ಮನೆ ಮುಂಭಾಗ ಸ್ವಚ್ಛಗೊಳಿಸಿ ನೀರನ್ನು ಚಿಮುಕಿಸಿ ರಂಗೋಲಿ ಹಾಕುವುದರಿಂದ ಎಷ್ಟೆಲ್ಲಾ ಲಾಭ ಗೊತ್ತಾ?

ಮನೆ ಮುಂಭಾಗ ಸ್ವಚ್ಛಗೊಳಿಸಿ ನೀರನ್ನು ಚಿಮುಕಿಸಿ ರಂಗೋಲಿ ಹಾಕುವುದರಿಂದ ಎಷ್ಟೆಲ್ಲಾ ಲಾಭ ಗೊತ್ತಾ?

ಹಿಂದೂ ಸಂಸ್ಕೃತಿಯಲ್ಲಿ ಬೆಳಗಿನ ಜಾವ ಮನೆ ಮುಂಭಾಗವನ್ನು ಸ್ವಚ್ಛಗೊಳಿಸಿ ನೀರನ್ನು ಚಿಮುಕಿಸಿ ರಂಗೋಲಿ ಹಾಕುವ ಪದ್ಧತಿ ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಮನೆಯ ಮುಖ್ಯ ದ್ವಾರದ ಬಳಿ ನೀರನ್ನು ಚಿಮುಕಿಸುವುದು ಶುಭದ ಸಂಕೇತವೆಂದು ಹೇಳಲಾಗುತ್ತದೆ.

ಶಾಸ್ತ್ರಗಳ ಪ್ರಕಾರ, ಮನೆಯ ಮುಖ್ಯ ದ್ವಾರದಲ್ಲಿ ಪ್ರತಿದಿನ ಬೆಳಗ್ಗೆ ನೀರನ್ನು ಚಿಮುಕಿಸುವುದು ಅತ್ಯಂತ ಮಂಗಳಕರ ಆಚರಣೆ. ಬೆಳಿಗ್ಗೆ ಸ್ನಾನಾದಿ ಕಾರ್ಯಗಳನ್ನು ಮುಗಿಸಿದ ನಂತರ ತಾಮ್ರದ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಮನೆಯ ಬಾಗಿಲಿನ ಬಳಿ ಚಿಮುಕಿಸಿದರೆ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ಹೆಚ್ಚುತ್ತದೆ ಎನ್ನಲಾಗುತ್ತದೆ. ಜೊತೆಗೆ ಕುಟುಂಬದಲ್ಲಿನ ಕಲಹಗಳು ಕಡಿಮೆಯಾಗುತ್ತವೆ ಮತ್ತು ಧನಾತ್ಮಕ ಶಕ್ತಿಗಳ ಪ್ರವೇಶ ಹೆಚ್ಚಾಗುತ್ತದೆ ಎಂಬ ನಂಬಿಕೆಯೂ ಇದೆ.

ಇದನ್ನೂ ಓದಿ:  ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಪ್ರತಿ ಶುಕ್ರವಾರ ಈ ಮಂತ್ರ ಪಠಿಸಿ

ಅರಿಶಿನವನ್ನು ಹಿಂದೂ ಧರ್ಮದಲ್ಲಿ ಪವಿತ್ರ ಮತ್ತು ಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬೆಳಿಗ್ಗೆ ತಾಮ್ರದ ಪಾತ್ರೆಯಲ್ಲಿ ನೀರಿಗೆ ಸ್ವಲ್ಪ ಅರಿಶಿನ ಬೆರೆಸಿ ಮನೆಯ ಮುಖ್ಯ ದ್ವಾರದಲ್ಲಿ ಚಿಮುಕಿಸಿದರೆ ಲಕ್ಷ್ಮೀ ಕಟಾಕ್ಷ ಲಭಿಸುತ್ತದೆ ಎಂಬ ನಂಬಿಕೆಯಿದೆ. ಇದರಿಂದ ಮನೆಯಲ್ಲಿ ಧನ, ಧಾನ್ಯ ಮತ್ತು ಐಶ್ವರ್ಯ ಹೆಚ್ಚಾಗಿ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ.

 ವಿಶೇಷವಾಗಿ ಶುಕ್ರವಾರದಂದು, ಮನೆಯ ಮುಖ್ಯ ದ್ವಾರದ ಬಳಿ ಉಪ್ಪು ಬೆರೆಸಿದ ನೀರನ್ನು ಚಿಮುಕಿಸುವುದು ಉತ್ತಮವೆಂದು ಹೇಳಲಾಗುತ್ತದೆ. ಉಪ್ಪು ನೀರು ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡುವುದಲ್ಲದೆ, ಮನೆಯ ವಾತಾವರಣವನ್ನು ಶುದ್ಧವಾಗಿರಿಸಲು ಸಹ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಕೆಲವರು ಇದರಿಂದ ಆರೋಗ್ಯ ಸಂಬಂಧಿತ ಸಮಸ್ಯೆಗಳು ಹಾಗೂ ದೋಷಗಳ ಪ್ರಭಾವವೂ ಕಡಿಮೆಯಾಗುತ್ತದೆ ಎಂದು ನಂಬುತ್ತಾರೆ.

Kishor KV

Leave a Reply

Your email address will not be published. Required fields are marked *