ಇವರೇನಾ ವಿಶ್ವ ಚಾಂಪಿಯನ್ಸ್? – ಟೀಂ ಇಂಡಿಯಾಗೆ ಕಪ್ಪು ಚುಕ್ಕೆ
ಬ್ರಿಟಿಷರ ಎದುರು ಕೆಟ್ಟ ಸೋಲು

ಟೀಂ ಇಂಡಿಯಾ ಕ್ರಿಕೆಟ್ ಪಾಲಿಗೆ ನಿನ್ನೆಯ ಪಂದ್ಯ ಅತ್ಯಂತ ಕರಾಳ ಪಂದ್ಯ. T20i ಇತಿಹಾಸದಲ್ಲೇ ಕೆಟ್ಟ ಸೋಲಿನ ದಿನ. ಆಂಗ್ಲರ ನಾಡಿನಲ್ಲಿ ಭಾರತ ಹೀನಾಯವಾಗಿ ಸೋತಿದೆ. T20 ವಿಶ್ವಕಪ್ ನಲ್ಲಿ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಆಗಿರೋ ಭಾರತ ಈಗ 5 ಮ್ಯಾಚ್ ಆದ್ರೂ ಒಂದೇ ಒಂದು ಪಂದ್ಯ ಗೆಲ್ಲೋಕೆ ಆಗಿಲ್ಲ. ಅದ್ರಲ್ಲೂ ಇಂಗ್ಲೆಂಡ್ ವಿರುದ್ಧದ ಮೂರನೇ ಮ್ಯಾಚಲ್ಲಿ ವರ್ಸ್ಟ್ ಲಾಸ್ ಆಗಿದೆ. ನಾಟಿಂಗ್ಹ್ಯಾಮ್ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ ಬರೋಬ್ಬರಿ 125 ರನ್ಗಳ ಭಾರಿ ಅಂತರದ ಹೀನಾಯ ಸೋಲು ಅನುಭವಿಸಿದೆ. ರನ್ಗಳ ಲೆಕ್ಕಾಚಾರದಲ್ಲಿ ಇದು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಭಾರತದ ಅತಿದೊಡ್ಡ ಸೋಲು. ಟಾಸ್ ಗೆದ್ದ ಭಾರತ ಫಸ್ಟ್ ಬೌಲಿಂಗ್ ಚೂಸ್ ಮಾಡಿಕೊಂಡಿದ್ರು. ಸೋ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 201 ರನ್ಸ್ ಕಲೆ ಹಾಕಿತ್ತು. ಈ ಟಾರ್ಗೆಟ್ ಬೆನ್ನಟ್ಟಿದ ಭಾರತ ಅಕ್ಷರಶಃ ಪೆವಿಲಿಯನ್ ಪರೇಡ್ ನಡೆಸಿದ್ರು. ಕೇವಲ 76 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳ್ಕೊಂಡು ಭಾರೀ ಮುಖಭಂಗ ಅನುಭವಿಸಿತು.
ಇದನ್ನೂ ಓದಿ : ಇಂಗ್ಲೆಂಡ್ ವಿರುದ್ಧ ಶ್ರೇಯಸ್ ಪಡೆಗೆ ಹೀನಾಯ ಸೋಲು – ಟೀಂ ಇಂಡಿಯಾಗೆ ಕೈ ಕೊಟ್ಟ ಓಪನರ್ಸ್
ಕಾರಣಗಳು & ಕಳಪೆ ದಾಖಲೆ!
ಬೌಲಿಂಗ್ ನಲ್ಲಿ 200+ ರನ್ಸ್ ಹೊಡೆಸಿಕೊಂಡ ಬೌಲರ್ಸ್
ಬ್ಯಾಟಿಂಗ್ ನಲ್ಲಿ ಕಂಪ್ಲೇಟ್ ಸರೆಂಡರ್ ಆದ ಟೀಂ ಇಂಡಿಯಾ
ಬ್ಯಾಟಿಂಗ್ ಬೌಲಿಂಗ್ ಎರಡಲ್ಲೂ ಮಿಂಚಿದ ಇಂಗ್ಲೆಂಡ್ ಪ್ಲೇಯರ್ಸ್
ದೊಡ್ಡ ಅಂತರದ ಸೋಲು, 100+ ರನ್ಸ್ ಅಂತರದಲ್ಲಿ ಸೋಲು
ಪವರ್ ಪ್ಲೇನಲ್ಲೇ 5 ವಿಕೆಟ್ಸ್, ಇಂಗ್ಲೆಂಡ್ ಪಿಚ್ ನ ಕಡಿಮೆ ಸ್ಕೋರ್
ಸತತ 5 ಪಂದ್ಯಗಳಲ್ಲಿ ಟಿ-20ಐನಲ್ಲಿ ಗೆಲುವು ದಾಖಲಿಸದ ಭಾರತ
15 ರನ್ಸ್ ದಾಟಲಿಲ್ಲ, 11.4 ಓವರ್ ಗಳಲ್ಲೇ ಆಲೌಟ್ ದಾಖಲೆ
ಚೇಸಿಂಗ್ ಮಾಡುವಾಗ ಯಾವತ್ತೂ ಇಷ್ಟು ಹೀನಾಯ ಸೋಲು ಇರಲಿಲ್ಲ
ಒಟ್ಟಾರೆಯಾಗಿ ಹೇಳುವುದಾದರೆ ಈ ಪಂದ್ಯ ಟೀಮ್ ಇಂಡಿಯಾ ಪಾಲಿಗೆ ಕೇವಲ ಒಂದು ಸೋಲಲ್ಲ. ಟಿ20 ಕ್ರಿಕೆಟ್ ಇತಿಹಾಸದಲ್ಲೇ ಎಂದೂ ಮರೆಯಲಾಗದ ಕಪ್ಪು ಚುಕ್ಕೆ. ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಕೆಲವೇ ತಿಂಗಳುಗಳಲ್ಲಿ ಭಾರತ ಪಾತಾಳಕ್ಕೆ ಕುಸಿದಿದೆ. ಇವರೇನಾ ಸತತ ಎರಡು ಬಾರಿಯ ವಿಶ್ವಚಾಂಪಿಯನ್ಸ್ ಅನ್ನೋ ಪ್ರಶ್ನೆ ಮೂಡುವಂತೆ ಮಾಡಿದೆ.

ನೋಡಿರಿ

