫ್ ಫೇಮ್‌ಗೆ ಸೇರಿಸಿದ್ದಕ್ಕಾಗಿ ಐಸಿಸಿ ಮತ್ತು ಅಧ್ಯಕ್ಷ ಜಯ್ ಶಾ ಅವರಿಗೆ ಧನ್ಯವಾದಗಳು. ಇದು ಒಂದು ದೊಡ್ಡ ಗೌರವ. ಇಲ್ಲಿಯವರೆಗೆ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡ ಕೇವಲ 10 ಭಾರತೀಯರಲ್ಲಿ ಒಬ್ಬರಾಗಿರುವುದು ಅದ್ಭುತವಾಗಿದೆ ಬರೆದುಕೊಂಡಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳು ಲಾರ್ಡ್ಸ್‌ನಲ್ಲಿ ಐತಿಹಾಸಿಕ ಟೆಸ್ಟ್ ಪಂದ್ಯವಾಡಲು ಸಜ್ಜಾಗಿವೆ. ಜುಲೈ 10 ರಿಂದ 13 ರವರೆಗೆ ನಡೆಯಲಿರುವ ಈ ಪಂದ್ಯ, ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಮೊದಲ ಮಹಿಳಾ ಟೆಸ್ಟ್ ಆಗಿದೆ. ಪ್ರಮುಖ ಆಟಗಾರ್ತಿ ಪ್ರತೀಕಾ ರಾವಲ್ ಹೊರಗುಳಿದಿದ್ದು, ಅವರ ಸ್ಥಾನಕ್ಕೆ ಪ್ರಿಯಾ ಪುನಿಯಾ ಸೇರ್ಪಡೆಯಾಗಿದ್ದಾರೆ.

ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನ ಉದ್ಘಾಟನಾ ಪಂದ್ಯ ಭಾರತದ ಚೆನ್ನೈನಲ್ಲಿ ನಡೆಯುವುದು ಕನ್ಫರ್ಮ್​ ಆಗಿದೆ. 2026ರ ಡಿಸೆಂಬರ್ 12 ರಂದು ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಪರ್ತ್ ಸ್ಕಾರ್ಚರ್ಸ್ ತಂಡಗಳು ಮುಖಾಮುಖಿಯಾಗಲಿವೆ.  ಭಾರತದ ಕ್ರಿಕೆಟ್ ಪ್ರೇಮಿಗಳನ್ನು ಸೆಳೆಯಲು ಮತ್ತು ಬಿಬಿಎಲ್ ಟೂರ್ನಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಕ್ರಿಕೆಟ್ ಆಸ್ಟ್ರೇಲಿಯಾ ಈ ಮಾಸ್ಟರ್ ಪ್ಲಾನ್ ಮಾಡಿದೆ.

ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ 20 ವರ್ಷದ ಲುಹಾನ್-ಡ್ರೆ ಪ್ರಿಟೋರಿಯಸ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ತಂಡದ  ಎಂಐ ನ್ಯೂಯಾರ್ಕ್​ ಬೌಲರ್​ಗಳ ಬೆಂಡೆತ್ತಿದ ಪ್ರಿಟೋರಿಯಸ್ 52 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 10 ಫೋರ್​ಗಳೊಂದಿಗೆ ಶತಕ ಪೂರೈಸಿದ್ದರು. ಈ ಶತಕದೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಲ್ಪ ಮೊತ್ತ ಬೆನ್ನತ್ತುವಾಗ ಸೆಂಚುರಿ ಸಿಡಿಸಿದ ಬ್ಯಾಟರ್​ ಎಂಬ ವಿಶ್ವ ದಾಖಲೆ ಬರೆದಿದ್ದಾರೆ.

ಪಾಕಿಸ್ತಾನದ ಬ್ಯಾಟ್ಸ್‌ಮನ್ ಬಾಬರ್ ಅಜಮ್‌ಗೆ ಮತ್ತೆ  T20I ನಾಯಕನ ಪಟ್ಟ ಸಿಗುವ ಸಾಧ್ಯತೆಯಿದ್ದು, ಈಬಗ್ಗೆ ಪಿಸಿಬಿ ಚಿಂತನೆ ನಡೆಸಿದೆ. ಬಾಬರ್ ಈ ಹಿಂದೆ ಪಾಕಿಸ್ತಾನವನ್ನು ಮೂರು ಸ್ವರೂಪಗಳಲ್ಲಿ ಮುನ್ನಡೆಸಿದ್ದರು ಮತ್ತು T20I ಗಳಲ್ಲಿ ಗಣನೀಯ ಯಶಸ್ಸನ್ನು ಕಂಡಿದ್ರು. ಇವರ ನಾಯಕತ್ವದಲ್ಲಿ, ತಂಡವು 2021 ರ T20 ವಿಶ್ವಕಪ್‌ನ ಸೆಮಿಫೈನಲ್ ತಲುಪಿತು ಮತ್ತು 2022 ರ ಆವೃತ್ತಿಯಲ್ಲಿ ರನ್ನರ್-ಅಪ್ ಸ್ಥಾನ ಗಳಿಸಿತು. ಹೀಗಾಗಿ ಮತ್ತೆ ಇವರಿಗೆ ಟಿ20ಐ ನಾಯಕತ್ವದ ಜವಾಬ್ದಾರಿ ನೀಡಲು ಪಿಸಿಬಿ ಮುಂದಾಗಿದೆ.

Kishor KV

Leave a Reply

Your email address will not be published. Required fields are marked *