ಸೂರ್ಯವಂಶಿಗೆ ಜೋಫ್ರಾ ವಾರ್ನಿಂಗ್ – ಸಿಕ್ಸ್ ಹೊಡೆದಿದ್ದಕ್ಕೆ OUT ಮಾಡಿ ಸೇಡು!
IPL ಪಿಚ್ ಗಳನ್ನೂ ಟ್ರೋಲ್ ಮಾಡಿದ್ದೇಕೆ?

ದಿಗ್ಗಜ ಬೌಲರ್ಗಳನ್ನೇ ಚೆಂಡಾಡುತ್ತಾ ಟಿ20ಐ ತಂಡಕ್ಕೆ ಕಾಲಿಟ್ಟಿದ್ದ ವೈಭವ್ ಸೂರ್ಯವಂಶಿ ಇಂಗ್ಲೆಂಡ್ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಡೆಬ್ಯೂನೂ ಮಾಡಿಯಾಯ್ತು. ಎರಡು ಪಂದ್ಯಗಳಲ್ಲಿ ಆಲ್ರೆಡಿ ಬ್ಯಾಟ್ ಬೀಸಿದ್ದು ಬಿಗ್ ಇನ್ನಿಂಗ್ಸ್ ಬಂದಿಲ್ಲ. ಆದ್ರೀಗ ಅದೇ ವೈಭವ್ ಸೂರ್ಯವಂಶಿಗೆ ಅವ್ರ ಐಪಿಎಲ್ ಟೀಂ ಮೇಟ್ ಜೋಫ್ರಾ ಆರ್ಚರ್ ವಾರ್ನಿಂಗ್ ಕೊಟ್ಟಿದ್ದಾರೆ. ಔಟ್ ಮಾಡಿ ಸೇಡು ತೀರಿಸಿಕೊಂಡೆ ಎಂದಿದ್ದಾರೆ. ಅಟ್ ದಿ ಸೇಮ್ ಟೈಂ ಐಪಿಎಲ್ ಪಿಚ್ಗಳನ್ನೂ ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ : ಒಮ್ಮೆ HERO.. ಮತ್ತೊಮ್ಮೆ ZERO! – ಸಂಜುಗೆ ಸಂಜುನೇ ವಿಲನ್ ಆದ್ರಾ?
ಭಾರತ ಹಾಗೇ ಇಂಗ್ಲೆಂಡ್ ನಡುವೆ ಇವತ್ತು ನಾಲ್ಕನೇ ಟಿ-20ಐ ಮ್ಯಾಚ್ ಇದೆ. ಈ ಪಂದ್ಯ ಇಂಗ್ಲೆಂಡ್ ಗೆದ್ರೆ ಸರಣಿ ಅವ್ರ ಕೈವಶ ಆಗುತ್ತೆ. ಭಾರತ ಗೆದ್ರೆ ಸರಣಿ ಜೀವಂತ ಇರುತ್ತೆ. ಹೀಗಾಗಿ ನಾಲ್ಕನೇ ಪಂದ್ಯದ ಗೆಲುವು ಇಬ್ಬರಿಗೂ ಮಸ್ಟ್ ವಿನ್ ಮ್ಯಾಚ್ ಆಗುತ್ತೆ. ಇಂಟ್ರೆಸ್ಟಿಂಗ್ ಅಂದ್ರೆ ವೈಭವ್ ಸೂರ್ಯವಂಶಿ ಬಗ್ಗೆ ಇಂಗ್ಲೆಂಡ್ ಸ್ಟಾರ್ ಬೌಲರ್ ಜೋಫ್ರಾ ಆರ್ಚರ್ ನೀಡಿರೋ ಸ್ಟೇಟ್ಮೆಂಟ್ ಹಲ್ಚಲ್ ಎಬ್ಬಿಸಿದೆ.
ಸೇಡು ತೀರಿಸಿಕೊಂಡಿದ್ದೇನೆ.. ಇನ್ನೂ 2 ಮ್ಯಾಚ್ ಬಾಕಿ ಇದೆ!
