ನಾಳೆಯಿಂದ ಆಪರೇಷನ್ ಅನಾಥ ವೆಹಿಕಲ್ಸ್ – ನಿಮ್ಮ ವಾಹನ ಫುಟ್‌ಪಾತ್ ಮೇಲಿದ್ರೆ ಹುಷಾರ್

ಕಾಂಗ್ರೆಸ್ ಸರ್ಕಾರ ಆಪರೇಷನ್ ಫುಟ್‌ಪಾತ್ ನಡೆಸುತ್ತಿರೋ ಬೆನ್ನಲ್ಲೇ ಮತ್ತೊಂದು ಕಾರ್ಯಾಚರಣೆಗೆ ಇಳಿದಿದೆ. ಈಗ ಆಪರೇಷನ್ ಅನಾಥ ವಾಹನಗಳ ವಿರುದ್ಧ ದೊಡ್ಡ ಕ್ರಮ ಕೈಗೊಳ್ಳುವುದ್ದಕ್ಕೆ ಕೈ ಸರ್ಕಾರ ಮುಂದಾಗಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಜುಲೈ 10ರಿಂದ ನಗರಾದ್ಯಂತ ವಿಶೇಷ ಕಾರ್ಯಾಚರಣೆ ಆರಂಭಿಸುತ್ತಿದೆ.
ಬೆಂಗಳೂರು ಸಂಚಾರ ಪೊಲೀಸರ ಸಹಯೋಗದಲ್ಲಿ ಐದು ನಗರ ನಿಗಮಗಳು ಈ ಕಾರ್ಯಾಚರಣೆಯನ್ನು ನಡೆಸಲಿದ್ದು, ಗುರುತಿಸಲಾದ ವಾಹನಗಳಿಗೆ ನೋಟಿಸ್ ನೀಡಿ, ಬಳಿಕ ಅವುಗಳನ್ನು ವಶಕ್ಕೆ ಪಡೆದು ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ. ಜಿಬಿಎ ಕಾಯ್ದೆ-2024ರ ಸೆಕ್ಷನ್ 324ರ ಅಡಿಯಲ್ಲಿ ಈ ಕಾರ್ಯಾಚರಣೆ ನಡೆಯಲಿದ್ದು, ಜುಲೈ 8ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ.
ಇದನ್ನೂ ಓದಿ: ಅರಬೈಲ್ ಘಾಟ್‌ನಲ್ಲಿ ಕ್ರೂಸರ್- ಲಾರಿ ಡಿಕ್ಕಿ, 7 ಯುವಕರು ಸಾವು – ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಇತ್ತೀಚೆಗೆ ಪಾದಚಾರಿ ಮಾರ್ಗಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸುವ ಉದ್ದೇಶದಿಂದ ಕೈಗೊಂಡಿದ್ದ ‘ಸೇಫ್ ಫುಟ್‌ಪಾತ್ ಕ್ಯಾಂಪೇನ್’ ಜುಲೈ 10ಕ್ಕೆ ಅಂತ್ಯಗೊಳ್ಳಲಿದ್ದು, ಅದರ ಬೆನ್ನಲ್ಲೇ ಅನಾಥ ವಾಹನಗಳ ತೆರವು ಕಾರ್ಯಾಚರಣೆ ಆರಂಭವಾಗುತ್ತಿದೆ. ಜಿಬಿಎ ಅಧಿಕಾರಿಗಳ ಮಾತನಾಡಿ, ಮೊದಲಿಗೆ ಹಲವು ದಿನಗಳಿಂದ ರಸ್ತೆ, ಖಾಲಿ ಜಾಗ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿ ಯಾರೂ ಬಳಸದ ವಾಹನಗಳನ್ನು ಗುರುತಿಸಲಾಗುತ್ತದೆ. ನಂತರ ವಾಹನಗಳ ಮೇಲೆ ಸ್ಟಿಕ್ಕರ್ ಅಂಟಿಸಿ, ಮಾಲೀಕರಿಗೆ 7 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ನೋಟಿಸ್ ಅಂಟಿಸುವ ವೇಳೆ ವಾಹನಕ್ಕೆ ವೀಲ್ ಕ್ಲ್ಯಾಂಪ್ ಅಳವಡಿಸಲಾಗುತ್ತದೆ. ಏಳು ದಿನಗಳೊಳಗೆ ವಾಹನವನ್ನು ತೆರವುಗೊಳಿಸದಿದ್ದರೆ, ಜಿಬಿಎ ಹಾಗೂ ಸಂಚಾರ ಪೊಲೀಸರು ಜಂಟಿಯಾಗಿ ವಾಹನವನ್ನು ಟೋಯಿಂಗ್ ಮಾಡಿ ವಶಕ್ಕೆ ಪಡೆಯಲಿದ್ದಾರೆ.
ನಂತರ ನ್ಯಾಯಾಲಯದ ಅನುಮತಿ ಪಡೆದು ವಾಹನಗಳನ್ನು ಸಾರ್ವಜನಿಕ ಹರಾಜು ಮೂಲಕ ವಿಲೇವಾರಿ ಮಾಡಲಾಗುತ್ತದೆ. ಹರಾಜಿನ ಬಳಿಕ ವಾಹನಗಳ ಮೇಲೆ ಯಾವುದೇ ಹಕ್ಕು ಮಂಡಿಸಲು ಅವಕಾಶ ಇರುವುದಿಲ್ಲ .

ನೋಡಿರಿ
