ಇಂಗ್ಲೆಂಡ್ ವಿರುದ್ಧ ಶ್ರೇಯಸ್ ಪಡೆಗೆ ಹೀನಾಯ ಸೋಲು – ಟೀಂ ಇಂಡಿಯಾಗೆ ಕೈ ಕೊಟ್ಟ ಓಪನರ್ಸ್

ಟೀಂ ಇಂಡಿಯಾ ಹೀನಾಯವಾಗಿ ಇಂಗ್ಲೆಂಡ್ ವಿರುದ್ಧ ಸೋತಿದೆ. ಮೂರನೇ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ 125 ರನ್ ಜಯ ಸಾಧಿಸಿದ್ದು, ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ಗೆ ಆರಂಭಿಕರಾದ ಫಿಲ್ ಸಾಲ್ಟ್ ಮತ್ತು ಜೋಸ್ ಬಟ್ಲರ್ (36) ಜೋಡಿ ಮೊದಲ ವಿಕೆಟ್‌ಗೆ 43 ರನ್ ಸೇರಿಸಿ ಉತ್ತಮ ಆರಂಭ ನೀಡಿತು. ಬಟ್ಲರ್ ಹಾಗೂ ನಾಯಕ ಹ್ಯಾರಿ ಬ್ರೂಕ್ (16) ಯುವ ಬೌಲರ್ ಪ್ರಿನ್ಸ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಜಾಕೊಬ್ ಬೆಥೆಲ್ 13 ರನ್ ಹಾಗೂ ವಿಲ್ ಜಾಕ್ಸ್ 14 ರನ್‌ಗೆ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ: ಗಂಭೀರ್ ಹಠ.. ಶ್ರೇಯಸ್‌ಗೆ ಸಂಕಟ- ವೈಭವ್‌ಗಾಗಿ ಸಂಜುಗೆ ಅನ್ಯಾಯ
ಜವಾಬ್ದಾರಿಯುತ ಆಟವಾಡಿದ ಆರಂಭಿಕ ಫಿಲ್ ಸಾಲ್ಟ್ 44 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಹಿತ 70 ರನ್ ಚಚ್ಚಿದರು. ಮಧ್ಯಮ ಕ್ರಮಾಂಕದಲ್ಲಿ ಸ್ಯಾಮ್ ಕರನ್ ಅಜೇಯ 41 ರನ್ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಲು ನೆರವಾದರು. ಅಂತಿಮವಾಗಿ ಇಂಗ್ಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 201 ರನ್ ಸೇರಿಸಿತು. ಭಾರತದ ಪರ ಹರ್ಷಿತ್ ರಾಣಾ ಮತ್ತು ಪ್ರಿನ್ಸ್ ಯಾದವ್ ತಲಾ 2 ವಿಕೆಟ್ ಹಾಗೂ ಅಕ್ಷರ್ ಪಟೇಲ್ 1 ವಿಕೆಟ್ ಪಡೆದರು.
ಬೃಹತ್ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಆರಂಭ ಕಳಪೆಯಾಗಿತ್ತು. ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ (13) ಬಿಗ್ ಇನಿಂಗ್ಸ್ ಕಟ್ಟುವಲ್ಲಿ ಎಡವಿದರು. ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ (13), ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು. ಪರಿಣಾಮ ಭಾರತ ಒತ್ತಡಕ್ಕೆ ಸಿಲುಕಿತು.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಭಾರತ ತನ್ನ ಮೊದಲ ಐದು ವಿಕೆಟ್‌ಗಳನ್ನು ಪವರ್‌ಪ್ಲೇ ಒಳಗೆ ಕಳೆದುಕೊಂಡಿರುವುದು ಇದೇ ಮೊದಲು. ಇದಕ್ಕೂ ಮೊದಲು, ಭಾರತ ಮೊದಲ ಆರು ಓವರ್‌ಗಳಲ್ಲಿ 13 ಬಾರಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇದೇ ವರ್ಷದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಯುಎಸ್‌ಎ ವಿರುದ್ಧ ಹಾಗೂ ಐರ್ಲೆಂಡ್ ಪ್ರವಾಸದ ಎರಡನೇ ಪಂದ್ಯದಲ್ಲಿ ಭಾರತ ಪವರ್ ಪ್ಲೇನಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ, ಶಿವಂ ದುಬೆ, ಅರ್ಷದೀಪ್ ಸಿಂಗ್, ಸೇರಿದಂತೆ ಕೆಳ ಕ್ರಮಾಂಕದಲ್ಲಿ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಟೀಮ್ ಇಂಡಿಯಾ 11.4 ಓವರ್‌ಗಳಲ್ಲಿ 76 ರನ್‌ಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ ಪವರ್ ಪ್ಲೇನಲ್ಲಿ 3 ವಿಕೆಟ್ ಪಡೆದರೆ, ಜೋಶ್ ಟಂಗ್ 4 ವಿಕೆಟ್ ಉರುಳಿಸಿದರು.

ನೋಡಿರಿ