ವೈಭವ್ ಸೂರ್ಯವಂಶಿ ಹಾಗೂ ಜೋಫ್ರಾ ಆರ್ಚರ್ ಇಬ್ರೂ ಕೂಡ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಪರವಾಗಿಯೇ ಆಡುವಂಥ ಪ್ಲೇಯರ್ಸ್.. ಒಟ್ಟೊಟ್ಟಿಗೆ ಸಾಕಷ್ಟು ಟೈಂ ಪಾಸ್ ಮಾಡಿದ್ದಾರೆ. ನೆಟ್ಸ್ನಲ್ಲಿ ಪರಸ್ಪರರ ಸ್ಟ್ರೆಂಥ್, ವೀಕ್ನೆಸ್ ಕೂಡ ಗೊತ್ತೇ ಇರುತ್ತೆ. ಪ್ರಸ್ತುತ ಭಾರತ ಹಾಗೇ ಇಂಗ್ಲೆಂಡ್ ಸರಣಿಯಲ್ಲಿ ಆಪೋಸಿಟ್ ಆಡ್ತಿದ್ದಾರೆ. ಐಪಿಎಲ್ನಲ್ಲಿ ವರ್ಲ್ಡ್ಕ್ಲಾಸ್ ಬೌಲರ್ಗಳಿಗೆಲ್ಲಾ ಸಿಕ್ಸ್ ಹೊಡೆದಿದ್ದ ವೈಭವ್ ಈ ಸರಣಿಯಲ್ಲಿ ಜೋಫ್ರಾ ಬೌಲಿಂಗ್ನಲ್ಲೂ ಸಿಕ್ಸ್ ಹೊಡೆದು ತಾನು ಪವರ್ ಹಿಟ್ಟರ್ ಅನ್ನೋದನ್ನ ವೈಭವ್ ಪ್ರೂವ್ ಮಾಡಿದ್ರು. ಹೀಗಾಗಿ ವೈಭವ್ ವರ್ಸಸ್ ಜೋಫ್ರಾ ನಡುವೆ ಫೈಟ್ ನಡೀತಿದೆ. ಎರಡನೇ ಟಿ20ಐ ಮ್ಯಾಚಲ್ಲಿ ಜೋಫ್ರಾ ಆರ್ಚರ್ಗೆ ಫಸ್ಟ್ ಬಾಲಲ್ಲೇ ವೈಭವ್ ಸಿಕ್ಸ್ ಹೊಡೆದಿದ್ರು. ಮೂರನೇ ಟಿ20 ಪಂದ್ಯದಲ್ಲೂ ಅದನ್ನೇ ರಿಪೀಟ್ ಮಾಡಿದ್ದರು. ಇದ್ರಿಂದ ಜೋಫ್ರಾ ಈಗೂ ಹರ್ಟ್ ಆಗಿದ್ದು ಕ್ಲಿಯರ್ ಆಗಿ ಗೊತ್ತಾಗಿತ್ತು. ಇದಾದ್ಮೇಲೆ ವೈಭವ್ ವೀಕ್ನೆಸ್ ತಿಳಿದಿದ್ದ ಜೋಫ್ರಾ ಬ್ಯಾಕ್ ಟು ಬ್ಯಾಕ್ ಬೌನ್ಸರ್ ಹಾಕಿ 13 ರನ್ಗಳಿಗೇ ಔಟ್ ಮಾಡಿದ್ರು. ಪಂದ್ಯದ ಬಳಿಕ ಸೂರ್ಯವಂಶಿ ಔಟ್ ಮಾಡಿದ್ದರ ಬಗ್ಗೆ ಮಾತನಾಡಿದ್ದ ಜೋಫ್ರಾ, ಎರಡು ಸಿಕ್ಸರ್ ಚಚ್ಚಿದ ವೈಭವ್ ಸೂರ್ಯವಂಶಿಯನ್ನು ಔಟ್ ಮಾಡಿ ಸೇಡು ತೀರಿಸಿಕೊಂಡೆ. ಈಗ ಲೆಕ್ಕ ಚುಕ್ತವಾಗಿದೆ ಅನ್ನಿಸುತ್ತಿದೆ ಎಂದಿದ್ರು. ಹಾಗೇ ಸರಣಿಯಲ್ಲಿ ಇನ್ನೂ ಎರಡು ಮ್ಯಾಚ್ ಬಾಕಿ ಇದ್ದು ಯಾರು ಬೇಕಾದ್ರೂ ಮೇಲುಗೈ ಸಾಧಿಸ್ಬೋದು ಅನ್ನೋ ಮೂಲಕ ಮತ್ತೆ ಔಟ್ ಮಾಡೋ ಥರ ವಾರ್ನಿಂಗ್ ಕೊಟ್ಟಿದ್ದಾರೆ. ಇದೇ ವೇಳೆ ಐಪಿಎಲ್ ಪಿಚ್ಗಳ ಬಗ್ಗೆಯೂ ವ್ಯಂಗ್ಯವಾಡಿದ್ದಾರೆ.
