ಮದುವೆ ಆಗಿ ಜಸ್ಟ್ 5 ತಿಂಗಳಿಗೆ ಹೆಂಡತಿಯನ್ನ ಹೆಲ್ಮೆಟ್‌ನಿಂದ ಹೊಡೆದು ಕೊ*ದ ಪಾಪಿ ಗಂಡ

ಹುಬ್ಬಳ್ಳಿ ಸಮೀಪದ ತಾರಿಹಾಳ ಗ್ರಾಮದಲ್ಲಿ ಮದುವೆಯಾಗಿ ಐದನೇ ತಿಂಗಳಲ್ಲೇ ಯುವತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಪತಿ- ಪತ್ನಿ ನಡುವೆ ನಡೆದ ಜಗಳದ ವೇಳೆ ಪತ್ನಿಯ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಗಂಭೀರವಾಗಿ ಗಾಯಗೊಂಡ 22 ವರ್ಷದ ನಾಗರತ್ನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಬಾಡಿಗೆದಾರರೇ ಬೇಡ ಆತಂಕ – ಈ ದಾಖಲೆಗಳಿದ್ರೆ ಕಟ್ ಆಗಲ್ಲ ಗೃಹಜ್ಯೋತಿ
ಮೃತಳನ್ನು ನಾಗರತ್ನ (19ವ) ಎಂದು ಗುರುತಿಸಲಾಗಿದ್ದು, ಮದುವೆಯಾದ ಬಳಿಕ ಪತಿ ಶಿವರಾಜ್ ಜೊತೆ ಹಲವು ಭಿನ್ನಾಭಿಪ್ರಾಯಗಳು ಉಂಟಾಗಿದ್ದವು. ಈ ಕಾರಣದಿಂದ ನಾಗರತ್ನ ತವರು ಮನೆಗೆ ಬಂದು ಮತ್ತೆ ಪತಿಯ ಮನೆಗೆ ತೆರಳದಿರಲು ನಿರ್ಧರಿಸಿದ್ದಳು ಎನ್ನಲಾಗಿದೆ. ಆದ್ರೆ ಗಂಡನ ಮನೆೆಗೆ ಬಂದ ಮೇಲೆ ಮತ್ತೆ ಜಗಳವಾಗಿದೆ. ಈ ವೇಳೆ ಪತ್ನಿಯನ್ನ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿ ಶಿವರಾಜ್ ಕೊಲೆ ಮಾಡಿದ್ದಾನೆ.
ನನ್ನ ಮಗಳು ಅತ್ತೆಮನೆಗೆ ಹೋಗಲು ನಿರಾಕರಿಸಿದ್ದಳು. ಆದರೆ ಅವಳ ಪತಿ, ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ನಮಗೆ ಭರವಸೆ ನೀಡಿದ್ದ. ನಂತರ ಅತ್ತೆಮನೆಯವರು ಮತ್ತು ಪತಿ ಸೇರಿ ಸಂಚು ರೂಪಿಸಿ ನನ್ನ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ನಾಗರತ್ನ ಅವರ ತಾಯಿ ಆರೋಪಿಸಿದ್ದಾರೆ.

ನೋಡಿರಿ

