ಭಾರತದಲ್ಲಷ್ಟೇ ಬ್ಯಾಟಿಂಗ್ ಪ್ರತಾಪ – ಸೋಲಿನ ಸರಣಿ ಇಷ್ಟಕ್ಕೇ ನಿಲ್ಲಲ್ವಾ?
ಸೂರ್ಯನ ಸಕ್ಸಸ್ ಶ್ರೇಯಸ್ ಗೆ ಯಾಕಿಲ್ಲ?

ಭಾರತದಲ್ಲಷ್ಟೇ ಬ್ಯಾಟಿಂಗ್ ಪ್ರತಾಪ – ಸೋಲಿನ ಸರಣಿ ಇಷ್ಟಕ್ಕೇ ನಿಲ್ಲಲ್ವಾ?ಸೂರ್ಯನ ಸಕ್ಸಸ್ ಶ್ರೇಯಸ್ ಗೆ ಯಾಕಿಲ್ಲ?

2024ರ ಟಿ-20 ವಿಶ್ವಕಪ್ ಗೆದ್ದ ಭಾರತ 2026ರಲ್ಲಿ ಮತ್ತೆ ಟ್ರೋಫಿ ಎತ್ತಿ ಹಿಡಿಯೋವರೆಗೆ ಒಂದೇ ಒಂದು ಸರಣಿ ಸೋತಿಲ್ಲ. ಬ್ಯಾಕ್​ ಟು ಬ್ಯಾಕ್ ಪಂದ್ಯಗಳನ್ನೇ ಬಿಟ್ಟುಕೊಟ್ಟಿಲ್ಲ. ಆದ್ರೆ ಈಗ ಅದೇ ಚಾಂಪಿಯನ್ ಇಂಡಿಯಾ ಸತತ ಎರಡು ಸರಣಿಗಳನ್ನೇ ಸೋಲುವ ಹೊಸ್ತಿಲಲ್ಲಿದೆ. ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ 5 ಮ್ಯಾಚ್ ಆಡಿದ್ರೂ ಒಂದೇ ಒಂದು ವಿಕ್ಟರಿ ಇಲ್ಲ. ಸೋಲೋದ್ರಲ್ಲೋ ವರ್ಸ್ಟ್ ಆಗಿ ಸೋಲ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರನೇ ಮ್ಯಾಚ್​​ ಬಳಿಕ ತಂಡದ ಬಗ್ಗೆ ಒಂದಷ್ಟು ಪ್ರಶ್ನೆಗಳು ಮೂಡ್ತಿವೆ. ಸೋಲಿನ ಸರಣಿ ಇಷ್ಟಕ್ಕೆ ನಿಲ್ಲಲ್ಲ ಅನ್ನೋದೂ ಗೊತ್ತಾಗ್ತಿದೆ.

ಇದನ್ನೂ ಓದಿ : ಅಭಿ & ವೈಭವ್ ಡೆಡ್ಲಿ ಓಪನರ್ಸ್ – SPIN ಸಂಕಷ್ಟಕ್ಕೆ ಸಲ್ಯೂಷನ್ ಸಿಕ್ಕಿಲ್ವಾ?

202 ಟಾರ್ಗೆಟ್.. 76ಕ್ಕೆ ಆಲೌಟ್.. 125 ರನ್​ಗಳ ಬಿಗ್ ಮಾರ್ಜಿನ್ ಲಾಸ್.. ಯಾರನ್ನ ಬ್ಲೇಮ್ ಮಾಡೋದು.. ಯಾರನ್ನ ರೆಸ್ಪಾನ್ಸಿಬಲ್ ಮಾಡೋದು.. ಟೀಮ್​ಗೆ ಟೀಮೇ ಕಂಪ್ಲೀಟ್ ಫ್ಲ್ಯಾಪ್.. ಐರ್ಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಆಗಿ ಈಗ ಆಂಗ್ಲರ ನಾಡಿನಲ್ಲೂ ಹಳ್ಳ ಹಿಡಿದಿರೋ ಭಾರತ ಒಂದೇ ಒಂದು ಗೆಲುವಿಗಾಗಿ ಒದ್ದಾಡ್ತಿದೆ. ಆದ್ರೆ ಇಲ್ಲಿ ಪ್ರಶ್ನೆ ಇರೋದಂದ್ರೆ ಕಳೆದ ಮಾರ್ಚ್​ನಲ್ಲಿ ಟಿ-20 ವಿಶ್ವಕಪ್ ಗೆದ್ದಿರೋ ಭಾರತ ಈಗ ಜೂನ್, ಜುಲೈನಲ್ಲಿ ಈ ಮಟ್ಟಿಗೆ ಕಳಪೆಯಾಗಿದ್ದು ಹೇಗೆ ಅನ್ನೋದು.

ಸೂರ್ಯನಿಗೆ ಸಿಕ್ಕ ಸಕ್ಸಸ್ ಶ್ರೇಯಸ್ ಗೆ ಯಾಕೆ ಸಿಗ್ತಿಲ್ಲ?