ಇಂಗ್ಲೆಂಡ್ ನಲ್ಲಿ ಸಹಜ ಕ್ರಿಕೆಟ್ ಗೆ ಮರಳಿದೆ ಎಂದ ಆರ್ಚರ್!
ಎರಡು ತಿಂಗಳುಗಳ ಕಾಲ ಭಾರತದಲ್ಲಿ ಐಪಿಎಲ್ ಆಡಿದ್ದ ಜೋಫ್ರಾ ಆರ್ಚರ್ ಈಗ ಇಂಗ್ಲೆಂಡ್ ನಲ್ಲಿ ತಂಡದ ಪರ ಆಡ್ತಿದ್ದಾರೆ. ಭಾರತ ವಿರುದ್ಧದ ಎರಡನೇ ಟಿ-20ಐ ಪಂದ್ಯದಲ್ಲಿ 40 ರನ್ ನೀಡಿ 1 ವಿಕೆಟ್ ಪಡೆದಿದ್ದ ಆರ್ಚರ್ ಮೂರನೇ ಪಂದ್ಯದಲ್ಲಿ 3 ಓವ್ಗಳಲ್ಲಿ 29 ರನ್ಸ್ ನೀಡಿ 3 ವಿಕೆಟ್ ಪಡೆದಿದ್ರು. ಈ ಪಂದ್ಯದ ಬಳಿಕ ಐಪಿಎಲ್ ಪಿಚ್ ಹಾಗೇ ಇಂಗ್ಲೆಂಡ್ ಪಿಚ್ಗಳನ್ನ ಕಂಪೇರ್ ಮಾಡಿ ಮಾತನಾಡಿದ್ದಾರೆ. ಭಾರತದಲ್ಲಿ ಸಣ್ಣ ಬೌಂಡರಿಗಳು ಹಾಗೇ ಈಸಿ ವಿಕೆಟ್ಗಳನ್ನ ಪಡೆದ ಬಳಿಕ ಇಂಗ್ಲೆಂಡ್ನಲ್ಲಿ ಸಾಮಾನ್ಯ ಕ್ರಿಕೆಟ್ಗೆ ಮರಳಿದೆ ಎಂದಿದ್ದಾರೆ. ಹಾಗೇ ಐಪಿಎಲ್ನಲ್ಲಿ 200ಪ್ಲಸ್ ರನ್ಸ್ ಹೊಡೆದ್ರೂ ಸೇಫ್ ಇರಲ್ಲ. ಆದ್ರೆ ಟ್ರೆಂಟ್ಬ್ರಿಡ್ಜ್ನಂಥ ಇಂಗ್ಲೆಂಡ್ ಮೈದಾನಗಳಲ್ಲಿ 200ಪ್ಲಸ್ ರನ್ಸ್ ಚೇಸಿಂಗ್ ಮಾಡೋದು ತುಂಬಾನೇ ಕಷ್ಟ ಎನ್ನೋ ಮೂಲಕ ಪಿಚ್ಗಳ ವ್ಯತ್ಯಾಸವನ್ನ ಬಿಚ್ಚಿಟ್ಟಿದ್ದಾರೆ. ಒಟ್ನಲ್ಲಿ ಭಾರತ ಇಂಗ್ಲೆಂಡ್ನಲ್ಲಿ ಬರೀ ಪಂದ್ಯಗಳನ್ನ ಸೋಲ್ತಿಲ್ಲ ಅವಮಾನಗಳನ್ನೂ ಎದುರಿಸ್ತಿದೆ ಅನ್ನೋದು ಇಲ್ಲಿ ಕ್ಲಿಯರ್ ಆಗಿ ಗೊತ್ತಾಗ್ತಿದೆ.

ನೋಡಿರಿ