ಇದೇ ನೋಡಿ ಈಗ ದೊಡ್ಡ ಸರ್​ಪ್ರೈಸಿಂಗ್ ಆಗಿರೋದು. 2024ರಲ್ಲಿ ಭಾರತ ರೋಹಿತ್ ಶರ್ಮಾ ಅಂಡರ್​ನಲ್ಲಿ ವಿಶ್ವಚಾಂಪಿಯನ್. ಇದಾದ ಮೇಲೆ ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ ಆಗ್ತಾರೆ. ಅವ್ರ ನಾಯಕತ್ವದಲ್ಲಿ ಒಂದೇ ಒಂದು ಸರಣಿಯನ್ನೂ ಸೋಲದೆ 2026ರಲ್ಲಿ ಮತ್ತೆ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸ್ತಾರೆ. ಇದೇ ವಿಶ್ವಚಾಂಪಿಯನ್ ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕನಾಗಿ ಬರ್ತಾರೆ. ಅಂದ್ರೆ ಸೂರ್ಯ ಬಂದಾಗ್ಲೂ ಶ್ರೇಯಸ್ ಆಯ್ಕೆ ಆದಾಗ ಭಾರತ ವಿಶ್ವಕಪ್ ವಿನ್ನರ್​​. ಆದರೆ ನಂತರದ ಪರ್ಫಾಮೆನ್ಸ್ ಇದ್ಯಲ್ಲ ಅದು ವರ್ಸ್ಟ್ ಆಗಿರುವಂಥದ್ದು. ಭಾರತದ ಟಿ-20ಐ ಇತಿಹಾಸದಲ್ಲಿ ಫಾರ್ ದಿ ಫಸ್ಟ್ ಟೈಂ ಭಾರತ ಸತತ 5 ಪಂದ್ಯ ಆಡಿದ್ರೂ ಒಂದೇ ಒಂದು ಗೆಲುವು ಕಾಣದೆ ಇರೋದು ಇದೇ ಮೊದಲ ಬಾರಿ. ಹಾಗೇ ಒಬ್ಬ ನಾಯಕನ ಅಡಿಯಲ್ಲಿ 5 ಪಂದ್ಯಗಳಲ್ಲಿ ಗೆಲ್ಲದೆ ಇರೋದೂ ಕೂಡ ಇದೇ ಮೊದಲು. ಹಾಗಂತ ಇಲ್ಲಿ ಶ್ರೇಯಸ್ ಮಾತ್ರನೇ ರೀಸನ್ ಅಂತಲ್ಲ. ಹೆಜ್ಜೆ ಹೆಜ್ಜೆಗೂ ತಪ್ಪುಗಳಿವೆ.

ಭಾರತದ ಪ್ರಾಬ್ಲಂ ಏನು?

ತಂಡದಲ್ಲೇ ಇಲ್ಲದ ಶ್ರೇಯಸ್ ಗೆ ಕ್ಯಾಪ್ಟನ್ಸಿ ನೀಡಿದ್ದು ವರ್ಕ್ ಆಗ್ತಿಲ್ಲ

7ರಲ್ಲಿ 6 ಜನ ಲೆಫ್ಟ್ ಹ್ಯಾಂಡರ್ಸ್.. ಎದುರಾಳಿ ಪಡೆಯ ತಂತ್ರ ಸುಲಭ

ಬುಮ್ರಾ, ಪಾಂಡ್ಯನಂತಹ ಅನುಭವಿ ಆಟಗಾರರು ತಂಡದಲ್ಲಿ ಲಭ್ಯವಿಲ್ಲ

ಭಾರತದಲ್ಲಿ ಬ್ಯಾಟಿಂಗ್ ಫ್ರೆಂಡ್ಲಿ ಪಿಚ್ ಮಾಡಿ ವಿದೇಶಿಗಳಲ್ಲಿ ಅಡ್ಜಸ್ಟ್ ಆಗ್ತಿಲ್ಲ

ಟಾಪ್ ಆರ್ಡರ್ ಕೊಲ್ಯಾಪ್ಸ್ ಆದ್ರೆ ಮಿಡಲ್ ಆರ್ಡರ್ ನಲ್ಲಿ ರನ್ಸ್ ಇಲ್ಲ

ಸ್ಪಿನ್ನರ್ಸ್ ವಿರುದ್ಧ ಸಮರ್ಥವಾಗಿ ಬ್ಯಾಟಿಂಗ್ ಮಾಡುವವರು ತಂಡದಲ್ಲಿಲ್ಲ

200+ ಟಾರ್ಗೆಟ್ ಅಂದಾಗ್ಲೇ ಭಾರತಕ್ಕೆ ಚೇಸಿಂಗ್ ಅನ್ನೋದು ಕಷ್ಟವಾಗ್ತಿದೆ

ಹೀಗೆ ಭಾರತದ ಸೋಲಿಗೆ ತಂಡದಲ್ಲಿನ ಮಿಸ್ಟೇಕ್​ಗಳೇ ಕಾರಣವಾಗಿದೆ. ರನ್ಸ್ ಬರ್ತಿಲ್ಲ. ಕ್ಯಾಪ್ಟನ್ಸಿ ವರ್ಕ್ ಆಗ್ತಿಲ್ಲ. ಎಕ್ಸ್​ಪೆರಿಮೆಂಟ್ಸ್ ವರ್ಕ್ ಆಗ್ತಿದೆ. ಹೀಗೆ ಹೇಳ್ತಾ ಹೋದ್ರೆ ಪಟ್ಟಿ ಬೆಳಿತಾನೇ ಇರುತ್ತೆ. ಆದ್ರೆ ಪ್ರಶ್ನೆ ಅದಲ್ಲ. ಚೆನ್ನಾಗಿರೋ ತಂಡವನ್ನ ಹಾಳು ಮಾಡ್ತಿದ್ದಾರಲ್ಲ ಅನ್ನೋದಷ್ಟೇ ಬೇಜಾರು. ಹಾಗೇ ಈ ಸೋಲಿನ ಸರಣಿ ಇಷ್ಟಕ್ಕೆ ನಿಲ್ಲಲ್ವಾ ಅನ್ನೋ ಆತಂಕ.

Shantha Kumari

Leave a Reply

Your email address will not be published. Required fields are marked *